ರೈಲ್ವೇ ಸಚಿವಾಲಯ
azadi ka amrit mahotsav

ಒಡಿಶಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಿಲುಕಿರುವ ಮೃತರ ಕುಟುಂಬ / ಸ್ನೇಹಿತರು / ಸಂಬಂಧಿಕರು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ 139 ಸಹಾಯವಾಣಿ ಸಂಖ್ಯೆಯನ್ನು ವಿಶೇಷ ವ್ಯವಸ್ಥೆಯಾಗಿ  ಮಾಡಿದೆ.


ದಿನದ 24 ಗಂಟೆಯೂ 139ಕ್ಕೆ ಬರುವ  ದೂರವಾಣಿ ಕರೆಗಳಿಗೆ ಸ್ಪಂದಿಸಲು ಹಿರಿಯ ಅಧಿಕಾರಿಗಳನ್ನು ರೈಲ್ವೆ ಇಲಾಖೆ ನಿಯೋಜಿಸಿದೆ.

ರೈಲ್ವೆ ಸಹಾಯವಾಣಿ 139 ರ ಉದ್ದೇಶವು ಸಹಾಯ ಹಸ್ತವನ್ನು ಒದಗಿಸುವುದು, ಈ ಕಷ್ಟದ ಸಮಯದಲ್ಲಿ ನೊಂದ ಪ್ರಯಾಣಿಕರು ಮತ್ತು ಅವರ ಸಂಬಂಧಿಕರಿಗೆ ಸರಿಯಾದ ಮತ್ತು ತೃಪ್ತಿಕರ ಮಾಹಿತಿಯನ್ನು ನೀಡುವುದು.

Posted On: 04 JUN 2023 4:08PM by PIB Bengaluru

ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಿಲುಕಿರುವ ಮೃತರ ಕುಟುಂಬ / ಸ್ನೇಹಿತರು / ಸಂಬಂಧಿಕರು ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆ 139ನ್ನು  ವಿಶೇಷ ವ್ಯವಸ್ಥೆಯಾಗಿ ಮಾಡಿದೆ. ಹಿರಿಯ ಅಧಿಕಾರಿಗಳ ತಂಡವು ಸಹಾಯವಾಣಿಯನ್ನು 24×7 ನಿರ್ವಹಿಸುತ್ತಿದೆ ಮತ್ತು ವಲಯ ರೈಲ್ವೆ ಹಾಗು ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿದ ನಂತರ ಕರೆ ಮಾಡಿದವರಿಗೆ ಎಲ್ಲಾ ಸೂಕ್ತ ವಿವರಗಳನ್ನು ಒದಗಿಸುತ್ತದೆ. ಈ ಸೇವೆಯು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಮತ್ತು ರೈಲ್ವೆ ಸಚಿವರು ಘೋಷಿಸಿದ ಹೆಚ್ಚುವರಿ ತಾತ್ಕಾಲಿಕ ಪರಿಹಾರ (ಎಕ್ಸ್-ಗ್ರೇಷಿಯಾ) ವನ್ನು ತ್ವರಿತವಾಗಿ ವಿತರಿಸುವುದನ್ನು ಖಚಿತಪಡಿಸುತ್ತದೆ: ಮರಣದ ಸಂದರ್ಭದಲ್ಲಿ 10 ಲಕ್ಷ ರೂ. ಗಂಭೀರ ಗಾಯಗೊಂಡವರಿಗೆ 2 ಲಕ್ಷ ರೂ., ಸಣ್ಣಪುಟ್ಟ ಗಾಯಗಳಾದವರಿಗೆ  50,000 ರೂ.ಪರಿಹಾರವನ್ನು ರೈಲ್ವೇ ಸಚಿವರು ಘೋಷಿಸಿದ್ದಾರೆ.

ರೈಲ್ವೆ ಸಹಾಯವಾಣಿ 139 ರ ಉದ್ದೇಶವು ಸಹಾಯ ಹಸ್ತವನ್ನು ಒದಗಿಸುವುದು ಮತ್ತು ಈ ಸಂಕಷ್ಟದ ಸಮಯದಲ್ಲಿ ನೊಂದ ಪ್ರಯಾಣಿಕರು ಮತ್ತು ಅವರ ಸಂಬಂಧಿಕರಿಗೆ ಸರಿಯಾದ ಮತ್ತು ತೃಪ್ತಿಕರ ಮಾಹಿತಿಯನ್ನು ನೀಡುವುದಾಗಿದೆ

ಈವರೆಗೆ 285 ಪ್ರಕರಣಗಳಲ್ಲಿ (11 ಸಾವು ಪ್ರಕರಣಗಳು, 50 ಗಂಭೀರ ಗಾಯಗಳು, 224 ಸರಳ ಗಾಯದ ಪ್ರಕರಣಗಳು) ರೈಲ್ವೆಯು 3.22 ಕೋಟಿ ರೂ.ಗಳನ್ನು ಪರಿಹಾರವಾಗಿ ವಿತರಿಸಿದೆ. ಸೊರೊ, ಖರಗ್ಪುರ, ಬಾಲಸೋರ್, ಖಂಡಪಾರಾ, ಭದ್ರಕ್, ಕಟಕ್, ಭುವನೇಶ್ವರ ಸೇರಿದಂತೆ 7 ಸ್ಥಳಗಳಲ್ಲಿ ಭಾರತೀಯ ರೈಲ್ವೆಯು ಎಕ್ಸ್-ಗ್ರೇಷಿಯಾ ಮೊತ್ತವನ್ನು ಪಾವತಿಸುತ್ತಿದೆ.

*****


(Release ID: 1929757) Visitor Counter : 135