ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಸಗೊಬ್ಬರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಕಡೆಗೆ ಮತ್ತೊಂದು ದಿಟ್ಟ ಹೆಜ್ಜೆ

 
ನ್ಯಾನೊ ಯೂರಿಯಾ ನಂತರ, ನ್ಯಾನೋ ಡಿಎಪಿ ಉತ್ಪಾದನೆಗೆ ಅನುಮೋದನೆ 
 
ರೈತರ ಬದುಕು ಸುಲಭಗೊಳಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆ: ಪ್ರಧಾನಿ ಬಣ್ಣನೆ

ಪ್ರಕಟಣಾ ದಿನಾಂಕ: 05 MAR 2023 9:44AM by PIB Bengaluru

 ನ್ಯಾನೋ ಯೂರಿಯಾ ಉತ್ಪಾದನೆಗೆ ಒಪ್ಪಿಗೆ ನೀಡಿದ ನಂತರ, ಭಾರತ ಸರ್ಕಾರವು ಇದೀಗ ನ್ಯಾನೋ ಡಿಎಪಿ ಉತ್ಪಾದನೆಗೆ ಅನುಮೋದನೆ ನೀಡಿದೆ. ಈ ನಿರ್ಧಾರವು ನಮ್ಮ ರೈತ ಸಹೋದರ ಸಹೋದರಿಯರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಟ್ವೀಟ್‌ಗೆ ಪ್ರಧಾನಿ ಉತ್ತರಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;

"ನಮ್ಮ ರೈತ ಸಹೋದರ ಸಹೋದರಿಯರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಮುಖ ಹೆಜ್ಜೆಯಾಗಿದೆ" ಎಂದಿದ್ದಾರೆ.

*******


 


(ಪ್ರಕಟಣೆ ಐ.ಡಿ.: 1904426) ವಿಸಿಟರ್ ಕೌಂಟರ್ : 210