ಪ್ರಧಾನ ಮಂತ್ರಿಯವರ ಕಛೇರಿ
ಜಲ ಜೀವನ್ ಮಿಷನ್ ಬಲಪಡಿಸುವ ಬದ್ಧತೆ: ಪ್ರಧಾನಿ ಪುನರಚ್ಚಾರ
Posted On:
09 JUN 2023 9:09PM by PIB Bengaluru
ಜಲ ಜೀವನ್ ಮಿಷನ್ ಅನ್ನು ಬಲಪಡಿಸುವುದಕ್ಕೆ ನಾವು ಸದಾ ಬದ್ಧರಾಗಿರುತ್ತೇವೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ
ಸಾರ್ವಜನಿಕ ಆರೋಗ್ಯದಲ್ಲಿ ಶುದ್ಧ ನೀರಿನ ಮಹತ್ವ ಮುಖ್ಯ ಪ್ರಧಾನಿ ಒತ್ತಿ ಹೇಳಿದ್ದಾರೆ.
ಯೂನಿವರ್ಸಲ್ ಟ್ಯಾಪ್ ವಾಟರ್ ಕವರೇಜ್ನೊಂದಿಗೆ ಅತಿಸಾರ ಕಾಯಿಲೆಯಿಂದ 4 ಲಕ್ಷ ಜೀವಗಳನ್ನು ಉಳಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ತಿಳಿಸಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವರ ಟ್ವೀಟ್ ಹಂಚಿಕೊಂಡು ಪ್ರಧಾನಮಂತ್ರಿಗಳು ಟ್ವೀಟ್ ಮಾಡಿದ್ದಾರೆ.
" ಪ್ರತಿ ಭಾರತೀಯನಿಗೆ ಶುದ್ಧ ಮತ್ತು ಸುರಕ್ಷಿತ ನೀರು ದೊರೆಯಬೇಕು ಎಂಬುದೇ ಜಲ್ ಜೀವನ್ ಮಿಷನ್ ಪ್ರಮುಖ ಉದ್ದೇಶವಾಗಿದೆ, ಇದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿ. ಇದು ಸಾರ್ವಜನಿಕ ಆರೋಗ್ಯಕ್ಕೆ ನಿರ್ಣಾಯಕ ಅಡಿಪಾಯ. ನಾವು ಈ ಮಿಷನ್ ಅನ್ನು ಬಲಪಡಿಸುವುದನ್ನು ಮತ್ತು ನಮ್ಮ ಆರೋಗ್ಯ ವ್ಯವಸ್ಥೆ ಉತ್ತೇಜಿಸುವುದನ್ನು ಮುಂದುವರಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ನಲ್ಲಿ ಸಂದೇಶ ನೀಡಿದ್ದಾರೆ.
***
(Release ID: 1931481)
Visitor Counter : 120
Read this release in:
Bengali
,
Assamese
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam