ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಒಮ್ಮೆ ತಡೆಗೆ (ಬ್ಲಾಕೇಡ್ ) ಮತ್ತು ಹಿಂಸಾಚಾರಕ್ಕೆ ಹೆಸರುವಾಸಿಯಾಗಿದ್ದ ಈಶಾನ್ಯ ಪ್ರದೇಶವು ಈಗ ಅಭಿವೃದ್ಧಿಯ ದಾಪುಗಾಲಿಗೆ ಹೆಸರುವಾಸಿ: ಪ್ರಧಾನಮಂತ್ರಿ

Posted On: 26 MAR 2023 10:47AM by PIB Bengaluru

ಮೊದಲು ಈಶಾನ್ಯ ಪ್ರದೇಶವು ಅಡೆತಡೆಗಳು (ಬ್ಲಾಕೇಡ್) ಮತ್ತು ಹಿಂಸಾಚಾರಕ್ಕೆ ಹೆಸರುವಾಸಿಯಾಗಿತ್ತು,ಇದೀಗ ಅದರ ಅಭಿವೃದ್ಧಿಯ ದಾಪುಗಾಲಿಗೆ ಮತ್ತು ಸಮಗ್ರ ಅಭಿವೃದ್ಧಿಗೆ  ಹೆಸರುವಾಸಿಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಶ್ರೀ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ. ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರದಲ್ಲಿ ಮತ್ತೆ ಆಫ್ಸಾ (ಎಎಫ್ ಎಸ್ ಪಿಎ) ಅಡಿಯಲ್ಲಿ ಬಾಧಿತ ಪ್ರದೇಶಗಳನ್ನು ತಗ್ಗಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಶ್ರೀ ಶಾ ಅವರು, ಈಶಾನ್ಯ ಭಾರತದಲ್ಲಿ ಭದ್ರತಾ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.  

ಅಮಿತ್ ಶಾ ಅವರ ಟ್ವೀಟ್ ಗೆ ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಈಶಾನ್ಯ ಭಾಗ ಸಮಗ್ರ ಅಭಿವೃದ್ಧಿಗೆ ಸಾಕ್ಷಿಯಾಗುತ್ತಿದೆ. ಒಮ್ಮೆ ಬ್ಲಾಕೇಡ್ ಮತ್ತು ಹಿಂಸಾಚಾರಕ್ಕೆ ಹೆಸರಾಗಿದ್ದ ಪ್ರದೇಶದ ಇದೀಗ ಅಭಿವೃದ್ಧಿಗಾಥೆಗೆ ಹೆಸರಾಗಿದೆ’’

 

****



(Release ID: 1910942) Visitor Counter : 82