ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸ್ವರಾಜ್ ಧಾರಾವಾಹಿಯು ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಬಿಂಜ್ ವಾಚ್ (ಹಲವು ಸಂಚಿಕೆಗಳನ್ನು ಒಟ್ಟಿಗೆ ನೋಡುವ) ಮಾದರಿಯಲ್ಲಿ ಪ್ರಸಾರವಾಗಲಿದೆ
Posted On:
08 FEB 2023 3:09PM by PIB Bengaluru
ಡಿಡಿ ನ್ಯಾಷನಲ್ ವಾಹಿನಿಯು 'ಸ್ವರಾಜ್' ಧಾರಾವಾಹಿಯನ್ನು ಬಿಂಜ್ ವಾಚ್ (ಹಲವು ಸಂಚಿಕೆಗಳನ್ನು ಒಟ್ಟಿಗೆ ನೋಡುವ) ಮಾದರಿಯಲ್ಲಿ ಶನಿವಾರ ಮತ್ತು ಭಾನುವಾರದಂದು 11ನೇ ಫೆಬ್ರವರಿ 2023 ರಿಂದ ಮಧ್ಯಾಹ್ನ 1 ಗಂಟೆಯಿಂದ ಪ್ರಸಾರ ಮಾಡುತ್ತದೆ.
ಪ್ರಸಾರ ವೇಳಾಪಟ್ಟಿ ಹೀಗಿದೆ:
ಸಂಚಿಕೆ ಸಂಖ್ಯೆ
|
ಮುಖ್ಯ ಪಾತ್ರ/ಘಟನೆ/ಸ್ಥಳ
|
ಕಾಲ
|
ಪ್ರಸಾರ ದಿನಾಂಕ
|
1 to 3
|
* ವಾಸ್ಕೋ ಡ ಗಾಮಾ
* ವಿಜಯನಗರ
* ರಾಣಿ ಅಬ್ಬಕ್ಕ
|
- 1498 – 24 Dec 1524
- 1336 – 1646
- 1525 – 1570
|
11.02.2023
|
4 to 6
|
* ಶಿವಪ್ಪ ನಾಯ್ಕ
* ಶಿವಾಜಿ
* ಕನ್ಹೋಜಿ ಆಂಗ್ರೆ
|
- 1645 – 1660
- 1674 – 3 April 1680
- 1689 – 1729
|
12.02.2023
|
7 to 9
|
* ಬಾಜಿ ರಾವ್
* ಚಿಮಾಜಿ ಅಪ್ಪಾ
* ಇಐಸಿ - ಫ್ರೆಂಚ್
|
- 17 April 1720 – 28 April 1740
- 1707 – 1740
- 1664 – 1794
|
18.02.2023
|
10 to 12
|
* ಐಇಸಿ - ಬ್ರಿಟಿಷ್
* ಮಾರ್ತಾಂಡ ವರ್ಮಾ
* ಪ್ಲಾಸಿ ಕದನ
|
- 1600 – 1 June 1874
- 1706 – 7 July 1758
- 23 June 1757
|
19.02.2023
|
13 to 15
|
* ಪುಲಿ ತೇವರ್
* ರಾಣಿ ವೇಲು ನಾಚಿಯಾರ್
* ವೀರಪಾಂಡ್ಯ ಕಟ್ಟಬೊಮ್ಮನ್ |
- 1715 – 1767
- 3 Jan. 1730 – 25 Dec. 1716
- 1760 – 16 Dec. 1799
|
25.02.2023
|
16 to 18
|
* ಪಳಸಿ ರಾಜ
* ಸನ್ಯಾಸಿ ಚಳುವಳಿ
* ಬಕ್ಷಿ ಜಗಬಂಧು ಪೈಕಾ ನಾಯಕರು
|
- 1774 – 30 Nov. 1805
- 1770
- May 1817 – Dec.
1818
|
26.02.2023
|
19 to 21
|
* ವಜೀರ್ ಅಲಿ
* ವೇಲು ತಂಪಿ ದಳವ
* ತಿಲ್ಕಾ ಮಾಂಝಿ
|
- 19 April 1780 – 15 May 1817
- 1802 – 17 July 1835
- 29 Dec. 1856 – 13 August 1891
|
04.03.2023
|
22 to 24
|
* ಹತ್ರಾಸ್ ದಂಗೆ (ರಾಜಾ ದಯಾರಾಮ್)
* ಯು ತಿರೋತ್ ಸಿಂಗ್
* ಸಿದ್ಧೋ ಕಾಣೋ ಮುರ್ಮು
|
- 1818
- 1802-17 July 1835
- 1855-56
|
05.03.2023
|
'ಸ್ವರಾಜ್ - ಭಾರತ್ ಕೆ ಸ್ವತಂತ್ರತಾ ಸಂಗ್ರಾಮ್ ಕಿ ಸಮಗ್ರ ಗಾಥಾ', 75-ಕಂತುಗಳ ಮೆಗಾ ಧಾರಾವಾಹಿಯಾಗಿದ್ದು, ವಾಸ್ಕೋ-ಡ-ಗಾಮ ಭಾರತಕ್ಕೆ ಬಂದಿಳಿದ 15 ನೇ ಶತಮಾನದಿಂದ ಭಾರತದ ಸ್ವಾತಂತ್ರ್ಯ ಹೋರಾಟದ ವೈಭವದ ಇತಿಹಾಸವನ್ನು ವಿವರಿಸುತ್ತದೆ. ಈ ಧಾರಾವಾಹಿಯು ಭಾರತೀಯ ಇತಿಹಾಸದ ಹಲವಾರು ಅಂಶಗಳನ್ನು ಪ್ರದರ್ಶಿಸುತ್ತದೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಎಲೆಮರೆ ಕಾಯಿಗಳಂತೆ ಉಳಿದ ವೀರರ ಜೀವನ ಮತ್ತು ತ್ಯಾಗಗಳನ್ನು ಒಳಗೊಂಡಿದೆ.
ಸ್ವರಾಜ್ ಧಾರಾವಾಹಿಯನ್ನು 5 ಆಗಸ್ಟ್ 2022 ರಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದರು. ಧಾರಾವಾಹಿಯ ಪ್ರಸಾರವು 14 ಆಗಸ್ಟ್ 2022 ರಂದು ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಹಿಂದಿಯಲ್ಲಿ ಮತ್ತು ನಂತರ ದೂರದರ್ಶನದ ಪ್ರಾದೇಶಿಕ ನೆಟ್‌ವರ್ಕ್‌ನಲ್ಲಿ ಒಂಬತ್ತು ಪ್ರಾದೇಶಿಕ ಭಾಷೆಗಳಲ್ಲಿ (ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ, ಬೆಂಗಾಲಿ, ಒಡಿಯಾ ಮತ್ತು ಅಸ್ಸಾಮಿ) ಪ್ರಾರಂಭವಾಯಿತು. ಹಿಂದಿಯಲ್ಲಿ ಸ್ವರಾಜ್‌ನ ಪ್ರತಿ ಹೊಸ ಸಂಚಿಕೆಯನ್ನು ಡಿಡಿ ನ್ಯಾಷನಲ್‌ನಲ್ಲಿ ಭಾನುವಾರ ಬೆಳಗ್ಗೆ 9 ಮತ್ತು ರಾತ್ರಿ 9 ಗಂಟೆಗೆ ಪ್ರಸಾರ ಮಾಡಲಾಗುತ್ತದೆ ಮತ್ತು ಮಂಗಳವಾರ, ಬುಧವಾರ ಮತ್ತು ಗುರುವಾರ ಮಧ್ಯಾಹ್ನ 1 ಗಂಟೆಗೆ ಮತ್ತು ಶನಿವಾರ ರಾತ್ರಿ 9 ಗಂಟೆಗೆ ಮರು ಪ್ರಸಾರವಾಗುತ್ತದೆ. ಶನಿವಾರ ಬೆಳಗ್ಗೆ 11 ಗಂಟೆಯಿಂದ ಆಕಾಶವಾಣಿ ನೆಟ್‌ವರ್ಕ್‌ನಲ್ಲಿ ಆಡಿಯೊ ಆವೃತ್ತಿಯನ್ನು ಪ್ರಸಾರ ಮಾಡಲಾಗುತ್ತದೆ.
*****
(Release ID: 1897406)
Visitor Counter : 206