ಪ್ರಧಾನ ಮಂತ್ರಿಯವರ ಕಛೇರಿ

ದೇಶದಲ್ಲಿ ರೇಡಿಯೋ ಸಂಪರ್ಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಏಪ್ರಿಲ್ 28ರಂದು ಹೊಸ 91 ಎಫ್ ಎಂ ಟ್ರಾನ್ಸ್ ಮಿಟರ್ ಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ


​​​​​​​18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಸರಿಸಲಿರುವ ಈ ಹೊಸ ಟ್ರಾನ್ಸ್ ಮಿಟರ್ ಗಳು

ಜಿಲ್ಲೆಗಳು ಮತ್ತು ಗಡಿ ಪ್ರದೇಶಗಳಲ್ಲಿ ಸಂಪರ್ಕವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯತ್ತ ವಿಶೇಷ ಗಮನ

ಸುಮಾರು 35,000 ಚದರ ಕಿ.ಮೀ ಪ್ರದೇಶದ ವ್ಯಾಪ್ತಿಯ ಹೆಚ್ಚಳದೊಂದಿಗೆ ಹೆಚ್ಚುವರಿಯಾಗಿ 2 ಕೋಟಿ ಜನರು ಈಗ ಹೊಸ 91 ಎಫ್ ಎಂ ಟ್ರಾನ್ಸ್ ಮಿಟರ್ ಗಳ ವ್ಯಾಪ್ತಿಗೆ ಒಳಪಡಲಿದ್ದಾರೆ

ಮನ್ ಕಿ ಬಾತ್ ನ 100ನೇ ಸಂಚಿಕೆಯ ಎರಡು ದಿನ ಮೊದಲು ಈ ವಿಸ್ತರಣೆ ನಡೆಯಲಿದೆ

Posted On: 27 APR 2023 12:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಏಪ್ರಿಲ್ 28ರಂದು ಬೆಳಿಗ್ಗೆ 10:30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 100 ವ್ಯಾಟ್ ನ ಹೊಸ 91 ಎಫ್ ಎಂ ಟ್ರಾನ್ಸ್ ಮಿಟರ್ ಗಳನ್ನು ಉದ್ಘಾಟಿಸಲಿದ್ದಾರೆ. ಈ ಟ್ರಾನ್ಸ್ ಮಿಟರ್ ಗಳ ಉದ್ಘಾಟನೆಯಿಂದ ದೇಶದಲ್ಲಿ ರೇಡಿಯೋ ಸಂಪರ್ಕಕ್ಕೆ ಮತ್ತಷ್ಟು ಹೆಚ್ಚಿನ ಉತ್ತೇಜನ ದೊರೆಯಲಿದೆ.

ದೇಶದಲ್ಲಿ ಎಫ್ ಎಂ ರೇಡಿಯೋ ಸಂಪರ್ಕವನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 84 ಜಿಲ್ಲೆಗಳಲ್ಲಿ 100 ವ್ಯಾಟ್ ನ 91 ಹೊಸ ಎಫ್ಎಂ ಟ್ರಾನ್ಸ್ ಮಿಟರ್ ಗಳನ್ನು ಸ್ಥಾಪಿಸಲಾಗಿದೆ. ಮಹತ್ವಾಕಾಂಕ್ಷೆಯ ಈ ವಿಸ್ತರಣೆಯು ಜಿಲ್ಲೆಗಳು ಮತ್ತು ಗಡಿ ಪ್ರದೇಶಗಳಲ್ಲಿ ರೇಡಿಯೋ ವ್ಯಾಪ್ತಿಯನ್ನು ಹೆಚ್ಚಿಸುವುದಾಗಿದೆ. ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಛತ್ತೀಸ್ಗಢ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಲಡಾಖ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಈ ವ್ಯಾಪ್ತಿಗೆ ಒಳಪಡುತ್ತವೆ. ಆಲ್ ಇಂಡಿಯಾ ರೇಡಿಯೋ ಎಫ್ಎಂ ಸೇವೆಯ ಈ ವಿಸ್ತರಣೆಯೊಂದಿಗೆ, ಮಾಧ್ಯಮದೊಂದಿಗೆ ಸಂಪರ್ಕವಿಲ್ಲದ 2 ಕೋಟಿ ಹೆಚ್ಚುವರಿ ಜನರು ಈಗ ಇದರ ವ್ಯಾಪ್ತಿಗೆ ಒಳಪಡಲಿದ್ದಾರೆ. ಇದು ಸುಮಾರು 35,000 ಚದರ ಕಿ.ಮೀ ಪ್ರದೇಶ ವ್ಯಾಪ್ತಿಯಲ್ಲಿ ವಿಸ್ತರಣೆಯಾಗಲಿದೆ.

ಪ್ರಧಾನ ಮಂತ್ರಿಯವರು ಜನಸಾಮಾನ್ಯರನ್ನು ತಲುಪಲು ರೇಡಿಯೋ ಮಾಧ್ಯಮವನ್ನು ದೃಢವಾಗಿ ನಂಬಿದ್ದಾರೆ. ಸಾಧ್ಯವಾದಷ್ಟು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಈ ಮಾಧ್ಯಮದ ಅನನ್ಯ ಶಕ್ತಿಯನ್ನು ಬಳಸಿಕೊಳ್ಳಲು, ಪ್ರಧಾನಮಂತ್ರಿಯವರು ಮನ್ ಕಿ ಬಾತ್ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದರು, ಈಗ ಮನ್ ಕಿ ಬಾತ್ ತನ್ನ ಹೆಗ್ಗುರುತಿನ 100ನೇ ಸಂಚಿಕೆಯತ್ತ ಮುನ್ನಡೆದಿದೆ.

****



(Release ID: 1921866) Visitor Counter : 88