ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂಕಲ್ಪದಲ್ಲಿ ಮೂಡಿಬಂದ ವಿಶಿಷ್ಟ ಪರಿಕಲ್ಪನೆಯಾದ "ರಾಷ್ಟ್ರೀಯ ರೋಜ್ ಗಾರ್ ಮೇಳ"ವು ಸರ್ಕಾರದ ನೇಮಕಾತಿ ಪ್ರಕ್ರಿಯೆಯನ್ನು ಸಾಂಸ್ಥಿಕಗೊಳಿಸಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ವೇಗವಾಗಿ, ಪಾರದರ್ಶಕವಾಗಿ ಮತ್ತು ಪಕ್ಷಪಾತವಿಲ್ಲದೆ ಮಾಡುವ ಮೂಲಕ ಅನುಷ್ಠಾನಕ್ಕಾಗಿ ಆದ್ಯತೆ ನೀಡಿದೆ ಎಂದು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ನಿವಾರಣೆ ಮತ್ತು ಪಿಂಚಣಿ ಸಚಿವಾಲಯದ 9 ವರ್ಷಗಳ ಸಾಧನೆಗಳ ಕುರಿತು ಸಚಿವರು ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು
ಸಾಮರ್ಥ್ಯ ನಿರ್ಮಾಣಕ್ಕಾಗಿ ಸುಧಾರಣೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ- "ಪಾತ್ರ-ಆಧಾರಿತ" ಕಲಿಕೆಯಿಂದ "ನಿಯಮ ಆಧಾರಿತ" ವಿಧಾನವಾಗಿ ಮಾದರಿ ಬದಲಾವಣೆಯೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಾರಂಭಿಸಿದ, "ಮಿಷನ್ ಕರ್ಮಯೋಗಿ" ಉಪಕ್ರಮವು ಒಂದು ವಿನೂತನ ಪ್ರಕ್ರಿಯೆಯಾಗಿದೆ : ಡಾ ಜಿತೇಂದ್ರ ಸಿಂಗ್
ರಾಷ್ಟ್ರೀಯ ರೋಜ್ ಗಾರ್ ಮೇಳದಲ್ಲಿ ನಾವೀನ್ಯತೆಯ ಬದಲಾವಣೆ ಕ್ರಮಗಳು, ನಾಗರಿಕ ಸೇವಕರಿಗೆ ಕೆಳಗಿನಿಂದ ಮೇಲಿನ ಹಂತದವರೆಗೆ ಹೆಚ್ಚು ದೃಢವಾದ ಸಾಮರ್ಥ್ಯ ನಿರ್ಮಾಣ ವ್ಯವಸ್ಥೆಗಳು ಮತ್ತು ತರಬೇತಿಗಳು, ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದ ಹೆಚ್ಚಿನ ಬಳಕೆ ಮತ್ತು ಉಚಿತ ವಿಚಾರ ವಿನಿಮಯಕ್ಕಾಗಿ “ಚಿಂತನ ಶಿಬಿರ"ಗಳನ್ನು ನಿಯಮಿತವಾಗಿ ಅನುಷ್ಠಾನಗೊಳಿಸುವುದು ಸಚಿವಾಲಯದ ಮುಂದಿನ ಹೆಜ್ಜೆಗಳಾಗಿವೆ : ಡಾ ಜಿತೇಂದ್ರ ಸಿಂಗ್
Posted On:
09 JUN 2023 4:27PM by PIB Bengaluru
“ರಾಷ್ಟ್ರೀಯ ರೋಜ್ ಗಾರ್ ಮೇಳ” ಎಂಬ ಒಂದು ವಿಶಿಷ್ಟ ಪರಿಕಲ್ಪನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೂಪಿಸಿದ್ದಾರೆ, ಇದು ಕೇಂದ್ರ ಸರ್ಕಾರದ ನೇಮಕಾತಿ ಪ್ರಕ್ರಿಯೆಯನ್ನು ಸಾಂಸ್ಥಿಕಗೊಳಿಸಿದೆ : ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ; ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ನಿವಾರಣೆ, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ ಜಿತೇಂದ್ರ ಸಿಂಗ್ ಅವರು ಹೇಳಿದರು.

ಹೆಚ್ಚಿನ ಆಡಳಿತ ಉಪಕ್ರಮಗಳು ಮತ್ತು ಆಡಳಿತ ಸುಧಾರಣೆಗಳ ವ್ಯವಸ್ಥೆಗಳು ಯುವ ಕೇಂದ್ರಿತವಾಗಿದೆ ಮತ್ತು ವಿವಿಧ ಯೋಜನೆಗಳ ಮೂಲಕ ಲಕ್ಷಾಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ರೋಜ್ ಗಾರ್ ಮೇಳವು ಯುವಕರಿಗೆ ಸರ್ಕಾರದ ಉದ್ಯೋಗಗಳನ್ನು ಒದಗಿಸುವ ಪ್ರಮುಖ ಮತ್ತು ದಿಟ್ಟ ಉಪಕ್ರಮವಾಗಿದೆ ಎಂದು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ನಿವಾರಣೆ ಮತ್ತು ಪಿಂಚಣಿ ಸಚಿವಾಲಯದ 9 ವರ್ಷಗಳ ಸಾಧನೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು
ಕೇಂದ್ರ ಸರ್ಕಾರ ಮತ್ತು ಸಹಕರಿಸುವ ಇತರೆ ರಾಜ್ಯ ಸರ್ಕಾರಗಳ 10 ಲಕ್ಷ ನೇಮಕಾತಿ ಪತ್ರಗಳನ್ನು "ಮಿಷನ್ ಮೋಡ್" ನಲ್ಲಿ ರೋಜ್ ಗಾರ್ ಮೇಳದ ಮೂಲಕ ವಿತರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
"ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಪ್ರಕ್ರಿಯೆಯನ್ನು ವೇಗವಾಗಿ, ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡುವ ಮೂಲಕ ನೇಮಕಾತಿಗಳಿಗೆ ಆದ್ಯತೆ ನೀಡಿದೆ” ಎಂದು ಮೇ 2023 ರಲ್ಲಿ ನಡೆದ ಕೊನೆಯ ರೋಜ್ ಗಾರ್ ಮೇಳದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಎದುರಿಸಿದ ತೊಂದರೆಗಳನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಹೊಸ ನೇಮಕಾತಿಗಳನ್ನು ರೂಪಿಸಲು ಸಿಬ್ಬಂದಿ ಆಯ್ಕೆ ಮಂಡಳಿಯು ಈ ಹಿಂದೆ ಸರಿಸುಮಾರು 15-18 ತಿಂಗಳುಗಳಷ್ಟು ಸಮಯಾವಕಾಶವನ್ನು ತೆಗೆದುಕೊಳ್ಳುತ್ತಿತ್ತು, ಆದರೆ ಇಂದು ಕೇವಲ 6-8 ತಿಂಗಳುಗಳನ್ನು ಮಾತ್ರ ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಅವರು ವ್ಯವಸ್ಥೆಯನ್ವು ಉಲ್ಲೇಖಿಸಿ ಹೇಳಿದ್ದಾರೆ ಎಂದು ಸಚಿವ ಡಾ ಜಿತೇಂದ್ರ ಸಿಂಗ್ ಅವರು ಹೇಳಿದರು
ಗೆಜೆಟೆಡ್ ಅಲ್ಲದ ಗ್ರೂಪ್ ಬಿ ಹುದ್ದೆಗಳಿಗೆ ಮತ್ತು ಕಡಿಮೆ ವಿದ್ಯಾರ್ಹತೆಯ ಹುದ್ದೆಗಳಿಗೆ ಸಂದರ್ಶನಗಳನ್ನು ರದ್ದುಗೊಳಿಸಲಾಗಿದೆ, ಇದು ಹೆಚ್ಚು ಪಾರದರ್ಶಕತೆಗೆ ಕಾರಣವಾಗಿದೆ. ಕಾಗದ ಆಧಾರಿತ ಲಿಖಿತ ಪರೀಕ್ಷೆಗಳ ಬದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಪರಿಚಯಿಸಲಾಗಿದೆ, ಸರ್ಕಾರಿ ಉದ್ಯೋಗಗಳಿಗೆ ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಎಸ್.ಎಸ್.ಸಿ. ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಪರಿಚಯಿಸಲಾಗಿದೆ ಎಂದು ಇತರ ಯುವ ಕೇಂದ್ರಿತ ನೇಮಕಾತಿ ಸುಧಾರಣೆಗಳನ್ನು ಉಲ್ಲೇಖಿಸಿದ ಡಾ ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದರು
“ನಿಯಮ ಆಧಾರಿತ” ವಿಧಾನಗಳ ಬದಲಾಗಿ "ಪಾತ್ರ-ಆಧಾರಿತ" ಕಲಿಕೆಯ ಮಾದರಿ ಬದಲಾವಣೆಯೊಂದಿಗೆ ಸಾಮರ್ಥ್ಯ ವೃದ್ಧಿಗಾಗಿ ಬದಲಾವಣೆ ಹಾಗೂ ಸುಧಾರಣೆಯ ಸಂಕಲ್ಪದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಪ್ರಮುಖ ವಿಧಾನವಾಗಿದೆ "ಮಿಷನ್ ಕರ್ಮಯೋಗಿ" ಎಂದು ಒಂಬತ್ತು ವರ್ಷಗಳ ಆಡಳಿತಾತ್ಮಕ ಸುಧಾರಣೆಗಳ ಕುರಿತು ಮಾತನಾಡಿದ ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಹೇಳಿದರು. ಹೊಸ ನೇಮಕಾತಿಗಳಿಗೆ ಪೂರಕ ಆರಂಭಿಕ ತರಬೇತಿ ನೀಡಲು ಪ್ರಾರಂಭಿಸಲಾದ ಕೋರ್ಸ್‌ಗಳ ಆನ್‌ಲೈನ್ ಮಾಡ್ಯೂಲ್ "ಕರ್ಮಯೋಗಿ ಪ್ರಾರಂಭ್", ಹಾಗೂ ಎಲ್ಲಿ ಬೇಕಾದರೂ, ಯಾವುದೇ ಸಮಯದಲ್ಲಿ ಬೇಕಾದರೂ ಕಲಿಕೆಯನ್ನು ಒದಗಿಸಲು ಸಾಧ್ಯವಾಗುವ ನಿಟ್ಟಿನಲ್ಲಿ 'ಐಗೋಟ್ ಕರ್ಮಯೋಗಿ ಆಪ್' ಗಳನ್ನು ಪ್ರಾರಂಭಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಸಾಮರ್ಥ್ಯ ನಿರ್ಮಾಣಕ್ಕೆ ವಿಶ್ವಾಸಾರ್ಹ ಮತ್ತು ಏಕರೂಪದ ವಿಧಾನವನ್ನು ಅನುಸರಿಸಲು ಸಾಮರ್ಥ್ಯ ನಿರ್ಮಾಣ ಆಯೋಗವನ್ನು (ಸಿಬಿಸಿ) ಸ್ಥಾಪಿಸಲಾಗಿದೆ ಎಂದು ಸಚಿವರು ತಿಳಿಸಿದರು. ನಾಗರಿಕ ಸೇವಾ ತರಬೇತಿ ಸಂಸ್ಥೆಗಳಿಗೆ ರಾಷ್ಟ್ರೀಯ ಮಾನದಂಡಗಳನ್ನು ಸಿಬಿಸಿ ಪ್ರಾರಂಭಿಸಿದೆ. ಪ್ರತಿ ಕೇಂದ್ರೀಯ ತರಬೇತಿ ಸಂಸ್ಥೆಗಳಲ್ಲಿ ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ವಾರ್ಷಿಕ ಸಾಮರ್ಥ್ಯ ನಿರ್ಮಾಣ ಯೋಜನೆಯನ್ನು ಅಭಿವೃದ್ಧಿಪಡಿಸುವಲ್ಲಿ ಎಲ್ಲಾ ಸಚಿವಾಲಯಗಳು/ ಇಲಾಖೆಗಳು/ ಸಂಸ್ಥೆಗಳು(ಎಂ.ಡಿ.ಒ.ಗಳು) ಇತ್ಯಾದಿಗಳಿಗೆ ಸಿಬಿಸಿ ಸಹಾಯ ಮಾಡುತ್ತಿದೆ. ರಾಷ್ಟ್ರೀಯ ತರಬೇತಿ ಸಮಾವೇಶವನ್ನು ಇದೇ 11ನೇ ಜೂನ್ 2023 ರಂದು ಉದ್ಘಾಟಿಸಲಾಗುತ್ತಿದೆ.
ದೇಶದ ಸಿಬ್ಬಂದಿ ನಿರ್ವಹಣೆ ವ್ಯವಸ್ಥೆಯ ನೋಡಲ್ ಸಚಿವಾಲಯವಾದ ಕೇಂದ್ರ ಸಿಬ್ಬಂದಿ ಸಚಿವಾಲಯವು ಕೈಗೊಂಡ ಹಲವಾರು ಉಪಕ್ರಮಗಳ ಬಗ್ಗೆ ವಿವರಿಸಿದ ಡಾ ಜಿತೇಂದ್ರ ಸಿಂಗ್ ಅವರು, ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಹಾಗೂ ವೃತ್ತಿಪರ ಮತ್ತು ಕುಟುಂಬ ಜೀವನದ ನಡುವೆ ಸಮತೋಲನವನ್ನು ಒದಗಿಸಲು ಕೇಂದ್ರ ಸಿಬ್ಬಂದಿ ಸಚಿವಾಲಯವು ಸಂಘಟಿತ ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಹೇಳಿದರು
ಶಿಶುಪಾಲನಾ ರಜೆಯ (ಸಿಸಿಎಲ್) ಕುರಿತು ವಿವಿಧ ಉದಾಹರಣೆಗಳನ್ನು ಉಲ್ಲೇಖಿಸಿದ ಸಚಿವರು, 730 ದಿನಗಳ ಸಿಸಿಎಲ್ ರಜೆ ಅನುದಾನದ ಮುಂದುವರಿಕೆಯಲ್ಲಿ, ಕೆಲವು ಹೊಸ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗಿದೆ ಮತ್ತು ಶಿಶುಪಾಲನಾ ರಜೆಯಲ್ಲಿರುವ ಉದ್ಯೋಗಿ ತಾಯಂದಿರುಗಳಿಗೆ ಪೂರ್ವಭಾವಿಯಾಗಿ ಪ್ರಧಾನ ಕಚೇರಿಯನ್ನು ಬಿಡಲು ಅನುಮತಿ ನೀಡಬಹುದು ಎಂದು ಹೇಳಿದರು. ಸೂಕ್ತ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು, ಉದ್ಯೋಗಿ ತಾನು ಸಿಸಿಎಲ್ ರಜೆಯಲ್ಲಿರುವಾಗ ರಜೆಯ ಪ್ರಯಾಣ ರಿಯಾಯಿತಿ (ಎಲ್‌ಟಿಸಿ) ಕೂಡಾ ಪಡೆಯಬಹುದು ಮತ್ತು ಸೂಕ್ತ ಸಮರ್ಥ ಅಧಿಕಾರಿಗಳಿಂದ ಅನುಮತಿಗಳನ್ನು ಮುಂಚಿತವಾಗಿ ತೆಗೆದುಕೊಂಡು ವಿದೇಶ ಪ್ರಯಾಣ ಮಾಡಬಹುದು. ಇದಲ್ಲದೆ, ಸರ್ಕಾರಿ ಉದ್ಯೋಗಿಯ ಅನುಕೂಲಕ್ಕಾಗಿ ಶಿಶುಪಾಲನಾ ರಜೆಯ ಕನಿಷ್ಠ ಅವಧಿಯನ್ನು ಕಡ್ಡಾಯವಾಗಿದ್ದ 15 ದಿನಗಳಿಂದ ಕನಿಷ್ಠ 5 ದಿನಗಳಿಗೆ ಕಡಿತಗೊಳಿಸಲಾಗಿದೆ ಮತ್ತು ಸಿಸಿಎಸ್ (ರಜೆ) ನಿಯಮಗಳು, 1972 ರ ನಿಯಮ 43-ಸಿ ನಿಬಂಧನೆಗಳ ಅಡಿಯಲ್ಲಿ ಮಕ್ಕಳ ಆರೈಕೆ ರಜೆಯನ್ನು ಪಡೆಯುವ ಸರ್ಕಾರಿ ಉದ್ಯೋಗಿಗಳಿಗೆ ಇದ್ದ ನಿಯಮದಲ್ಲಿ ಅಂಗವಿಕಲ ಮಗುವಿನ ಸಂದರ್ಭದಲ್ಲಿ ಇರುವ 22 ವರ್ಷಗಳ ಮಿತಿಯನ್ನು ಕೂಡಾ ತೆಗೆದುಹಾಕಲಾಗಿದೆ.
ಅಂಗವೈಕಲ್ಯ ಹೊಂದಿರುವ ಮಹಿಳಾ ಉದ್ಯೋಗಿಗಳಿಗೆ ಜುಲೈ 01, 2022 ರಿಂದ ಜಾರಿಗೆ ಬರುವಂತೆ ಮಕ್ಕಳ ಆರೈಕೆಗಾಗಿ ಮಾಹೆಯಾನ ವಿಶೇಷ ಭತ್ಯೆ ರೂ.3000/- ಅನ್ನು ಮಂಜೂರು ಮಾಡಲಾಗಿದೆ, ಡಿಎಯನ್ನು 50% ರಷ್ಟು ಹೆಚ್ಚಿಸಿದಾಗ ಇದು 25% ರಷ್ಟು ಹೆಚ್ಚಾಗುತ್ತದೆ ಎಂದು ಸಚಿವ ಡಿ. ಜಿತೇಂದ್ರ ಸಿಂಗ್ ಅವರು ಹೇಳಿದರು
ಅದೇ ರೀತಿಯಲ್ಲಿ "ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ"ದ ಬಗ್ಗೆ ಮಾತನಾಡುತ್ತಾ, "ನೌಕರ ಮರಣ ಹೊಂದಿರುವುದಾಗಿ ಪರಿಗಣಿಸಿದ ನಂತರ 7 ವರ್ಷಗಳವರೆಗೆ ಕಾಯಬೇಕಾಗಿಲ್ಲ. ಬದಲಾಗಿ, ಕಾಣೆಯಾದ ನೌಕರನ ಕುಟುಂಬ ಎಫ್.ಐ.ಆರ್. ದಾಖಲಿಸಿದ 6 ತಿಂಗಳೊಳಗೆ, ಈಗ ಎನ್.ಪಿ.ಎಸ್. ಅಡಿಯಲ್ಲಿ ಕುಟುಂಬ ಪಿಂಚಣಿ ಪಡೆಯಬಹುದು. ಸರ್ಕಾರಿ ನೌಕರನು 7 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಮೊದಲು ಮರಣಹೊಂದಿದ ಸಂದರ್ಭಗಳಲ್ಲಿ ಸಹ, ಉದ್ಯೋಗಿಯ ಮೊದಲ 10 ವರ್ಷಗಳ ಕೊನೆಯ ವೇತನದ 50% ರಷ್ಟು ಮತ್ತು ನಂತರ ಕೊನೆಯ ವೇತನದ 30% ರಷ್ಟು ವರ್ಧಿತ ದರದಲ್ಲಿ ಕುಟುಂಬ ಪಿಂಚಣಿಯಾಗಿ ಕುಟುಂಬಕ್ಕೆ ಪಾವತಿಸಲಾಗುವುದು ಎಂದು ಕೇಂದ್ರ ಸಚಿವ ಡಾ. ಸಿಂಗ್ ಅವರು ಹೇಳಿದರು
ಸ್ವಚ್ಛ ಮತ್ತು ಪರಿಣಾಮಕಾರಿ ಸರ್ಕಾರದ ಮಾನದಂಡವೆಂದರೆ ತ್ವರಿತವಾಗಿ ಹಾಗೂ ದೃಢವಾಗಿ ದೂರು ಪರಿಹಾರ ಕಾರ್ಯವಿಧಾನಗಳಾಗಿವೆ. ಸುಧಾರಣಾ ಪ್ರಕ್ರಿಯೆಯಲ್ಲಿ ತ್ವರಿತವಾಗಿ ವಿಲೇವಾರಿ ಸುಧಾರಿಸಲು ಮತ್ತು ಸಮಯ ರೇಖೆಗಳನ್ನು ಕಡಿಮೆ ಮಾಡಲು 10ಹಂತಗಳ ಸಿ.ಪಿ.ಜಿ.ಆರ್.ಎ.ಎಂ.ಎಸ್.ಅನ್ನು ಅಳವಡಿಸಿಕೊಳ್ಳಲಾಗಿದೆ, ಇದರಿಂದಾಗಿ ಸಾಪ್ತಾಹಿಕ ವಿಲೇವಾರಿ ದರವು 95 ರಿಂದ 100% ವರೆಗೆ ಇರುತ್ತದೆ. ಕೇಂದ್ರ ಸಚಿವಾಲಯಗಳು/ಇಲಾಖೆಗಳ ಸರಾಸರಿ ವಿಲೇವಾರಿ ಸಮಯವು 2021 ರಲ್ಲಿದ್ದ 32 ದಿನಗಳಿಂದ 2022 ರಲ್ಲಿ 27 ದಿನಗಳವರೆಗೆ ಇಳಿಕೆ ಕಂಡಿದೆ. ಹಾಗೂ ಇದು ಏಪ್ರಿಲ್, 2023 ರಲ್ಲಿ 17 ದಿನಗಳವರೆಗೆ ಸುಧಾರಿಸಿದೆ.
ಸ್ವಚ್ಛತಾ 1.0 ಮತ್ತು 2.0 ಅಭಿಯಾನಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಡಿ.ಎ.ಆರ್.ಪಿ.ಜಿ. ತಂಡವನ್ನು ಹಲವರು ಅಭಿನಂದಿಸಿದ್ದಾರೆ. ಸ್ವಚ್ಛತೆಯಿಂದ ಹಣ ಗಳಿಸಲು ಸಾಧ್ಯವಿದೆ ಎಂಬ ಅರಿವು ಮೊದಲ ಬಾರಿಗೆ ಸಮಾಜದಲ್ಲಿ ಮೂಡಿತು. ಸ್ವಚ್ಛತಾ ಅಭಿಯಾನ 2.0 ಅನ್ನು ದೇಶದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಕಚೇರಿಗಳಲ್ಲಿ ನಡೆಸಲಾಯಿತು, 89.85 ಲಕ್ಷ ಚದರ ಅಡಿ ಜಾಗವನ್ನು ತ್ಯಾಜ್ಯ ಮುಕ್ತಗೊಳಿಸಲಾಯಿತು ಮತ್ತು ಎಲೆಕ್ಟ್ರಾನಿಕ್ ಗುಜರಿ (ಸ್ಕ್ರ್ಯಾಪ್) ಸೇರಿದಂತೆ ಕಚೇರಿಗಳ ತ್ಯಾಜ್ಯಗಳ ವಿಲೇವಾರಿಯಿಂದ ರೂ 370.83 ಕೋಟಿ ಆದಾಯ ಲಭಿಸಿದೆ. ಇದಲ್ಲದೆ, ಕೋವಿಡ್ ಬಾಧಿಸಿದಾಗ, ಈ ಸಚಿವಾಲಯದ ಕೆಲಸವು ಒಂದೇ ಒಂದು ದಿನವೂ ನಿಲುಗಡೆ ಕಾಣಲಿಲ್ಲ, ಕೆಲಸಗಳಿಗೆ ಪರಿಣಾಮ ಬೀರಲಿಲ್ಲ, ಬದಲಿಗೆ ಕೆಲವೊಮ್ಮೆ ಉತ್ಪಾದನೆಯು ಇನ್ನೂ ಹೆಚ್ಚಾಗಿರುತ್ತದೆ ಎಂದು ಕೇಂದ್ರ ಸಚಿವ ಡಾ . ಜಿತೇಂದ್ರ ಸಿಂಗ್ ಅವರು ಹೇಳಿದರು
ಡಿಜಿಟಲ್ ರೂಪಾಂತರದ ಕುರಿತು ಮಾತನಾಡಿದ ಕೇಂದ್ರ ಸಚಿವರು, ಕೇಂದ್ರ ಸಚಿವಾಲಯದ ಎಲ್ಲಾ 75 ಸಚಿವಾಲಯಗಳು / ಇಲಾಖೆಗಳಲ್ಲಿ ನೂತನ ಇ-ಆಫೀಸ್ ಆವೃತ್ತಿ 7.0 ಅನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು. 89.6 ರಷ್ಟು ಕಡತಗಳು ಇಂದು ಕೇಂದ್ರ ಸಚಿವಾಲಯದಲ್ಲಿ ಇ-ಫೈಲ್‌ಗಳಾಗಿ ಪ್ರಕ್ರಿಯೆಗೊಳ್ಳುತ್ತಿರುವುದು ಶ್ಲಾಘನೀಯ ಸಾಧನೆಯಾಗಿದೆ. ಸರ್ಕಾರಿ ಪ್ರಕ್ರಿಯೆಗಳಲ್ಲಿ ಸರಳತೆ, ದಕ್ಷತೆ ಮತ್ತು ಪಾರದರ್ಶಕತೆಯನ್ನು ತರಲು ಮತ್ತು ಜವಾಬ್ದಾರಿಯುತ ಆಡಳಿತಕ್ಕೆ ಕಾರಣವಾಗುವ ಕೇಂದ್ರ ಸಚಿವಾಲಯದ ಕಚೇರಿ ಕಾರ್ಯವಿಧಾನದ ಕೈಪಿಡಿಯನ್ನು (ಸಿ.ಎಸ್.ಎಂ.ಒ.ಪಿ.) ಯನ್ನು 2022 ರಲ್ಲಿ, ಡಿ.ಎ.ಆರ್.ಪಿ.ಜಿ. ಸಿದ್ದಪಡಿಸಿದೆ
****
ರಾಷ್ಟ್ರೀಯ ರೋಜ್ ಗಾರ್ ಮೇಳದಲ್ಲಿ ನಾವೀನ್ಯತೆಯ ಬದಲಾವಣೆಗಳು, ಕೆಳಗಿನಿಂದ ಮೇಲಿನ ಹಂತದವರೆಗೆ ಪೌರಕಾರ್ಮಿಕರಿಗೆ ಹೆಚ್ಚು ದೃಢವಾದ ಸಾಮರ್ಥ್ಯ ನಿರ್ಮಾಣ ಮತ್ತು ತರಬೇತಿ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದ ಹೆಚ್ಚಿನ ಬಳಕೆ ಮತ್ತು ಉಚಿತ ವಿನಿಮಯಕ್ಕಾಗಿ "ಚಿಂತನ್ ಶಿಬಿರ" ಗಳನ್ನು ನಿಯಮಿತವಾಗಿ ನಡೆಸುವ ಆಲೋಚನೆಗಳು ಸಚಿವಾಲಯದ ಮುಂದಿದೆ ಎಂಬ ಮಾಹಿತಿಯೊಂದಿಗೆ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ತಮ್ಮ ಸಭೆಯನ್ನು ಮುಕ್ತಾಯಗೊಳಿಸಿದರು.
(Release ID: 1931556)
Visitor Counter : 110
Read this release in:
English
,
Urdu
,
Hindi
,
Nepali
,
Manipuri
,
Assamese
,
Bengali
,
Bengali
,
Gujarati
,
Odia
,
Tamil