ಪ್ರಧಾನ ಮಂತ್ರಿಯವರ ಕಛೇರಿ

ಪ್ರಜಾಪ್ರಭುತ್ವಕ್ಕಾಗಿ ಎರಡನೇ ಶೃಂಗಸಭೆಯ ನಾಯಕರ ಮಟ್ಟದ ಸಮಗ್ರ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಭಿಪ್ರಾಯಗಳು

Posted On: 29 MAR 2023 4:40PM by PIB Bengaluru

 ನಮಸ್ಕಾರ!

ಭಾರತದ 1.4 ಶತಕೋಟಿ ಜನರ ಶುಭಾಶಯಗಳನ್ನು ನಿಮ್ಮ ಮುಂದೆ ಹೊತ್ತು ತರುತ್ತಿದ್ದೇನೆ. 

ಪ್ರಪಂಚದ ಇತರ ಭಾಗಗಳಿಗಿಂತ ಚುನಾಯಿತ ನಾಯಕರ ಕಲ್ಪನೆಯು ಪ್ರಾಚೀನ ಭಾರತದಲ್ಲಿ ಬಹಳ ಹಿಂದೆಯೇ ಸಾಮಾನ್ಯ ಲಕ್ಷಣವಾಗಿತ್ತು. ನಮ್ಮ ಪ್ರಾಚೀನ ಮಹಾಕಾವ್ಯವಾದ ಮಹಾಭಾರತದಲ್ಲಿ, ಪ್ರಜೆಗಳ ಆದ್ಯ ಕರ್ತವ್ಯವೆಂದರೆ ಅವರದೇ ನಾಯಕನನ್ನು ಆರಿಸುವುದು. 

ವಿಶಾಲ-ಆಧಾರಿತ ಸಲಹಾ ಅಂಗಗಳು ಅಥವಾ ಸಂಸ್ಥೆಗಳು ರಾಜಕೀಯ ಅಧಿಕಾರವನ್ನು ಚಲಾಯಿಸುವ ಬಗ್ಗೆ ನಮ್ಮ ಪವಿತ್ರ ವೇದಗಳು ಹೇಳುತ್ತವೆ. ಪ್ರಾಚೀನ ಭಾರತದಲ್ಲಿ ಗಣರಾಜ್ಯ ರಾಜ್ಯಗಳ ಬಗ್ಗೆ ಅನೇಕ ಐತಿಹಾಸಿಕ ಉಲ್ಲೇಖಗಳಿವೆ, ಅಲ್ಲಿ ಆಡಳಿತಗಳು ಅನುವಂಶೀಯವಾಗಿರಲಿಲ್ಲ. ಭಾರತ ನಿಜವಾಗಿಯೂ ಪ್ರಜಾಪ್ರಭುತ್ವದ ತಾಯಿ.

ಗೌರವಾನ್ವಿತರೇ, 

ಪ್ರಜಾಪ್ರಭುತ್ವ ಕೇವಲ ಒಂದು ರಚನೆಯಲ್ಲ; ಅದು ಚೈತನ್ಯವೂ ಹೌದು. ಪ್ರತಿಯೊಬ್ಬ ಮನುಷ್ಯನ ಅಗತ್ಯತೆಗಳು ಮತ್ತು ಆಕಾಂಕ್ಷೆಗಳು ಸಮಾನವಾಗಿ ಮುಖ್ಯವೆಂದು ನಂಬಲಾಗಿದೆ. ಅದಕ್ಕಾಗಿಯೇ, ಭಾರತದಲ್ಲಿ, ನಮಗೆ ಮಾರ್ಗದರ್ಶನ ಮಾಡುವ ತತ್ವಗಳು "ಸಬ್ಕಾ ಸಾಥ್, ಸಬ್ಕಾ ವಿಕಾಸ್", ಅಂದರೆ "ಒಟ್ಟಾರೆಯಾಗಿ ಅಭಿವೃದ್ಧಿಗಾಗಿ ಶ್ರಮಿಸುವುದು" ಎಂಬುದಾಗಿದೆ. 

ಜೀವನಶೈಲಿಯ ಬದಲಾವಣೆಗಳ ಮೂಲಕ ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದು, ವಿತರಣೆ ಶೇಖರಣೆ ಮೂಲಕ ನೀರನ್ನು ಸಂರಕ್ಷಣೆ, ಎಲ್ಲರಿಗೂ ಶುದ್ಧ ಅಡುಗೆ ಇಂಧನವನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿರಲಿ, ಪ್ರತಿಯೊಂದು ಉಪಕ್ರಮವು ಭಾರತದ ನಾಗರಿಕರ ಸಾಮೂಹಿಕ ಪ್ರಯತ್ನಗಳಿಂದ ನಡೆಯುತ್ತವೆ.  ಕೋವಿಡ್-19 ಸಾಂಕ್ರಾಮಿಕ ಕಾಲದಲ್ಲಿ, ಭಾರತದ ಪ್ರತಿಕ್ರಿಯೆಯು ಜನರಿಂದಾಗಿ ಸಾಧ್ಯವಾಗಿದೆ. 2 ಬಿಲಿಯನ್ ಡೋಸ್ ಮೇಡ್ ಇನ್ ಇಂಡಿಯಾ ಕೋವಿಡ್ ವಿರುದ್ಧ ಸುರಕ್ಷಿತ ಲಸಿಕೆಗಳನ್ನು ನೀಡಲು ಸಾಧ್ಯವಾಗಿದ್ದು ಇಲ್ಲಿನ ನಾಗರಿಕರಿಂದಲೇ. ನಮ್ಮ ''ಲಸಿಕೆ ಮೈತ್ರಿ'' ಉಪಕ್ರಮದ ಮೂಲಕ ಲಕ್ಷಾಂತರ ಲಸಿಕೆಗಳನ್ನು ಜಗತ್ತಿನ ಬೇರೆ ದೇಶಗಳಿಗೆ ಹಂಚಿದ್ದೇವೆ. 

ಇದು "ವಸುದೈವ ಕುಟುಂಬಕಂ" - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಪ್ರಜಾಸತ್ತಾತ್ಮಕ ಮನೋಭಾವದಿಂದ ಮಾರ್ಗದರ್ಶನ ಪಡೆದುಕೊಂಡು ಮುಂದುವರಿಯಲಾಗಿದೆ. 

ಗೌರವಾನ್ವಿತರೇ, 

ಪ್ರಜಾಪ್ರಭುತ್ವದ ಸದ್ಗುಣಗಳ ಬಗ್ಗೆ ಹೇಳಲು ಸಾಕಷ್ಟು ಇದೆ, ಆದರೆ ನಾನು ಈಗ ಹೇಳುವುದಿಷ್ಟೆ: ಭಾರತವು ಅನೇಕ ಜಾಗತಿಕ ಸವಾಲುಗಳ ನಡುವೆಯೂ ಇಂದು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ದೇಶವಾಗಿದೆ. ಇದು ಜಗತ್ತಿನ ಮುಂದೆ ಸಾರುವ ಪ್ರಜಾಪ್ರಭುತ್ವದ ಅತ್ಯುತ್ತಮ ಪ್ರಚಾರ ಜಾಹೀರಾತು ಎಂದು ಹೇಳಬಹುದು. ಇದು ಪ್ರಜಾಪ್ರಭುತ್ವವನ್ನು ಜನರ ಆಶೋತ್ತರಗಳನ್ನು ಈಡೇರಿಸಬಹುದು ಎಂದು ಇದು ತೋರಿಸುತ್ತದೆ. 

ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರು ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಮತ್ತು ಇಲ್ಲಿ ಉಪಸ್ಥಿತರಿರುವ ಎಲ್ಲಾ ಗಣ್ಯ ನಾಯಕರಿಗೆ ಧನ್ಯವಾದಗಳು.

ಎಲ್ಲರಿಗೂ ತುಂಬ ಧನ್ಯವಾದಗಳು.

****



(Release ID: 1914100) Visitor Counter : 72