ಪ್ರಧಾನ ಮಂತ್ರಿಯವರ ಕಛೇರಿ
ಈಜಿಪ್ಟ್ ನ ಗ್ರ್ಯಾಂಡ್ ಮುಫ್ತಿ ಅವರನ್ನು ಭೇಟಿ ಮಾಡಿದ ಪ್ರಧಾನಿ
Posted On:
25 JUN 2023 5:18AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಈಜಿಪ್ಟ್ ರಾಷ್ಟ್ರದ ಪ್ರವಾಸ ವೇಳೆ ಈಜಿಪ್ಟ್ ನ ಗ್ರ್ಯಾಂಡ್ ಮುಫ್ತಿ, ಗೌರವಾನ್ವಿತ ಡಾ.ಶ್ವಾಕಿ ಇಬ್ರಾಹಿಂ ಅಲಂ ಅವರನ್ನು 2023ರ ಜೂನ್ 24ರಂದು ಭೇಟಿಯಾಗಿದ್ದರು.
ಗ್ರ್ಯಾಂಡ್ ಮುಫ್ತಿ ತಮ್ಮ ಇತ್ತೀಚಿನ ಭಾರತ ಭೇಟಿಯನ್ನು ಆನಂದದಿಂದ ಸ್ಮರಿಸಿಕೊಂಡರು ಮತ್ತು ಭಾರತ ಮತ್ತು ಈಜಿಪ್ಟ್ ನಡುವಿನ ಜನರ ಮತ್ತು ಬಲಿಷ್ಠ ಸಾಂಸ್ಕೃತಿಕ ಸಂಬಂಧವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಅಲ್ಲದೆ, ಎಲ್ಲರ ಒಳಗೊಳ್ಳುವಿಕೆ ಮತ್ತು ಬಹುತ್ವವನ್ನು ಸಾರುತ್ತಿರುವ ಪ್ರಧಾನಮಂತ್ರಿ ಅವರ ನಾಯಕತ್ವನ್ನು ಗ್ರ್ಯಾಂಡ್ ಮುಫ್ತಿ ಶ್ಲಾಘಿಸಿದರು.
ಸಮಾಜದಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯ ಹಾಗೂ ಉಗ್ರವಾದ ಮತ್ತು ಮೂಲಭೂತವಾದವನ್ನು ಎದುರಿಸಲು ಸಂಬಂಧಿಸಿದ ವಿಷಯಗಳ ಕುರಿತಂತೆ ಅವರ ಮಾತುಕತೆಗಳು ಕೇಂದ್ರೀಕೃತವಾಗಿದ್ದವು.
ಈಜಿಪ್ಟ್ ನ ಸಾಮಾಜಿ ನ್ಯಾಯ ಸಚಿವಾಲಯದಲ್ಲಿ ದಾರ್- ಅಲ್-ಇಫ್ತಾದಲ್ಲಿ ಭಾರತವು ಮಾಹಿತಿ ತಂತ್ರಜ್ಞಾನ ಕುರಿತ ಉತ್ಕೃಷ್ಠತಾ ಕೇಂದ್ರವನ್ನು ತೆರೆಯಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು,
****
(Release ID: 1935226)
Visitor Counter : 129
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam