ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ 9ನೇ ವಾರ್ಷಿಕ ಅಂತಾರಾಷ್ಟ್ರೀಯ ಯೋಗ ದಿನ
Posted On:
21 JUN 2023 7:58PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜೂನ್ 21ರಂದು ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯ ಉತ್ತರ ಹುಲ್ಲುಹಾಸಿನಲ್ಲಿ ಆಯೋಜಿಸಲಾದ 9ನೇ ವಾರ್ಷಿಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದರು.
ಈ ವರ್ಷದ ಶೀರ್ಷಿಕೆ 'ವಸುದೈವ ಕುಟುಂಬಕಂಗಾಗಿ ಯೋಗ'. ಇದರರ್ಥ "ವಸುದೈವ ಕುಟುಂಬಕಂ" ಅಥವಾ "ಒಂದು ಭೂಮಿ • ಒಂದು ಕುಟುಂಬ • ಒಂದು ಭವಿಷ್ಯ” ಎಂಬುದಾಗಿದೆ.
ಈ ಕಾರ್ಯಕ್ರಮವು 135 ಕ್ಕೂ ಹೆಚ್ಚು ರಾಷ್ಟ್ರಗಳ ಸಾವಿರಾರು ಯೋಗ ಉತ್ಸಾಹಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆಗೆ ಸಾಕ್ಷಿಯಾಯಿತು, ಯೋಗ ಅಧಿವೇಶನದಲ್ಲಿ ಗರಿಷ್ಠ ಸಂಖ್ಯೆಯ ರಾಷ್ಟ್ರಗಳು ಭಾಗವಹಿಸಿದ ಗಿನ್ನಿಸ್ ವಿಶ್ವ ದಾಖಲೆಯನ್ನು ಇದು ನಿರ್ಮಿಸಿತು. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವೀಡಿಯೊ ಸಂದೇಶವನ್ನು ಕಾರ್ಯಕ್ರಮದಲ್ಲಿ ಬಿತ್ತರಿಸಲಾಯಿತು.
ರಾಜತಾಂತ್ರಿಕರು, ಅಧಿಕಾರಿಗಳು, ಶಿಕ್ಷಣ ತಜ್ಞರು, ಆರೋಗ್ಯ ವೃತ್ತಿಪರರು, ತಂತ್ರಜ್ಞರು, ಉದ್ಯಮದ ನಾಯಕರು, ಮಾಧ್ಯಮ ವ್ಯಕ್ತಿಗಳು, ಕಲಾವಿದರು, ಆಧ್ಯಾತ್ಮಿಕ ಮುಖಂಡರು ಮತ್ತು ಯೋಗಾಭ್ಯಾಸಿಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳ ಹಲವಾರು ಪ್ರಮುಖ ಗಣ್ಯರು ಮತ್ತು ಪ್ರಮುಖ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 77 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಗೌರವಾನ್ವಿತ ಶ್ರೀ ಸಾಬಾ ಕೊರೊಸಿ, ನ್ಯೂಯಾರ್ಕ್ ನಗರದ ಮೇಯರ್ ಶ್ರೀ ಎರಿಕ್ ಆಡಮ್ಸ್, ವಿಶ್ವಸಂಸ್ಥೆಯ ಉಪ ಮಹಾಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುಂಪಿನ ಅಧ್ಯಕ್ಷರಾದ ಗೌರವಾನ್ವಿತ ಶ್ರೀಮತಿ ಅಮೀನಾ ಜೆ. ಮುಹಮ್ಮದ್ ಇದರಲ್ಲಿ ಭಾಗವಹಿಸಿದ ಪ್ರಮುಖರಲ್ಲಿ ಸೇರಿದ್ದಾರೆ.
ಯೋಗ ಅಧಿವೇಶನಕ್ಕೂ ಮುನ್ನ ಪ್ರಧಾನಮಂತ್ರಿಯವರು 2022ರ ಡಿಸೆಂಬರ್ ನಲ್ಲಿ ಭಾರತದ ಯುಎನ್ ಎಸ್ ಸಿ ಅಧ್ಯಕ್ಷತೆಯ ಅವಧಿಯಲ್ಲಿ ಉದ್ಘಾಟಿಸಲಾದ ಮಹಾತ್ಮಾಗಾಂಧಿ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಪ್ರಧಾನಮಂತ್ರಿಯವರು ಉತ್ತರ ಹುಲ್ಲುಹಾಸಿನ ಮೇಲಿರುವ ಶಾಂತಿಪಾಲನಾ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಿದರು.
****
(Release ID: 1934361)
Visitor Counter : 123
Read this release in:
English
,
Manipuri
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam