ಪ್ರಧಾನ ಮಂತ್ರಿಯವರ ಕಛೇರಿ
ಏಪ್ರಿಲ್ 26ರಂದು ಸೌರಾಷ್ಟ್ರ ತಮಿಳು ಸಂಗಮಂ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿಯವರು
ಏಕ್ ಭಾರತ್ ಶ್ರೇಷ್ಠ ಭಾರತ್ ನ ಸ್ಫೂರ್ತಿಯನ್ನು ಉತ್ತೇಜಿಸಲು ಈ ಕಾರ್ಯಕ್ರಮವು ಪ್ರಧಾನ ಮಂತ್ರಿಯವರ ದೂರದೃಷ್ಟಿಯನ್ನು ಮುಂದಕ್ಕೆ ಕೊಂಡೊಯ್ಯುಲಿದೆ
ಸೌರಾಷ್ಟ್ರ ತಮಿಳರಿಗೆ ತಮ್ಮ ಮೂಲದೊಂದಿಗೆ ಮರುಸಂಪರ್ಕ ಪಡೆಯಲು ಇದು ಸದವಕಾಶವನ್ನು ಒದಗಿಸಲಿದೆ
Posted On:
25 APR 2023 7:53PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಏಪ್ರಿಲ್ 26ರಂದು ಬೆಳಿಗ್ಗೆ 10:30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೌರಾಷ್ಟ್ರ ತಮಿಳು ಸಂಗಮಂ ಸಮಾರೋಪ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿನ ಜನರ ನಡುವಿನ ಹಳೆಯ ಸಂಬಂಧಗಳನ್ನು ಪುನಃ ಸ್ಥಾಪಿಸಲು ಸಹಾಯ ಮಾಡುವ ಉಪಕ್ರಮಗಳ ಮೂಲಕ ಏಕ್ ಭಾರತ್ ಶ್ರೇಷ್ಠ ಭಾರತ್ ನ ಸ್ಫೂರ್ತಿಯನ್ನು ಉತ್ತೇಜಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನದಲ್ಲಿ ಈ ಕಾರ್ಯಕ್ರಮವನ್ನು ನಿಯೋಜಿಸಲಾಗಿದೆ. ಇದೇ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಕಾಶಿ ತಮಿಳು ಸಂಗಮವನ್ನು ಈ ಹಿಂದೆ ಆಯೋಜಿಸಲಾಗಿತ್ತು. ಸೌರಾಷ್ಟ್ರ ತಮಿಳು ಸಂಗಮವು ಗುಜರಾತ್ ಮತ್ತು ತಮಿಳುನಾಡಿನ ನಡುವಿನ ಹಂಚಿಕೆಯ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವ ಮೂಲಕ ಈ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ.
ಶತಮಾನಗಳ ಹಿಂದೆ, ಸೌರಾಷ್ಟ್ರ ಪ್ರದೇಶದಿಂದ ಅನೇಕ ಜನರು ತಮಿಳುನಾಡಿಗೆ ವಲಸೆ ಬಂದು ನೆಲೆಸಿದ್ದರು. ಸೌರಾಷ್ಟ್ರ ತಮಿಳು ಸಂಗಮವು ಸೌರಾಷ್ಟ್ರ ತಮಿಳರಿಗೆ ತಮ್ಮ ಮೂಲ ಬೇರುಗಳೊಂದಿಗೆ ಮರುಸಂಪರ್ಕಿಸಲು ಅವಕಾಶವನ್ನು ಒದಗಿಸಿದೆ. 10 ದಿನಗಳ ಈ ಸಂಗಮದಲ್ಲಿ 3000 ಕ್ಕೂ ಹೆಚ್ಚು ಸೌರಾಷ್ಟ್ರ ತಮಿಳರು ವಿಶೇಷ ರೈಲಿನಲ್ಲಿ ಸೋಮನಾಥಕ್ಕೆ ಬಂದಿದ್ದರು. ಕಾರ್ಯಕ್ರಮವು ಏಪ್ರಿಲ್ 17ರಂದು ಪ್ರಾರಂಭವಾಯಿತು, ಅದರ ಸಮಾರೋಪ ಸಮಾರಂಭವು ಈಗ ಏಪ್ರಿಲ್ 26ರಂದು ಸೋಮನಾಥದಲ್ಲಿ ನಡೆಯಿತು.
****
(Release ID: 1921972)
Visitor Counter : 125
Read this release in:
Bengali
,
Odia
,
Assamese
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Tamil
,
Telugu
,
Malayalam