ಗೃಹ ವ್ಯವಹಾರಗಳ ಸಚಿವಾಲಯ

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಸಬರಮತಿ ನದಿ ತೀರ ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಸಬರಮತಿ ನದಿಯ ಮೇಡ್ ಇನ್ ಇಂಡಿಯಾ 'ಅಕ್ಷರ್ ರಿವರ್ ಕ್ರೂಸ್' ಅನ್ನು ಇಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಲ್ಲಿ ಭಾರತವನ್ನು ವಿಶ್ವದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನಕ್ಕೆ ತರಲು ಮಾಡಿದ ಪ್ರಯತ್ನಗಳು ಈಗ ಫಲ ನೀಡುತ್ತಿವೆ

ಪ್ರಧಾನಿ ಶ್ರೀ ಮೋದಿಯವರು ಕಳೆದ 9 ವರ್ಷಗಳಲ್ಲಿ ಗರೀಬ್ ಕಲ್ಯಾಣ್, ಭಾರತ್ ಗೌರವ್, ಭಾರತ್ ಉತ್ಕರ್ಷ್ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ಯೋಜನೆಗಳ ಮೂಲಕ ಇಡೀ ಭಾರತದ ಅಭಿವೃದ್ಧಿಗೆ ಹೊಸ ರೂಪ ನೀಡಿದ್ದಾರೆ

ಪ್ರಧಾನಿ ಶ್ರೀ ಮೋದಿ ಅವರು ಗುಜರಾತ್ ಪ್ರವಾಸೋದ್ಯಮಕ್ಕೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಹೊಸ ಆಯಾಮವನ್ನು ನೀಡಿದ್ದಾರೆ

ಶ್ರೀ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಭಾರತದಲ್ಲಿ ನದಿ ತೀರ ಅಭಿವೃದ್ಧಿಯನ್ನು ಕಲ್ಪಿಸಿಕೊಂಡರು ಮತ್ತು ಅದನ್ನು ನಿರ್ಮಿಸಿದರು.

ಸಬರಮತಿ ನದಿ ತೀರವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ

ನದಿ ತೀರ ಅಭಿವೃದ್ಧಿಯ ಕಾರಣದಿಂದಾಗಿ ನೀರಿನ ಮಟ್ಟ ಏರಿಕೆಯಾಗಿರುವುದು ಮಾತ್ರವಲ್ಲ, ಇದು ಹಿರಿಯ ನಾಗರಿಕರು, ಮಕ್ಕಳು ಮತ್ತು ಯುವಜನರು ಸೇರಿದಂತೆ ಪ್ರತಿಯೊಬ್ಬರ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ

ಮೇಡ್ ಇನ್ ಇಂಡಿಯಾ 'ಅಕ್ಷರ್ ರಿವರ್ ಕ್ರೂಸ್' ಈ ನದಿಯ ತೀರದೊಂದಿಗೆ ಸಂಪರ್ಕ ಹೊಂದಿದೆ, ನದಿ ವಿಹಾರ ನೌಕೆಯು ಅಹಮದಾಬಾದ್ ಜನರಿಗೆ ಮತ್ತು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ

Posted On: 02 JUL 2023 2:31PM by PIB Bengaluru

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಸಬರಮತಿ ನದಿ ತೀರ ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಸಬರಮತಿ ನದಿಯ ಮೇಡ್ ಇನ್ ಇಂಡಿಯಾ 'ಅಕ್ಷರ್ ರಿವರ್ ಕ್ರೂಸ್' (ನದಿ ವಿಹಾರ ನೌಕೆ) ಅನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು.

https://static.pib.gov.in/WriteReadData/userfiles/image/image001GJGW.jpg

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ, ಈ ಅಕ್ಷರ ರಿವರ್ ಕ್ರೂಸ್ ಮೂಲಕ ಗುಜರಾತ್ ಸರ್ಕಾರ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಇಂದು ಅಹಮದಾಬಾದ್ ನಗರದ ನಾಗರಿಕರಿಗೆ ಹೊಸ ಉಡುಗೊರೆಯನ್ನು ನೀಡಿವೆ ಎಂದು ಹೇಳಿದರು. ಶ್ರೀ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಮೊದಲ ಬಾರಿಗೆ ಭಾರತದಲ್ಲಿ ನದಿ ತೀರದ ಅಭಿವೃದ್ಧಿಯನ್ನು ಕಲ್ಪಿಸಿದರು ಮತ್ತು ಯೋಜಿಸಿದರು ಮತ್ತು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅದನ್ನು ಅಭಿವೃದ್ಧಿಪಡಿಸಿದರು ಎಂದು ಅವರು ಹೇಳಿದರು. ನದಿಯ ತೀರವು ಅಹಮದಾಬಾದ್ನಲ್ಲಿ ಮಾತ್ರವಲ್ಲದೆ ಭಾರತ ಮತ್ತು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ ಮತ್ತು ಪ್ರವಾಸೋದ್ಯಮದ ಆಕರ್ಷಣೆಯ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image002OX9Y.jpg

ನದಿ ತೀರದಿಂದ ನೀರಿನ ಮಟ್ಟ ಏರಿಕೆಯಾಗಿರುವುದು ಮಾತ್ರವಲ್ಲದೆ ಹಿರಿಯ ನಾಗರಿಕರು, ಮಕ್ಕಳು ಮತ್ತು ಯುವಕರು ಸೇರಿದಂತೆ ಪ್ರತಿಯೊಬ್ಬರ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈ ಐಷಾರಾಮಿ ನದಿ ವಿಹಾರ ನೌಕೆಯು ಅಹಮದಾಬಾದ್ನ ಎಲ್ಲಾ ನಾಗರಿಕರಿಗೆ ಹೊಸ ಆಕರ್ಷಣೆಯಾಗಲಿದೆ ಎಂದು ಅವರು ಹೇಳಿದರು. ಈ ವಿಹಾರ ನೌಕೆಯನ್ನು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಸಬರಮತಿ ನದಿ ತೀರ ಅಭಿವೃದ್ಧಿ ಕಾರ್ಪೊರೇಶನ್ ಲಿಮಿಟೆಡ್ನಿಂದ ಸಾರ್ವಜನಿಕ - ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು. ಈ ಕ್ರೂಸ್ ಎರಡು ಇಂಜಿನ್ ಹೊಂದಿರುವ 15 ಕೋಟಿ ರೂ. ವೆಚ್ಚದಲ್ಲಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲಿ ನಿರ್ಮಿಸಲಾದ ಮೊದಲ ಪ್ರಯಾಣಿಕ ನೌಕೆಯಾಗಿದ್ದು, ಇದು ಒಂದೂವರೆ ಗಂಟೆಗಳ ಕಾಲ ಸುರಕ್ಷಿತವಾಗಿ ಚಲಿಸುತ್ತದೆ. ಈ 30 ಮೀಟರ್ ಕ್ರೂಸ್ ನಗರಕ್ಕೆ ಭೇಟಿ ನೀಡುವ ಅಹಮದಾಬಾದ್ ಮತ್ತು ದೇಶದ ಎಲ್ಲಾ ನಾಗರಿಕರ ಆಕರ್ಷಣೆಯ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು. ಕ್ರೂಸ್ 165 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ ಮತ್ತು ಖಂಡಿತವಾಗಿಯೂ ಜನರನ್ನು ಆಕರ್ಷಿಸುವ ರೆಸ್ಟೋರೆಂಟ್ ಅನ್ನು ಹೊಂದಿದೆ ಎಂದು ಶ್ರೀ ಶಾ ಹೇಳಿದರು.

ನಾಗರಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಕ್ರೂಸ್ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಇದು 180 ಜೀವ ಸುರಕ್ಷತಾ ಜಾಕೆಟ್ಗಳು, ಅಗ್ನಿ ಸುರಕ್ಷತೆ ಮತ್ತು ತುರ್ತು ರಕ್ಷಣಾ ದೋಣಿಗಳನ್ನು ಹೊಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್ ಮತ್ತು ಗುಜರಾತ್ ಪ್ರವಾಸೋದ್ಯಮಕ್ಕೆ ಯಾವಾಗಲೂ ಆದ್ಯತೆ ನೀಡಿದ್ದರು ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೈಗೊಂಡ ಹಲವಾರು ಉಪಕ್ರಮಗಳಿಂದಾಗಿ ಗುಜರಾತ್ ಮತ್ತು ಅದರ ಎರಡು ಪ್ರಮುಖ ಪ್ರವಾಸಿ ಕೇಂದ್ರಗಳು ದೇಶದ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿವೆ ಎಂದು ಅವರು ಹೇಳಿದರು. ಗುಜರಾತ್ ಗೆ ಬರುವ ಲಕ್ಷಾಂತರ ಪ್ರವಾಸಿಗರಿಗಾಗಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ, ಎಲ್ಲಾ ತೀರ್ಥಕ್ಷೇತ್ರಗಳು ಮತ್ತು ಗಡಿಗಳನ್ನು ಸಂಪರ್ಕಿಸಲು ಉತ್ತಮ ರಸ್ತೆಗಳನ್ನು ನಿರ್ಮಿಸಲಾಗಿದೆ ಮತ್ತು ಪ್ರವಾಸಿಗರಿಗೆ ಸೌಲಭ್ಯಗಳನ್ನು ಒದಗಿಸಲು ವಿಮಾನ ನಿಲ್ದಾಣದಿಂದ ಪ್ರವಾಸಿ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image003EPE6.jpg

ಅಂಬಾಜಿಯಲ್ಲಿ ಧ್ವನಿ ಮತ್ತು ಬೆಳಕು ಪ್ರದರ್ಶನ ಆರಂಭವಾಗಿದೆ, 500 ವರ್ಷಗಳ ನಂತರ ಪಾವಗಡ ದೇವಸ್ಥಾನದಲ್ಲಿ ಧ್ವಜಾರೋಹಣ ಮಾಡಲಾಗಿದೆ, ಮಾಧವಪುರ ಜಾತ್ರೆ ರಾಷ್ಟ್ರೀಯ ಜಾತ್ರೆಯಾಗಿದೆ, ವೈಟ್ ರಾನ್ ನಲ್ಲಿ ತಂಗಲು ಕಚ್ ನಲ್ಲಿ ವಿಶ್ವದಾದ್ಯಂತದ ಪ್ರವಾಸಿಗರಿಗಾಗಿ ಟೆಂಟ್ ಸಿಟಿ ನಿರ್ಮಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದರೊಂದಿಗೆ, ಕಂಕಾರಿಯಾ ಸರೋವರದ ಅಭಿವೃದ್ಧಿ ಮತ್ತು ಈಗ, ಅಹಮದಾಬಾದ್ನ ಈ ನದಿ ತೀರದ ಅಭಿವೃದ್ಧಿಯೊಂದಿಗೆ ಬೃಹತ್ ಪ್ರವಾಸೋದ್ಯಮ ಪೂರಕ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಸರಹದ್ ದರ್ಶನ್ ಕಾರ್ಯಕ್ರಮದಡಿ (ಗಡಿ ಭೇಟಿ ಕಾರ್ಯಕ್ರಮ) ಗುಜರಾತ್ನ ಯುವಕರಿಗೆ ಭದ್ರತಾ ಪಡೆಗಳು ಕಷ್ಟಕರ ಸಂದರ್ಭಗಳಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ನಾಡಬೆಟ್ಟದ ಅನುಭವವನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಶಾ ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಮುಂದಕ್ಕೆ ಕೊಂಡೊಯ್ದಿದ್ದಾರೆ, ಇದರಿಂದಾಗಿ ಗುಜರಾತ್ ನಲ್ಲಿ ದೇಶದ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಅಹಮದಾಬಾದ್ನಲ್ಲಿದೆ, ಅಲ್ಲಿ ನಿಯಮಿತವಾಗಿ ಕ್ರಿಕೆಟ್ ಪಂದ್ಯಗಳು ನಡೆಯುತ್ತಿವೆ ಮತ್ತು ಪ್ರವಾಸೋದ್ಯಮವೂ ಹೆಚ್ಚಾಗಿದೆ ಎಂದು ಶ್ರೀ ಶಾ ಹೇಳಿದರು. ಇದಲ್ಲದೇ ಈಗ ಇಲ್ಲಿ ಬಹು ದೊಡ್ಡ ಕ್ರೀಡಾ ನಗರಿಯೂ ರೂಪುಗೊಳ್ಳುತ್ತಿದೆ. ಪ್ರಧಾನಿ ಮೋದಿ ಅವರು ಗುಜರಾತ್ ಪ್ರವಾಸೋದ್ಯಮಕ್ಕೆ ಹಲವಾರು ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಹೊಸ ಆಯಾಮವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕಳೆದ 9 ವರ್ಷಗಳಲ್ಲಿ ಭಾರತವನ್ನು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಥಮ ಸ್ಥಾನಕ್ಕೆ ತರಲು ಮಾಡಿದ ಪ್ರಯತ್ನಗಳು ಈಗ ಫಲ ನೀಡುತ್ತಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಿ ಮೋದಿಯವರು ಕಳೆದ 9 ವರ್ಷಗಳಲ್ಲಿ ಗರೀಬ್ ಕಲ್ಯಾಣ್, ಭಾರತ್ ಗೌರವ್, ಭಾರತ್ ಉತ್ಕರ್ಷ್ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ಯೋಜನೆಗಳ ಮೂಲಕ ಇಡೀ ಭಾರತದ ಅಭಿವೃದ್ಧಿಗೆ ಹೊಸ ರೂಪ ನೀಡಿದ್ದಾರೆ ಎಂದು ಅವರು ಹೇಳಿದರು.

****



(Release ID: 1936930) Visitor Counter : 110