ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

25ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರಲ್ಲಿ 27 ಪದಕಗಳನ್ನು ಗೆದ್ದ ಭಾರತೀಯ ತಂಡವನ್ನು ಪ್ರಧಾನಮಂತ್ರಿಗಳು ಅಭಿನಂದಿಸಿದರು

Posted On: 17 JUL 2023 12:17PM by PIB Bengaluru

25ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತೀಯ ಅಥ್ಲೀಟ್ ಗಳು 27 ಪದಕಗಳನ್ನು ಗೆದ್ದುಕೊಂಡಿದ್ದು, ಚಾಂಪಿಯನ್‌ಶಿಪ್‌ನ ಆವೃತ್ತಿಯಲ್ಲಿ ವಿದೇಶದಲ್ಲಿ ಅತ್ಯಧಿಕ ಪದಕಗಳನ್ನು ಗಳಿಸಿದ ಭಾರತೀಯ ತಂಡದ ಅತ್ಯುತ್ತಮ ಪ್ರದರ್ಶನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿಯವರು  ಹೀಗೆ ಟ್ವೀಟ್ ಮಾಡಿದ್ದಾರೆ:

“25 ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತೀಯ ತಂಡದಿಂದ ಅತ್ಯುತ್ತಮ ಪ್ರದರ್ಶನ!

ನಮ್ಮ ಕ್ರೀಡಾಪಟುಗಳು 27 ಪದಕಗಳನ್ನು ಗೆದ್ದಿದ್ದಾರೆ, ಇದು ಚಾಂಪಿಯನ್ಶಿಪ್ ಗಳ ಆವೃತ್ತಿಯಲ್ಲಿ ವಿದೇಶದಲ್ಲಿ ಅತ್ಯಧಿಕ ಪದಕಗಳ ಸಂಖ್ಯೆಯಾಗಿದೆ.  ಈ ಸಾಧನೆಗಾಗಿ ನಮ್ಮ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಇದು ನಮಗೆ ಹೆಮ್ಮೆಯನ್ನು ತರುತ್ತದೆ. ”

***




(Release ID: 1940163) Visitor Counter : 111