ಹಣಕಾಸು ಸಚಿವಾಲಯ

ಸಾಂಕ್ರಾಮಿಕದ ಜಾಗತಿಕ ಆತಂಕ ಮತ್ತು ರಷ್ಯಾ - ಉಕ್ರೇನ್ ಸಂಘರ್ಷದ ಜಾಗತಿಕ ಆಘಾತದಿಂದ ಉಂಟಾದ ಸರಕುಗಳ ಬಿಕ್ಕಟ್ಟಿನ ಸ್ಥಿತಿ ತಿಳಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ದಶಕಗಳಲ್ಲಿ ಭಾರತ ವೇಗವಾಗಿ ಬೆಳೆಯಲು ಸನ್ನದ್ಧವಾಗಿದೆ


ಬ್ಯಾಂಕಿಂಗ್,ಬ್ಯಾಂಕಿಂಗೇತರ ಮತ್ತು ಕಾರ್ಪೊರೇಟ್ ವಲಯಗಳ ವ್ಯವಹಾರಗಳಲ್ಲಿ ಸುಧಾರಣೆಗಳೊಂದಿಗೆ, ಕಳೆದ ಕೆಲ ತಿಂಗಳುಗಳಲ್ಲಿ ಬ್ಯಾಂಕ್ ಕ್ರೆಡಿಟ್ ನಲ್ಲಿ ಎರಡಂಕಿಯ ವೃದ್ಧಿ ಕಂಡುಬಂದಿರುವುದು ಹೊಸ ಕ್ರೆಡಿಟ್ ಸೈಕಲ್ ಪ್ರಾರಂಭವಾಗಿದೆ ಎಂಬುದನ್ನು ಸ್ಪಷ್ಟವಾಗಿಸಿದೆ 

ಡಿಜಿಟಲ್ ಟೆಕ್ನಾಲಜಿ- ಆಧಾರಿತ ಆರ್ಥಿಕ ಸುಧಾರಣೆಗಳಿಂದ ದೊರೆತ ಹೆಚ್ಚಿನ ಆರ್ಥಿಕ ಅವಕಾಶಗಳು, ಹೆಚ್ಚಿನ ಆರ್ಥಿಕ ಸೇರ್ಪಡೆ ಮತ್ತು ಹೆಚ್ಚಿನ ಔಪಚಾರಿಕತೆಯ ಪರಿಣಾಮವಾಗಿ ದಕ್ಷತೆ ಹೆಚ್ಚಿ ಲಾಭವಾಗಿ ಪರಿಣಾಮ ಆರ್ಥಿಕತೆ ಹೆಚ್ಚೆಚ್ಚು ಲಾಭ ಹೊಂದಲಾರಂಭಿಸಿದೆ

ಭಾರತದ ಬೆಳವಣಿಗೆಯ ಮುನ್ನೋಟ ಸಾಂಕ್ರಾಮಿಕ ಪೂರ್ವ ವರ್ಷಗಳಿಗಿಂತ ಉತ್ತಮವಾಗಿದೆ ಎಂದು ತೋರುತ್ತಿದೆ ಮತ್ತು ಮಧ್ಯಮ ಅವಧಿಯಲ್ಲಿ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯಲು ಸಿದ್ಧವಾಗಿದೆ

ಮಧ್ಯಮ-ಅವಧಿಯ ಉತ್ತಮ ಬೆಳವಣಿಗೆಯ ಅಂಶಗಳು ಭಾರತದ ಆರ್ಥಿಕ  ಅಭಿವೃದ್ಧಿಗೆ ಸಹಾಯ ಮಾಡಲಿವೆ

2014-2022 ರ ನಡುವೆ ಕೈಗೊಂಡ ವಿವಿಧ ಸುಧಾರಣೆಗಳು ಭಾರತೀಯ ಆರ್ಥಿಕತೆಯನ್ನು ಬಲಪಡಿಸಿವೆ

ಜೀವನ ಮತ್ತು ವ್ಯಾಪಾರ ಸರಳೀಕರಣ ಸುಧಾರಣೆಗಳ ಬಗ್ಗೆ ಹೆಚ್ಚಿನ ಒತ್ತು

Posted On: 31 JAN 2023 1:58PM by PIB Bengaluru

2014-2022 ಅವಧಿಯಲ್ಲಿ, ಭಾರತೀಯ ಆರ್ಥಿಕತೆಯು ಒಟ್ಟಾರೆ ದಕ್ಷತೆಯನ್ನು ವೃದ್ಧಿಸುವ ಮೂಲಕ ಆರ್ಥಿಕತೆಯ ಮೂಲಭೂತ ಅಂಶಗಳನ್ನು ಬಲಪಡಿಸುವುದು ಸೇರಿದಂತೆ ವ್ಯಾಪಕ ರಚನಾತ್ಮಕ ಮತ್ತು ಆಡಳಿತ ಸುಧಾರಣೆಗಳಿಗೆ ಒಳಗಾಯಿತು. 2022-23 ರ ಆರ್ಥಿಕ ಸಮೀಕ್ಷೆಯನ್ನು ಇಂದು ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಅವರು, ಜೀವನ ಮತ್ತು ವ್ಯಾಪಾರ ಸರಳೀಕರಣ ಸುಧಾರಿಸಲು ಹೆಚ್ಚು ಒತ್ತು ನೀಡಿದರು, ಅಲ್ಲದೆ ಸುಧಾರಣೆಗಳು ಸಾರ್ವಜನಿಕ ಸರಕುಗಳನ್ನು ಸೃಷ್ಟಿಸುವುದು, ನಂಬಿಕೆ ಆಧಾರಿತ ಆಡಳಿತವನ್ನು ಅಳವಡಿಸಿಕೊಳ್ಳುವುದು, ಅಭಿವೃದ್ಧಿಗಾಗಿ ಖಾಸಗಿ ವಲಯದೊಂದಿಗೆ ಸಹಭಾಗಿತ್ವ ವೃದ್ಧಿ  ಮತ್ತು ಕೃಷಿ ಉತ್ಪಾದಕತೆಯಲ್ಲಿ ಸುಧಾರಣೆ ತರುವಂತಹ ತತ್ವಗಳನ್ನು ಆಧರಿಸಿವೆ ಎಂದು ಹೇಳಿದರು.

ಸರ್ಕಾರವು ಕೈಗೊಂಡ ಪರಿವರ್ತಕ ಸುಧಾರಣೆಗಳು ಆರ್ಥಿಕತೆಯ ತಾತ್ಕಾಲಿಕ ಆಘಾತಗಳಿಂದಾಗಿ ಬೆಳವಣಿಗೆಯ ದರವನ್ನು ಕುಸಿಯುವಂತೆ ಮಾಡಿವೆ ಎಂದು ಆರ್ಥಿಕ ಸಮೀಕ್ಷೆಯು ಎತ್ತಿ ತೋರಿಸುತ್ತದೆ. ಆದಾಗ್ಯೂ, ಪ್ರಸ್ತುತ ದಶಕದಲ್ಲಿ, ಪ್ರಬಲ ಮಧ್ಯಮ-ಅವಧಿಯ ಬೆಳವಣಿಗೆಯು ಆಶಾವಾದವನ್ನು ಹುಟ್ಟಿಸಿದೆ ಮತ್ತು  ಸಾಂಕ್ರಾಮಿಕದ ಜಾಗತಿಕ ಆಘಾತಗಳು ಮತ್ತು 2022 ರಲ್ಲಿ ಸರಕುಗಳ ಬೆಲೆಗಳಲ್ಲಾದ ಏರಿಕೆಯು ತಗ್ಗಿದರೆ,.. ಮುಂಬರುವ ದಶಕದಲ್ಲಿ ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯಲು ಅನುಕೂಲವಾಗುತ್ತದೆ.

ನವ ಭಾರತಕ್ಕಾಗಿ ಸುಧಾರಣೆಗಳು - ಸಬ್ಕಾ ಸಾಥ್ ಸಬ್ಕಾ ವಿಕಾಸ್

ಆರ್ಥಿಕ ಸಮೀಕ್ಷೆಯ ಪ್ರಕಾರ, 2014 ಕ್ಕೂ ಮೊದಲು ಕೈಗೊಂಡ ಸುಧಾರಣೆಗಳು ಪ್ರಾಥಮಿಕವಾಗಿ ಉತ್ಪನ್ನ ಮತ್ತು ಬಂಡವಾಳ ಮಾರುಕಟ್ಟೆಗೆ ಸ್ಥಳಾವಕಾಶ  ಕಲ್ಪಿಸಿದೆ. ಅವು ಅಗತ್ಯವಾಗಿದ್ದವು ಮತ್ತು 2014 ನಂತರವೂ ಇದು ಮುಂದುವರೆಯಿತು. ಆದಾಗ್ಯೂ, ಸರ್ಕಾರವು ಕಳೆದ ಎಂಟು ವರ್ಷಗಳಲ್ಲಿ ಸುಧಾರಣೆಗಳಿಗೆ ಹೊಸ ಆಯಾಮವನ್ನು ಒದಗಿಸಿತು. ಜೀವನ ಮತ್ತು ವ್ಯಾಪಾರ ಸರಳೀಕರಣ ವೃದ್ಧಿಗೆ ಮತ್ತು ಆರ್ಥಿಕ ದಕ್ಷತೆಯನ್ನು ಸುಧಾರಿಸಲು ಹೆಚ್ಚು ಒತ್ತು ನೀಡುವುದರೊಂದಿಗೆ, ಆರ್ಥಿಕತೆಯ ಸಂಭಾವ್ಯ ಬೆಳವಣಿಗೆ ಹೆಚ್ಚಿಸಲು ಅನುಕೂಲವಾಗುವಂತೆ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಸುಧಾರಣೆಗಳ ಹಿಂದಿನ ವಿಸ್ತೃತ ತತ್ವಗಳೇನೆಂದರೆ, ಸಾರ್ವಜನಿಕ ಸರಕುಗಳ ರಚನೆ, ನಂಬಿಕೆ ಆಧಾರಿತ ಆಡಳಿತವನ್ನು ಅಳವಡಿಸಿಕೊಳ್ಳುವುದು, ಅಭಿವೃದ್ಧಿಗಾಗಿ ಖಾಸಗಿ ವಲಯದೊಂದಿಗೆ ಸಹ-ಪಾಲುದಾರಿಕೆ ಮತ್ತು ಕೃಷಿ ಉತ್ಪಾದಕತೆಯನ್ನು ಸುಧಾರಿಸುವುದು. “ಅಭಿವೃದ್ಧಿ ಪ್ರಕ್ರಿಯೆಯಲ್ಲಿ ವಿವಿಧ ಪಾಲುದಾರರ ನಡುವೆ ಪಾಲುದಾರಿಕೆಯನ್ನು ನಿರ್ಮಿಸುವತ್ತ ಒತ್ತು ನೀಡುವುದರ ಜೊತೆಗೆ ಪ್ರತಿಯೊಬ್ಬರೂ ಅಭಿವೃದ್ಧಿ ಪ್ರಯೋಜನಗಳಿಗೆ ಕೊಡುಗೆ ನೀಡುತ್ತಾರೆ ಮತ್ತು ಅಭಿವೃದ್ಧಿಯ ಲಾಭ ಪಡೆದುಕೊಳ್ಳುತ್ತಾರೆ (ಸಬ್ಕಾ ಸಾಥ್, ಸಬ್ಕಾ ವಿಕಾಸ್) ಎಂಬ ತತ್ವವನ್ನಾಧರಿಸಿದ ಈ ವಿಧಾನವು ಸರ್ಕಾರದ ಬೆಳವಣಿಗೆ ಮತ್ತು ಅಭಿವೃದ್ಧಿ ಕಾರ್ಯತಂತ್ರದಲ್ಲಿನ ಮಾದರಿ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ", ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಅವಕಾಶಗಳು, ದಕ್ಷತೆ ಮತ್ತು ಜೀವನ ಸರಳೀಕರಣಕ್ಕಾಗಿ ಸಾರ್ವಜನಿಕ ಸರಕುಗಳನ್ನು ರಚಿಸುವುದು

ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಹಣಕಾಸೇತರ ಕಾರ್ಪೊರೇಟ್ ವಲಯವು ಹೂಡಿಕೆ ಮಾಡಲು ಸಾಧ್ಯವಾಗದಿದ್ದಾಗ, ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀವೂವುದರೊಂದಿಗೆ ಕಳೆದ ಕೆಲವು ವರ್ಷಗಳಲ್ಲಿ ನೀತಿ ಬದ್ಧತೆ ಮತ್ತು ಮೂಲಸೌಕರ್ಯ ರೂಪು-ರೇಷೆಯಲ್ಲಿ ಹೆಚ್ಚಿನ ಪ್ರಗತಿ ಗೋಚರಿಸುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆಈ ರೀತಿ ಮಾಡುವ ಮೂಲಕ, ಮುಂಬರುವ ದಶಕದಲ್ಲಿ ಖಾಸಗಿ ಹೂಡಿಕೆ ಹೆಚ್ಚಿಸಲು ಮತ್ತು ಅಭಿವೃದ್ಧಿಗೆ ಸರ್ಕಾರವು ಉತ್ತಮ ವೇದಿಕೆಯನ್ನು ಒದಗಿಸಿದೆ. ಭೌತಿಕ ಮೂಲಸೌಕರ್ಯ ವೃದ್ಧಿಯ ಜೊತೆಗೆ, ಕಳೆದ ಕೆಲವು ವರ್ಷಗಳಲ್ಲಿ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸರ್ಕಾರವು ಒತ್ತು ನೀಡಿರುವುದು ವೈಯಕ್ತಿಕ ಮತ್ತು ವ್ಯವಹಾರಗಳ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಗಣನೀಯ ಬದಲಾವಣೆಯಾಗಿದೆ. ಡಿಜಿಟಲ್ ಯೇತರ ವಲಯಗಳೊಂದಿಗೆ ಮುಂದುವರಿದ ಸಂಪರ್ಕದೊಂದಿಗೆ, ಡಿಜಿಟಲೀಕರಣವು ವಿವಿಧ ಮಾರ್ಗಗಳ ಮೂಲಕ ಸಂಭಾವ್ಯ ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸುತ್ತದೆಹೆಚ್ಚೆಚ್ಚು ಹಣಕಾಸು ಸೇರ್ಪಡೆ, ಹೆಚ್ಚಿನ ಕ್ರಮಬದ್ಧತೆ, ಹೆಚ್ಚಿದ ದಕ್ಷತೆ ಮತ್ತು ಹೆಚ್ಚಿದ ಅವಕಾಶಗಳು ಇವುಗಳಲ್ಲಿ ಕೆಲವು.   

ನಂಬಿಕೆಯಾಧಾರಿತ ಆಡಳಿತ

ಆರ್ಥಿಕ ಸಮೀಕ್ಷೆಯ ಪ್ರಕಾರ, ಸರ್ಕಾರ ಮತ್ತು ನಾಗರಿಕರು/ವ್ಯವಹಾರಗಳ ಮಧ್ಯೆ ನಂಬಿಕೆಯ ನಿರ್ಮಾಣವು, ಸುಧಾರಿತ ಹೂಡಿಕೆದಾರರ ಭಾವನೆ, ಉತ್ತಮ ವ್ಯಾಪಾರ ಸರಳೀಕರಣ ಮತ್ತು ಹೆಚ್ಚು ಪರಿಣಾಮಕಾರಿ ಆಡಳಿತದ ಮೂಲಕ ದಕ್ಷತೆಯಿಂದಾಗುವ ಲಾಭವನ್ನು ತೋರ್ಪಡಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿ ನಿಟ್ಟಿನಲ್ಲಿ ನಿರಂತರ ಸುಧಾರಣೆಗಳನ್ನು ಮಾಡಲಾಗಿದೆ. ದಿವಾಳಿತನ ಮತ್ತು ದಿವಾಳಿತನ ಸಣ್ಣದು (IBC) ಮತ್ತು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ (RERA) ಯಂತಹ ಸುಧಾರಣೆಗಳ ಮೂಲಕ ನಿಯಂತ್ರಕ ಚೌಕಟ್ಟುಗಳ ಸರಳೀಕರಣವು ವ್ಯಾಪಾರ ಸರಳೀಕರಣವನ್ನು ವಿಸ್ತರಿಸಿದೆ. 2013 ಕಂಪನಿಗಳ ಕಾಯಿದೆಯಡಿಯಲ್ಲಿ, ಸಣ್ಣ ಆರ್ಥಿಕ ಅಪರಾಧಗಳನ್ನು ಕಾನೂನು ವ್ಯಾಪ್ತಿಯಿಂದ ತೆಗೆದುಹಾಕುವುದು, 25000 ಅನಗತ್ಯ ಅನುಸರಣೆಗಳನ್ನು ತೆಗೆದುಹಾಕುವ ಮೂಲಕ ಪ್ರಕ್ರಿಯೆ ಸರಳೀಕರಣ, 1400 ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ರದ್ದುಗೊಳಿಸುವುದು, ಏಂಜೆಲ್ ತೆರಿಗೆಯನ್ನು ರದ್ದುಗೊಳಿಸುವುದು ಮತ್ತು ಭಾರತದಲ್ಲಿ ಗುರುತಿಸಲಾದ ಆಸ್ತಿಗಳ ಕಡಲಾಚೆಯ ಪರೋಕ್ಷ ವರ್ಗಾವಣೆಯ ಮೇಲಿನ ಹಿಂದಿನ ತೆರಿಗೆಯನ್ನು ತೆಗೆದುಹಾಕುವುದು, ಸರ್ಕಾರದ ಅವಿರೋಧ ನೀತಿಯ ಪರಿಸರವನ್ನು ಖಚಿತಪಡಿಸಿಸುವುದನ್ನು ಸೂಚಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ದೇಶದಲ್ಲಿ ತೆರಿಗೆ ಪರಿಸರ ವ್ಯವಸ್ಥೆಯು 2014 ನಂತರದ ಅವಧಿಯಲ್ಲಿ ಗಣನೀಯ ಸುಧಾರಣೆಗಳನ್ನು ಕಂಡಿದೆ. ಏಕೀಕೃತ ಜಿ ಎಸ್ ಟಿಯನ್ನು ಅಳವಡಿಸಿಕೊಳ್ಳುವುದು, ಕಾರ್ಪೊರೇಟ್ ತೆರಿಗೆ ದರಗಳನ್ನು ತಗ್ಗಿಸುವುದು, ಸಾರ್ವಭೌಮ ಸಂಪತ್ತು ನಿಧಿಗಳು ಮತ್ತು ಪಿಂಚಣಿ ನಿಧಿಗಳಿಗೆ ತೆರಿಗೆ ವಿನಾಯಿತಿ ಮತ್ತು ಡಿವಿಡೆಂಡ್ ವಿತರಣಾ ತೆರಿಗೆಯನ್ನು ತೆಗೆದುಹಾಕುವುದು ಮುಂತಾದ ತೆರಿಗೆ ನೀತಿ ಸುಧಾರಣೆಗಳು ವೈಯಕ್ತಿಕ ಮತ್ತು ವ್ಯವಹಾರಗಳ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಿದೆ, ಮತ್ತು ಆರ್ಥಿಕತೆಯಿಂದ ಅಸ್ಪಷ್ಟ ರಿಯಾಯಿತಿಗಳನ್ನು ಕೂಡ ತೆಗೆದುಹಾಕಲಾಗಿದೆ.

ಅಭಿವೃದ್ಧಿಯ ಸಹ ಪಾಲುದಾರರಾಗಿ, ಖಾಸಗಿ ವಲಯಕ್ಕೆ  ಉತ್ತೇಜನ

2014 ನಂತರದ ಅವಧಿಯಲ್ಲಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಖಾಸಗಿ ವಲಯದ ಪಾಲುದಾರರನ್ನು ತೊಡಗಿಸಿಕೊಳ್ಳುವುದು ಸರ್ಕಾರದ ನೀತಿಯ ಹಿಂದಿನ ಮೂಲಭೂತ ತತ್ವವಾಗಿದೆ ಎಂದು ಸಮೀಕ್ಷೆಯು ವ್ಯಾಖ್ಯಾನಿಸುತ್ತದೆ. ಪಿ ಎಸ್ ಸಿ ಗಳಲ್ಲಿ ಸರ್ಕಾರದ ಉಪಸ್ಥಿತಿಯನ್ನು ಕೆಲವೇ ಕಾರ್ಯತಂತ್ರದ ವಲಯಗಳಿಗೆ ಸೀಮಿತಗೊಳಿಸುವ ಮೂಲಕ ಹೆಚ್ಚಿನ ದಕ್ಷತೆಯ ಲಾಭ ಹೊಂದಲು ಆತ್ಮನಿರ್ಭರ್ ಭಾರತ್ ಗಾಗಿ ನೂತನ ಸಾರ್ವಜನಿಕ ವಲಯದ ಉದ್ಯಮ ನೀತಿಯನ್ನು ಪರಿಚಯಿಸಲಾಗಿದೆ. ಕೈಗಾರಿಕೆಗಳಾದ್ಯಂತ ಭಾರತದ ಉತ್ಪಾದನಾ ಸಾಮರ್ಥ್ಯಗಳು ಮತ್ತು ರಫ್ತು ಹೆಚ್ಚಿಸಲು ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳ ಅಡಿಯಲ್ಲಿ ಮಹತ್ವದ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಸರಕು ಸಾಗಾಣಿಕೆ  ವೆಚ್ಚವನ್ನು ಕಡಿಮೆ ಮಾಡಲು ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮಾನವಾಗಿ ಸ್ಪರ್ಧಿಸಲು ವ್ಯಾಪಕವಾದ ಸರಕು ಸಾಗಾಣಿಕಾ ಪರಿಸರ ವ್ಯವಸ್ಥೆಯನ್ನು ರಚಿಸಲು ರಾಷ್ಟ್ರೀಯ ಸರಕು ಸಾಗಾಣಿಕಾ ನೀತಿಯನ್ನು (2022) ಜಾರಿಗೆ ತರಲಾಗಿದೆ. ಎಫ್ ಡಿ ಐ ನೀತಿಯ ಉದಾರೀಕರಣವು ಕಳೆದ ದಶಕದಲ್ಲಿ ಭಾರತಕ್ಕೆ ಒಟ್ಟು ವಿದೇಶೀ ನೇರ ಬಂಡವಾಳ   ಹರಿದು ಬರುವಂತೆ ರಚನಾತ್ಮಕ ಬದಲಾವಣೆಗೆ ಕಾರಣವಾಗಿದೆ. ಖಾಸಗಿ ವಲಯಕ್ಕೆ ರಕ್ಷಣೆ, ಗಣಿಗಾರಿಕೆ ಮತ್ತು ಬಾಹ್ಯಾಕಾಶ ಮುಂತಾದ ಕಾರ್ಯತಂತ್ರದ ಕ್ಷೇತ್ರಗಳನ್ನು ಮುಕ್ತಗೊಳಿಸಿರುವುದು ಆರ್ಥಿಕತೆಯಲ್ಲಿ ವ್ಯಾಪಾರ ಅವಕಾಶಗಳನ್ನು ಹೆಚ್ಚಿಸಿದೆ. MSMEಗಳು ಎದುರಿಸುತ್ತಿರುವ ರಚನಾತ್ಮಕ ಸವಾಲುಗಳನ್ನು ಪರಿಹರಿಸಲು ಇತ್ತೀಚಿನ ವರ್ಷಗಳಲ್ಲಿನ ಸುಧಾರಣೆಗಳು ಕೈಗಾರಿಕಾ ನೀತಿಯ ಪ್ರಮುಖ ಭಾಗವಾಗಿದೆ.

ಕೃಷಿಯಲ್ಲಿ ಉತ್ಪಾದಕತೆ ವೃದ್ಧಿ

ಆರ್ಥಿಕ ಸಮೀಕ್ಷೆಯ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಭಾರತದ ಕೃಷಿ ಕ್ಷೇತ್ರವು ಸರಾಸರಿ ವಾರ್ಷಿಕ ಅಭಿವೃದ್ಧಿ ದರದಲ್ಲಿ ಶೇಕಡಾ 4.6 ರಷ್ಟು ಬೆಳವಣಿಗೆಯನ್ನು ಹೊಂದಿದೆ. ಈ ಬೆಳವಣಿಗೆಯು ಭಾಗಶಃ ಉತ್ತಮ ಮಳೆಯಾದಂತಹ ವರ್ಷಗಳು ಮತ್ತು ಭಾಗಶಃ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರವು ಕೈಗೊಂಡ ವಿವಿಧ ಸುಧಾರಣೆಗಳಿಂದಾಗಿದೆ. ಮಣ್ಣಿನ ಆರೋಗ್ಯ ಕಾರ್ಡಗಳು, ಸೂಕ್ಷ್ಮ ನೀರಾವರಿ  (ಹನಿ ನೀರಾವರಿ/ತುಂತುರು ನೀರಾವರಿ)ನಿಧಿ ಮತ್ತು ಸಾವಯವ ಮತ್ತು ನೈಸರ್ಗಿಕ ಕೃಷಿಯಂತಹ ನೀತಿಗಳು ರೈತರಿಗೆ ಉತ್ತಮ ರೀತಿಯಲ್ಲಿ ಸಂಪನ್ಮೂಲ ಸದ್ಬಳಕೆ ಮತ್ತು ಕೃಷಿ ವೆಚ್ಚವನ್ನು ತಗ್ಗಿಸಲು ಸಹಾಯ ಮಾಡಿವೆ. ರೈತ ಉತ್ಪಾದಕ ಸಂಸ್ಥೆಗಳನ್ನು (FPOs) ಉತ್ತೇಜಿಸುವುದು ಮತ್ತು ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-NAM) ವಿಸ್ತರಣಾ ವೇದಿಕೆಯು ರೈತರನ್ನು ಸಬಲಗೊಳಿಸಿದೆ, ಅವರ ಸಂಪನ್ಮೂಲಗಳನ್ನು ಹೆಚ್ಚಿಸಿದೆ ಮತ್ತು ಉತ್ತಮ ಆದಾಯವನ್ನು ಪಡೆಯಲು ಅವರಿಗೆ ಅನುವು ಮಾಡಿಕೊಟ್ಟಿದೆ. ಅಗ್ರಿ ಇನ್ಫ್ರಾಸ್ಟ್ರಕ್ಚರ್ ಫಂಡ್ (AIF) ವಿವಿಧ ಕೃಷಿ ಮೂಲಸೌಕರ್ಯಗಳ ಸೃಷ್ಟಿಗೆ ಬೆಂಬಲ ನೀಡಿದೆ. ವಿಶೇಷವಾಗಿ ಕಿಸಾನ್ ರೈಲು, ಬೇಗ ಹಾಳಾಗುವ ಕೃಷಿ ಉತ್ಪನ್ನಗಳನ್ನು ಸಾಗಿಸುವಲ್ಲಿ ಸಹಾಯ ಮಾಡುತ್ತದೆ. ಸಮೀಕ್ಷೆಯ ಪ್ರಕಾರ, ಎಲ್ಲಾ ಕ್ರಮಗಳು ಕೃಷಿ ಉತ್ಪಾದಕತೆಯನ್ನು ವೃದ್ಧಿಸಲು ಮತ್ತು ಮಧ್ಯಮ ಅವಧಿಯಲ್ಲಿ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ  ಅದರ ಕೊಡುಗೆಯನ್ನು ಉಳಿಸಿಕೊಳ್ಳಲು ಕೈಗೊಳ್ಳಲಾಗಿದೆ.

 

2014-22 ರ ಅವಧಿಯಲ್ಲಿ ಆರ್ಥಿಕತೆ ಎದುರಿಸಿದ ಆತ್ಮಕಗಳು

1998- 2002 ಅವಧಿಯಲ್ಲಿ ಪರಿವರ್ತಕ ಸುಧಾರಣೆಗಳನ್ನು ಪ್ರಾರಂಭಿಸಲಾಯಿತು ಆದರೆ ಅಭಿವೃದ್ಧಿಯ ದರ ವೃದ್ಧಿಸಲಿಲ್ಲ ಎಂದು ಆರ್ಥಿಕ ಸಮೀಕ್ಷೆಯ ವ್ಯಾಖ್ಯಾನಿಸಿದೆ. 1998 ರಿಂದ 2002 ರವರೆಗಿನ ಬೆಳವಣಿಗೆಯ ದರದ ಹಿನ್ನಡೆಯನ್ನು ಬಾಹ್ಯ ಅಂಶಗಳಿಂದ ಉಂಟಾದ ಆಘಾತಗಳು ಮತ್ತು ದೇಶೀಯ ಹಣಕಾಸು ವಲಯದ ಶುದ್ಧೀಕರಣದಿಂದ ಉಂಟಾದ ಆಘಾತಗಳ ಸರಣಿಗೆ ಸೇರಿದ ವಿದ್ಯಮಾನವೆಂದು ಪರಿಗಣಿಸಲಾಗಿದೆ. 2003 ಹೊತ್ತಿಗೆ, ಆಘಾತಗಳ ಪರಿಣಾಮ ತಗ್ಗಿದಾಗ, ಭಾರತವು ಜಾಗತಿಕ ಮಟ್ಟದಲ್ಲಿ ಭಾಗವಹಿಸಿತು ಮತ್ತು ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಿತು. ಅದರಂತೆಯೇ, ಪ್ರಸ್ತುತ ಸನ್ನಿವೇಶದಲ್ಲಿ, ಸಾಂಕ್ರಾಮಿಕ ರೋಗದ ಜಾಗತಿಕ ಆಘಾತಗಳು ಮತ್ತು 2022 ರಲ್ಲಿ ಸರಕುಗಳ ಬೆಲೆಗಳ ಏರಿಕೆಯು ನಿಯಂತ್ರಣಕ್ಕೆ ಬರುತ್ತಿದ್ದಂತೆ, ಮುಂಬರುವ ದಶಕದಲ್ಲಿ ಭಾರತೀಯ ಆರ್ಥಿಕತೆಯು ತನ್ನ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ಉತ್ತಮ ಸ್ಥಾನದಲ್ಲಿದೆ.

ಈ ದಶಕದ  (2023-2030) ಬೆಳವಣಿಗೆಯ ಪ್ರಮುಖ ಅಂಶಗಳು

ಸಾಂಕ್ರಾಮಿಕ ರೋಗದ ಪ್ರಭಾವದಿಂದ ಉಂಟಾದ ಆರೋಗ್ಯ ಮತ್ತು ಆರ್ಥಿಕ ಆಘಾತಗಳು ಮತ್ತು 2022 ರಲ್ಲಿ ಸರಕುಗಳ ಬೆಲೆ ಏರಿಕೆಯು ತಗ್ಗಲಿದೆ ಎಂದು ಆರ್ಥಿಕ ಸಮೀಕ್ಷೆಯು ಹೇಳುತ್ತದೆ, ಹೀಗಾಗಿ 2003 ರ ನಂತರದ ಆರ್ಥಿಕ ಅಭಿವೃದ್ಧಿಯಂತೆಯೇ ಭಾರತೀಯ ಆರ್ಥಿಕತೆಯು ಮುಂಬರುವ ದಶಕದಲ್ಲಿ ಅಭಿವೃದ್ಧಿಯ ಹೊಂದುವಲ್ಲಿ ತನ್ನ ಸಾಮರ್ಥ್ಯದಲ್ಲಿ ಉತ್ತಮ ಸ್ಥಾನದಲ್ಲಿದೆಬ್ಯಾಂಕಿಂಗ್, ಬ್ಯಾಂಕಿಂಗೇತರ ಮತ್ತು ಕಾರ್ಪೊರೇಟ್ ವಲಯಗಳ ಸುಧಾರಿತ ಮತ್ತು ಆರೋಗ್ಯಕರ ಆರ್ಥಿಕ ಅಭಿವೃದ್ಧಿಯೊಂದಿಗೆ, ಹೊಸ ಆರ್ಥಿಕ ಚಕ್ರವು ಈಗಾಗಲೇ ಪ್ರಾರಂಭವಾಗಿದೆ ಮತ್ತು ಕಳೆದ ತಿಂಗಳುಗಳಲ್ಲಿ ಬ್ಯಾಂಕ್ ಲೇವಾದೇವಿಯಲ್ಲಿ ಎರಡಂಕಿಯ ಬೆಳವಣಿಗೆಯಿಂದ ಇದು ಸ್ಪಷ್ಟವಾಗಿದೆ ಎಂದು ಆರ್ಥಿಕ ಸಮೀಕ್ಷೆ ವಿವರಿಸುತ್ತದೆ. ಭಾರತದ ಬೆಳವಣಿಗೆಯ ಮುನ್ನೋಟವು ಸಾಂಕ್ರಾಮಿಕ-ಪೂರ್ವ ವರ್ಷಗಳಿಗಿಂತ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲು ಇದು ಮೂಲ ಕಾರಣವೆನಿಸಿದೆ.

 

 

ಡಿಜಿಟಲೀಕರಣ ಸುಧಾರಣೆಗಳು ಮತ್ತು ಹೆಚ್ಚಿನ ಕಾನೂನು ಸುವ್ಯವಸ್ಥೆಯಿಂದಾಗಿ ಹೆಚ್ಚಿದ ದಕ್ಷತೆಯಿಂದಾದ ಲಾಭಗಳು, ಹೆಚ್ಚಿನ ಆರ್ಥಿಕ ಸೇರ್ಪಡೆ ಮತ್ತು ಹೆಚ್ಚಿನ ಆರ್ಥಿಕ ಅವಕಾಶಗಳು ಮಧ್ಯಮ ಅವಧಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಎರಡನೇ ಪ್ರಮುಖ ಅಂಶವಾಗಿವೆ ಎಂದು ಸಮೀಕ್ಷೆಯು ಹೇಳುತ್ತದೆ. ಸರ್ಕಾರದ ಕೌಶಲ್ಯ ಉಪಕ್ರಮಗಳ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸುವ ಸುಧಾರಣೆಗಳು ಮುಂಬರುವ ವರ್ಷಗಳಲ್ಲಿ ಜನಸಂಖ್ಯಾ ಲಾಭಾಂಶದ ಪ್ರಯೋಜನಗಳನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.

ವಿಕಸನಗೊಳ್ಳುತ್ತಿರುವ ಭೌಗೋಳಿಕ-ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿ, ಜಾಗತಿಕ ಪೂರೈಕೆ ಸರಪಳಿಗಳ ವೈವಿಧ್ಯೀಕರಣದಿಂದ ಭಾರತವು ಪ್ರಯೋಜನ ಪಡೆಯುವ ಅವಕಾಶವನ್ನು ಹೊಂದಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಉಂಟಾದ ಜಾಗತಿಕ ವ್ಯಾಪಾರ ಉದ್ವಿಗ್ನತೆ, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪೂರೈಕೆ ಸರಪಳಿಯ ಅಡೆತಡೆಗಳು ಮತ್ತು ಯುರೋಪ್ ನಲ್ಲಿನ ಸಂಘರ್ಷದಿಂದಾಗಿ ಬಹುರಾಷ್ಟ್ರೀಯ ಸಂಸ್ಥೆಗಳು ಅನಿರೀಕ್ಷಿತ ಅಪಾಯಗಳನ್ನು ಎದುರಿಸಬೇಕಾಗಿದೆ. ನೀತಿ ನಿಯಮಗಳ ಚೌಕಟ್ಟುಗಳನ್ನು ಸಕ್ರಿಯಗೊಳಿಸುವುದರೊಂದಿಗೆ, ಇತರ ದೇಶಗಳಿಂದ ಬಂಡವಾಳ ಹೂಡಿಕೆಗೆ  ಭಾರತವು ತನ್ನನ್ನು ನಂಬಲರ್ಹ ತಾಣವಾಗಿ ಪ್ರಸ್ತುತಪಡಿಸುತ್ತಿದೆ.

ಈ ರೀತಿ, ಭಾರತದ ಬೆಳವಣಿಗೆಯ ಮುನ್ನೋಟವು ಸಾಂಕ್ರಾಮಿಕ-ಪೂರ್ವ ವರ್ಷಗಳಿಗಿಂತ ಉತ್ತಮವಾಗಿ ಕಾಣುತ್ತಿದೆ ಮತ್ತು ಭಾರತೀಯ ಆರ್ಥಿಕತೆಯು, ಮಧ್ಯಮ ಅವಧಿಯಲ್ಲಿ ತನ್ನ ಸಾಮರ್ಥ್ಯದಲ್ಲಿ ಬೆಳೆಯಲು ಸಿದ್ಧವಾಗಿದೆ.

*****

 

 



(Release ID: 1895205) Visitor Counter : 325