ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗ್ರಾಹಕರಿಗೆ ಉದ್ದೇಶಿತ ಸಬ್ಸಿಡಿಗೆ ಸಂಪುಟ ಅನುಮೋದನೆ
Posted On:
24 MAR 2023 9:14PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (PMUY) ಫಲಾನುಭವಿಗಳಿಗೆ ಪ್ರತಿ 14.2 ಕೆಜಿ ತೂಕದ 12 ತುಂಬಿದ ಸಿಲಿಂಡರ್ ಗಳಿಗೆ 200 ರೂಪಾಯಿ ಸಬ್ಸಿಡಿಯನ್ನು ನೀಡಲು ಅನುಮೋದನೆ ನೀಡಿದೆ. ಮಾರ್ಚ್ 1, 2023ರ ಪ್ರಕಾರ ದೇಶದಲ್ಲಿ 9.59 ಕೋಟಿ ಪಿಎಂಯುವೈ ಫಲಾನುಭವಿಗಳಿದ್ದಾರೆ.
ಇದಕ್ಕೆ ಒಟ್ಟು ವೆಚ್ಚವು 2022-23ನೇ ಹಣಕಾಸು ವರ್ಷದಲ್ಲಿ 6,100 ಕೋಟಿ ರೂಪಾಯಿಗಳಾಗಿದ್ದು, 2023-24ರ ಆರ್ಥಿಕ ವರ್ಷಕ್ಕೆ 7,680 ಕೋಟಿ ರೂಪಾಯಿಗಳಾಗಿವೆ. ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಈಗಾಗಲೇ ಈ ಸಬ್ಸಿಡಿಯನ್ನು 2022ರ ಮೇ 22ರಿಂದ ಒದಗಿಸುತ್ತಿದೆ.
ವಿವಿಧ ಭೌಗೋಳಿಕ ರಾಜಕೀಯ ಕಾರಣಗಳಿಂದಾಗಿ ಎಲ್‌ಪಿಜಿಯ ಅಂತಾರಾಷ್ಟ್ರೀಯ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಎಲ್ ಪಿಜಿ ಸಿಲಿಂಡರ್ ಗಳ ಅಧಿಕ ಬೆಲೆಗಳಿಂದ ಪಿಎಂಯುವೈ ಫಲಾನುಭವಿಗಳನ್ನು ರಕ್ಷಿಸುವುದು ಮುಖ್ಯವಾಗಿದೆ.
ಪಿಎಂಯುವೈ ಗ್ರಾಹಕರಿಗೆ ಉದ್ದೇಶಿತ ಸಬ್ಸಿಡಿ ಬೆಂಬಲದಿಂದಾಗಿ ಎಲ್ ಪಿಜಿಯ ನಿರಂತರ ಬಳಕೆ ಸಾಧ್ಯವಾಗುತ್ತದೆ ಮತ್ತು ಬಡವರು ಕೂಡ ಅದನ್ನು ಬಳಸಲು ಬೆಂಬಲಿಸಿದಂತಾಗುತ್ತದೆ. ಪಿಎಂಯುವೈಯಿಂದಾಗಿ ಗ್ರಾಹಕರು ನಿರಂತರವಾಗಿ ಎಲ್ ಪಿಜಿ ಅಳವಡಿಸಿಕೊಂಡು ಶುದ್ಧ ಅಡುಗೆ ಅನಿಲವನ್ನು ಬಳಸುವಂತೆ ನೋಡಿಕೊಳ್ಳುತ್ತದೆ. ಗ್ರಾಹಕರ ಸರಾಸರಿ ಎಲ್ ಪಿಜಿ ಬಳಕೆಯು 2019-20 ರಲ್ಲಿ 3.01 ಮರುತುಂಬಿಸುವಿಕೆಯಿಂದ 2021-22 ರಲ್ಲಿ 3.68 ಕ್ಕೆ ಶೇಕಡಾ 20ರಷ್ಟು ಹೆಚ್ಚಾಗಿದೆ. ಎಲ್ಲಾ ಪಿಎಂಯುವೈ ಫಲಾನುಭವಿಗಳು ಈ ಉದ್ದೇಶಿತ ಸಬ್ಸಿಡಿಗೆ ಅರ್ಹರಾಗಿದ್ದಾರೆ.
ದ್ರವೀಕೃತ ಪೆಟ್ರೋಲಿಯಂ ಅನಿಲ(LPG) ಅಂದರೆ ಶುದ್ಧ ಅಡುಗೆ ಇಂಧನವನ್ನು ಗ್ರಾಮೀಣ ಮತ್ತು ಬಡ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡಲು, ಬಡ ಕುಟುಂಬಗಳ ಮಹಿಳೆಯರಿಗೆ ಠೇವಣಿ ಉಚಿತ ಎಲ್ ಪಿಜಿ ಸಂಪರ್ಕಗಳನ್ನು ಒದಗಿಸಲು ಭಾರತ ಸರ್ಕಾರವು 2016ರ ಮೇ ತಿಂಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿತು.
*****
(Release ID: 1910563)
Visitor Counter : 286
Read this release in:
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam