ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರಿಂದ ಡಿಜಿಟಲ್ ಆರೋಗ್ಯ ಸೌಲಭ್ಯಗಳ ಶ್ಲಾಘನೆ
Posted On:
05 AUG 2023 9:29AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಆರೋಗ್ಯದ ಡಿಜಿಟಲ್ ಸೌಲಭ್ಯಗಳಿಂದ ಕೋಟ್ಯಂತರ ಜನರು ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ, ಸಾಂಕ್ರಾಮಿಕವಲ್ಲದ ರೋಗಗಳ ರಾಷ್ಟ್ರೀಯ ಕಾರ್ಯಕ್ರಮದಡಿಯಲ್ಲಿ ಎನ್.ಸಿ.ಡಿ ಪೋರ್ಟಲ್ ಮೂಲಕ 5 ಕೋಟಿಗೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಗಳನ್ನು (ಎಬಿಎಚ್ಎ) ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ;
"ತುಂಬಾ ಒಳ್ಳೆಯ ಮಾಹಿತಿ! ದೇಶಾದ್ಯಂತ ನಮ್ಮ ಬಡ ಸಹೋದರ ಸಹೋದರಿಯರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಈ ಡಿಜಿಟಲ್ ಸೌಲಭ್ಯಗಳಿಂದ ಕೋಟ್ಯಂತರ ಜನರು ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಅತ್ಯಂತ ತೃಪ್ತಿಯ ವಿಷಯವಾಗಿದೆ.”
***
(Release ID: 1946078)
Visitor Counter : 110
Read this release in:
Gujarati
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Odia
,
Tamil
,
Telugu
,
Malayalam