ಹಣಕಾಸು ಸಚಿವಾಲಯ
azadi ka amrit mahotsav

157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ


ಬಾಧಿತ ಬುಡಕಟ್ಟು ಪ್ರದೇಶಗಳಲ್ಲಿ 7 ಕೋಟಿ ಜನರ ಸಾರ್ವತ್ರಿಕ ತಪಾಸಣೆಯೊಂದಿಗೆ ಸಿಕಲ್ ಸೆಲ್ ಅನಿಮಿಯಾ ನಿರ್ಮೂಲನೆ ಅಭಿಯಾನ ಪ್ರಾರಂಭ

ಸಾರ್ವಜನಿಕ ಮತ್ತು ಖಾಸಗಿ ವಲಯದ ಸಹಯೋಗದೊಂದಿಗೆ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು ಆಯ್ದ ಐಸಿಎಂಆರ್ ಲ್ಯಾಬ್‌ಗಳಲ್ಲಿ ಸೌಲಭ್ಯಗಳು ಲಭ್ಯವಾಗಲಿವೆ

ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು ಹೊಸ ಕಾರ್ಯಕ್ರಮದ ಘೋಷಣೆ

ಅಸ್ತಿತ್ವದಲ್ಲಿರುವ ಸಂಸ್ಥೆಗಳಲ್ಲಿ ವೈದ್ಯಕೀಯ ಸಾಧನಗಳಿಗಾಗಿ ಮೀಸಲಾದ ಬಹುವಿಧದ ಕೋರ್ಸ್‌ಗಳು

Posted On: 01 FEB 2023 1:31PM by PIB Bengaluru

ಲ್ಲಾ ವರ್ಗದ ನಾಗರಿಕರನ್ನು, ವಿಶೇಷವಾಗಿ ಯುವಜನತೆ, ಮಹಿಳೆಯರು, ರೈತರು, ಹಿಂದುಳಿದ ವರ್ಗದ ಜನರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರನ್ನು ತಲುಪುವ ಸಮೃದ್ಧ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತವನ್ನು ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2023-24ರ ಕೇಂದ್ರ ಬಜೆಟ್ ಮಂಡಿಸಿದರು.

ಹೊಸ ನರ್ಸಿಂಗ್ ಕಾಲೇಜುಗಳು

ಸ್ವತಂತ್ರ ಭಾರತವಾಗಿ 100ನೇ ವರ್ಷದಲ್ಲಿ ಮತ್ತು ಅಮೃತ್ ಕಾಲದ ದೃಷ್ಟಿಗೆ ಅನುಗುಣವಾಗಿ, ಹಣಕಾಸು ಸಚಿವರು 2014 ರಿಂದ ಸ್ಥಾಪಿಸಲಾದ ಅಸ್ತಿತ್ವದಲ್ಲಿರುವ 157 ವೈದ್ಯಕೀಯ ಕಾಲೇಜುಗಳೊಂದಿಗೆ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸುವುದಾಗಿ ಘೋಷಿಸಿದರು.

ಸಿಕಲ್ ಸೆಲ್ ಅನೀಮಿಯಾ ಎಲಿಮಿನೇಷನ್ ಮಿಷನ್

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಸಿಕಲ್ ಸೆಲ್ ಅನೀಮಿಯಾ ಎಲಿಮಿನೇಷನ್ ಮಿಷನ್ ನ್ನು ಪ್ರಾರಂಭಿಸುವುದಾಗಿ ಘೋಷಿಸಿದರು, ಇದು ಬುಡಕಟ್ಟು ಪ್ರದೇಶಗಳಲ್ಲಿ 0-40 ವರ್ಷ ವಯಸ್ಸಿನ 7 ಕೋಟಿ ಜನರ ಸಾರ್ವತ್ರಿಕ ತಪಾಸಣೆ ಮತ್ತು ಕೇಂದ್ರ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ ಸಹಯೋಗದ ಪ್ರಯತ್ನಗಳ ಮೂಲಕ ಕೌನ್ಸೆಲಿಂಗ್ ನ್ನು ಒಳಗೊಂಡಿರುತ್ತದೆ.

ಸಂಶೋಧನೆ ಮತ್ತು ಅಭಿವೃದ್ಧಿಗೆ ಐಸಿಎಂಆರ್ ಪ್ರಯೋಗಾಲಯಗಳು:

ವೈದ್ಯಕೀಯ ವಲಯ ಮತ್ತು ನಾವೀನ್ಯದಲ್ಲಿ ಸಂಶೋಧನೆಯನ್ನು ಉತ್ತೇಜಿಸಲು, ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಅಧ್ಯಾಪಕರು ಮತ್ತು ಖಾಸಗಿ ವಲಯದ ಸಂಶೋಧನೆ ಮತ್ತು ಅಭಿವೃದ್ಧಿ ತಂಡಗಳಿಗೆ ಆಯ್ದ ಐಸಿಎಂಆರ್ ಪ್ರಯೋಗಾಲಯಗಳಲ್ಲಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

ಫಾರ್ಮಾ ವಲಯದಲ್ಲಿ ಸಂಶೋಧನೆ ಮತ್ತು ನಾವೀನ್ಯ:

ಔಷಧೀಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು ಹೊಸ ಕಾರ್ಯಕ್ರಮವನ್ನು ಶ್ರೇಷ್ಠತೆಯ ಕೇಂದ್ರಗಳ ಮೂಲಕ ತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು. "ನಿರ್ದಿಷ್ಟ ಆದ್ಯತೆಯ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಲು ನಾವು ಉದ್ಯಮವನ್ನು ಪ್ರೋತ್ಸಾಹಿಸುತ್ತೇವೆ" ಎಂದು ಬಜೆಟ್ ಮಂಡನೆ ವೇಳೆ ಘೋಷಿಸಿದರು.

ವೈದ್ಯಕೀಯ ಸಾಧನಗಳಿಗಾಗಿ ಮೀಸಲಾದ ಬಹುಶಿಸ್ತೀಯ ಕೋರ್ಸ್‌ಗಳು:

ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯದ ವೈದ್ಯಕೀಯ ತಂತ್ರಜ್ಞಾನಗಳು ಮತ್ತು ಉನ್ನತ-ಮಟ್ಟದ ತಯಾರಿಕೆಯ ಪ್ರಾಮುಖ್ಯವನ್ನು ಪ್ರಸ್ತಾಪಿಸಿದ ಸಚಿವೆ, ಭವಿಷ್ಯದ ವೈದ್ಯಕೀಯ ತಂತ್ರಜ್ಞಾನಗಳು, ಉನ್ನತ-ಮಟ್ಟದ ಉತ್ಪಾದನೆ ಮತ್ತು ಸಂಶೋಧನೆಗಾಗಿ ನುರಿತ ಮಾನವಶಕ್ತಿಯ ಲಭ್ಯತೆಯನ್ನು ನೀಡಲು ವೈದ್ಯಕೀಯ ಸಾಧನಗಳಿಗಾಗಿ ಮೀಸಲಾದ ಬಹುಶಿಸ್ತೀಯ ಕೋರ್ಸ್‌ಗಳನ್ನು ಅಸ್ತಿತ್ವದಲ್ಲಿರುವ ಸಂಸ್ಥೆಗಳಲ್ಲಿ ಬೆಂಬಲಿಸಲಾಗುವುದು ಎಂದು ಹೇಳಿದರು.

*****


(Release ID: 1895615) Visitor Counter : 258