ಪ್ರಧಾನ ಮಂತ್ರಿಯವರ ಕಛೇರಿ

ವೈಮಾನಿಕ ವಲಯ ಜನರ ಪ್ರಯಾಣ ಸಮಯ ತಗ್ಗಿಸಿ ಮತ್ತಷ್ಟು ಹತ್ತಿರಗೊಳಿಸುತ್ತಿದೆ ಮತ್ತು ರಾಷ್ಟ್ರೀಯ ಪ್ರಗತಿಯನ್ನು ಉತ್ತೇಜಿಸುತ್ತಿದೆ: ಪ್ರಧಾನಮಂತ್ರಿ 

Posted On: 22 FEB 2023 12:45PM by PIB Bengaluru

ಕೋವಿಡ್ ನಂತರದ ಹೊಸ ದಾಖಲೆಯ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ 4.45 ಲಕ್ಷಕ್ಕೆ ತಲುಪಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರ ಟ್ವೀಟ್ ಅನ್ನು ಉಲ್ಲೇಖಿಸಿ, ಪ್ರಧಾನಮಂತ್ರಿಯವರು ಮರು ಟ್ವೀಟ್ ಮಾಡಿದ್ದಾರೆ;

"ಹೆಚ್ಚು ವಿಮಾನ ನಿಲ್ದಾಣಗಳು ಮತ್ತು ಉತ್ತಮ ಸಂಪರ್ಕ... ವಾಯುಯಾನ ವಲಯ ಜನರನ್ನು ಮತ್ತಷ್ಟು ಹತ್ತಿರಗೊಳಿಸುತ್ತಿದೆ ಮತ್ತು ರಾಷ್ಟ್ರೀಯ ಪ್ರಗತಿಗೆ ಪುಷ್ಟಿ ನೀಡುತ್ತಿದೆ."

***



(Release ID: 1901372) Visitor Counter : 102