ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನವರಿ 28ರಂದು ಭಗವಾನ್ ಶ್ರೀ ದೇವನಾರಾಯಣ್ ಜೀ ಅವರ 1111ನೇ 'ಅವತಾರ ಮಹೋತ್ಸವ'ದ ಸ್ಮರಣಾರ್ಥ ಸಮಾರಂಭ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಪ್ರಧಾನಮಂತ್ರಿ

प्रविष्टि तिथि: 27 JAN 2023 5:48PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 28 ರಂದು ಬೆಳಿಗ್ಗೆ 11:30 ಕ್ಕೆ ರಾಜಸ್ಥಾನದ ಭಿಲ್ವಾರಾದಲ್ಲಿ ಭಗವಾನ್ ಶ್ರೀ ದೇವನಾರಾಯಣ್ ಜೀ ಅವರ 1111 ನೇ ಅವತಾರ ಮಹೋತ್ಸವದ ಸ್ಮರಣಾರ್ಥ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಭಗವಾನ್ ಶ್ರೀ ದೇವನಾರಾಯಣ್ ಜೀ ಅವರನ್ನು ರಾಜಸ್ಥಾನದ ಜನರು ಪೂಜಿಸುತ್ತಾರೆ ಮತ್ತು ಅವರ ಅನುಯಾಯಿಗಳು ದೇಶದ ಉದ್ದಗಲಕ್ಕೂ ಹರಡಿದ್ದಾರೆ. ಸಾರ್ವಜನಿಕ ಸೇವೆಯ ವಿಶೇಷ ಕೆಲಸಗಳಿಂದಾಗಿ ಅವರನ್ನು ಜನರು  ಪೂಜ್ಯ ಭಾವನೆಯಿಂದ ಗೌರವಿಸುತ್ತಾರೆ.

*****


(रिलीज़ आईडी: 1894586) आगंतुक पटल : 173
इस विज्ञप्ति को इन भाषाओं में पढ़ें: Assamese , English , Urdu , हिन्दी , Marathi , Manipuri , Bengali , Punjabi , Gujarati , Odia , Tamil , Telugu , Malayalam