ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗಾಗಿ ಸಿರ್ಸಾ ರೈತರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 19 MAR 2023 8:46PM by PIB Bengaluru

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಪ್ರಯೋಜನಗಳನ್ನು ಪ್ರದರ್ಶಿಸಿದ ಸಿರ್ಸಾದ ರೈತರ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದರು. ಈ ಪ್ರಯತ್ನ ಮಹಿಳಾ ಸಬಲೀಕರಣದ ಸಂಕೇತ ಎಂದು ಪ್ರಧಾನಮಂತ್ರಿ ಹೇಳಿದರು.

ಸ್ಥಳೀಯ ರೈತರು ಪಿ ಎಂ ಎಂ ಎಸ್ ವಾಯ್ ಅಳವಡಿಸಿಕೊಂಡಿರುವ ಕುರಿತು ಸಿರ್ಸಾ ಸಂಸದೆ ಸುನೀತಾ ದುಗ್ಗಲ್ ಅವರ ಟ್ವೀಟ್ ಥ್ರೆಡ್ ‌ಗೆ ಪ್ರಧಾನಮಂತ್ರಿ  ಉತ್ತರಿಸಿದ್ದಾರೆ.

ಪ್ರಧಾನಮಂತ್ರಿ  ಹೀಗೆ ಟ್ವೀಟ್ ಮಾಡಿದ್ದಾರೆ : 

"ಸಿರ್ಸಾದ ನಮ್ಮ ರೈತ ಸಹೋದರ ಸಹೋದರಿಯರ ಈ ಪ್ರಯತ್ನವು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಪ್ರಯೋಜನಗಳನ್ನು ಬಿಂಬಿಸುತ್ತದೆ, ಜೊತೆಗೆ ಇದು ಮಹಿಳಾ ಸಬಲೀಕರಣದ ಸಂಕೇತವಾಗಿದೆ."

***


(Release ID: 1908709) Visitor Counter : 147