ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023ರ ಟ್ರೋಫಿ ಅನಾವರಣಗೊಳಿಸಿದ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್


ಕಾರ್ಯಕ್ರಮದಲ್ಲಿ 'ಪಾಸ್ ದಿ ಬಾಲ್ ಟ್ರೋಫಿ ಟೂರ್' ಪ್ರಾರಂಭ

4ನೇ ಬಾರಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ಭಾರತ ಇತಿಹಾಸ ನಿರ್ಮಿಸಲಿದೆ: ಶ್ರೀ ಅನುರಾಗ್ ಸಿಂಗ್ ಠಾಕೂರ್ ಆಶಾವಾದ

Posted On: 13 JUL 2023 4:33PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ದೆಹಲಿಯ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿಂದು ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ, ಚೆನ್ನೈ 2023ರ ಆಸ್ಕರ್ ಟ್ರೋಫಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ‘ಪಾಸ್ ದಿ ಬಾಲ್ ಟ್ರೋಫಿ ಟೂರ್’ ಅಭಿಯಾನಕ್ಕೆ ಚಾಲನೆ ನೀಡಿದರು.

ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಚೆನ್ನೈ - 2023 ಆಗಸ್ಟ್ 3ರಿಂದ ಆರಂಭವಾಗಲಿದ್ದು, ಭಾರತ, ಕೊರಿಯಾ, ಮಲೇಷ್ಯಾ, ಜಪಾನ್, ಪಾಕಿಸ್ತಾನ ಮತ್ತು ಚೀನಾ ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ.

https://static.pib.gov.in/WriteReadData/userfiles/image/image001G2HK.jpg

ಈ ಸಂದರ್ಭದಲ್ಲಿ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ಟ್ರೋಫಿ ಪ್ರವಾಸವು ಮಹತ್ವದ್ದಾಗಿದೆ. ಏಕೆಂದರೆ ಅದು ಉತ್ಸಾಹ ತರುತ್ತದೆ. ಅಲ್ಲದೆ, ಇದು ಜಾಗೃತಿ ಮೂಡಿಸುತ್ತದೆ. ಇದು ಯುವ ಆಟಗಾರರನ್ನು ಟ್ರೋಫಿ ನೋಡಲು ಆಹ್ವಾನಿಸುತ್ತದೆ. ಟೀಮ್ ಇಂಡಿಯಾದ ಭಾಗವಾಗಲು ಇದು ಒಂದು ದಿನದ ಕನಸು. ಭಾರತ 4ನೇ ಬಾರಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಲಿದೆ ಎಂದು ಹೇಳಿದರು.

https://static.pib.gov.in/WriteReadData/userfiles/image/image002Z4HT.jpg

ಚೆನ್ನೈ ಉತ್ತಮ ಆತಿಥೇಯ ಎಂದು ಸಾಬೀತುಪಡಿಸುತ್ತದೆ. ನಮ್ಮ ಸರ್ಕಾರವು ಸಹಕಾರಿ ಒಕ್ಕೂಟ ವ್ಯವಸ್ಥೆ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದೆ, ಇದು ಕ್ರೀಡೆಗಳಿಗೂ ಅನ್ವಯಿಸುತ್ತದೆ. ಸಹಕಾರವು ಈ ಕಾರ್ಯಕ್ರಮಕ್ಕೆ ದೊಡ್ಡ ಯಶಸ್ಸು ತರಲಿದೆ. ಎಲ್ಲಾ ದೇಶಗಳ ಆಟಗಾರರು ಭಾರತದಿಂದ ಉತ್ತಮ ನೆನಪುಗಳೊಂದಿಗೆ ತೆರಳಲಿದ್ದಾರೆ. ಈ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ತಂಡ ಗೆದ್ದು ಉತ್ತಮ ಪ್ರದರ್ಶನ ತೋರಬೇಕು.  ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023ರಲ್ಲಿ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಹಾಕಿ ಇಂಡಿಯಾ ಮತ್ತು ಎಲ್ಲಾ ಪಾಲುದಾರರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಹಾಕಿ ಇಂಡಿಯಾ ಅಧ್ಯಕ್ಷ, ಪದ್ಮಶ್ರೀ ಡಾ. ದಿಲೀಪ್ ಕುಮಾರ್ ಟಿರ್ಕಿ, ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಶ್ರೀ ಭೋಲಾನಾಥ್ ಸಿಂಗ್, ಹಾಕಿ ಇಂಡಿಯಾ ಖಜಾಂಚಿ ಮತ್ತು ಹಾಕಿ ಘಟಕದ ಅಧ್ಯಕ್ಷರು ಮತ್ತು ತಮಿಳುನಾಡು (ಆತಿಥೇಯ ರಾಜ್ಯ) ಅಧಿಕಾರಿಗಳು ಭಾಗವಹಿಸಿದ್ದರು.

ಹರ್ಬಿಂದರ್ ಸಿಂಗ್, ಅಶೋಕ್ ದಿವಾನ್, ಜಾಫರ್ ಇಕ್ಬಾಲ್, ರೋಮಿಯೋ ಜೇಮ್ಸ್, ಎಂಪಿ ಸಿಂಗ್, ಎಚ್‌ಪಿಎಸ್ ಚಿಮಾನಿ ಮತ್ತು ವಿನೀತ್ ಕುಮಾರ್ ಸೇರಿದಂತೆ ಭಾರತೀಯ ಹಾಕಿ ಒಲಿಂಪಿಯನ್‌ಗಳು ಮತ್ತು ಆಟಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ, ಟ್ರೋಫಿಯು ದೆಹಲಿ, ಚಂಡೀಗಢ, ಗುವಾಹಟಿ, ಪಾಟ್ನಾ, ಭುವನೇಶ್ವರ, ರಾಂಚಿ, ಬೆಂಗಳೂರು, ತಿರುವನಂತಪುರ ಮತ್ತು ಆತಿಥೇಯ ಚೆನ್ನೈ ಸೇರಿದಂತೆ ಭಾರತದ ಅನೇಕ ನಗರಗಳಲ್ಲಿ ಸಂಚರಿಸಲಿದ್ದು, ತಮಿಳುನಾಡು ರಾಜ್ಯದಾದ್ಯಂತ ಜಿಲ್ಲೆಗಳಿಗೆ ಭೇಟಿ ನೀಡಲಿದೆ. 'ಪಾಸ್ ದಿ ಬಾಲ್ ಟ್ರೋಫಿ ಟೂರ್' ಅಭಿಯಾನವು ಹಾಕಿ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಹುಟ್ಟುಹಾಕಲು ಮತ್ತು ಭಾರತೀಯ ಪುರುಷರ ಹಾಕಿ ತಂಡಕ್ಕೆ ಬೆಂಬಲ ಹೆಚ್ಚಿಸಲು ಸಂಚಲನಕಾರಿ ವಾತಾವರಣ ಸೃಷ್ಟಿಸುವ ಗುರಿ ಹೊಂದಿದೆ.

https://static.pib.gov.in/WriteReadData/userfiles/image/image003ZN80.png

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಖ್ಯಾತ ಟ್ರೋಫಿ ಡಿಸೈನರ್ ಸಂಜಯ್ ಶರ್ಮಾ ನಿರ್ಮಿಸಿದ್ದಾರೆ. ಹಿತ್ತಾಳೆ, ಅಲ್ಯೂಮಿನಿಯಂ ಮತ್ತು ತಾಮ್ರದ ಸಂಯೋಜನೆಯಿಂದ ಸೂಕ್ಷ್ಮ ಕರಕುಶಲತೆಯೊಂದಿಗೆ ನಿಕ್ಕಲ್ ಮತ್ತು ಚಿನ್ನದಿಂದ ಲೇಪಿಸಲಾಗಿದೆ. ಕಿರೀಟವನ್ನು ಸ್ಫಟಿಕದಿಂದ ಅಲಂಕರಿಸಲಾಗಿದ್ದು, ಅದರ ಸೊಗಸಾದ ವಿನ್ಯಾಸವು ಪ್ರತಿಷ್ಠಿತ ಟ್ರೋಫಿಯ ಅಂದ ಹೆಚ್ಚಿಸಿದೆ. ಟ್ರೋಫಿಯ ಭವ್ಯತೆಗೆ ಸುಂದರ ಸ್ಪರ್ಶ ನೀಡಿದೆ..

ಪಂದ್ಯಾವಳಿಯು 2023 ಆಗಸ್ಟ್ 3ರಿಂದ ಆಗಸ್ಟ್ 12ರ ವರೆಗೆ ತಮಿಳುನಾಡಿನ ಚೆನ್ನೈನಲ್ಲಿ ಜರುಗಲಿದೆ. ಭಾರತ, ಕೊರಿಯಾ, ಮಲೇಷ್ಯಾ, ಜಪಾನ್, ಪಾಕಿಸ್ತಾನ ಮತ್ತು ಚೀನಾ ತಂಡಗಳು ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ. ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ. ಇದು ಭಾರತದ ಹೊರಗೆ ವೀಕ್ಷಿಸಲು ವಾಚ್ ಹಾಕಿಯಲ್ಲಿ ಲೈವ್ ಸ್ಟ್ರೀಮ್ ಪ್ರಸಾರವಾಗಲಿದೆ. ಮಾಧ್ಯಮಗಳು https://accred.media.dnanetworks.in/Asian-Champions-Trophy/act/app ನಲ್ಲಿ ಮಾನ್ಯತೆಗಾಗಿ ಅರ್ಜಿ ಸಲ್ಲಿಸಬಹುದು.

 

*****

 


(Release ID: 1939407) Visitor Counter : 118