ಸಂಪುಟ

ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ಮತ್ತು ತಳಮಟ್ಟದವರೆಗೆ ಅದರ ವ್ಯಾಪ್ತಿಯನ್ನು ವಿಸ್ತರಿಸಲು ಸಂಪುಟದ ಅನುಮೋದನೆ

Posted On: 15 FEB 2023 3:49PM by PIB Bengaluru
  • ಸಹಕಾರ ಸಂಘಗಳ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಪಂಚಾಯತ್‌ಗಳಲ್ಲಿ ಕಾರ್ಯಸಾಧ್ಯವಾದ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿಎಸಿಎಸ್) ಸ್ಥಾಪಿಸುವುದು, ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಪಂಚಾಯತ್/ಗ್ರಾಮದಲ್ಲಿ ಕಾರ್ಯಸಾಧ್ಯವಾದ ಡೈರಿ ಸಹಕಾರ ಸಂಘಗಳು ಮತ್ತು ಕರಾವಳಿಯ ಪ್ರತಿ ಪಂಚಾಯತ್/ಗ್ರಾಮಗಳಲ್ಲಿ ಹಾಗೂ ದೊಡ್ಡ ಜಲಮೂಲಗಳನ್ನು ಹೊಂದಿರುವ ಪಂಚಾಯತ್/ಗ್ರಾಮಗಳಲ್ಲಿ ಕಾರ್ಯಸಾಧ್ಯವಾದ ಮೀನುಗಾರಿಕಾ ಸಹಕಾರ ಸಂಘಗಳನ್ನು ಸ್ಥಾಪಿಸುವುದು ಮತ್ತು ಅಸ್ತಿತ್ವದಲ್ಲಿರುವ ಪಿ ಎ ಸಿ ಎಸ್‌ /ಹೈನುಗಾರಿಕೆ/ಮೀನುಗಾರಿಕೆ ಸಹಕಾರ ಸಂಘಗಳನ್ನು ಬಲಪಡಿಸುವುದು
  • ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ವಿವಿಧೋದ್ದೇಶ ಪಿಎಸಿಎಸ್‌/ ಡೈರಿ/ ಮೀನುಗಾರಿಕೆ ಸಹಕಾರ ಸಂಘಗಳನ್ನು ಸ್ಥಾಪಿಸುವ ಆರಂಭಿಕ ಗುರಿ.
  • ನಬಾರ್ಡ್, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ ಡಿ ಡಿ ಬಿ) ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ ಎಫ್‌ ಡಿ ಬಿ) ಯ ಬೆಂಬಲದೊಂದಿಗೆ 'ಇಡೀ-ಸರ್ಕಾರ' ವಿಧಾನವನ್ನು ಸದುಪಯೋಗಪಡಿಸಿಕೊಂಡು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವಿವಿಧ ಯೋಜನೆಗಳನ್ನು ಸಮನ್ವಯದ ಮೂಲಕ ಕಾರ್ಯಗತಗೊಳಿಸಲು ಯೋಜನೆ.
  • ಪಿಎಸಿಎಸ್‌/ಡೈರಿ/ಮೀನುಗಾರಿಕೆ ಸಹಕಾರ ಸಂಘಗಳು ತಮ್ಮ ವ್ಯಾಪಾರ ಚಟುವಟಿಕೆಗಳನ್ನು ವೈವಿಧ್ಯಗೊಳಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಸ್ಥಾಪಿಸಲು ಮತ್ತು ಆಧುನೀಕರಿಸಲು ಅವಕಾಶ ಒದಗಿಸಲಾಗುವುದು.
  • ರೈತ ಸದಸ್ಯರಿಗೆ ತಮ್ಮ ಉತ್ಪನ್ನಗಳನ್ನು ಮಾರಲು, ಅವರ ಆದಾಯವನ್ನು ಹೆಚ್ಚಿಸಲು, ಗ್ರಾಮ ಮಟ್ಟದಲ್ಲಿ ಸಾಲ ಸೌಲಭ್ಯಗಳು ಮತ್ತು ಇತರ ಸೇವೆಗಳನ್ನು ಪಡೆಯಲು ಅಗತ್ಯವಾದ ಸಂಪರ್ಕಗಳನ್ನು ಒದಗಿಸಲಾಗುವುದು.

 

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ದೇಶದಲ್ಲಿ ಸಹಕಾರ ಚಳುವಳಿಯನ್ನು ಬಲಪಡಿಸಲು ಮತ್ತು ತಳಮಟ್ಟದವರೆಗೆ ಅದರ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಮತ್ತು ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಹಕಾರ ಸಚಿವಾಲಯವು, ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಪಂಚಾಯತ್‌ನಲ್ಲಿ ಕಾರ್ಯಸಾಧ್ಯವಾದ ಪಿಎಸಿಎಸ್, ಪ್ರತಿ ಪಂಚಾಯತ್/ಗ್ರಾಮಗಳಲ್ಲಿ ಕಾರ್ಯಸಾಧ್ಯವಾದ ಡೈರಿ ಸಹಕಾರ ಸಂಘಗಳು ಮತ್ತು ಕರಾವಳಿಯ ಪ್ರತಿ ಪಂಚಾಯತ್/ಗ್ರಾಮಗಳಲ್ಲಿ ಹಾಗೂ ದೊಡ್ಡ ಜಲಮೂಲಗಳನ್ನು ಹೊಂದಿರುವ ಪಂಚಾಯತ್/ಗ್ರಾಮಗಳಲ್ಲಿ ಕಾರ್ಯಸಾಧ್ಯವಾದ ಮೀನುಗಾರಿಕಾ ಸಹಕಾರ ಸಂಘಗಳನ್ನು ಸ್ಥಾಪಿಸಲು ಮತ್ತು ಅಸ್ತಿತ್ವದಲ್ಲಿರುವ ಪಿಎಸಿಎಸ್/ಡೈರಿಯನ್ನು ಬಲಪಡಿಸಲು ಯೋಜನೆಯನ್ನು ರೂಪಿಸಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ವಿವಿಧ ಯೋಜನೆಗಳ ಸಮನ್ವಯದಲ್ಲಿ 'ಇಡೀ-ಸರ್ಕಾರದ' ವಿಧಾನವನ್ನು ಬಳಸಿಕೊಳ್ಳಲಿದೆ. ಆರಂಭದಲ್ಲಿ, ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಪಿಎಸಿಎಸ್/ ಡೈರಿ/ ಮೀನುಗಾರಿಕಾ ಸಹಕಾರ ಸಂಘಗಳನ್ನು ಸ್ಥಾಪಿಸಲಾಗುವುದು. ಯೋಜನೆಯ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆಯನ್ನು ನಬಾರ್ಡ್, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ ಡಿ ಡಿ ಬಿ) ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (ಎನ್‌ ಎಫ್‌ ಡಿ ಬಿ) ಸಿದ್ಧಪಡಿಸುತ್ತವೆ.

ಪ್ರಸ್ತುತ ಯೋಜನೆಯಡಿಯಲ್ಲಿ ಸಮನ್ವಯಕ್ಕಾಗಿ ಈ ಕೆಳಗಿನ ಯೋಜನೆಗಳನ್ನು ಗುರುತಿಸಲಾಗಿದೆ:

.        ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ:

‌            i.          ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್‌ ಪಿ ಡಿ ಡಿ), ಮತ್ತು

ii          ಡೈರಿ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಧಿ (ಡಿ ಐ ಡಿ ಎಫ್)

ಬಿ.   ಮೀನುಗಾರಿಕೆ ಇಲಾಖೆ:

i.          ಪ್ರಧಾನ ಮಂತ್ರಿ ಮತ್ಸ್ಯ ಸಂಪದಾ ಯೋಜನೆ (ಪಿ ಎಂ ಎಂ ಎಸ್‌ ವೈ), ಮತ್ತು

ii          ಮೀನುಗಾರಿಕೆ ಮತ್ತು ಜಲಕೃಷಿ ಮೂಲಸೌಕರ್ಯ ಅಭಿವೃದ್ಧಿ (ಎಫ್‌ ಐ ಡಿ ಎಫ್)‌

ಇದು ದೇಶದಾದ್ಯಂತ ಇರುವ ರೈತ ಸದಸ್ಯರಿಗೆ ತಮ್ಮ ಉತ್ಪನ್ನಗಳನ್ನು ಮಾರಲು, ಅವರ ಆದಾಯವನ್ನು ಹೆಚ್ಚಿಸಲು, ಗ್ರಾಮ ಮಟ್ಟದಲ್ಲಿಯೇ ಸಾಲ ಸೌಲಭ್ಯಗಳು ಮತ್ತು ಇತರ ಸೇವೆಗಳನ್ನು ಪಡೆಯಲು ಅಗತ್ಯವಾದ ಸಂಪರ್ಕಗಳನ್ನು ಇದು ಒದಗಿಸುತ್ತದೆ. ಪುನರುಜ್ಜೀವನಗೊಳ್ಳಲು ಸಾಧ್ಯವಾಗದ ಪ್ರಾಥಮಿಕ ಸಹಕಾರ ಸಂಘಗಳನ್ನು ಮುಚ್ಚಲು ಗುರುತಿಸಲಾಗುವುದು ಮತ್ತು ಅವುಗಳು ಕಾರ್ಯನಿರ್ವಹಿಸುತ್ತಿದ್ದ ಪ್ರದೇಶದಲ್ಲಿ ಹೊಸ ಪ್ರಾಥಮಿಕ ಸಹಕಾರ ಸಂಘಗಳನ್ನು ಸ್ಥಾಪಿಸಲಾಗುವುದು.

ಇದಲ್ಲದೆ, ಹೊಸ ಪಿಎಸಿಎಸ್/ಡೈರಿ/ಮೀನುಗಾರಿಕೆ ಸಹಕಾರ ಸಂಘಗಳನ್ನು ಸ್ಥಾಪಿಸುವುದು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಇದು ಗ್ರಾಮೀಣ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಯೋಜನೆಯು ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಗಳನ್ನು ಪಡೆಯಲು, ಅವರ ಮಾರುಕಟ್ಟೆಯ ಗಾತ್ರವನ್ನು ವಿಸ್ತರಿಸಲು ಮತ್ತು ಸರಬರಾಜು ಸರಪಳಿಗೆ ಸೇರಲು ಅನುವು ಮಾಡಿಕೊಡುತ್ತದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವರೊಂದಿಗೆ ಗೃಹ ಮತ್ತು ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಅಂತರ-ಸಚಿವಾಲಯ ಸಮಿತಿ (ಐಎಂಸಿ)ಯನ್ನು ರಚಿಸಲಾಗಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರು; ಸಂಬಂಧಪಟ್ಟ ಕಾರ್ಯದರ್ಶಿಗಳು; ನಬಾರ್ಡ್‌, ಎನ್‌ ಡಿ ಡಿ ಬಿ ಅಧ್ಯಕ್ಷರು ಮತ್ತು ಎನ್‌ ಎಫ್‌ ಡಿ ಬಿ ಮುಖ್ಯ ಕಾರ್ಯನಿರ್ವಾಹಕರು ಸಮಿತಿಯ ಸದಸ್ಯರಾಗಿದ್ದಾರೆ. ಯೋಜನೆಯ ಸುಗಮ ಅನುಷ್ಠಾನಕ್ಕಾಗಿ ಸಮನ್ವಯಗೊಳಿಸಲು ಗುರುತಿಸಲಾದ ಯೋಜನೆಗಳ ಮಾರ್ಗಸೂಚಿಗಳಲ್ಲಿ ಸೂಕ್ತ ಮಾರ್ಪಾಡುಗಳು ಒಳಗೊಂಡಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಮಿತಿಗೆ ಅಧಿಕಾರವನ್ನು ನೀಡಲಾಗಿದೆ. ಕ್ರಿಯಾ ಯೋಜನೆಯ ಕೇಂದ್ರೀಕೃತ ಮತ್ತು ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ಸಹ ರಚಿಸಲಾಗಿದೆ.

ಪಿಎಸಿಎಸ್ ನ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು ಮತ್ತು ಪಂಚಾಯತ್ ಮಟ್ಟದಲ್ಲಿ ಅವುಗಳನ್ನು ಪ್ರಮುಖ ಆರ್ಥಿಕ ಘಟಕಗಳನ್ನಾಗಿ ಮಾಡಲು, ಅವುಗಳ ವ್ಯಾಪಾರ ಚಟುವಟಿಕೆಗಳನ್ನು ವೈವಿಧ್ಯಗೊಳಿಸಲು, ಪಿಎಸಿಎಸ್‌ ನ ಮಾದರಿ ಬೈಲಾಗಳನ್ನು ಎಲ್ಲಾ ಭಾಗೀದಾರರೊಂದಿಗೆ ಸಮಾಲೋಚಿಸಿದ ನಂತರ ಸಚಿವಾಲಯವು ಸಿದ್ಧಪಡಿಸಿದೆ. ಪಿಎಸಿಎಸ್‌ ನ ಈ ಮಾದರಿ ಬೈಲಾಗಳು ಡೈರಿ, ಮೀನುಗಾರಿಕೆ, ಗೋದಾಮುಗಳ ಸ್ಥಾಪನೆ, ಆಹಾರ ಧಾನ್ಯಗಳ ಸಂಗ್ರಹಣೆ, ರಸಗೊಬ್ಬರಗಳು, ಬೀಜಗಳು, ಎಲ್‌ ಪಿ ಜಿ/ಸಿ ಎನ್‌ ಜಿ/ಪೆಟ್ರೋಲ್/ಡೀಸೆಲ್ ವಿತರಣೆ, ಮತ್ತು ದೀರ್ಘಾವಧಿ ಮತ್ತು ಅಲ್ಪಾವಧಿಯ ಸಾಲ, ಕಸ್ಟಮ್ ನೇಮಕಾತಿ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು, ನ್ಯಾಯಬೆಲೆ ಅಂಗಡಿಗಳು, ಸಮುದಾಯ ನೀರಾವರಿ, ವ್ಯಾಪಾರ ಚಟುವಟಿಕೆಗಳು, ಸಾಮಾನ್ಯ ಸೇವಾ ಕೇಂದ್ರ, ಇತ್ಯಾದಿ 25 ಕ್ಕೂ ಹೆಚ್ಚು ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ.  ಆಯಾ ರಾಜ್ಯ ಸಹಕಾರಿ ಕಾಯಿದೆಗಳ ಪ್ರಕಾರ ಸೂಕ್ತ ಬದಲಾವಣೆಗಳನ್ನು ಮಾಡಿದ ನಂತರ ಪಿಎಸಿಎಸ್‌ ನಿಂದ ಅಳವಡಿಸಿಕೊಳ್ಳಲು ಮಾದರಿ ಬೈಲಾಗಳನ್ನು 5ನೇ ಜನವರಿ, 2023 ರಂದು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗಿದೆ.

ಸಹಕಾರ ಸಚಿವಾಲಯವು ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ಅನ್ನು ಸಹ ಸಿದ್ಧಪಡಿಸುತ್ತಿದೆ, ಅಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರ ಬೆಂಬಲದೊಂದಿಗೆ ಪಂಚಾಯತ್ ಮತ್ತು ಗ್ರಾಮ ಮಟ್ಟದಲ್ಲಿ ಸಹಕಾರಿಗಳ ದೇಶಾದ್ಯಂತ ಮ್ಯಾಪಿಂಗ್ ಅನ್ನು ಕೈಗೊಳ್ಳಲಾಗುತ್ತಿದೆ. ಜನವರಿ, 2023 ರಲ್ಲಿ ಪಿಎಸಿಎಸ್ ನ ಸಮಗ್ರ ಡೇಟಾಬೇಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಫೆಬ್ರವರಿ ಅಂತ್ಯದ ವೇಳೆಗೆ ಪ್ರಾಥಮಿಕ ಡೈರಿ / ಮೀನುಗಾರಿಕೆ ಸಹಕಾರ ಸಂಘಗಳ ಡೇಟಾಬೇಸ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಈ ಕೆಲಸವು ಪಿಎಸಿಎಸ್, ಡೈರಿ ಮತ್ತು ಮೀನುಗಾರಿಕೆ ಸಹಕಾರ ಸಂಘಗಳ ಸೇವೆಯಿಂದ ಹೊರಗಿರುವ ಪಂಚಾಯತ್‌ಗಳು ಮತ್ತು ಗ್ರಾಮಗಳ ಪಟ್ಟಿಯನ್ನು ಒದಗಿಸುತ್ತದೆ. ಹೊಸ ಸಹಕಾರ ಸಂಘಗಳ ರಚನೆಯ ನೈಜ ಸಮಯದ ಮೇಲ್ವಿಚಾರಣೆಗಾಗಿ ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ಮತ್ತು ಆನ್‌ಲೈನ್ ಕೇಂದ್ರೀಯ ಪೋರ್ಟಲ್ ಅನ್ನು ಬಳಸಿಕೊಳ್ಳಲಾಗುತ್ತದೆ.

ಪಿಎಸಿಎಸ್ / ಡೈರಿ / ಮೀನುಗಾರಿಕಾ ಸಹಕಾರ ಸಂಘಗಳನ್ನು ಆಯಾ ಜಿಲ್ಲಾ ಮತ್ತು ರಾಜ್ಯ ಮಟ್ಟದ ಒಕ್ಕೂಟಗಳೊಂದಿಗೆ ಲಿಂಕ್ ಮಾಡಲಾಗುತ್ತದೆ. 'ಇಡೀ-ಸರ್ಕಾರದ' ವಿಧಾನವನ್ನು ಬಳಸಿಕೊಳ್ಳುವ ಮೂಲಕ, ಈ ಸೊಸೈಟಿಗಳು ಹಾಲು ಪರೀಕ್ಷಾ ಪ್ರಯೋಗಾಲಯಗಳು, ಬೃಹತ್ ಹಾಲು ಕೂಲರ್‌ಗಳು, ಹಾಲು ಸಂಸ್ಕರಣಾ ಘಟಕಗಳು, ಬಯೋಫ್ಲೋಕ್ ಕೊಳಗಳ ನಿರ್ಮಾಣ, ಮೀನು ಕಿಯೋಸ್ಕ್‌ಗಳು, ಮರಿ ಮಾಡಿಸುವ ಮನೆಗಳ  ಅಭಿವೃದ್ಧಿ, ಆಳ ಸಮುದ್ರದ ಮೀನುಗಾರಿಕೆ ಹಡಗುಗಳನ್ನು ಹೊಂದುವುದು ಇತ್ಯಾದಿಗಳ ಮೂಲಕ ಅವುಗಳ ಚಟುವಟಿಕೆಗಳನ್ನು ವೈವಿಧ್ಯಗೊಳಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಸ್ಥಾಪಿಸಲು ಮತ್ತು ಆಧುನೀಕರಿಸಲು ಸಾಧ್ಯವಾಗುತ್ತದೆ.

ಸುಮಾರು 98,995 ರಷ್ಟಿರುವ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು (ಪಿಎಸಿಎಸ್) 13 ಕೋಟಿ ಸದಸ್ಯರನ್ನು ಹೊಂದಿವೆ. ಅಲ್ಪಾವಧಿ ಮತ್ತು ಮಧ್ಯಮಾವಧಿಯ ಸಾಲವನ್ನು ಒದಗಿಸುವ ಅಲ್ಪಾವಧಿಯ ಸಹಕಾರಿ ಕ್ರೆಡಿಟ್ (STCC) ರಚನೆಯನ್ನು ಹೊಂದಿವೆ ಮತ್ತು ಸದಸ್ಯ ರೈತರಿಗೆ ಬೀಜ, ರಸಗೊಬ್ಬರ, ಕೀಟನಾಶಕ ವಿತರಣೆ ಮುಂತಾದ ಇತರ ಕೆಲಸಗಳನ್ನು ಮಾಡುತ್ತಿವೆ. ಇವುಗಳಿಗೆ 352 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು (ಡಿಸಿಸಿಬಿ) ಮತ್ತು 34 ರಾಜ್ಯ ಸಹಕಾರಿ ಬ್ಯಾಂಕುಗಳು (ಎಸ್‌ ಟಿ ಸಿ ಬಿ) ಮೂಲಕ ನಬಾರ್ಡ್ ಮರುಹಣಕಾಸು ಮಾಡುತ್ತದೆ.

ಸುಮಾರು 1,99,182 ಪ್ರಾಥಮಿಕ ಡೈರಿ ಸಹಕಾರಿ ಸಂಘಗಳಿದ್ದು, ಸುಮಾರು 1.5 ಕೋಟಿ ಸದಸ್ಯರನ್ನು ಹೊಂದಿವೆ. ರೈತರಿಂದ ಹಾಲು ಸಂಗ್ರಹಣೆ, ಹಾಲಿನ ಪರೀಕ್ಷಾ ಸೌಲಭ್ಯಗಳು, ಜಾನುವಾರು ಆಹಾರ ಮಾರಾಟ, ವಿಸ್ತರಣೆ ಇತ್ಯಾದಿ ಸೇವೆಗಳನ್ನು ಸದಸ್ಯರಿಗೆ ಒದಗಿಸುತ್ತಿವೆ.

ಸುಮಾರು 25,297 ಪ್ರಾಥಮಿಕ ಮೀನುಗಾರಿಕಾ ಸಹಕಾರ ಸಂಘಗಳಿದ್ದು, ಸುಮಾರು 38 ಲಕ್ಷ ಸದಸ್ಯರನ್ನು ಹೊಂದಿವೆ. ಸಮಾಜದ ಅತ್ಯಂತ ಹಿಂದುಳಿದ ವರ್ಗವೊಂದಕ್ಕೆ ಸೇವೆ ಸಲ್ಲಿಸುತ್ತಿವೆ. ಅವರಿಗೆ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು, ಮೀನುಗಾರಿಕೆ ಉಪಕರಣಗಳು, ಮೀನಿನ ಮರಿ ಮತ್ತು ಆಹಾರ ಸಂಗ್ರಹಿಸಲು ಸಹಾಯ ಮಾಡುವುದು ಮತ್ತು ಸದಸ್ಯರಿಗೆ ಸೀಮಿತ ಪ್ರಮಾಣದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುವುದು ಇವುಗಳ ಕಾರ್ಯವಾಗಿದೆ.

ಆದಾಗ್ಯೂ, ಇನ್ನೂ 1.6 ಲಕ್ಷ ಪಂಚಾಯಿತಿಗಳಲ್ಲಿ ಪಿಎಸಿಎಸ್ ಮತ್ತು ಸುಮಾರು 2 ಲಕ್ಷ ಪಂಚಾಯಿತಿಗಳಲ್ಲಿ ಯಾವುದೇ ಡೈರಿ ಸಹಕಾರ ಸಂಘಗಳಿಲ್ಲ. ದೇಶದ ಗ್ರಾಮೀಣ ಆರ್ಥಿಕತೆಯನ್ನು ಸುಸ್ಥಿರಗೊಳಿಸುವಲ್ಲಿ ಈ ಪ್ರಾಥಮಿಕ ಹಂತದ ಸಹಕಾರಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿ, ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು, ತಳಮಟ್ಟದವರೆಗೆ ಅದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಸಂಘಟಿತ ಪ್ರಯತ್ನಗಳನ್ನು ಮಾಡುವ ಅಗತ್ಯವಿದೆ.

*****

 



(Release ID: 1899569) Visitor Counter : 329