ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಕಾಶ್ ಪುರಬ್‌ ಅಂಗವಾಗಿ ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರಿಗೆ ಪ್ರಧಾನ ಮಂತ್ರಿ ಗೌರವ ನಮನ

प्रविष्टि तिथि: 11 APR 2023 2:23PM by PIB Bengaluru

ಪ್ರಕಾಶ್ ಪುರಬ್ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;

"ಪ್ರಕಾಶ್ ಪುರಬ್‌ ಅಂಗವಾಗಿ ನಾನು ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರನ್ನು ನಮಸ್ಕರಿಸುತ್ತೇನೆ. ಅಪ್ರತಿಮ ಧೈರ್ಯ, ಸತ್ಯ ಮತ್ತು ನ್ಯಾಯದ ಮೌಲ್ಯಗಳಿಗೆ ಅವರು ಹೊಂದಿದ್ದ ಬದ್ಧತೆ ಬಹಳ ಪ್ರೇರಕ ಶಕ್ತಿಯಾಗಿದೆ. ಕೆಂಪುಕೋಟೆಯಲ್ಲಿ ಅವರ 400ನೇ ಪ್ರಕಾಶ್ ಪುರಬ್ ಆಚರಣೆ ಕಾರ್ಯಕ್ರಮದಲ್ಲಿ ಕಳೆದ ವರ್ಷ ನಾನು ಮಾಡಿದ ಭಾಷಣವನ್ನು ಹಂಚಿಕೊಳ್ಳುತ್ತಿದ್ದೇನೆ."

“ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರ ಜನ್ಮ ವಾರ್ಷಿಕೋತ್ಸವ ಸಂದರ್ಭದಲ್ಲಿ, ನಾನು ಅವರಿಗೆ ತಲೆಬಾಗಿ ನಮಸ್ಕರಿಸುತ್ತೇನೆ. ಗುರು ಸಾಹಿಬ್ ಜಿ ಅವರ ಅಸಾಧಾರಣ ಧೈರ್ಯ, ಸತ್ಯ ಮತ್ತು ನ್ಯಾಯದ ಮೌಲ್ಯಗಳಿಗೆ ಹೊಂದಿದ್ದ ಬದ್ಧತೆ ಬಹಳ ಸ್ಫೂರ್ತಿದಾಯಕವಾಗಿದೆ.

ಕಳೆದ ವರ್ಷ ಕೆಂಪುಕೋಟೆಯಲ್ಲಿ ಆಚರಿಸಲಾದ ಅವರ 400ನೇ ಜನ್ಮ ದಿನಾಚರಣೆ ಸಂದರ್ಭದ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ, ನನ್ನ ಆಲೋಚನೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇನೆ.

 

***

 

 


(रिलीज़ आईडी: 1922363) आगंतुक पटल : 157
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu