ಪ್ರಧಾನ ಮಂತ್ರಿಯವರ ಕಛೇರಿ
ಜೂನ್ 27ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿರುವ ಪ್ರಧಾನಿ
ರಾಣಿ ಕಮಲಾಪತಿ ರೈಲ್ವೆ ನಿಲ್ದಾಣದಲ್ಲಿ ಐದು ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲುಗಳಿಗೆ ಹಸಿರು ನಿಶಾನೆ ತೋರಲಿರುವ ಪ್ರಧಾನಿ
ಭೋಪಾಲ್ (ರಾಣಿ ಕಮಲಾಪತಿ)-ಇಂದೋರ್, ಭೋಪಾಲ್ (ರಾಣಿ ಕಮಲಾಪತಿ)-ಜಬಲ್‌ಪುರ, ರಾಂಚಿ-ಪಾಟ್ನಾ, ಧಾರವಾಡ-ಬೆಂಗಳೂರು ಮತ್ತು ಗೋವಾ(ಮಡಗಾಂವ್)-ಮುಂಬೈ ನಡುವೆ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಪರಿಚಯಿಸಲಾಗುವುದು
ಗೋವಾ, ಬಿಹಾರ ಮತ್ತು ಜಾರ್ಖಂಡ್‌ಗೆ ಮೊದಲ ಬಾರಿಗೆ ʻವಂದೇ ಭಾರತ್ʼ ರೈಲು ಸಂಪರ್ಕ
Posted On:
26 JUN 2023 12:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜೂನ್ 27ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 10:30ಕ್ಕೆ ರಾಣಿ ಕಮಲಾಪತಿ ರೈಲ್ವೆ ನಿಲ್ದಾಣಕ್ಕೆ ತಲುಪಲಿರುವ ಪ್ರಧಾನಿ, ಐದು `ವಂದೇ ಭಾರತ್’ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಆ ಐದು ʻವಂದೇ ಭಾರತ್ʼ ರೈಲುಗಳೆಂದರೆ: ʻಭೋಪಾಲ್(ರಾಣಿ ಕಮಲಾಪತಿ)-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್ʼ; ʻಭೋಪಾಲ್-ಜಬಲ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ʼ; ʻರಾಂಚಿ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ʼ; ʻಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ʼ; ಮತ್ತು ʻಮಡಗಾಂವ್ (ಗೋವಾ) - ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ʼ.
ʻಭೋಪಾಲ್(ರಾಣಿ ಕಮಲಾಪತಿ)-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಮಧ್ಯ ಪ್ರದೇಶದ ಪ್ರಮುಖ ನಗರಗಳ ನಡುವೆ ಸುಗಮ ಮತ್ತು ವೇಗದ ಪ್ರಯಾಣಕ್ಕೆ ಅನುವು ಮಾಡುತ್ತದೆ. ಜೊತೆಗೆ ಈ ಭಾಗದ ಸಾಂಸ್ಕೃತಿ, ಧಾರ್ಮಿಕ ಮತ್ತು ಪ್ರವಾಸಿ ತಾಣಗಳ ನಡುವೆ ಸಂಪರ್ಕವನ್ನು ಹೆಚ್ಚಿಸುತ್ತದೆ.
ʻಭೋಪಾಲ್-ಜಬಲ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಮಹಾಕೌಶಲ್ ಪ್ರದೇಶವನ್ನು (ಜಬಲ್‌ಪುರ) ಮಧ್ಯಪ್ರದೇಶದ ಕೇಂದ್ರಭಾಗಕ್ಕೆ(ಭೋಪಾಲ್) ಸಂಪರ್ಕಿಸುತ್ತದೆ. ಅಲ್ಲದೆ, ಈ ಭಾಗದ ಪ್ರವಾಸಿ ಸ್ಥಳಗಳು ಸುಧಾರಿತ ಸಂಪರ್ಕದಿಂದ ಪ್ರಯೋಜನ ಪಡೆಯಲಿವೆ.
ʻರಾಂಚಿ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ʼ - ಇದು ಜಾರ್ಖಂಡ್ ಮತ್ತು ಬಿಹಾರಕ್ಕೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ʼರೈಲಾಲಿದೆ. ಪಾಟ್ನಾ ಮತ್ತು ರಾಂಚಿ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಈ ರೈಲು ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ವರದಾನವಾಗಲಿದೆ.
ʻಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ʼಕರ್ನಾಟಕದ ಪ್ರಮುಖ ನಗರಗಳಾದ ಧಾರವಾಡ, ಹುಬ್ಬಳ್ಳಿ ಮತ್ತು ದಾವಣಗೆರೆಯನ್ನು ರಾಜ್ಯದ ರಾಜಧಾನಿ ಬೆಂಗಳೂರಿನೊಂದಿಗೆ ಸಂಪರ್ಕಿಸುತ್ತದೆ. ಇದು ಈ ಪ್ರದೇಶದ ಪ್ರವಾಸಿಗರು, ವಿದ್ಯಾರ್ಥಿಗಳು, ಕೈಗಾರಿಕೋದ್ಯಮಿಗಳು ಮುಂತಾದವರಿಗೆಅಪಾರ ಪ್ರಯೋಜನವನ್ನು ನೀಡುತ್ತದೆ.
ʻಮಡಗಾಂವ್ (ಗೋವಾ) -ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ʼ- ಇದು ಗೋವಾದ ಮೊದಲ ʻವಂದೇ ಭಾರತ್ ಎಕ್ಸ್‌ಪ್ರೆಸ್ʼರೈಲಾಗಿದೆ. ಇದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಗೋವಾದ ಮಡಗಾಂವ್ ನಿಲ್ದಾಣದ ನಡುವೆ ಚಲಿಸುತ್ತದೆ. ಇದು ಗೋವಾ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ.
***
(Release ID: 1935363)
Visitor Counter : 149
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam