ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮಣಿಪುರ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಮಣಿಪುರದಲ್ಲಿ ಶಾಂತಿ ಸಮಿತಿ ರಚಿಸಿದ ಭಾರತ ಸರ್ಕಾರ

Posted On: 10 JUN 2023 1:04PM by PIB Bengaluru

ಭಾರತ ಸರ್ಕಾರವು ಮಣಿಪುರದ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಮಣಿಪುರದಲ್ಲಿ ಶಾಂತಿ ಸಮಿತಿ ರಚಿಸಿದೆ. ಸಮಿತಿಯ ಸದಸ್ಯರಲ್ಲಿ ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಕೆಲವು ಸಚಿವರು, ಸಂಸದರು, ಶಾಸಕರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿದ್ದಾರೆ. ಸಮಿತಿಯು ಮಾಜಿ ಪೌರಕಾರ್ಮಿಕರು, ಶಿಕ್ಷಣ ತಜ್ಞರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಜನಾಂಗೀಯ ಗುಂಪುಗಳ ಪ್ರತಿನಿಧಿಗಳನ್ನು ಸಹ ಒಳಗೊಂಡಿದೆ.

ಸಂಘರ್ಷದ ಪಕ್ಷಗಳು, ಗುಂಪುಗಳ ನಡುವೆ ಶಾಂತಿಯುತ ಸಂವಾದ ಮತ್ತು ಮಾತುಕತೆ ಸೇರಿದಂತೆ ರಾಜ್ಯದ ವಿವಿಧ ಜನಾಂಗೀಯ ಗುಂಪುಗಳ ನಡುವೆ ಶಾಂತಿ ಸ್ಥಾಪನೆ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಸಮಿತಿಯ ಉದ್ದೇಶವಾಗಿದೆ. ಈ ಸಮಿತಿಯು ಸಾಮಾಜಿಕ ಒಗ್ಗಟ್ಟು, ಪರಸ್ಪರ ತಿಳುವಳಿಕೆಯನ್ನು ಬಲಪಡಿಸಬೇಕು ಮತ್ತು ವಿವಿಧ ಜನಾಂಗೀಯ ಗುಂಪುಗಳ ನಡುವೆ ಸೌಹಾರ್ದಯುತ ಸಂವಹನವನ್ನು ಸುಗಮಗೊಳಿಸಲಿದೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 2023  ಮೇ 29ರಿಂದ ಜೂನ್ 1ರ ಅವಧಿಯಲ್ಲಿ ಮಣಿಪುರ ರಾಜ್ಯಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಉದ್ವಿಗ್ನ   ಪರಿಸ್ಥಿತಿಯ ಅವಲೋಕಿಸಿದ ನಂತರ ಶಾಂತಿ ಸಮಿತಿ ರಚಿಸುವುದಾಗಿ ಘೋಷಿಸಿದ್ದರು.

***


(Release ID: 1931467) Visitor Counter : 169