ಪ್ರಧಾನ ಮಂತ್ರಿಯವರ ಕಛೇರಿ
ಮನ್ ಕಿ ಬಾತ್ ತಳಮಟ್ಟದಲ್ಲಿ ಬದಲಾವಣೆ ಮಾಡುವವರನ್ನು ಗೌರವಿಸುತ್ತದೆ: ಪ್ರಧಾನ ಮಂತ್ರಿ
Posted On:
31 MAR 2023 9:08AM by PIB Bengaluru
ನ್ಯೂಸ್ 18 ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಭಾರತದ ಉಪರಾಷ್ಟ್ರಪತಿಯವರು ಅನಾವರಣಗೊಳಿಸಿದ ಕಾಫಿ ಟೇಬಲ್ ಪುಸ್ತಕ "ವಾಯ್ಸ್ ಆಫ್ ಇಂಡಿಯಾ-ಮೋದಿ ಅಂಡ್ ಹಿಸ್ ಟ್ರಾನ್ಸ್ಫಾರ್ಮೆಟಿವ್ ಮನ್ ಕಿ ಬಾತ್" ಹೊರತಂದಿದ್ದಕ್ಕಾಗಿ ಸಿಎನ್ಎನ್ ನ್ಯೂಸ್ 18 ನೆಟ್ವರ್ಕ್ ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕೃತಿಯು ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಿದ ವ್ಯಕ್ತಿಗಳನ್ನು ಗುರುತಿಸಿದೆ ಮತ್ತು ಆ ಮೂಲಕ ಉಂಟಾದ ಪರಿಣಾಮಗಳನ್ನು ಗುರುತಿಸಿದೆ.
ಉಪರಾಷ್ಟ್ರಪತಿಯವರ ಟ್ವೀಟ್ ಗೆ ಉತ್ತರವಾಗಿ ಶ್ರೀ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ :
"#MannKiBaatನ ಅತ್ಯಂತ ಸುಂದರವಾದ ಭಾಗವೆಂದರೆ ಅದು ತಳಮಟ್ಟದಲ್ಲಿ ಬದಲಾವಣೆ ತರುವವರನ್ನು ಗುರುತಿಸಿ ಮನ್ನಣೆ ನೀಡುವ ವಿಧಾನ. ಈ ಕಾರ್ಯಕ್ರಮವು ನೂರು ಕಂತುಗಳನ್ನು ಪೂರ್ಣಗೊಳಿಸುತ್ತಿದ್ದಂತೆ, ಉಲ್ಲೇಖಿಸಲಾದ ಜನರನ್ನು ಮತ್ತು ಅವರು ಸೃಷ್ಟಿಸಿದ ಪ್ರಭಾವವನ್ನು, ಪರಿಣಾಮವನ್ನು ಗುರುತಿಸಲು @CNNnews18 ಮಾಡಿರುವ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ” ಎಂದು ಹೇಳಿದ್ದಾರೆ.
****
(Release ID: 1914093)
Visitor Counter : 104
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam