ಪ್ರಧಾನ ಮಂತ್ರಿಯವರ ಕಛೇರಿ

ನಮ್ಮ ಅಮೂಲ್ಯವಾದ ಪರಂಪರೆ ತಾಯ್ನಾಡಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ: ಪ್ರಧಾನಮಂತ್ರಿ 

Posted On: 25 APR 2023 9:30AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿದೇಶದಿಂದ ರಾಷ್ಟ್ರೀಯ ಪರಂಪರೆಯನ್ನು ಮರಳಿ ತರುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಕೇಂದ್ರ ಸಚಿವ ಶ್ರೀ ಜಿ.ಕಿಶನ್ ರೆಡ್ಡಿ, ಅರಿಯಲೂರು ಜಿಲ್ಲೆಯ ಪೊಟ್ಟವೇಲಿ ವೆಲ್ಲೂರಿನ ಶ್ರೀ ವರತರಾಜ ಪೆರುಮಾಳ್ ಅವರು ಚೋಳರ ಕಾಲಕ್ಕೆ (14-15 ನೇ ಶತಮಾನ) ಸೇರಿದ ಶ್ರೀ ವರತರಾಜ ಪೆರುಮಾಳ್ ಅವರ ಲೋಹದ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿರುವ ಟ್ವೀಟ್ ಗೆ ಪ್ರತಿಯಾಗಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ಇಲ್ಲಿಯವರೆಗೆ 251 ಪ್ರಾಚೀನ ವಸ್ತುಗಳನ್ನು ವಿವಿಧ ದೇಶಗಳಿಂದ ಮರಳಿ ಪಡೆಯಲಾಗಿದೆ, ಅದರಲ್ಲಿ 238 ವಸ್ತುಗಳನ್ನು 2014 ರಿಂದ ಮರಳಿ ತರಲಾಗಿದೆ ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ:

"ನಮ್ಮ ಅಮೂಲ್ಯವಾದ ಪರಂಪರೆ ತಾಯ್ನಾಡಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ," ಎಂದು ಪ್ರಧಾನಿ ಹೇಳಿದ್ದಾರೆ.

***



(Release ID: 1921565) Visitor Counter : 95