ರಾಷ್ಟ್ರಪತಿಗಳ ಕಾರ್ಯಾಲಯ

ಭಾರತದ ರಾಷ್ಟ್ರಪತಿಯವರಿಂದ  ಭೂಮಿ ಸಮ್ಮಾನ್ 2023 ಪ್ರದಾನ 

Posted On: 18 JUL 2023 2:19PM by PIB Bengaluru

ಇಂದು (ಜುಲೈ 18, 2023) ನವದೆಹಲಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆಯೋಜಿಸಿದ್ದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು “ಭೂಮಿ ಸಮ್ಮಾನ್ 2023” ಅನ್ನು ಪ್ರದಾನ ಮಾಡಿದರು.  ಸರ್ಕಾರದ ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಆಧುನೀಕರಣ ಕಾರ್ಯಕ್ರಮದಡಿ (ಡಿಐಎಲ್ಆರ್ಎಂಪಿ) ಭೂಮಿ ನೋಂದಣಿ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ತಂಡದೊಂದಿಗೆ ಆಯಾ ರಾಜ್ಯಗಳ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳು ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿಯಲ್ಲಿ ವೇಗ  ಅತ್ಯಗತ್ಯ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ, ಭೂ ದಾಖಲೆಗಳ ಆಧುನೀಕರಣವು ಮೂಲಭೂತ ಅವಶ್ಯಕತೆಯಾಗಿದೆ ಏಕೆಂದರೆ ಹೆಚ್ಚಿನ ಗ್ರಾಮೀಣ ಜನಸಂಖ್ಯೆಯ ಜೀವನವು ಭೂ ಸಂಪನ್ಮೂಲಗಳ ಮೇಲೆ ಅವಲಂಬಿತವಾಗಿದೆ. ವ್ಯಾಪಕ ಸಮಗ್ರ ಭೂ ನಿರ್ವಹಣಾ ವ್ಯವಸ್ಥೆಯು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಡಿಜಿಟಲೀಕರಣದಿಂದ ಪಾರದರ್ಶಕತೆ ಹೆಚ್ಚುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು. ಭೂ ದಾಖಲೆಗಳ ಆಧುನೀಕರಣ ಮತ್ತು ಡಿಜಿಟಲೀಕರಣವು ದೇಶದ ಅಭಿವೃದ್ಧಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಅದರ ಸಂಪರ್ಕವು ಕಲ್ಯಾಣ ಯೋಜನೆಗಳ ಸರಿಯಾದ ಅನುಷ್ಠಾನಕ್ಕೆ ಸಹಾಯ ಮಾಡುತ್ತದೆ. ಪ್ರವಾಹ ಮತ್ತು ಅಗ್ನಿ ದುರಂತದ  ಅನಾಹುತಗಳಿಂದ ದಾಖಲೆಗಳು ಕಳೆದುಹೋದ ಸಂದರ್ಭದಲ್ಲಿ ಇದು ಹೆಚ್ಚು ಸಹಾಯಕವಾಗುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು.

ಡಿಜಿಟಲ್ ಇಂಡಿಯಾ ಲ್ಯಾಂಡ್ ಇನ್ಫರ್ಮೇಷನ್ ಮ್ಯಾನೇಜ್ಮೆಂಟ್ ಸಿಸ್ಟಂ ಅಡಿಯಲ್ಲಿ, ಆಧಾರ್ ಕಾರ್ಡ್ನಂತೆ ಉಪಯುಕ್ತವಾದ ವಿಶಿಷ್ಟ ಭೂ ಪಾರ್ಸೆಲ್ ಗುರುತಿನ ಸಂಖ್ಯೆಯನ್ನು ಒದಗಿಸಲಾಗುತ್ತಿದೆ ಎನ್ನುವುದನ್ನುತಿಳಿದು ರಾಷ್ಟ್ರಪತಿಗಳು  ಸಂತಸ ವ್ಯಕ್ತಪಡಿಸಿದರು. ಈ ಸಂಖ್ಯೆಯು ಭೂಮಿಯನ್ನು ಸರಿಯಾಗಿ ಬಳಸಿಕೊಳ್ಳಲು ಮತ್ತು ಹೊಸ ಕಲ್ಯಾಣ ಯೋಜನೆಗಳನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಭೂ ದಾಖಲೆಗಳು ಮತ್ತು ನೋಂದಣಿ ದತ್ತಾಂಶದೊಂದಿಗೆ ಇ-ಕೋರ್ಟ್ಗಳನ್ನು ಜೋಡಿಸುವುದರಿಂದ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಡಿಜಿಟಲೀಕರಣದಿಂದ ಆಗುತ್ತಿರುವ ಪಾರದರ್ಶಕತೆ ಭೂಮಿಗೆ ಸಂಬಂಧಿಸಿದ ಅಕ್ರಮ  ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುತ್ತದೆ.

  ಭೂಮಿಗೆ ಸಂಬಂಧಿಸಿದ ಮಾಹಿತಿಯನ್ನು ಮುಕ್ತವಾಗಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ರಾಷ್ಟ್ರಪತಿಗಳು ಹೇಳಿದರು.  ಉದಾಹರಣೆಗೆ, ಭೂಮಿಯ ಮಾಲೀಕತ್ವ ಮತ್ತು ಬಳಕೆಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸುವಲ್ಲಿ ಇದು ಸಹಾಯ ಮಾಡುತ್ತದೆ. ನಮ್ಮ ದೇಶದ ಹೆಚ್ಚಿನ ಜನರು ಭೂಮಿಗೆ ಸಂಬಂಧಿಸಿದ ವಿವಾದಗಳಲ್ಲಿ ತೊಡಗಿಸಿಕೊಂಡಿದೆ ಮತ್ತು ಇವು ಆಡಳಿತ ಮತ್ತು ನ್ಯಾಯಾಂಗದ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಡಿಜಿಟಲೀಕರಣ ಮತ್ತು ಮಾಹಿತಿಯ ಸಂಪರ್ಕಗಳ ಮೂಲಕ, ವಿವಾದಗಳನ್ನು ಪರಿಹರಿಸುವಲ್ಲಿ ಬಳಕೆಯಾಗುವ ಜನರು ಮತ್ತು ಸಂಸ್ಥೆಗಳ ಶಕ್ತಿಯನ್ನು ಅಭಿವೃದ್ಧಿಗೆ ಬಳಸಿಕೊಳ್ಳಬಹುದು 
 
ರಾಷ್ಟ್ರಪತಿಗಳ ಪೂರ್ಣ ಭಾಷಣವನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -

****(Release ID: 1940495) Visitor Counter : 262