ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಮೆರಿಕದ ಶ್ರೇಷ್ಠ ಚಿಂತಕರ ಗುಂಪಿನೊಂದಿಗೆ ಪ್ರಧಾನ ಮಂತ್ರಿ ಸಭೆ

Posted On: 21 JUN 2023 8:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೇರಿಕದ ನ್ಯೂಯಾರ್ಕ್‌ನಲ್ಲಿಂದು  ಅಮೆರಿಕದ ಹಲವಾರು ಶ್ರೇಷ್ಠ ಚಿಂತಕರರನ್ನು ಭೇಟಿ ಮಾಡಿದರು.

ಪ್ರಧಾನ ಮಂತ್ರಿ ಮತ್ತು ಚಿಂತಕ ತಜ್ಞರು ವಿವಿಧ ಅಭಿವೃದ್ಧಿ ಮತ್ತು ಭೌಗೋಳಿಕ-ರಾಜಕೀಯ ವಿಷಯಗಳ ಕುರಿತು ಚರ್ಚಿಸಿದರು.

ಭಾರತವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವ ಆಚರಿಸುತ್ತಿರುವ ಸುಸಂದರ್ಭದಲ್ಲಿ ದೇಶವು ರೂಪಾಂತರಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ಭಾರತದ ಅಸ್ತಿತ್ವವನ್ನು ಉಜ್ವಲಗೊಳಿಸಲು ನೀವೆಲ್ಲರೂ ಭಾರತಕ್ಕೆ ಬರಬೇಕು ಎಂದು ಪ್ರಧಾನ ಮಂತ್ರಿ ಮುಕ್ತಾಹ್ವಾನ ನೀಡಿದರು.

ಸಂವಾದದಲ್ಲಿ ಭಾಗವಹಿಸಿದ್ದ ವಿವಿಧ ಚಿಂತಕರು:

  • ಶ್ರೀ ಮೈಕೆಲ್ ಫ್ರೊಮನ್, ನಿಯೋಜಿತ ಅಧ್ಯಕ್ಷ ಮತ್ತು ಫೆಲೋ, ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ (ಸಿಎಫ್ಆರ್), ನ್ಯೂಯಾರ್ಕ್
  • ಶ್ರೀ ಡೇನಿಯಲ್ ರಸ್ಸೆಲ್, ಉಪಾಧ್ಯಕ್ಷ, ನ್ಯೂಯಾರ್ಕ್‌ನ ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಅಂತಾರಾಷ್ಟ್ರೀಯ ಭದ್ರತೆ ಮತ್ತು ರಾಜತಾಂತ್ರಿಕತೆ ವಿಭಾಗ
  • ಡಾ. ಮ್ಯಾಕ್ಸ್ ಅಬ್ರಹಾಂಸ್, ಬೋಸ್ಟನ್‌ನ ಈಶಾನ್ಯ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಸಹಪ್ರಾಧ್ಯಾಪಕ
  • ಶ್ರೀ ಜೆಫ್ ಎಂ ಸ್ಮಿತ್, ನಿರ್ದೇಶಕರು, ಏಷ್ಯನ್ ಸ್ಟಡೀಸ್ ಸೆಂಟರ್, ದಿ ಹೆರಿಟೇಜ್ ಫೌಂಡೇಶನ್, ವಾಷಿಂಗ್ಟನ್ ಡಿಸಿ
  • ಶ್ರೀ ಎಲ್ ಬ್ರಿಡ್ಜ್ ಕಾಲ್ಬಿ, ಸಹಸಂಸ್ಥಾಪಕ, ವಾಷಿಂಗ್ಟನ್ ಡಿಸಿಯಲ್ಲಿ ನೆಲೆಗೊಂಡಿರುವ 'ದಿ ಮ್ಯಾರಥಾನ್ ಇನಿಶಿಯೇಟಿವ್'
  • ಶ್ರೀ ಗುರು ಸೋವ್ಲೆ, ಸಂಸ್ಥಾಪಕ ಸದಸ್ಯ, ನಿರ್ದೇಶಕ (ಇಂಡೋ-ಯುಎಸ್ ವ್ಯವಹಾರಗಳು), ಇಂಡಸ್ ಇಂಟರ್ ನ್ಯಾಷನಲ್ ರಿಸರ್ಚ್ ಫೌಂಡೇಶನ್, ಟೆಕ್ಸಾಸ್

 

***

 


(Release ID: 1933899) Visitor Counter : 150