ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಡೆನ್ಮಾರ್ಕ್ ಪ್ರಧಾನಿ ಜೊತೆ ದೂರವಾಣಿ ಸಂಭಾಷಣೆ ನಡೆಸಿದರು


ನಾಯಕರು ಭಾರತ-ಡೆನ್ಮಾರ್ಕ್ ಹಸಿರು ತಂತ್ರಗಾರಿಕೆಯ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಉನ್ನತ ಮಟ್ಟದ ವಿನಿಮಯ ಮತ್ತು ವೃದ್ಧಿಸುತ್ತಿರುವ ಸಹಕಾರದ ಕುರಿತು  ತೃಪ್ತಿ ವ್ಯಕ್ತಪಡಿಸಿದರು

 ಪ್ರಧಾನಿ ಫ್ರೇಡರೀಕ್ಸನ್ ಭಾರತದ ಜಿ 20 ಉಪಕ್ರಮಗಳನ್ನು ಶ್ಲಾಘಿಸಿದರು ಮತ್ತು ಡೆನ್ಮಾರ್ಕ್ ‌ನ  ಸಂಪೂರ್ಣ ಬೆಂಬಲವನ್ನು ತಿಳಿಸಿದರು

ಮುಂದಿನ ವರ್ಷ 2024 ರಲ್ಲಿ ಭಾರತ-ಡೆನ್ಮಾರ್ಕ್ ಮೈತ್ರಿಯ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ನಾಯಕರು ಒಪ್ಪಿಗೆ ಸೂಚಿಸಿದರು

Posted On: 20 APR 2023 6:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗೌರವಾನ್ವಿತ ಡೆನ್ಮಾರ್ಕ್ ‌ನ ಪ್ರಧಾನಿ ಶ್ರೀಮತಿ. ಮೆಟ್ಟೆ ಫ್ರೆಡೆರಿಕ್ಸೆನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಎರಡನೇ ಅವಧಿಗೆ ಡೆನ್ಮಾರ್ಕ್ ‌ನ ಪ್ರಧಾನಮಂತ್ರಿಯಾಗಿ ನೇಮಕಗೊಂಡಿದ್ದಕ್ಕಾಗಿ ಪ್ರಧಾನಿ ಫ್ರೆಡೆರಿಕ್ಸೆನ್ ಅವರನ್ನು ಪ್ರಧಾನಮಂತ್ರಿಯವರು  ಅಭಿನಂದಿಸಿದರು.

ಉಭಯ ನಾಯಕರು ಭಾರತ-ಡೆನ್ಮಾರ್ಕ್ ಹಸಿರು ತಂತ್ರಗಾರಿಕೆಯ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಿದರು. ಇತ್ತೀಚಿನ ಉನ್ನತ ಮಟ್ಟದ ವಿನಿಮಯ ಮತ್ತು ವೃದ್ಧಿಸುತ್ತಿರುವ ಸಹಕಾರದ ಕುರಿತು ತೃಪ್ತಿ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಫ್ರೆಡೆರಿಕ್ಸೆನ್ ಅವರಿಗೆ ಭಾರತದ ಪ್ರಸ್ತುತ ಜಿ 20 ರ  ಅಧ್ಯಕ್ಷ ಸ್ಥಾನ ಮತ್ತು ಅದರ ಪ್ರಮುಖ ಆದ್ಯತೆಗಳ ಕುರಿತು ಪ್ರಧಾನಮಂತ್ರಿಯವರು ವಿವರಿಸಿದರು. ಪ್ರಧಾನಮಂತ್ರಿ ಫ್ರೆಡೆರಿಕ್ಸೆನ್ ಅವರು ಭಾರತದ ಉಪಕ್ರಮಗಳನ್ನು ಶ್ಲಾಘಿಸಿದರು ಮತ್ತು ಅವರಿಗೆ ಡೆನ್ಮಾರ್ಕ್ ‌ನ ಸಂಪೂರ್ಣ ಬೆಂಬಲವನ್ನು ತಿಳಿಸಿದರು.

ಮುಂದಿನ ವರ್ಷ 2024 ರಲ್ಲಿ ಭಾರತ-ಡೆನ್ಮಾರ್ಕ್ ಮೈತ್ರಿಯ 75 ನೇ ವಾರ್ಷಿಕೋತ್ಸವವನ್ನು ಸೂಕ್ತ ರೀತಿಯಲ್ಲಿ ಆಚರಿಸಲು ಮತ್ತು ತಮ್ಮ ಮೈತ್ರಿಯನ್ನು  ಮತ್ತಷ್ಟು ವೈವಿಧ್ಯಮಯಗೊಳಿಸಲು ಕ್ಷೇತ್ರಗಳನ್ನು ಅನ್ವೇಷಿಸಲು ಉಭಯ ನಾಯಕರು ಒಪ್ಪಿಕೊಂಡರು.

****

 

 



(Release ID: 1922346) Visitor Counter : 114