ಸಂಪುಟ

ಭಾರತ ಮತ್ತು ಗಯಾನಾ ನಡುವಿನ ವಾಯು ಸೇವೆಗಳ ಒಪ್ಪಂದಕ್ಕೆ ಸಚಿವ ಸಂಪುಟ ಅನುಮೋದನೆ

Posted On: 22 FEB 2023 12:46PM by PIB Bengaluru


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ  ಭಾರತ ಮತ್ತು ಗಯಾನಾ ನಡುವಿನ ವಾಯು ಸೇವೆಗಳ ಒಪ್ಪಂದಕ್ಕೆ ಅನುಮೋದನೆ ನೀಡಲಾಯಿತು. ಅಗತ್ಯವಾದ ಆಂತರಿಕ ಕಾರ್ಯವಿಧಾನವನ್ನು ಪೂರ್ಣಗೊಳಿಸಿದ ನಂತರ, ರಾಜತಾಂತ್ರಿಕ ಟಿಪ್ಪಣಿಗಳ ವಿನಿಮಯದ ನಂತರ ವಾಯು ಸೇವಾ ಒಪ್ಪಂದ ಜಾರಿಗೆ ಬರಲಿದೆ.

ಗಯಾನಾದಲ್ಲಿ ಭಾರತೀಯರ ಸಂಖ್ಯೆಗೆ ಗಣನೀಯವಾಗಿದೆ. ಮತ್ತು 2012 ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯ ಸುಮಾರು 40% ರಷ್ಟು ಅತಿದೊಡ್ಡ ಜನಾಂಗೀಯ ಗುಂಪು ಇದೆ. ಗಯಾನಾದೊಂದಿಗೆ ವಾಯು ಸೇವೆ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಉಭಯ ದೇಶಗಳ ನಡುವೆ ವಿಮಾನ ಸೇವೆಗಳನ್ನು ಆರಂಭಿಸಲು ಸೂಕ್ತ ಕ್ರಮ ಜಾರಿಗೆ ತರಲಾಗುವುದು. 

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಾಯುಯಾನ ಮಾರುಕಟ್ಟೆ ಮತ್ತು ಭಾರತದಲ್ಲಿ ವಾಯುಯಾನ ಕ್ಷೇತ್ರದಲ್ಲಿ ಉದಾರೀಕರಣದಂತಹ ಬೆಳವಣಿಗೆಗಳ ದೃಷ್ಟಿಯಿಂದ, ಅಂತಾರಾಷ್ಟ್ರೀಯ ವಾಯು ಸಂಪರ್ಕಕ್ಕೆ ದಾರಿ ಮಾಡಿಕೊಡಲು ಹಲವು ದೇಶಗಳೊಂದಿಗೆ ವಾಯು ಸೇವೆಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 

ಏರ್ ಸರ್ವೀಸಸ್ ಅಗ್ರಿಮೆಂಟ್ (ASA) ಎರಡು ದೇಶಗಳ ನಡುವಿನ ವಾಯು ಸೇವೆಗೆ ವಿಶೇಷ ಚೌಕಟ್ಟು ಒದಗಿಸಲಾಗುತ್ತದೆ. ಇದು ರಾಷ್ಟ್ರಗಳ ಸಾರ್ವಭೌಮತ್ವ,  ರಾಷ್ಟ್ರೀಯತೆ ಮತ್ತು ವಿಮಾನಯಾನ ಸಂಸ್ಥೆಗಳಿಗೆ ವಾಣಿಜ್ಯ ಅವಕಾಶಗಳ ವಿಷಯದಲ್ಲಿ ಪರಸ್ಪರ ಸಂಬಂಧದ ತತ್ವಗಳನ್ನು ಆಧರಿಸಿದೆ. ಪ್ರಸ್ತುತ ಭಾರತ ಮತ್ತು ಗಯಾನಾ ನಡುವೆ ಯಾವುದೇ ವಾಯು ಸೇವೆ ಒಪ್ಪಂದ (ASA) ಆಗಿಲ್ಲ.

ಭಾರತ ಮತ್ತು ಗಯಾನಾ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನದ ಸಮಾವೇಶಕ್ಕೆ (ಷಿಕಾಗೊ ಸಮಾವೇಶ) ಸಹಿ ಹಾಕಿವೆ. ಭಾರತ ಮತ್ತು ಗಯಾನಾ ನಿಯೋಗದ ಸದಸ್ಯರು 06 ಡಿಸೆಂಬರ್ 2016 ರಂದು ಬಹಾಮಾಸ್ನ ನಸ್ಸುದಲ್ಲಿ ICAO ಏರ್ ಸರ್ವೀಸಸ್ ನೆಗೋಷಿಯೇಷನ್ಸ್ ಈವೆಂಟಿನಲ್ಲಿ ಚರ್ಚೆ ನಡೆಸಿದ್ದರು. ಅಲ್ಲಿ ಎರಡೂ ದೇಶಗಳು ವಾಯು ಸೇವಾ ಒಪ್ಪಂದ ಕುರಿತು ಸಮಾಲೋಚನೆ ನಡೆಸಿತ್ತು.

06 ಡಿಸೆಂಬರ್, 2016 ರಲ್ಲಿ ತಿಳಿವಳಿಕೆ ಒಪ್ಪಂದಕ್ಕೆ ಭಾರತ ಮತ್ತು ಗಯಾನಾ ನಡುವೆ ಪ್ರಕ್ರಿಯೆ ಆರಂಭಿಸಿದವು. 

ಉಭಯ ದೇಶಗಳ ವಾಣಿಜ್ಯ ಅವಕಾಶಗಳನ್ನು ಹೆಚ್ಚಿಸುವ ಜತೆಗೆ ತಡೆರಹಿತ ಸಂಪರ್ಕ ವೃದ್ಧಿಸಲು ಭಾರತ ಮತ್ತು ಗಯಾನಾ ನಡುವಿನ ಹೊಸ ವಾಯು ಸೇವಾ ಒಪ್ಪಂದವು ಸಹಕಾರಿಯಾಗಲಿದೆ.

*****



(Release ID: 1901440) Visitor Counter : 147