ಪ್ರಧಾನ ಮಂತ್ರಿಯವರ ಕಛೇರಿ

ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರನ್ನು ಅಭಿನಂದಿಸಿದ ಪ್ರಧಾನಿ ಮೋದಿ

Posted On: 23 MAY 2023 7:25PM by PIB Bengaluru

ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ವರ್ಷ  ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸಾಧ್ಯವಾಗದವರಿಗೆ ಸಹ ಪ್ರಧಾನಿ ಇದೇ ಸಂದರ್ಭದಲ್ಲಿ ಸಲಹೆಯನ್ನು ನೀಡಿದ್ದಾರೆ.

ಟ್ವೀಟ್ ಮಾಡಿದ ಪ್ರಧಾನ ಮಂತ್ರಿಗಳು:

"ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಯುವಜನತೆಗೆ ಅಭಿನಂದನೆಗಳು. ಅವರ ಮುಂದಿನ ಫಲಪ್ರದ ಮತ್ತು ತೃಪ್ತಿದಾಯಕ ವೃತ್ತಿಜೀವನಕ್ಕಾಗಿ ನನ್ನ ಶುಭಾಶಯಗಳು. ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಿಮಗೆ ಇದು ಬಹಳ ರೋಮಾಂಚಕಾರಿ ಮತ್ತು ಅತ್ಯಂತ ಉತ್ಸಾಹದ ಸಮಯವಾಗಿದೆ."

"ನಾಗರಿಕ ಸೇವೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದವರ ನಿರಾಶೆ ಕೂಡ ನನಗೆ ಅರ್ಥವಾಗುತ್ತದೆ. ನಿಮಗೆ ಇನ್ನಷ್ಟು ಪ್ರಯತ್ನಗಳನ್ನು ಮಾಡಲು ನಿಮಗೆ ಇನ್ನಷ್ಟು ಅವಕಾಶಗಳಿರುವುದು ಮಾತ್ರವಲ್ಲದೆ ನಿಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸಲು ಭಾರತವು ಹಲವಾರು ವೈವಿಧ್ಯಮಯ ಅವಕಾಶಗಳನ್ನು ನೀಡುತ್ತದೆ. ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ." ಎಂದು ಬರೆದುಕೊಂಡಿದ್ದಾರೆ.

*****(Release ID: 1929937) Visitor Counter : 101