ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ವಿಶ್ವ ಪರಿಸರ ದಿನ 2023 ಅನ್ನು ಮಿಷನ್ ಲೈಫ್ ಆಧಾರದ ಮೇಲೆ ಆಚರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೀಡಿಯೋ ಸಂದೇಶದ ಮೂಲಕ ಸಭೆಯನ್ನು ಉದ್ದೇಶಿಸಿ ಲೈಫ್ಗೆ (ಲೈಫ್ ಸ್ಟೈಲ್ ಆಫ್ ಎನ್ವಿರಾನ್ ಮೆಂಟ್) ವಿಶೇಷ ಒತ್ತು ನೀಡಿ ಪರಿಸರ ವಿಜ್ಞಾನ ಮತ್ತು ಪರಿಸರದ ಸಂರಕ್ಷಣೆ ಮತ್ತು ಸಂರಕ್ಷಣೆಯೊಂದಿಗೆ ಆರ್ಥಿಕ ಅಭಿವೃದ್ಧಿ ಎರಡಕ್ಕೂ ಇರುವ ಮಹತ್ವವನ್ನು ತಿಳಿಸಿದರು.

ಶ್ರೀ ಭೂಪೇಂದರ್ ಯಾದವ್ ವಿಶ್ವ ಪರಿಸರ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು

ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್ (ಲೈಫ್) ಡಿಜಿಟಲ್ ಪ್ರದರ್ಶನ

ರಾಮ್ಸರ್ ಸೈಟ್ಗಳಿಗೆ, ಮ್ಯಾಂಗ್ರೋವ್ ಇನಿಶಿಯೇಟಿವ್ ಫಾರ್ ಶೋರ್ಲೈನ್ ಹ್ಯಾಬಿಟೇಟ್ಸ್ ಟ್ಯಾಂಜಿಬಲ್ ಇನ್ ಕಮ್ಸ್ (MISHTI)   ಸಂಬಂಧ ನೈಸರ್ಗಿಕ ಕೃಷಿ ಪದ್ಧತಿ (ಅಮೃತ್ ಧರೋಹರ್) ಅನುಷ್ಠಾನ

ಗ್ಲೋಬಲ್ ಕಾಲ್ ಫಾರ್ ಐಡಿಯಾಸ್ ಮತ್ತು ಪೇಪರ್ಸ್ ಆನ್ ಲೈಫ್ನ ವಿಜೇತರಿಗೆ ಸನ್ಮಾನ

ಲೈಫ್ ಕುರಿತು 3 ಸಂಕಲನಗಳ ಬಿಡುಗಡೆ; ನಮ್ಮ ಗ್ರಹಮಂಡಲ ಬಗ್ಗೆ ಚಿಂತನೆ, ಥಾಟ್ ಲೀಡರ್ ಶಿಪ್ ಫಾರ್ ಲೈಫ್ ಮತ್ತು ಮೈಂಡ್ಫುಲ್ ಲಿವಿಂಗ್

ದೇಶಾದ್ಯಂತ ನೈಸರ್ಗಿಕ ಕೃಷಿ ಪದ್ಧತಿ (ಅಮೃತ್ ಧರೋಹರ್) ಮತ್ತು MISHTI ಚಟುವಟಿಕೆಗಳ ಲೈವ್ ಸ್ಟ್ರೀಮಿಂಗ್

Posted On: 05 JUN 2023 4:39PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 5 ಜೂನ್ 2023 ರಂದು ಮಿಷನ್ ಲೈಫ್ (ಲೈಫ್ ಸ್ಟೈಲ್ ಫಾರ್ ಎನ್ವಿರಾನ್ಮೆಂಟ್) ಆಧಾರದ ಒತ್ತು ನೀಡಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪರಿಸರ ಸ್ನೇಹಿ ಜೀವನಶೈಲಿ ಮತ್ತು ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಜಾಗತಿಕ ಅನ್ವೇಷಣೆಯನ್ನು ಪುನರುಜ್ಜೀವನಗೊಳಿಸಬೇಕೆಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಗ್ಲಾಸ್ಗೋದಲ್ಲಿ ನಡೆದ COP26 ವಿಶ್ವ ನಾಯಕರ ಶೃಂಗಸಭೆಯಲ್ಲಿ ಲೈಫ್, ಅಂದರೆ, ಪರಿಸರಕ್ಕಾಗಿ ಜೀವನಶೈಲಿ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದರು.

ಮಿಷನ್ ಲೈಫ್ನ ಭಾಗವಾಗಿ, 75 ವೈಯಕ್ತಿಕ ಲೈಫ್ ಕ್ರಿಯೆಗಳ ಸಮಗ್ರ ಮತ್ತು ಇತರೆ 7 ವಿಷಯಗಳನ್ನು ಗುರುತಿಸಲಾಗಿದೆ - ನೀರು ಉಳಿಸಿ, ಇಂಧನ ಉಳಿಸಿ, ತ್ಯಾಜ್ಯವನ್ನು ಕಡಿಮೆ ಮಾಡಿ, ಇ-ತ್ಯಾಜ್ಯವನ್ನು ಕಡಿಮೆ ಮಾಡಿ, ಏಕ-ಬಳಕೆಯ ಪ್ಲಾಸ್ಟಿಕ್ಗಳನ್ನು ಕಡಿಮೆ ಮಾಡಿ, ಸುಸ್ಥಿರ ಆಹಾರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಿ. , ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಈ ವರ್ಷದ ವಿಶ್ವ ಪರಿಸರ ದಿನದ ಥೀಮ್ “ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು”, ಇದು ಮಿಷನ್ ಲೈಫ್ನ 7 ಥೀಮ್ಗಳಲ್ಲಿ ಒಂದಕ್ಕೆ ಹೋಲುವ ವಿಷಯವಾಗಿದೆ: “ಏಕ-ಬಳಕೆಯ ಪ್ಲಾಸ್ಟಿಕ್ ಬೇಡ ಎಂದು ಹೇಳುವುದು” ಮತ್ತು ಹಲವಾರು ಲೈಫ್ ಅನುಷ್ಠಾನಕ್ಕೆ ಸಹ ಸಂಬಂಧ ಹೊಂದಿರುವ ವಿಷಯಗಳಾಗಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೂನ್ 5 ವಿಶ್ವ ಪರಿಸರ ದಿನದ ಅಂಗವಾಗಿ ವಿಡಿಯೋ ಸಂದೇಶದ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಭಾರತವು ಈಗಾಗಲೇ ಎರಡು ಹಂತಗಳಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕಾಗಿ 2018 ರಿಂದ ಗಮನಾರ್ಹ ಪ್ರಯತ್ನಗಳನ್ನು ಕೈಗೊಂಡಿದೆ. ಏಕ ಬಳಕೆಯ ಪ್ಲಾಸ್ಟಿಕ್ ಮತ್ತು ಕಡ್ಡಾಯ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆ ನಿಷೇಧ ಎರಡು ಹಂತಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಪ್ರಸ್ತುತ ಅಗತ್ಯತೆಗಳು ಮತ್ತು ಭವಿಷ್ಯದ ದೃಷ್ಟಿಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ರೂಪಿಸಿದೆ ಮತ್ತು ಕಳೆದ 9 ವರ್ಷಗಳಲ್ಲಿ, ಹಸಿರು ಜಲಜನಕ ಮಿಷನ್, ನೈಸರ್ಗಿಕ ಕೃಷಿ ಪದ್ಧತಿ, ಹಸಿರು ಅಭಿವೃದ್ಧಿಗೆ ಸಂಬಂಧಿಸಿದಿ ವಿವಿಧ ಉಪಕ್ರಮಗಳ ಬಗ್ಗೆ ಪ್ರಧಾನಮಂತ್ರಿ ಮಾಹಿತಿ ನೀಡಿದರು. ಜಾಗತಿಕ ಸಾಂಕ್ರಾಮಿಕದ ನಡುವೆಯೂ ಸಹ, ಭಾರತ ಪರಿಸರ ವಿಜ್ಞಾನ ಮತ್ತು ಆರ್ಥಿಕತೆಯ ನಡುವಿನ ಸಮತೋಲನವನ್ನು ಕಾಪಾಡಿಕೊಂಡು ಪ್ರಗತಿಯನ್ನು ಮುಂದುವರೆಸಿದೆ. ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ನೈಸರ್ಗಿಕ ಕೃಷಿ ಪದ್ಧತಿ (ಅಮೃತ್ ಧರೋಹರ್) ಮತ್ತು ಮ್ಯಾಂಗ್ರೋವ್ ಇನಿಶಿಯೇಟಿವ್ ಫಾರ್ ಶೋರ್ಲೈನ್ ಹ್ಯಾಬಿಟಾಟ್ಸ್ ಮತ್ತು ಟ್ಯಾಂಜಿಬಲ್ ಇನ್ಕಮ್ಸ್ (MISHTI) ಉಪಕ್ರಮಗಳನ್ನು ಪ್ರಾರಂಭಿಸಿದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವನ್ನು ಪ್ರಧಾನಿಗಳು ಅಭಿನಂದಿಸಿದರು. ಅಮೃತ್ ಧರೋಹರ್ ಮತ್ತು MISHTI ಯಡಿ ಜೌಗು ಪ್ರದೇಶಗಳಲ್ಲಿನ ಸಾಧನೆ ಮತ್ತು ಮ್ಯಾಂಗ್ರೋವ್ ಪುನಃಸ್ಥಾಪನೆಯ ಬಗ್ಗೆ ಪ್ರಸ್ತಾಪಿಸಿದ ಅವರು, ಪರಿಸರ ಪ್ರವಾಸೋದ್ಯಮ ಕೇಂದ್ರಗಳಾಗಿ ಕಾರ್ಯನಿರ್ವಹಿಸಬಹುದು ಮತ್ತು ಹಸಿರು ಉದ್ಯೋಗಗಳನ್ನು ಸೃಷ್ಟಿಸಬಹುದು. ಅಂತರರಾಷ್ಟ್ರೀಯ ಸಮುದಾಯದ ಮುಂದೆ ಭಾರತದ ಹವಾಮಾನ ನ್ಯಾಯದ ಸಮಸ್ಯೆಯನ್ನು ಹೇಗೆ ಯಶಸ್ವಿಯಾಗಿ ನಿಭಾಯಿಸಿದೆ ಎಂಬುದನ್ನು ತೋರಿಸಬಹುದು. ಹವಾಮಾನ ಬದಲಾವಣೆಯನ್ನು ಎದುರಿಸುವ ಸಾಧನವಾಗಿ ಲೈಫ್ನ ಪ್ರಸ್ತುತತೆ ಮತ್ತು ಜಾಗತಿಕ ಮಟ್ಟದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಪ್ರಧಾನಿ ತಿಳಿಸಿದರು. ಲೈಫ್ ಜಾಗತಿಕ ಜನಾಂದೋಲನವಾಗಿ ಪರಿವರ್ತನೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮಿಷನ್ ಲೈಫ್ ಮೂಲಕ ಸಮುದಾಯವನ್ನು ಸಜ್ಜುಗೊಳಿಸುವ ಅಭಿಯಾನದ ಬಗ್ಗೆ ಪ್ರಧಾನಿ ಉಲ್ಲೇಖಿಸಿದರು, ಇದರಲ್ಲಿ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 2 ಕೋಟಿಗೂ ಹೆಚ್ಚು ಜನರು ಲೈಫ್ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಈ ಸಂದರ್ಭ ತಮ್ಮಅಭಿಪ್ರಾಯವನ್ನು ಹಂಚಿಕೊಂಡರು. ಲೈಫ್ನಲ್ಲಿ ವರ್ಣಚಿತ್ರಗಳು ಮತ್ತು ಡಿಜಿಟಲ್ ಪ್ರದರ್ಶನದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 2018 ರಲ್ಲಿ ಆಚರಿಸಲಾದ ವಿಶ್ವ ಪರಿಸರ ದಿನದಂದು ಪ್ಲಾಸ್ಟಿಕ್ ಪರಿಹಾರಕ್ಕಾಗಿ ಪ್ರಧಾನ ಮಂತ್ರಿ ನೀಡಿದ ಜಾಗತಿಕ ಕರೆಯನ್ನು ನೆನಪಿಸಿಕೊಂಡರು. ಈ ಸ್ಪಷ್ಟವಾದ ಕರೆಗೆ ಅನುಗುಣವಾಗಿ, ಭಾರತ ಏಕ ಬಳಕೆಯ ಪ್ಲಾಸ್ಟಿಕ್ನ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. 2022 ರಲ್ಲಿ ಅನುಷ್ಠಾನದ ನಿರ್ಧಾರವ್ನು ದೇಶೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟಿದೆ, ಜಾಗತಿಕ ಮಟ್ಟದಲ್ಲಿಯೂ ಮೆಚ್ಚುಗೆ ಪಡೆದಿದೆ. ಇಂಡಿಯನ್ ಆಯಿಲ್ನ ‘ಅನ್ಬಾಟಲ್ಡ್’ ಉಪಕ್ರಮದ ಕುರಿತು ಸಚಿವರು  ಅನಿಸಿಕೆ ಹಂಚಿಕೊಂಡರು. ಮಿಷನ್ ಲೈಫ್ ಮತ್ತು ಪ್ಯಾರಿಸ್ ಒಪ್ಪಂದದ ಮುನ್ನುಡಿ, COP 27 ರ ನಿರ್ಧಾರ, IPCC 3 ನೇ ಕಾರ್ಯಕಾರಿ ಸಮಿತಿ  ವರದಿ ಮತ್ತು ಇಂಟರ ನ್ಯಾಷನಲ್ ಎನರ್ಜಿ ಏಜೆನ್ಸಿಯ ದಾಖಲೆಗಳಲ್ಲಿರುವ ಉಲ್ಲೇಖದ ಬಗ್ಗೆ ವಿವರಿಸಿದರು. ಭಾರತದಿಂದ ಮೂರು ಅಂತರರಾಷ್ಟ್ರೀಯ ಉಪಕ್ರಮಗಳ ಜೊತೆಗೆ; ಇಂಟರ ನ್ಯಾಷನಲ್ ಸೋಲಾರ್ ಅಲೈಯನ್ಸ್, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಮತ್ತು ಲೀಡರ್ ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಶನ್, ಇಂಟರ್ ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ ಪ್ರಾರಂಭಿಸಲಾಗಿದೆ.


ಜೂನ್ 5, 2023 ರಂದು ವಿಶ್ವ ಪರಿಸರ ದಿನದಂದು ಕಳೆದ ಒಂದು ತಿಂಗಳಲ್ಲಿ ಕೈಗೊಳ್ಳಲಿರುವ ಅಭಿಯಾನದ ಚಟುವಟಿಕೆಗಳ ವೀಡಿಯೊ ಏರ್ಪಡಿಸಲಾಯಿತು. ಈವೆಂಟ್ ವರದಿಗಳನ್ನು ಅಪ್ಲೋಡ್ ಮಾಡಲು ಸಚಿವಾಲಯಗಳು ಮತ್ತು ಸಂಸ್ಥೆಗಳಿಗಾಗಿ Meri LiFE ಪೋರ್ಟಲ್ (merilife.org) ಅನ್ನು ಆರಂಭಿಸಲಾಗಿದೆ. ಮೇರಿ ಲೈಫ್ ಪೋರ್ಟಲ್ನಲ್ಲಿ 13 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಸುಮಾರು 2 ಕೋಟಿ ಜನರು ಭಾಗವಹಿಸಿದ್ದು, ದೇಶಾದ್ಯಂತ 1.8 ಕೋಟಿ ನಾಗರಿಕರು ಪ್ರತಿಜ್ಞೆ ಸ್ವೀಕರಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವಾಲಯದ ಎರಡು ಹೊಸ ಉಪಕ್ರಮಗಳಾದ ಅಮೃತ್ ಧರೋಹರ್ ಮತ್ತು ಮಿಶ್ತಿಗೆ ಸಂಬಂಧಿಸಿದ ವೀಡಿಯೊಗಳನ್ನು ಸಹ ಬಿಡುಗಡೆ ಮಾಡಲಾಯಿತು. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಒಂದು ಮಹತ್ವದ ಮೈಲಿಗಲ್ಲು, 75 ಜೌಗು ಪ್ರದೇಶಗಳನ್ನು ರಾಮ್ಸಾರ್ ಸೈಟ್ಗಳು ಅಂದರೆ ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ತೇವಭೂಮಿಗಳು ಎಂದು ಗುರುತಿಸಲಾಗಿದೆ. 2014 ರಲ್ಲಿ ಕೇವಲ 26 ಇದು ಈಗ, ಈಗ ಇದು ಏಷ್ಯಾದ ಎರಡನೇ ಅತಿದೊಡ್ಡ ರಾಮ್ಸಾರ್ ಸೈಟ್ಗಳ ತಾಣವಾಗಿ ಹೊರಹೊಮ್ಮಿದೆ. ರಾಮ್ಸಾರ್ ತಾಣಗಳ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಅಂಗೀಕರಿಸಿದ ಕೇಂದ್ರ ಸರ್ಕಾರವು ಈ ವರ್ಷದ ಬಜೆಟ್ ಘೋಷಣೆಯಲ್ಲಿ ರಾಮ್ಸಾರ್ ತಾಣಗಳ ಅನನ್ಯ ಸಂರಕ್ಷಣಾಗಾಗಿ 'ಅಮೃತ್ ಧರೋಹರ್' ಉಪಕ್ರಮವನ್ನು ಘೋಷಿಸಿತ್ತು. ಆರ್ದ್ರಭೂಮಿ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವಲ್ಲಿ ಸ್ಥಳೀಯ ಸಮುದಾಯಗಳ ಪ್ರಾಮುಖ್ಯತೆಯೂ ಅಗತ್ಯವಾಗಿದೆ. "ಅಮೃತ್ ಧರೋಹರ್" ನ ಅನುಷ್ಠಾನದ ಕಾರ್ಯತಂತ್ರವನ್ನು ಪ್ರಾರಂಭಿಸಲಾಯಿತು, ಸಮುದಾಯದ ಸಹಭಾಗಿತ್ವದ ಮೂಲಕ ಸಂರಕ್ಷಣೆ ಮತ್ತು ಸಂರಕ್ಷಣೆಯ ಮೂಲಕ ಸಮೃದ್ಧಿಯ ತತ್ವಶಾಸ್ತ್ರಕ್ಕೆ ಸರ್ಕಾರದ ಬದ್ಧತೆಗೆ ಮತ್ತೊಂದು ಉದಾಹರಣೆಯಾಗಿದೆ.

ಮಿಶ್ತಿ: ಮ್ಯಾಂಗ್ರೋವ್ ಇನಿಶಿಯೇಟಿವ್ ಫಾರ್ ಶೋರ್ಲೈನ್ ಹ್ಯಾಬಿಟೇಟ್ಸ್ ಟ್ಯಾಂಜಿಬಲ್ ಇನ್ ಕಮ್ಸ್ ಉತ್ತೇಜಿಸಲು ಮತ್ತು ಸಂರಕ್ಷಿಸಲು 2023-24ರ ಕೇಂದ್ರ ಬಜೆಟ್ನಲ್ಲಿ ಇದನ್ನು ಘೋಷಿಸಲಾಯಿತು. ಮ್ಯಾಂಗ್ರೋವ್ಗಳು ನೈಸರ್ಗಿಕ ಪರಿಸರ ವ್ಯವಸ್ಥೆಯು ಅತಿ ಹೆಚ್ಚಿನ ಜೈವಿಕ ಉತ್ಪಾದಕತೆ ಮತ್ತು ಇಂಗಾಲದ ಪ್ರತ್ಯೇಕತೆಯ ಸಾಮರ್ಥ್ಯದ ಬಗ್ಗೆ ಆದ್ಯತೆ ಹೊಂದಿದೆ. ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಮಿಶ್ತಿ ಕಾರ್ಯಕ್ರಮ ಇಂದು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮವು ಐದು ವರ್ಷಗಳಲ್ಲಿ (2023-2028) ಒಂಭತ್ತು ಕರಾವಳಿ ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ  ಸುಮಾರು 540 ಚದರ ಕಿ.ಮೀ ಪ್ರದೇಶ ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ಇದು ಸುಮಾರು 22.8 ಮಿಲಿಯನ್ ಮಾನವ ದಿನಗಳನ್ನು ಸೃಷ್ಟಿಸುತ್ತದೆ ಮತ್ತು ಅಂದಾಜು 4.5 ಮಿಲಿಯನ್ ಟನ್ ಇಂಗಾಲ ನಿರ್ಮೂಲನೆಯಾಗುವ ನಿರೀಕ್ಷೆ ಇದೆ. ಇದು ಪ್ರಕೃತಿ ಪ್ರವಾಸೋದ್ಯಮಕ್ಕೆ ಸಂಭಾವ್ಯ ಪ್ರದೇಶಗಳನ್ನು ಮತ್ತು ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ.

75 ಕ್ಕೂ ಹೆಚ್ಚು ಮ್ಯಾಂಗ್ರೋವ್ ಸೈಟ್ಗಳಲ್ಲಿ ಮ್ಯಾಂಗ್ರೋವ್ ಸಸಿ, ಗಿಡ ನೆಡುವ ಅಭಿಯಾನ ಸಹ ಆಯೋಜಿಸಲಾಗಿತ್ತು. ಈ ಅಭಿಯಾನಕ್ಕೆ ಸಾರ್ವಜನಿಕ ಪ್ರತಿನಿಧಿಗಳು, ಸ್ಥಳೀಯರು, ಗ್ರಾಮ ಸಮುದಾಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರರು ಸಕ್ರಿಯವಾಗಿ ಭಾಗವಹಿಸಿದ್ದರು.


ನೀತಿ ಆಯೋಗದ ಗ್ಲೋಬಲ್ ಕಾಲ್ ಫಾರ್ ಐಡಿಯಾಸ್ ಮತ್ತು ಪೇಪರ್ಸ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೂನ್ 5, 2022 ರಂದು, ಪ್ರಧಾನ ಮಂತ್ರಿಗಳು ಮಿಷನ್ ಲೈಫ್ ಮತ್ತು ಲೈಫ್ ಗ್ಲೋಬಲ್ ಕಾಲ್ ಫಾರ್ ಐಡಿಯಾಸ್ ಮತ್ತು ಪೇಪರ್ಸ್ನ ಜಾಗತಿಕ ಆಂದೋಲನವನ್ನು ಪ್ರಾರಂಭಿಸಿದರು, ವೈಯಕ್ತಿಕ, ವಿಶ್ವವಿದ್ಯಾನಿಲಯಗಳು, ಚಿಂತಕ ಚಾವಡಿಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ವಿಶ್ವದಾದ್ಯಂತ ಇತರರನ್ನು ಆಹ್ವಾನಿಸಲಾಗಿತ್ತು. ಗ್ಲೋಬಲ್ ಕಾಲ್ ಫಾರ್ ಐಡಿಯಾಸ್ ಮತ್ತು ಪೇಪರ್ಸ್ ಎರಡು ಹಂತಗಳಲ್ಲಿ ಅರ್ಜಿ ಸಲ್ಲಿಕೆ ಆಹ್ವಾನ ನೀಡಲಾಗಿತ್ತು. 7 ಸದಸ್ಯರ ಸಮಿತಿಯು ಟಾಪ್ 5 ವಿಜೇತರ ಐಡಿಯಾಗಳನ್ನು ಆಯ್ಕೆ ಮಾಡಿತು. ಕೇಂದ್ರ ಸಚಿವ ಶ್ರೀ ಯಾದವ್ ಅವರು ನೀತಿ ಆಯೋಗದ ಐಡಿಯಾಸ್ ಮತ್ತು ಪೇಪರ್ಗಳಿಗಾಗಿ ಗ್ಲೋಬಲ್ ಕಾಲ್ನ 5 ವಿಜೇತರನ್ನು ಸನ್ಮಾನಿಸಿದರು.

ಇದರ ಜೊತೆಗೆ, ನ್ಯಾಶನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ (NMNH), ಭಾರತದ ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP) ಸಹಯೋಗದೊಂದಿಗೆ 8 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ " ಚಿತ್ರಕಲೆ ಸ್ಪರ್ಧೆ" ಯನ್ನು ಆಯೋಜಿಸಿತ್ತು. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 5,980 ವರ್ಣಚಿತ್ರಗಳು ಬಂದಿದ್ದವು. ಈ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮೂವರನ್ನು ಕೇಂದ್ರ ಸಚಿವರು ಸನ್ಮಾನಿಸಿದರು.

ಶ್ರೀ ಯಾದವ್ ಅವರು ನೀತಿ ಆಯೋಗ ಸಿದ್ಧಪಡಿಸಿದ ಮೂರು ಸಂಕಲನಗಳನ್ನು ಬಿಡುಗಡೆ ಮಾಡಿದರು.

*****


(Release ID: 1930090) Visitor Counter : 326