ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

'ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ(ಪಿಎಂ ವಿಕಾಸ್)' ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಮಾರ್ಚ್ 11,2023ರಂದು ಭಾಷಣ


ಬಜೆಟ್ ಘೋಷಣೆಗಳ ಅನುಷ್ಠಾನಕ್ಕಾಗಿ ಸರ್ಕಾರವು ಆಯೋಜಿಸುತ್ತಿರುವ 12 ಬಜೆಟ್ ನಂತರದ ವೆಬಿನಾರ್ ಗಳ ಒಂದು ಭಾಗ

ವೆಬಿನಾರ್ ಸೂಕ್ಷ್ಮ, ಸಣ್ಣ ಮತ್ತು ಉದ್ಯಮ ಸಚಿವಾಲಯಗಳ ವಲಯಕ್ಕೆ ಬಜೆಟ್ ಘೋಷಣೆಗಳ 4 ಸಣ್ಣ ಸಭೆಗಳಾಗಿದ್ದು, ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ (PM VIKAS)ವನ್ನು ಒಳಗೊಂಡಿರುತ್ತದೆ. ಇದು ಹೊಸ ಯೋಜನೆಯನ್ನು ರೂಪಿಸುವಿಕೆ, ರಚಿಸುವಿಕೆ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದ ಚರ್ಚೆಗಳನ್ನು ಒಳಗೊಂಡಿರುತ್ತದೆ.

Posted On: 10 MAR 2023 3:43PM by PIB Bengaluru

ಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಅಂದರೆ ಮಾರ್ಚ್ 11,2023 ರಂದು ಬೆಳಗ್ಗೆ 10 ಗಂಟೆಗೆ ‘ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ(ಪಿಎಂ ವಿಕಾಸ್)’ ಕುರಿತು ಬಜೆಟ್ ನಂತರದ ವೆಬಿನಾರ್ ನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪಡೆಯಲು ಭಾರತ ಸರ್ಕಾರವು ಆಯೋಜಿಸುತ್ತಿರುವ 12 ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯ ಒಂದು ಭಾಗವಾಗಿದೆ. 'ಪಿಎಂ ವಿಶ್ವಕರ್ಮ ಕೌಶಲ ಸಮ್ಮಾನ(PM VIKAS)ಯೋಜನೆಯು, ದೇಶೀಯ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಯೋಜಿಸುವ ಮೂಲಕ ಕುಶಲಕರ್ಮಿಗಳು/ಕುಶಲಕರ್ಮಿಗಳ ಉತ್ಪನ್ನಗಳು/ಸೇವೆಗಳ ಗುಣಮಟ್ಟ, ಪ್ರಮಾಣ ಮತ್ತು ವ್ಯಾಪ್ತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ವೆಬಿನಾರ್ ಈ ಕೆಳಗಿನ ವಿಷಯಗಳನ್ನು ಒಳಗೊಂಡ 4 ಸಣ್ಣ ಸಭೆಗಳನ್ನು ಹೊಂದಿರುತ್ತದೆ:

1. ಡಿಜಿಟಲ್ ವಹಿವಾಟುಗಳು ಮತ್ತು ಸಾಮಾಜಿಕ ಭದ್ರತೆಗೆ ಪ್ರೋತ್ಸಾಹ ಸೇರಿದಂತೆ ಕೈಗೆಟಕುವ ಹಣಕಾಸಿನ ನೆರವು ಗಳಿಸುವುದು.

2. ಸುಧಾರಿತ ಕೌಶಲ್ಯ ತರಬೇತಿ, ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನ ಪಡೆಯುವುದು

3. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳ ಸಂಪರ್ಕಕ್ಕೆ ಮಾರುಕಟ್ಟೆ ಬೆಂಬಲ

4. ಯೋಜನೆಯ ರಚನೆ, ಫಲಾನುಭವಿಗಳ ಗುರುತಿಸುವಿಕೆ ಮತ್ತು ಅನುಷ್ಠಾನದ ಚೌಕಟ್ಟು

ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯಗಳ ಸಚಿವರು ಮತ್ತು ಕಾರ್ಯದರ್ಶಿಗಳಲ್ಲದೆ, ಉದ್ಯಮ, ಕುಶಲಕರ್ಮಿಗಳು, ಹಣಕಾಸು ಸಂಸ್ಥೆಗಳು, ತಜ್ಞರು, ವಾಣಿಜ್ಯೋದ್ಯಮಿಗಳು ಮತ್ತು ಸಂಘಗಳ ಜೊತೆಗೆ ರಾಜ್ಯ ಸರ್ಕಾರಗಳ ಅಧಿಕಾರಿಗಳು, ಎಂಎಸ್‌ಎಂಇ ಮತ್ತು ಜವಳಿ ಸಚಿವಾಲಯಗಳ ಸಂಬಂಧಪಟ್ಟ ಕಚೇರಿಗಳಿಗೆ ಸಂಬಂಧಿಸಿದವರು ಈ ವೆಬ್‌ನಾರ್‌ಗಳಲ್ಲಿ ಭಾಗವಹಿಸುತ್ತಾರೆ. ಬಜೆಟ್ ಘೋಷಣೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಲಹೆಗಳ ಮೂಲಕ ಇವರು ಕೊಡುಗೆ ನೀಡಲಿದ್ದಾರೆ.

*****



(Release ID: 1905631) Visitor Counter : 92