ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಅಧ್ಯಕ್ಷರು, ರಾಜ್ಯಸಭೆಯು ಲಿಂಗ ಸಮಾನತೆಗೆ ಒತ್ತು ನೀಡಿದ ರಾಜ್ಯಸಭೆ ಸಭಾಪತಿ; ಉಪಸಭಾಪತಿ ಸಮಿತಿಗೆ 50% ಮಹಿಳಾ ಸದಸ್ಯರನ ನಾಮನಿರ್ದೇಶನ


ಸಮಿತಿಯಲ್ಲಿರುವ ನಾಲ್ವರು ಮಹಿಳೆಯರು ಮೊದಲ ಬಾರಿಗೆ ರಾಜ್ಯಸಭೆಯ ಸದಸ್ಯರಾಗಿದ್ದಾರೆ

ಶ್ರೀಮತಿ. ಎಸ್ ಫಾಂಗ್ನಾನ್ ಕೊನ್ಯಾಕ್ ಅವರು ನಾಗಾಲ್ಯಾಂಡ್‌ನಿಂದ ಉಪಾಧ್ಯಕ್ಷರ ಸಮಿತಿಗೆ ನಾಮನಿರ್ದೇಶನಗೊಂಡ ಮೊದಲ ಮಹಿಳೆಯಾಗಿದ್ದಾರೆ

ಈ ಮುಂಗಾರು ಅಧಿವೇಶನದಿಂದ ರಾಜ್ಯಸಭಾ ಸಭಾಪತಿ ಸ್ಥಾನ ಡಿಜಿಟಲ್ ಆಗಲಿದೆ

Posted On: 20 JUL 2023 1:57PM by PIB Bengaluru

ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ನಾಲ್ವರು ಮಹಿಳಾ ರಾಜ್ಯಸಭಾ ಸದಸ್ಯ(ಸಂಸದರು)ರನ್ನು ಉಪಸಭಾಪತಿ ಸಮಿತಿಗೆ ನಾಮನಿರ್ದೇಶನ ಮಾಡಿದ್ದು, ಇದೊಂದು ಐತಿಹಾಸಿಕ ನಡೆಯಾಗಿದೆ.

ಸಮಿತಿಗೆ ನಾಮನಿರ್ದೇಶನವಾದ ಎಲ್ಲಾ ಮಹಿಳಾ ಸದಸ್ಯರು ಮೊದಲ ಅವಧಿಯ ರಾಜ್ಯಸಭಾ ಸದಸ್ಯರಾಗಿದ್ದು, ಶ್ರೀಮತಿ. ಎಸ್. ಫಾಂಗ್ನಾನ್ ಕೊನ್ಯಾಕ್ ಅವರು ನಾಗಾಲ್ಯಾಂಡ್‌ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಮೊದಲ ಮಹಿಳೆಯಾಗಿದ್ದಾರೆ.

ಮುಂಗಾರು ಅಧಿವೇಶನಕ್ಕಿಂತ ಮುನ್ನ ಪುನಾರಚಿಸಲಾದ ಈ ಸಮಿತಿಯಲ್ಲಿ ಒಟ್ಟು 8 ಹೆಸರುಗಳನ್ನು ಒಳಗೊಂಡಿವೆ. ಅದರಲ್ಲಿ ಅರ್ಧದಷ್ಟು ಮಹಿಳೆಯರು. ಮೇಲ್ಮನೆಯ ಇತಿಹಾಸದಲ್ಲಿ ಉಪಸಭಾಪತಿ ಸಮಿತಿಯಲ್ಲಿ ಮಹಿಳಾ ಸದಸ್ಯರಿಗೆ ಸಮಾನ ಪ್ರಾತಿನಿಧ್ಯ ನೀಡಿರುವುದು ಇದೇ ಮೊದಲು.

ಮತ್ತೊಂದು ಗಮನಾರ್ಹ ಬೆಳವಣಿಗೆ ಎಂದರೆ, ರಾಜ್ಯಸಭಾ ಸಭಾಪತಿ ಅವರು ಸಂಪೂರ್ಣವಾಗಿ ಡಿಜಿಟಲ್ ಆಗಲಿದ್ದಾರೆ. ರಾಜ್ಯಸಭಾ ಸಭಾಪತಿ ಅವರು ಸದನದಲ್ಲಿ ಕಲಾಪ ನಡೆಸುವುದು, ಸದನದ ಹಾಜರಾತಿ, ಮಾತನಾಡುವ ಸದಸ್ಯರ ವಿವರಗಳು ಮತ್ತು ಇತರ ಸಂಬಂಧಿತ ಮಾಹಿತಿಗೆ ಸಂಬಂಧಿಸಿದ ವಿಷಯಗಳಿಗೆ ಮುಂಗಾರು ಅಧಿವೇಶನದಿಂದ ವಿದ್ಯುನ್ಮಾನ ಟ್ಯಾಬ್ಲೆಟ್‌ಗಳನ್ನು ಬಳಸಲಿದ್ದಾರೆ.

ಉಪಸಭಾಪತಿ ಸಮಿತಿಗೆ ನಾಮನಿರ್ದೇಶನವಾದ ಮಹಿಳಾ ಸದಸ್ಯರ ವಿವರಗಳು ಈ ಕೆಳಗಿನಂತಿವೆ.

ಶ್ರೀಮತಿ. ಪಿ.ಟಿ. ಉಷಾ:

• ಹೆಸರಾಂತ ಕ್ರೀಡಾಪಟು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರು 2022 ಜುಲೈನಲ್ಲಿ ರಾಜ್ಯಸಭೆಗೆ ನಾಮನಿರ್ದೇಶನವಾಗಿದ್ದಾರೆ.

• ಅವರು ರಕ್ಷಣಾ ಸಮಿತಿ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಲಹಾ ಸಮಿತಿ ಮತ್ತು ನೈತಿಕ ಸಮಿತಿಯ ಸದಸ್ಯರಾಗಿದ್ದಾರೆ.

 

ಶ್ರೀಮತಿ. ಎಸ್. ಫಾಂಗ್ನಾನ್ ಕೊನ್ಯಾಕ್:

• ಭಾರತೀಯ ಜನತಾ ಪಕ್ಷಕ್ಕೆ ಸೇರಿದವರು. ಅವರು 2022 ಏಪ್ರಿಲ್ ನಲ್ಲಿ ನಾಗಾಲ್ಯಾಂಡ್‌ನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಮೊದಲ ಮಹಿಳೆ ಮತ್ತು ರಾಜ್ಯದಿಂದ ಸಂಸತ್ತಿಗೆ ಅಥವಾ ರಾಜ್ಯ ವಿಧಾನಸಭೆಗೆ ಚುನಾಯಿತರಾದ 2ನೇ ಮಹಿಳೆ.

• ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಮಿತಿಯ ಸದಸ್ಯರಾಗಿದ್ದಾರೆ, ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಸಲಹಾ ಸಮಿತಿ, ಮಹಿಳಾ ಸಬಲೀಕರಣ ಸಮಿತಿ, ಸದನ ಸಮಿತಿ, ಶಿಲ್ಲಾಂಗ್ ನಲ್ಲಿರುವ ಈಶಾನ್ಯ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಸಂಸ್ಥೆಯ ಆಡಳಿತ ಮಂಡಳಿ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸದಸ್ಯೆಯಾಗಿದ್ದಾರೆ. 

 

ಡಾ. ಫೌಜಿಯಾ ಖಾನ್:

• ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಅವರು 2020 ಏಪ್ರಿಲ್ ನಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.

• ಮಹಿಳಾ ಸಬಲೀಕರಣ ಸಮಿತಿ, ಗ್ರಾಹಕ ವ್ಯವಹಾರಗಳ ಸಮಿತಿ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಕಾನೂನು ಮತ್ತು ನ್ಯಾಯ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.

 

ಶ್ರೀಮತಿ. ಸುಲತಾ ದೇವು:

• ಬಿಜು ಜನತಾ ದಳಕ್ಕೆ ಸೇರಿದವರು. ಅವರು 2022 ಜುಲೈ ನಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.

• ಉದ್ಯಮ ಸಮಿತಿ, ಮಹಿಳಾ ಸಬಲೀಕರಣ ಸಮಿತಿ, ಲಾಭದ ಕಚೇರಿಯ ಜಂಟಿ ಸಮಿತಿ, ಸಂಸತ್ತಿನ ಸದಸ್ಯರ ಸಮಿತಿ, ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLADS) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.

ಮೇಲೆ ತಿಳಿಸಿದ ಮಹಿಳಾ ಸದಸ್ಯರಲ್ಲದೆ, ಶ್ರೀ ವಿ ವಿಜಯಸಾಯಿ ರೆಡ್ಡಿ, ಶ್ರೀ ಘನಶ್ಯಾಮ್ ತಿವಾರಿ, ಡಾ. ಎಲ್. ಹನುಮಂತಯ್ಯ ಮತ್ತು ಶ್ರೀ ಸುಖೇಂದು ಶೇಖರ್ ರೇ ಅವರನ್ನೂ ಉಪಸಭಾಪತಿ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ.

       ಶ್ರೀಮತಿ. ಸುಲತಾ ದೇವು    

 ಶ್ರೀಮತಿ. ಎಸ್. ಫಾಂಗ್ನಾನ್ ಕೊನ್ಯಾಕ್

          ಶ್ರೀಮತಿ. ಪಿ.ಟಿ. ಉಷಾ 

ಡಾ. ಫೌಜಿಯಾ ಖಾನ್:

 

 

***

 




(Release ID: 1941146) Visitor Counter : 275