ಕಾನೂನು ಮತ್ತು ನ್ಯಾಯ ಸಚಿವಾಲಯ

ಟೆಲಿ-ಲಾ ಪ್ರೋಗ್ರಾಮ್ ಹೊಸ ಮೈಲಿಗಲ್ಲನ್ನು ಸಾಧಿಸಿದೆ: 40 ಲಕ್ಷ ಫಲಾನುಭವಿಗಳಿಗೆ ವ್ಯಾಜ್ಯ ಪೂರ್ವ ಸಲಹೆಯೊಂದಿಗೆ ವಕಾಲತ್ತು ನೀಡಲಾಗಿದೆ

Posted On: 30 MAY 2023 2:02PM by PIB Bengaluru

ಕಾನೂನು ಮತ್ತು ನ್ಯಾಯ ಸಚಿವಾಲಯದ ನ್ಯಾಯಾಂಗ ಇಲಾಖೆಯ ಅಡಿಯಲ್ಲಿನ ಟೆಲಿ-ಲಾ ಕಾರ್ಯಕ್ರಮವು ಹೊಸ ಮೈಲಿಗಲ್ಲನ್ನು ಸಾಧಿಸಿದ್ದು, ದೇಶಾದ್ಯಂತ 40 ಲಕ್ಷ ಫಲಾನುಭವಿಗಳಿಗೆ ವ್ಯಾಜ್ಯ ಪೂರ್ವ ಸಲಹೆಯೊಂದಿಗೆ ವಕಾಲತ್ತು ನೀಡಲಾಗಿದೆ.

ಟೆಲಿ-ಲಾ ಬಗ್ಗೆ: ತಲುಪದವರನ್ನು ತಲುಪುವುದು ವ್ಯಾಜ್ಯ ಪೂರ್ವ ಹಂತದಲ್ಲಿ ಕಾನೂನು ಸಲಹೆ ಮತ್ತು ಸಮಾಲೋಚನೆಯನ್ನು ಪಡೆಯಲು ಇ-ಇಂಟರ್ ಫೇಸ್  ಕಾರ್ಯವಿಧಾನವಾಗಿದೆ. ಇದು ಪಂಚಾಯತ್ ಮಟ್ಟದಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ (ಸಿಎಸ್ ಸಿ ) ಲಭ್ಯವಿರುವ ವೀಡಿಯೊ ಕಾನ್ಫರೆನ್ಸ್ / ದೂರವಾಣಿ ಸೌಲಭ್ಯಗಳ ಮೂಲಕ ಕಾನೂನು ಸಹಾಯದ ಅಗತ್ಯವಿರುವ ಮತ್ತು ಅಂಚಿನಲ್ಲಿರುವವರನ್ನು ಪ್ಯಾನಲ್ ವಕೀಲರೊಂದಿಗೆ ಸಂಪರ್ಕಿಸುತ್ತದೆ. 2017 ರಲ್ಲಿ ಪ್ರಾರಂಭವಾದ ಟೆಲಿ-ಲಾ ಸೇವೆಯನ್ನು ಈಗ ಟೆಲಿ-ಲಾ ಮೊಬೈಲ್ ಅಪ್ಲಿಕೇಶನ್ ಮೂಲಕ ನೇರವಾಗಿ ಪ್ರವೇಶಿಸಬಹುದು (ಆಂಡ್ರಾಯ್ಡ್ ಮತ್ತು 10 ಎಸ್ ನಲ್ಲಿ ಲಭ್ಯವಿದೆ).

Image

*******



(Release ID: 1928310) Visitor Counter : 105