ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಂದೇ ಭಾರತ್ 5 ರೈಲುಗಳಿಗೆ ಪ್ರಧಾನ ಮಂತ್ರಿ ಹಸಿರು ನಿಶಾನೆ

Posted On: 27 JUN 2023 10:01PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಐದು ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು. ವಂದೇ ಭಾರತ್ ಐದು ರೈಲುಗಳೆಂದರೆ, ಭೋಪಾಲ್(ರಾಣಿ ಕಮಲಾಪತಿ) - ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್; ಭೋಪಾಲ್(ರಾಣಿ ಕಮಲಾಪತಿ) - ಜಬಲ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್; ರಾಂಚಿ - ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್; ಧಾರವಾಡ - ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಗೋವಾ (ಮಡ್ಗಾಂವ್) - ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್.

ರಾಣಿ ಕಮಲಾಪತಿ - ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಕೋಚ್ ಅನ್ನು ಪ್ರಧಾನಿ ಪರಿಶೀಲಿಸಿದರು. ಅವರು ರೈಲಿನಲ್ಲಿದ್ದ ಮಕ್ಕಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

ಪ್ರಧಾನ ಮಂತ್ರಿ ಅವರು ಈ ಕುರಿತು ಟ್ವೀಟ್ ಮಾಡಿದ್ದು;

"ಇಂದು ಭೋಪಾಲ್‌ನಲ್ಲಿ ಐದು ವಂದೇ ಭಾರತ್ ರೈಲುಗಳನ್ನು ಒಟ್ಟಿಗೆ ಪ್ರಾರಂಭಿಸುವ ಅದೃಷ್ಟ. ಇದು ನಮ್ಮ ಸರ್ಕಾರವು ದೇಶಾದ್ಯಂತ ಮೂಲಸೌಕರ್ಯ ಮತ್ತು ಸಂಪರ್ಕದ ತ್ವರಿತ ಅಭಿವೃದ್ಧಿಗೆ ಎಷ್ಟು ಬದ್ಧವಾಗಿದೆ ಎಂಬುದನ್ನು ತೋರಿಸುತ್ತದೆ" ಎಂದಿದ್ದಾರೆ.

ಭೋಪಾಲ್ (ರಾಣಿ ಕಮಲಾಪತಿ) - ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದ ಇಂದೋರ್‌ ಸಂಸದ ಶ್ರೀ ಶಂಕರ್ ಲಾಲ್ವಾನಿ ಅವರ ಟ್ವೀಟ್‌ಗೆ ಉತ್ತರಿಸಿದ ಪ್ರಧಾನಿ, ಮಧ್ಯಪ್ರದೇಶದ ಜನತೆಯನ್ನು ಅಭಿನಂದಿಸಿ, ಇದು ಉಜ್ಜಯಿನಿಗೆ ಹೋಗುವ ಯಾತ್ರಿಕರ ಪ್ರಯಾಣವನ್ನು ಸುಲಭಗೊಳಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದೋರ್-ಭೋಪಾಲ್ ನಡುವೆ ವಂದೇ ಭಾರತ್ ರೈಲು ಆರಂಭವಾದ ಸುಸಂದರ್ಭದಲ್ಲಿ ಮಧ್ಯಪ್ರದೇಶದ ಜನತೆಗೆ ಅಭಿನಂದನೆಗಳು. ಇದರೊಂದಿಗೆ ಅವರು ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣದ ಪ್ರಯೋಜನ ಪಡೆಯುತ್ತಾರೆ, ಧಾರ್ಮಿಕ ನಗರವಾದ ಉಜ್ಜಯಿನಿಗೆ ತೀರ್ಥಯಾತ್ರೆಗೆ ಹೋಗುವ ಭಕ್ತರಿಗೆ ಸಹ ಸುಲಭವಾಗುತ್ತದೆ.

ಜಬಲ್ಪುರದಲ್ಲಿ ಭೋಪಾಲ್ (ರಾಣಿ ಕಮಲಾಪತಿ) - ಜಬಲ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಸ್ವಾಗತಿಸಿದ ಜಬಲ್‌ಪುರದ ಸಂಸದ ಶ್ರೀ ರಾಕೇಶ್ ಸಿಂಗ್ ಅವರ ಟ್ವೀಟ್‌ಗೆ ಉತ್ತರಿಸಿದ ಪ್ರಧಾನಿ, ರಾಜಧಾನಿ ಭೋಪಾಲ್ ಮತ್ತು ಸಾಂಸ್ಕೃತಿಕ ರಾಜಧಾನಿ ಜಬಲ್‌ಪುರ ನಡುವೆ ರೈಲು ಉತ್ತಮ ಸಂಪರ್ಕಕ್ಕೆ ಕಾರಣವಾಗುತ್ತದೆ. ಪ್ರವಾಸೋದ್ಯಮ ಉತ್ತೇಜಿಸಲು ಮತ್ತು ಯಾತ್ರಾರ್ಥಿಗಳಿಗೆ ಪ್ರಯಾಣವನ್ನು ಸುಲಭಗೊಳಿಸಲು ಇದು ಸಹಾಯಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

 

ಒಂದೆಡೆ ವಂದೇ ಭಾರತ್ ರೈಲು ದೇಶದ ಹೆಮ್ಮೆಯಾದರೆ,  ಮಧ್ಯಪ್ರದೇಶದ ಸಾಂಸ್ಕೃತಿಕ ರಾಜಧಾನಿ ಜಬಲ್‌ಪುರ ಮತ್ತು ರಾಜ್ಯ ರಾಜಧಾನಿ ಭೋಪಾಲ್ ನಡುವೆ ಸಂಪರ್ಕ ಹೆಚ್ಚುತ್ತದೆ. ಮತ್ತೊಂದೆಡೆ, ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳು ಸಹ ವೇಗವಾಗಿ ಅಭಿವೃದ್ಧಿ ಹೊಂದುತ್ತವೆ.

ರಾಂಚಿಯ ಸಂಸದ ಶ್ರೀ ಸಂಜಯ್ ಸೇಠ್ ಅವರ ಟ್ವೀಟ್‌ಗೆ ಉತ್ತರಿಸಿದ ಶ್ರೀ ನರೇಂದ್ರ ಮೋದಿ ಅವರು, ರಾಂಚಿ - ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ ಖನಿಜ ಸಮೃದ್ಧ ಜಾರ್ಖಂಡ್ ಮತ್ತು ಬಿಹಾರದ ಏಳಿಗೆಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.

"ರಾಂಚಿ-ಪಾಟ್ನಾ ನಡುವಿನ ಹೊಸ ವಂದೇ ಭಾರತ್ ರೈಲು ಜನರಿಗೆ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ. ಜತೆಗೆ, ಖನಿಜ ಸಂಪತ್ತಿನಿಂದ ಸಮೃದ್ಧವಾಗಿರುವ ಜಾರ್ಖಂಡ್ ಮತ್ತು ಬಿಹಾರದ ಆರ್ಥಿಕ ಪ್ರಗತಿಗೆ ಸಹಾಯ ಮಾಡುತ್ತದೆ".

 

ಗೋವಾ (ಮಡ್ಗಾಂವ್)-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ಕುರಿತು ಗೋವಾ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಮಾಡಿದ ಟ್ವೀಟ್‌ಗೆ ಉತ್ತರಿಸಿಪ್ರಧಾನಿ, ಟ್ವೀಟ್ ಮಾಡಿದ್ದಾರೆ.

"ವಂದೇ ಭಾರತ್ ರೈಲು ಹೆಚ್ಚು ಪ್ರವಾಸಿಗರಿಗೆ ಗೋವಾದ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಕೊಂಕಣ ಕರಾವಳಿಯಾದ್ಯಂತ ಸಂಪರ್ಕವನ್ನು ಸುಧಾರಿಸುತ್ತದೆ."

ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಕರ್ನಾಟಕ ರಾಜ್ಯಪಾಲ ಶ್ರೀ ತಾವರಚಂದ್ ಗೆಹ್ಲೋಟ್ ಅವರು ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸಿದರು. ಶ್ರೀ ಜೋಶಿ ಅವರ ಟ್ವೀಟ್‌ಗೆ ಪ್ರತ್ಯುತ್ತರವಾಗಿ ಪ್ರಧಾನ ಮಂತ್ರಿ ಟ್ವೀಟ್ ಮಾಡಿದ್ದಾರೆ

"ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಕರ್ನಾಟಕದಾದ್ಯಂತ ಸಂಪರ್ಕವನ್ನು ಸುಧಾರಿಸುತ್ತದೆ. ಇದು ರಾಜ್ಯದಲ್ಲಿ ವಾಣಿಜ್ಯ ಮತ್ತು ಪ್ರವಾಸೋದ್ಯಮವನ್ನು ಸುಧಾರಿಸುತ್ತದೆ."

ವಂದೇ ಭಾರತ್ ರೈಲು ಹೆಚ್ಚು ಪ್ರವಾಸಿಗರು ಗೋವಾದ ರಮಣೀಯ ಸೌಂದರ್ಯವನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ. ಇದು ಕೊಂಕಣ ಕರಾವಳಿಯಾದ್ಯಂತ ಸಂಪರ್ಕವನ್ನು ಸುಧಾರಿಸುತ್ತದೆ.

****

 

 

 


(Release ID: 1935903) Visitor Counter : 86