ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ವಿವಿಧ ಕ್ರೀಡೆಗಳ ಕ್ರೀಡಾಪಟುಗಳಿಗೆ ವಿದೇಶಿ ತರಬೇತಿ ಮತ್ತು ಸ್ಪರ್ಧೆಗೆ ಮಿಷನ್ ಒಲಿಂಪಿಕ್ ಕೋಶದಿಂದ ಆರ್ಥಿಕ ನೆರವು 

प्रविष्टि तिथि: 19 FEB 2023 2:46PM by PIB Bengaluru

ಇಬ್ಬರು ಬ್ಯಾಡ್ಮಿಂಟನ್ ಆಟಗಾರರು, ಮೂವರು ಫೆನ್ಸರ್, 10 ಜುಡೋಕಾ ಸೇರಿದಂತೆ ವಿವಿಧ ಬಗೆಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪುಟಗಳಿಗೆ ತರಬೇತಿ ಮತ್ತು ಸ್ಪರ್ಧೆ (ಗ್ರಾನ್ ಸ್ಲಾಮ್) ಗಳಿಗೆ ಹಣಕಾಸು ನೆರವು ನೀಡಲು ಫೆಬ್ರವರಿ 15 ಮತ್ತು 16 ರಂದು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ (ಎಂ ವೈ ಎ ಎಸ್) ದ ಒಲಿಂಪಿಕ್ ಅಭಿಯಾನ ಕೋಶ (ಮಿಷನ್ ಒಲಿಂಪಿಕ್ ಸೆಲ್ - ಎಂಒಸಿ) ಅನುಮೋದನೆ ನೀಡಿದೆ.

10 ಜುಡೋಕಾಸ್ ಪೈಕಿ ಮೂವರು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಂ (ಟಾಪ್ಸ್) ಅಭಿವೃದ್ಧಿ ಮತ್ತು ಏಳು ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರ (ಎನ್ ಸಿ ಒ ಇ) ಕ್ರೀಡಾಪಟುಗಳಿದ್ದು, ಇವರುಗಳಿಗೆ ಉಜ್ಬೇಕಿಸ್ತಾನ ಮತ್ತು ಜಾರ್ಜಿಯಾಗಳಲ್ಲಿ 21 ದಿನಗಳ ತರಬೇತಿ ನೀಡಲಾಗುವುದು. ಇವರುಗಳು ಉಜ್ಬೇಕಿಸ್ತಾನ, ಜಾರ್ಜಿಯಾ ಮತ್ತು ಟರ್ಕಿಗಳಲ್ಲಿ ಈ ಅವಧಿಯಲ್ಲಿ ನಡೆಯಲಿರುವ ಮೂರು ಗ್ರಾನ್ ಸ್ಲಾಂ ಕ್ರೀಡೆಗಳಲ್ಲೂ ಭಾಗವಹಿಸಲಿದ್ದಾರೆ.

ಆಟಗಾರರ ಭಾಗವಹಿಸುವಿಕೆ ಶುಲ್ಕ, ವಿಮಾನ ಪ್ರಯಾಣ ವೆಚ್ಚ, ವಸತಿ ವೆಚ್ಚ, ವೈದ್ಯಕೀಯ ವಿಮಾ ವೆಚ್ಚ, ಸ್ಥಳೀಯ ಪ್ರಯಾಣ ಮತ್ತು ಆಹಾರ ವೆಚ್ಚಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎ ಐ) ಭರಿಸಲಿದೆ.

ಇಬ್ಬರು ಬ್ಯಾಡ್ಮಿಂಟನ್ ಆಟಗಾರರು ಜರ್ಮನ್ ಓಪನ್, ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್, ಸ್ವಿಸ್ ಓಪನ್, ಆರ್ಲಿಯಾನ್ಸ್ ಮಾಸ್ಟರ್ಸ್, ಸ್ಪೇನ್ ಮಾಸ್ಟರ್ಸ್ ಗಳಲ್ಲಿ ಸ್ಪರ್ಧಿಸಲು ತಗುಲುವು ವೆಚ್ಚಕ್ಕೂ ಎಂಒಸಿ ಅನುಮೋದನೆ ನೀಡಿದೆ.

 ಫೆನ್ಸಿಂಗ್ ನಲ್ಲಿ, ಫೆನ್ಸರ್ ಗಳಾದ ಲೈಶ್ರಮ್ ಮೊರಂಬಾ, ಶ್ರೇಯಾ ಗುಪ್ತಾ ಮತ್ತು ಔನಮ್ ಜುಬ್ರಾಜ್ ಸಿಂಗ್ ಅವರುಗಳು ಮಾರ್ಚ್ ನಲ್ಲಿ ಟಸ್ಕೆಂಟ್ ನಲ್ಲಿ ನಡೆಯಲಿರುವ ಕೆಡೆಟ್ ಮತ್ತು ಕಿರಿಯರ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಹಣಕಾಸು ನೆರವು ನೀಡಲು ಅನುಮೋದನೆ ನೀಡಲಾಗಿದೆ. ಈಜುಪಟುಗಳಾದ ಶ್ರೀಹರಿ ನಟರಾಜ್ ಅವರಿಗೆ ಸಿಂಗಾಪುರ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಹಣಕಾಸು ನೆರವು ಹಾಗೂ ಈ ಕ್ರೀಡೆಗಾಗಿ ವೈಯಕ್ತಿಕ ಕೋಚ್ ನಿಹಾರ್ ಅಮೀನ್ ಮತ್ತು ಫಿಸಿಯೋಥೆರಪಿಸ್ಟ್ ಕಾರ್ತಿಕೇಯನ್ ಬಾಲವೆಂಕಟೇಶನ್ ಅವರ ಸೇವೆಗಳ ವೆಚ್ಚವನ್ನು ಭರಿಸಲು ಅನುಮೋದನೆ ದೊರೆತಿದೆ.

ಎರಡು ದಿನಗಳ ಸಭೆಯಲ್ಲಿ ಎಸ್ ಎ ಐ ಪ್ರತಿನಿಧಿಗಳು ಸೇರಿದಂತೆ ಎಂಒಸಿ ಸದಸ್ಯರು ಹಾಗೂ ವಿವಿಧ ರಾಷ್ಟ್ರೀಯ ಒಕ್ಕೂಟಗಳ ಪ್ರತಿನಿಧಿಗಳು ಮುಂಬರುವ ಏಷ್ಯನ್ ಗೇಮ್ಸ್ ಹಾಗೂ ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ತಮ್ಮ ರೂಪುರೇಷೆ ಕುರಿತು ಚರ್ಚಿಸಿದರು.

*****


(रिलीज़ आईडी: 1900576) आगंतुक पटल : 190
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Tamil , Telugu