ಪ್ರಧಾನ ಮಂತ್ರಿಯವರ ಕಛೇರಿ

ನೂತನ ಸಂಸತ್ ಭವನ ದೇಶಕ್ಕೆ ಹೆಮ್ಮೆ ಮತ್ತು ಭರವಸೆ ತುಂಬಲಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

Posted On: 28 MAY 2023 12:02PM by PIB Bengaluru

ನೂತನ ಸಂಸತ್ತಿನ ಕಟ್ಟಡವು ನಮ್ಮೆಲ್ಲ ದೇಶವಾಸಿಗಳಲ್ಲಿ ಹೆಮ್ಮೆ ಮತ್ತು ಗೌರವ ಮತ್ತು ಭರವಸೆಯನ್ನು ತುಂಬಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ನೂತನ ಸಂಸತ್ ಭವನದ ಫಲಕ ಅನಾವರಣಗೊಳಿಸುವ ಮೂಲಕ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು.

ಈ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.

ಭಾರತದ ನೂತನ ಸಂಸತ್ ಭವನ ಉದ್ಘಾಟಿಸಿದ ನಂತರ ನಮ್ಮ ಹೃದಯಗಳು ಮತ್ತು ಮನಸುಗಳು ಹೆಮ್ಮೆಯಿಂದ ಪುಳಕಿತಗೊಂಡಿವೆ‌‌. ಭರವಸೆಯನ್ನು ಮೂಡಿಸುತ್ತದೆ. ಈ ಅಪ್ರತಿಮ ಭವನವು ಸಬಲೀಕರಣದ ಶಕ್ತಿಯಾಗಲಿದೆ. ಕನಸುಗಳನ್ನು ಹೆಚ್ಚಿಸಲಿದೆ ಮತ್ತು ಅದನ್ನು ವಾಸ್ತವಕ್ಕೆ ತರುವುದಕ್ಕೆ ಪ್ರೇರೇಪಿಸುತ್ತದೆ. ಇದು ನಮ್ಮ ಮಹಾನ್ ರಾಷ್ಟ್ರವನ್ನು  ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಟ್ವೀಟ್ ಸಂದೇಶ ನೀಡಿದ್ದಾರೆ.

 

****



(Release ID: 1927920) Visitor Counter : 86