ಹಣಕಾಸು ಸಚಿವಾಲಯ

ಯುವಕರನ್ನು ಸಶಕ್ತಗೊಳಿಸಲು ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಲು 'ಅಮೃತ್ ಪೀಡಿ – ಅಮೃತ್ ಪೀಳಿಗೆ'ಗೆ ನೆರವಾಗಲು ರೂಪಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ


ಲಕ್ಷಾಂತರ ಯುವಕರಿಗೆ ಕೌಶಲ್ಯ ತರಬೇತಿ ನೀಡಲು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ 4.0 ಪ್ರಾರಂಭ

ವಿವಿಧ ರಾಜ್ಯಗಳಲ್ಲಿ 30 ಸ್ಕಿಲ್ ಇಂಡಿಯಾ ಅಂತಾರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

3 ವರ್ಷಗಳಲ್ಲಿ 47 ಲಕ್ಷ ಯುವಕರಿಗೆ ಸ್ಟೈಪೆಂಡ್ ಬೆಂಬಲ ಒದಗಿಸಲು ನೇರ ಸವಲತ್ತು ವರ್ಗಾವಣೆ ಜಾರಿ

ಕೌಶಲ್ಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ಏಕೀಕೃತ ಸ್ಕಿಲ್ ಇಂಡಿಯಾ ಡಿಜಿಟಲ್ ವೇದಿಕೆ ಪ್ರಾರಂಭ

Posted On: 01 FEB 2023 1:22PM by PIB Bengaluru

ನಮ್ಮ ಯುವಕರನ್ನು ಸಬಲೀಕರಣಗೊಳಿಸಲು ಮತ್ತು ಅವರ ಕನಸುಗಳನ್ನು ನನಸಾಗಿಸಲು 'ಅಮೃತ ಪೀಡಿ – ಅಮೃತ ಪೀಳಿಗೆ'ಗೆ ಸಹಾಯ ಮಾಡಲು, ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದ್ದೇವೆ, ಕೌಶಲ್ಯದ ಮೇಲೆ ಕೇಂದ್ರೀಕರಿಸಿದ್ದೇವೆ, ಉದ್ಯೋಗ ಸೃಷ್ಟಿಗೆ ಅನುಕೂಲವಾಗುವಂತಹ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡಿದ್ದೇವೆ ಮತ್ತು ವ್ಯಾಪಾರ ಅವಕಾಶಗಳನ್ನು ಬೆಂಬಲಿಸಿದ್ದೇವೆ ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2023-2024 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುವಾಗ ಹೇಳಿದರು.

ಕೇಂದ್ರ ಬಜೆಟ್ 2023-2024 ಏಳು ಆದ್ಯತೆಗಳನ್ನು ಅಳವಡಿಸಿಕೊಂಡಿದೆ, ಅವು ಪರಸ್ಪರ ಪೂರಕವಾಗಿವೆ ಮತ್ತು  ಅಮೃತ ಕಾಲದ ಮೂಲಕ ನಮಗೆ ಮಾರ್ಗದರ್ಶನ ನೀಡುವ  'ಸಪ್ತರ್ಷಿ'ಯಾಗಿ ಕಾರ್ಯನಿರ್ವಹಿಸುತ್ತವೆ.  ಕೌಶಲ್ಯ ಅಭಿವೃದ್ಧಿಯನ್ನು ಒಳಗೊಂಡಿರುವ ಆದ್ಯತೆಯ ಕ್ಷೇತ್ರಗಳಲ್ಲಿ ಯುವ ಶಕ್ತಿ ಒಂದಾಗಿದೆ.

ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ 4.0

ಮುಂದಿನ ಮೂರು ವರ್ಷಗಳಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯ ನೀಡಲು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ 4.0 ಅನ್ನು ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು. ಈ ಯೋಜನೆಯು ಉದ್ಯೋಗ ತರಬೇತಿ, ಉದ್ಯಮ ಪಾಲುದಾರಿಕೆ ಮತ್ತು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಕೋರ್ಸ್ ಗಳ ಜೋಡಣೆಗೆ ಒತ್ತು ನೀಡುತ್ತದೆ. ಈ ಯೋಜನೆಯು ಕೋಡಿಂಗ್, ಎಐ, ರೊಬೊಟಿಕ್ಸ್, ಮೆಕಾಟ್ರಾನಿಕ್ಸ್, ಐಒಟಿ, 3 ಡಿ ಪ್ರಿಂಟಿಂಗ್, ಡ್ರೋನ್ ಗಳು ಮತ್ತು ಮೃದು ಕೌಶಲದಂತಹ ಇಂಡಸ್ಟ್ರಿ 4.0 ಗಾಗಿ ಹೊಸ ಯುಗದ ಕೋರ್ಸ್ ಗಳನ್ನು ಸಹ ಒಳಗೊಳ್ಳುತ್ತದೆ ಎಂದು ಅವರು ಒತ್ತಿ ಹೇಳಿದರು.

ಶ್ರೀಮತಿ ಸೀತಾರಾಮನ್ ಅವರು ಅಂತಾರಾಷ್ಟ್ರೀಯ ಅವಕಾಶಗಳಿಗಾಗಿ ಯುವಕರನ್ನು ಕೌಶಲ್ಯಗೊಳಿಸಲು ವಿವಿಧ ರಾಜ್ಯಗಳಲ್ಲಿ 30 ಕೌಶಲ ಭಾರತ (ಸ್ಕಿಲ್ ಇಂಡಿಯಾ) ಅಂತಾರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಪ್ರಸ್ತಾಪಿಸಿದರು.

ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಉತ್ತೇಜನ ಯೋಜನೆ

ಮೂರು ವರ್ಷಗಳಲ್ಲಿ 47 ಲಕ್ಷ ಯುವಕರಿಗೆ ಸ್ಟೈಪೆಂಡ್ ಬೆಂಬಲವನ್ನು ಒದಗಿಸಲು ಭಾರತಾದ್ಯಂತ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಉತ್ತೇಜನ ಯೋಜನೆಯಡಿ ನೇರ ಸವಲತ್ತು ವರ್ಗಾವಣೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಘೋಷಿಸಿದರು.

ಏಕೀಕೃತ ಸ್ಕಿಲ್ ಇಂಡಿಯಾ ಡಿಜಿಟಲ್ ವೇದಿಕೆ

ಏಕೀಕೃತ ಕೌಶಲ ಭಾರತ ಡಿಜಿಟಲ್ ವೇದಿಕೆಯನ್ನು ಪ್ರಾರಂಭಿಸುವುದರೊಂದಿಗೆ ಕೌಶಲ್ಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಶ್ರೀಮತಿ ಸೀತಾರಾಮನ್ ಮಾಹಿತಿ ನೀಡಿದರು. 

 •    ಬೇಡಿಕೆ ಆಧಾರಿತ ಔಪಚಾರಿಕ ಕೌಶಲ್ಯವನ್ನು ಸಕ್ರಿಯಗೊಳಿಸುತ್ತದೆ

•    ಎಂ.ಎಸ್.ಎಂ.ಇ.ಗಳು ಸೇರಿದಂತೆ ಉದ್ಯೋಗದಾತರೊಂದಿಗೆ ಸಂಪರ್ಕ

•    ಉದ್ಯಮಶೀಲತಾ ಯೋಜನೆಗಳಿಗೆ ಪ್ರವೇಶವನ್ನು ಸುಗಮಗೊಳಿಸುತ್ತದೆ ಎಂದು ಅವರು ಹೇಳಿದರು

******(Release ID: 1895620) Visitor Counter : 246