ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಿಡ್ನಿಯಲ್ಲಿ ವ್ಯಾಪಾರ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಪ್ರಧಾನಿಯವರ ಭಾಷಣ

Posted On: 24 MAY 2023 3:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ಉನ್ನತ ಕಂಪನಿಗಳ ಸಿಇಒಗಳೊಂದಿಗೆ ವ್ಯಾಪಾರ ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉಕ್ಕು, ಬ್ಯಾಂಕಿಂಗ್, ಇಂಧನ, ಗಣಿಗಾರಿಕೆ ಮತ್ತು ಐಟಿ ಸೇರಿದಂತೆ ವಿವಿಧ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಕಂಪನಿಗಳ ಸಿಇಒಗಳು ಇದರಲ್ಲಿ ಭಾಗವಹಿಸಿದರು. ಆಸ್ಟ್ರೇಲಿಯಾದ ಕೆಲವು ಪ್ರಮುಖ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳೂ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು.

ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸಲು ಸರ್ಕಾರವು ಪ್ರಾರಂಭಿಸಿದ ಹಲವಾರು ಆರ್ಥಿಕ ಸುಧಾರಣೆಗಳು ಮತ್ತು ಉಪಕ್ರಮಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಇವುಗಳಲ್ಲಿ, ಮೂಲಸೌಕರ್ಯ ಸಂಪರ್ಕ ಯೋಜನೆಗಳ ಸಮಗ್ರ ವಿಧಾನಕ್ಕಾಗಿ ಮಿಷನ್ ಗತಿ ಶಕ್ತಿ; ಜನ್ ಧನ್-ಆಧಾರ್-ಮೊಬೈಲ್ ಟ್ರಿನಿಟಿ; ರಾಷ್ಟ್ರೀಯ ಶಿಕ್ಷಣ ನೀತಿ; ಹೈಡ್ರೋಜನ್ ಮಿಷನ್ 2050; ಪಿಎಲ್ ಯೋಜನೆ; ಬಾಹ್ಯಾಕಾಶ ಮತ್ತು ಜಿಯೋಸ್ಪೇಷಿಯಲ್ ವಲಯದಲ್ಲಿ  ಖಾಸಗಿ ಹೂಡಿಕೆಯನ್ನು ಮುಕ್ತಗೊಳಿಸುವುದು; ವೈದ್ಯಕೀಯ ಸಾಧನಗಳ ತಯಾರಿಕೆಯ ಹೊಸ ನೀತಿ; ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆ, ಇತ್ಯಾದಿಗಳು ಸೇರಿದವು.

ಡಿಜಿಟಲ್ ಮೂಲಸೌಕರ್ಯ, ಐಟಿ, ಫಿನ್ಟೆಕ್, ಟೆಲಿಕಾಂ, ಸೆಮಿಕಂಡಕ್ಟರ್ಗಳು, ಬಾಹ್ಯಾಕಾಶ, ಹಸಿರು ಹೈಡ್ರೋಜನ್ ಸೇರಿದಂತೆ ನವೀಕರಿಸಬಹುದಾದ ಇಂಧನ, ಶಿಕ್ಷಣ, ಫಾರ್ಮಾ, ಆರೋಗ್ಯ ಸೇರಿದಂತೆ ವೈದ್ಯಕೀಯ ಸಾಧನಗಳ ತಯಾರಿಕೆ, ಗಣಿಗಾರಿಕೆ ಸೇರಿದಂತೆ ಪ್ರಮುಖ  ಖನಿಜಗಳು, ಜವಳಿ, ಕೃಷಿ ಮತ್ತು ಆಹಾರ ಸಂಸ್ಕರಣೆ ವಲಯಗಳಲ್ಲಿ ಭಾರತ ಒದಗಿಸುವ ಹೂಡಿಕೆ ಅವಕಾಶಗಳ ಲಾಭ ಪಡೆಯುವಂತೆ ಪ್ರಧಾನಮಂತ್ರಿ ಸಿಇಒಗಳನ್ನು ಆಹ್ವಾನಿಸಿದರು.

ತಮ್ಮ ಭಾರತೀಯ ಸಹವರ್ತಿಗಳೊಂದಿಗೆ ಪರಸ್ಪರ ಲಾಭದಾಯಕ ಪಾಲುದಾರಿಕೆಯನ್ನು ರೂಪಿಸುವಂತೆ ಸಿಇಒಗಳನ್ನು ಪ್ರಧಾನಮಂತ್ರಿ ಉತ್ತೇಜಿಸಿದರು.

ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ ಸಿಇಒಗಳು ಕೆಳಗಿನಂತಿದ್ದಾರೆ:

ಕ್ರ.ಸಂ.

ಸಂಸ್ಥೆ

ಕಾರ್ಯನಿರ್ವಾಹಕರು

1.

ಕಾಮನ್ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ

ಶ್ರೀ ಮ್ಯಾಟ್ ಕಾಮಿನ್, ಅಧ್ಯಕ್ಷ ಮತ್ತು ಸಿಇಒ

2.

ರಿಯೊ ಟಿಂಟೊ

ಶ್ರೀಮತಿ ಕೆಲ್ಲಿ ಪಾರ್ಕರ್, ಸಿಇಒ

3.

ನ್ಯಾಷನಲ್ ಆಸ್ಟ್ರೇಲಿಯ ಬ್ಯಾಂಕ್

ಶ್ರೀ. ಫಿಲಿಪ್ ಕ್ರಾನಿಕನ್, ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕ

4.

ಆಸ್ಟ್ರೇಲಿಯನ್ ಇಂಡಸ್ಟ್ರಿ ಬ್ಯಾಂಕ್

ಶ್ರೀ ಇನ್ನೆಸ್ ವಿಲೋಕ್ಸ್, ಸಿಇಒ

5.

ಬಿ ಹೆಚ್ ಪಿ

ಶ್ರೀಮತಿ ಜೆರಾಲ್ಡೈನ್ ಸ್ಲಾಟರಿ, ಅಧ್ಯಕ್ಷೆ ಆಸ್ಟ್ರೇಲಿಯಾ

6.

ಅಟ್ಲಾಸಿಯನ್

ಶ್ರೀ ಸ್ಕಾಟ್ ಫರ್ಕ್ವಾರ್, ಸಹ-ಸಿಇಒ ಮತ್ತು ಸಹ-ಸಂಸ್ಥಾಪಕ

7.

ಸಿಡ್ನಿ ವಿಶ್ವವಿದ್ಯಾಲಯ

 

ಪ್ರೊ. ಮಾರ್ಕ್ ಸ್ಕಾಟ್ ಎಒ, ಉಪಕುಲಪತಿ ಮತ್ತು ಅಧ್ಯಕ್ಷ

8.

ಒರಿಕಾ

ಶ್ರೀ ಸಂಜೀವ್ ಗಾಂಧಿ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ

9.

ಕಾಚ್ಲಿಯರ್

ಶ್ರೀ ಡಿಗ್ ಹೋವಿಟ್, ಅಧ್ಯಕ್ಷ

10.

ಬ್ಯುಸಿನೆಸ್ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ

ಶ್ರೀಮತಿ ಜೆನ್ನಿಫರ್ ವೆಸ್ಟಾಕಾಟ್, ಸಿಇಒ

11.

ವೈಸೆಟೆಕ್

ಶ್ರೀ ರಿಚರ್ಡ್ ವೈಟ್, ಸಿಇಒ ಮತ್ತು ಸಂಸ್ಥಾಪಕ

12.

ಏರ್ಟ್ರಂಕ್

ಶ್ರೀ ರಾಬಿನ್ ಖುದಾ, ಸಂಸ್ಥಾಪಕ ಮತ್ತು ಸಿಇಒ

13.

ಎಂಚುರಾ

ಶ್ರೀಮತಿ ಟಮ್ಮಿ ಚು, ವ್ಯವಸ್ಥಾಪಕ ನಿರ್ದೇಶಕಿ

14.

ಕ್ವಿಂಟಿಸ್ ಸ್ಯಾಂಡಲ್ವುಡ್

ಶ್ರೀ ರಿಚರ್ಡ್ ಹೆನ್ಫ್ರೇ, ಸಿಇಒ

15.

ಯು ಎನ್ ಎಸದ ಡಬ್ಲ್ಯು

ಪ್ರೊ. ಅಟಿಲಾ ಬ್ರಂಗ್ಸ್, ಉಪಕುಲಪತಿ ಮತ್ತು ಸಿಇಒ

16.

ರೀಚಾರ್ಜ್ ಇಂಡಸ್ಟ್ರೀಸ್

ಶ್ರೀ ರಾಬರ್ಟ್ ಫಿಟ್ಜ್ಪ್ಯಾಟ್ರಿಕ್, ಸಿಇಒ

17.

ವಿಶ್ವವಿದ್ಯಾನಿಲಯಗಳು ಆಸ್ಟ್ರೇಲಿಯಾ

ಶ್ರೀಮತಿ ಕ್ಯಾಟ್ರಿಯೋನಾ ಜಾಕ್ಸನ್, ಮುಖ್ಯ ಕಾರ್ಯನಿರ್ವಾಹಕಿ

18.

ಆಸ್ಟ್ರೇಲಿಯಾ-ಭಾರತ ಸಂಬಂಧಗಳ ಕೇಂದ್ರ

ಶ್ರೀಮತಿ ಸ್ವಾತಿ ದವೆ, ಅಧ್ಯಕ್ಷೆ, ಸಲಹಾ ಮಂಡಳಿ

19.

ನವಿಟಾಸ್ ಗ್ರೂಪ್

ಶ್ರೀ ಸ್ಕಾಟ್ ಜೋನ್ಸ್, ಸಿಇಒ

*****


(Release ID: 1927067) Visitor Counter : 117