ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

28 ಪ್ರಾದೇಶಿಕ ದೂರದರ್ಶನ ಚಾನೆಲ್‌ಗಳು ಎಚ್‌ಡಿ ಪ್ರೋಗ್ರಾಮ್ ನಿರ್ಮಾಣ ಸಾಮರ್ಥ್ಯವನ್ನು ಹೊಂದಲಿವೆ


ಎಫ್‌ ಎಂ ರೇಡಿಯೋ ಪ್ರಸಾರವು ಬಿಐಎನ್‌ಡಿ ಯೋಜನೆಯಡಿಯಲ್ಲಿ 80 ಪ್ರತಿಶತದಷ್ಟು ಜನಸಂಖ್ಯೆಯನ್ನು ಮುಟ್ಟಲಿದೆ
 
ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಶೇಕಡಾ 76ರಷ್ಟು ಮತ್ತು ಭಾರತ ನೇಪಾಳ ಗಡಿಯಲ್ಲಿ ಶೇಕಡಾ 63ರಷ್ಟು  ವ್ಯಾಪಿಸಲಿದೆ
 
ದೂರದ, ಬುಡಕಟ್ಟು, ಎಲ್‌ ಡಬ್ಲ್ಯೂ ಇ ಪ್ರದೇಶ ಮತ್ತು ಗಡಿ ಪ್ರದೇಶಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಡಿಡಿ ಡಿಟಿಎಚ್ ರಿಸೀವರ್ ಸೆಟ್‌ಗಳ ಉಚಿತ ವಿತರಣೆಯನ್ನು ಪ್ರಸಾರ ಭಾರತಿಯು ಕೈಗೊಳ್ಳಲಿದೆ.

Posted On: 06 JAN 2023 3:52PM by PIB Bengaluru

ಜನವರಿ 4, 2023 ರಂದು ಸಚಿವ ಸಂಪುಟವು "ಬ್ರಾಡ್ಕಾಸ್ಟ್ ಇನ್ಫ್ರಾಸ್ಟ್ರಕ್ಚರ್ ನೆಟ್ವರ್ಕ್ ಡೆವಲಪ್ಮೆಂಟ್ (ಬಿಐಎನ್‌ಡಿ)" ಯೋಜನೆಗೆ 2025-26ಕ್ಕೆ ಕೊನೆಗೊಳ್ಳುವ ಐದು ವರ್ಷಗಳ ಅವಧಿಗೆ ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಆಧುನೀಕರಣ, ಉನ್ನತೀಕರಣ ಮತ್ತು ವಿಸ್ತರಣೆಗಾಗಿ 2539.61 ಕೋಟಿ ರೂಪಾಯಿಗಳನ್ನು ಅನುಮೋದಿಸಿದೆ.  ಈ ಯೋಜನೆಯು ಫಾಸ್ಟ್ ಟ್ರ್ಯಾಕ್ ಮೋಡ್‌ನಲ್ಲಿ ಪೂರ್ಣಗೊಳಿಸಬೇಕಾದ 950 ಕೋಟಿ ಮೊತ್ತದ ಆಲ್‌ ಇಂಡಿಯಾ ರೇಡಿಯೋ  ಮತ್ತು ದೂರದರ್ಶನದ ಆದ್ಯತೆಯ ಯೋಜನೆಗಳನ್ನು ಒಳಗೊಂಡಿದೆ, ಜೊತೆಗೆ ಎಫ್‌ಎಂ  ರೇಡಿಯೋ ಜಾಲ ಮತ್ತು ಮೊಬೈಲ್ ಟಿವಿ ಉತ್ಪಾದನಾ ಸೌಲಭ್ಯಗಳ ವಿಸ್ತರಣೆ ಮತ್ತು ಬಲಪಡಿಸುವಿಕೆಯ ಮೇಲೆ ಗಮನಹರಿಸುತ್ತದೆ.

ಯೋಜನೆಯು ಉತ್ತಮ ಮೂಲಸೌಕರ್ಯವನ್ನು ರಚಿಸಲು ಮತ್ತು ಎಲ್‌ಡಬ್ಲ್ಯೂ ಇ ಪ್ರದೇಶ (ನಕ್ಸಲ್‌ ಬಾಧಿತ), ಗಡಿ ಮತ್ತು ಕಾರ್ಯತಂತ್ರದ ಪ್ರದೇಶಗಳಲ್ಲಿ ಸಾರ್ವಜನಿಕ ಪ್ರಸಾರಕರ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಮುಖ ನವೀಕರಣದ ಗುರಿಯನ್ನು ಹೊಂದಿದೆ. ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರೇಕ್ಷಕರಿಗಾಗಿ ಉತ್ತಮ-ಗುಣಮಟ್ಟದ ವಿಷಯದ ಅಭಿವೃದ್ಧಿ, ಹೆಚ್ಚಿನ ಚಾನಲ್‌ಗಳಿಗೆ ಅವಕಾಶ ಕಲ್ಪಿಸಲು ಡಿಟಿಎಚ್ ಪ್ಲಾಟ್‌ಫಾರ್ಮ್‌ನ ಸಾಮರ್ಥ್ಯವನ್ನು ನವೀಕರಿಸುವ ಮೂಲಕ ವೈವಿಧ್ಯಮಯ ವಿಷಯದ ಲಭ್ಯತೆ ಪ್ರೇಕ್ಷಕರಿಗೆ ಲಭ್ಯವಿರುವ ಆಯ್ಕೆಯನ್ನು ವಿಸ್ತರಿಸುತ್ತದೆ. ಯೋಜನೆಯು ಎಲ್‌ಡಬ್ಲ್ಯೂ ಇ ಪ್ರದೇಶಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮೇಲೆ ಕೇಂದ್ರೀಕರಿಸಿ ಪ್ರಾಥಮಿಕವಾಗಿ II ಮತ್ತು ಶ್ರೇಣಿ-III ನಗರಗಳಲ್ಲಿ ಎಫ್‌ಎಂ ಜಾಲದ ವಿಸ್ತರಣೆಯ ಗುರಿಯನ್ನು ಹೊಂದಿದೆ.
 
ಪ್ರಸಾರ ಭಾರತಿಯ ಅವಳಿ ವಿಭಾಗಗಳಲ್ಲಿ, ಆಲ್‌ ಇಂಡಿಯಾ ರೇಡಿಯೋ  ತನ್ನ ಕೇಳುಗರಿಗೆ 501 ಆಕಾಶವಾಣಿ ಬಾನುಲಿ ಕೇಂದ್ರಗಳ ಮೂಲಕ 653 ಎಐಆರ್‌ ಟ್ರಾನ್ಸ್‌ಮಿಟರ್‌ಗಳೊಂದಿಗೆ (122 ಮಧ್ಯಮ ತರಂಗ, 7 ಶಾರ್ಟ್ ವೇವ್ ಮತ್ತು 524 ಎಫ್‌ ಎಂ ಟ್ರಾನ್ಸ್‌ಮಿಟರ್‌ಗಳು) ವಿಶ್ವ ಸೇವೆಗಳು, ನೆರೆಹೊರೆಯ ಸೇವೆಗಳು, 43 ರೈನ್‌ ಬೋ 5  ಚಾನಲ್‌ಗಳು ಮತ್ತು 4 ಎಫ್‌ ಎಂ ಗೋಲ್ಡ್ ಚಾನಲ್‌ಗಳನ್ನು ಒದಗಿಸುತ್ತದೆ
 
ದೂರದರ್ಶನವು ತನ್ನ ವೀಕ್ಷಕರಿಗೆ 66 ದೂರದರ್ಶನ ಕೇಂದ್ರದಿಂದ 36 ಡಿಡಿ ಚಾನೆಲ್‌ಗಳನ್ನು ಉತ್ಪಾದಿಸುತ್ತದೆ, ಕೇಬಲ್, ಡಿಟಿಎಚ್,‌ ಐಪಿಟಿವಿ "NewsOnAIR" ಮೊಬೈಲ್ ಅಪ್ಲಿಕೇಶನ್, ವಿವಿಧ ಯೂಟ್ಯೂಬ್ ಚಾನೆಲ್‌ಗಳಂತಹ ವಿವಿಧ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಸಾರ ಮಾಡುತ್ತದೆ ಮತ್ತು ಅದರ ಅಂತರರಾಷ್ಟ್ರೀಯ ಚಾನೆಲ್ ಡಿಡಿ ಇಂಡಿಯಾ ಜೊತೆಗೆ ವಿವಿಧ ವೇದಿಕೆಗಳಲ್ಲಿ 190ಕ್ಕೂ ಹೆಚ್ಚು ದೇಶಗಳಲ್ಲಿ ಜಾಗತಿಕ ಅಸ್ತಿತ್ವವನ್ನು ಹೊಂದಿದೆ..
 
ಬಿಐಎನ್‌ ಡಿ ಯೋಜನೆಯಡಿ ಕೆಳಗಿನ ಪ್ರಮುಖ ಚಟುವಟಿಕೆಗಳನ್ನು ಯೋಜಿಸಲಾಗಿದೆ

ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ)
 
ದೇಶದಲ್ಲಿ ಎಫ್‌ ಎಂ ವ್ಯಾಪ್ತಿಯನ್ನು ಭೌಗೋಳಿಕ ಪ್ರದೇಶದಿಂದ ಶೇ.66.29 ಮತ್ತು ಜನಸಂಖ್ಯೆಯಿಂದ ಶೇ.80.23 ಕ್ಕೆ ಕ್ರಮವಾಗಿ ಶೇ.58.83 ಮತ್ತು ಶೇ.68 ಕ್ಕೆ ಹೆಚ್ಚಿಸುವುದು.
 
ಇಂಡೋ ನೇಪಾಳ ಗಡಿಯಲ್ಲಿ ಅಸ್ತಿತ್ವದಲ್ಲಿರುವ ಶೇ.48.27 ರಿಂದ ಆಲ್‌ ಇಂಡಿಯಾ ರೇಡಿಯೋ ಎಫ್‌ ಎಂ ವ್ಯಾಪ್ತಿಯನ್ನು ಶೇ.63.02 ಗೆ ಹೆಚ್ಚಿಸುವುದು.
 
ಜಮ್ಮು ಮತ್ತು ಕಾಶ್ಮೀರ  ಗಡಿಯಲ್ಲಿ ಆಲ್‌ ಇಂಡಿಯಾ ರೇಡಿಯೋ ಎಫ್‌ ಎಂ ವ್ಯಾಪ್ತಿಯನ್ನು ಶೇ.62 ರಿಂದ ಶೇ.76 ಕ್ಕೆ ಹೆಚ್ಚಿಸುವುದು.
 
ರಾಮೇಶ್ವರಂನಲ್ಲಿರುವ 300 ಮೀ ಗೋಪುರದಲ್ಲಿ 30,000 ಚ.ಕಿ.ಮೀ ವಿಸ್ತೀರ್ಣದಲ್ಲಿ 20 ಕಿವ್ಯಾ ಎಫ್‌ ಎಂ ಟ್ರಾನ್ಸ್‌ಮಿಟರ್ ಅನ್ನು ಸ್ಥಾಪಿಸಲಾಗುವುದು.
 
ದೂರದರ್ಶನ
 
ಪ್ರಸಾರ ಭಾರತಿ ಸೌಲಭ್ಯಗಳಲ್ಲಿ ಇತ್ತೀಚಿನ ಪ್ರಸಾರ ಮತ್ತು ಸ್ಟುಡಿಯೋ ಉಪಕರಣಗಳನ್ನು ಸ್ಥಾಪಿಸುವ ಮೂಲಕ ಡಿಡಿ ಮತ್ತು ಆಕಾಶವಾಣಿ ಚಾನೆಲ್‌ಗಳ ಉನ್ನತೀಕರಣ.
 
ಡಿಡಿಕೆ ವಿಜಯವಾಡ ಮತ್ತು ಲೇಹ್‌ನಲ್ಲಿರುವ ಭೂ ಕೇಂದ್ರಗಳನ್ನು 24 ಗಂಟೆ ಪ್ರಸಾರವಿರುವ ಚಾನಲ್‌ ಆಗಿ ಬದಲಾಯಿಸುವುದು.
 
ಪ್ರತಿಷ್ಠಿತ ರಾಷ್ಟ್ರೀಯ ಸಮಾರಂಭ/ ಕಾರ್ಯಕ್ರಮಗಳು  ಮತ್ತು ವಿವಿಐಪಿ ವರದಿಗಳನ್ನು  ಒಳಗೊಳ್ಳಲು ಫ್ಲೈ ಅವೇ ಘಟಕಗಳನ್ನು ಹೊರತರಲಾಗುತ್ತಿದೆ.
 
28 ಪ್ರಾದೇಶಿಕ ದೂರದರ್ಶನ ಚಾನೆಲ್‌ಗಳನ್ನು ಹೈ-ಡೆಫಿನಿಷನ್ ಪ್ರೋಗ್ರಾಂ ಪ್ರೊಡಕ್ಷನ್ ಸಾಮರ್ಥ್ಯದ ಕೇಂದ್ರಗಳಾಗಿ ಸ್ಥಳಾಂತರಿಸಲಾಗುವುದು.
 
ಇಡೀ ದೂರದರ್ಶನ ಜಾಲದಲ್ಲಿರುವ 31 ಪ್ರಾದೇಶಿಕ ಸುದ್ದಿ ಘಟಕಗಳನ್ನು ಸಮರ್ಥ ಸುದ್ದಿ ಸಂಗ್ರಹಕ್ಕಾಗಿ ಇತ್ತೀಚಿನ ಸಾಧನಗಳೊಂದಿಗೆ ನವೀಕರಿಸಲಾಗುತ್ತದೆ ಮತ್ತು ಆಧುನೀಕರಿಸಲಾಗುತ್ತದೆ.
 
ಎಚ್‌ ಡಿ ಟಿವಿ ಚಾನೆಲ್‌ಗಳನ್ನು ಅಪ್‌ಲಿಂಕ್ ಮಾಡಲು ಡಿಡಿಕೆ ಗುವಾಹಟಿ, ಶಿಲ್ಲಾಂಗ್, ಐಜ್ವಾಲ್, ಇಟಾನಗರ, ಅಗರ್ತಲಾ, ಕೊಹಿಮಾ, ಇಂಫಾಲ್, ಗ್ಯಾಂಗ್‌ಟಾಕ್ ಮತ್ತು ಪೋರ್ಟ್ ಬ್ಲೇರ್‌ನಲ್ಲಿ ಕೇಂದ್ರಗಳನ್ನು ನವೀಕರಿಸುವುದು ಮತ್ತು ಬದಲಾಯಿಸುವುದು.
 
ಯೋಜನೆಯ ಕೆಲವು ಪ್ರಮುಖ ಲಕ್ಷಣಗಳು ಈ ಕೆಳಗಿನಂತಿವೆ:
 
1. 10 ಕಿ.ವ್ಯಾನ 41 ಎಫ್‌ ಎಂ ಟ್ರಾನ್ಸ್‌ಮಿಟರ್‌ಗಳು ಮತ್ತು 100 ಸಂಖ್ಯೆಗಳ ಜೊತೆಗೆ ಹೆಚ್ಚಿನ ಸಾಮರ್ಥ್ಯಗಳು ದೇಶದಲ್ಲಿ ಪ್ರಾಥಮಿಕವಾಗಿ ಶ್ರೇಣಿ-II ಮತ್ತು ಶ್ರೇಣಿ-III ನಗರಗಳು, ಎಲ್‌ಡಬ್ಲ್ಯೂ ಇ ಪ್ರದೇಶ ಮತ್ತು ಗಡಿ ಪ್ರದೇಶಗಳು ಮತ್ತು ದೇಶದ ಮಹತ್ವಾಕಾಂಕ್ಷೆಯ  ಶ್ರೇಣಿಗೆ ಸೇರುವ ಜಿಲ್ಲೆಗಳಲ್ಲಿ 6 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ಎಫ್‌ ಎಂ ವ್ಯಾಪ್ತಿಯನ್ನು ಹೆಚ್ಚಿಸಲು 100 ವ್ಯಾ ಟ್ರಾನ್ಸ್‌ಮಿಟರ್‌ಗಳು. 

2. ಸಮೃದ್ಧಿಯಾಗಿರುವ ಮತ್ತು ವೈವಿಧ್ಯಮಯ ಚಾನೆಲ್‌ಗಳನ್ನು ಉಚಿತವಾಗಿ ಒದಗಿಸಲು ಅಸ್ತಿತ್ವದಲ್ಲಿರುವ 116 ಚಾನಲ್‌ಗಳಿಂದ ಸುಮಾರು 250 ಚಾನಲ್‌ಗಳಿಗೆ ಡಿಡಿ ಉಚಿತ ಡಿಶ್ ಸಾಮರ್ಥ್ಯವನ್ನು ವಿಸ್ತರಿಸುವುದು.

3.  ಡಿಡಿ ಫ್ರೀ ಡಿಶ್ ಪ್ರಸಾರ ಭಾರತಿಯ ಫ್ರೀ-ಟು-ಏರ್ ಡೈರೆಕ್ಟ್ ಟು ಹೋಮ್ (ಡಿಟಿಎಚ್) ಪ್ಲಾಟ್‌ಫಾರ್ಮ್ ಆಗಿದ್ದು, ಇದು ಅಂದಾಜು 4.30 ಕೋಟಿ ಸಂಪರ್ಕಗಳನ್ನು ಹೊಂದಿದೆ (ಎಫ್‌ಐಸಿಸಿಐ ಮತ್ತು ಇ&ವೈ ವರದಿ 2022 ರ ಪ್ರಕಾರ) ಇದು ಭಾರತದ ಅತಿದೊಡ್ಡ ಡಿಟಿಎಚ್‌ ಪ್ಲಾಟ್‌ಫಾರ್ಮ್ ಆಗಿದೆ ಎಂದು ಇಲ್ಲಿ ತಿಳಿಸುವುದು ಸೂಕ್ತವಾಗಿದೆ. ಡಿಡಿ ಫ್ರೀ ಡಿಶ್‌ನ ವೀಕ್ಷಕರು ಈ ಪ್ಲಾಟ್‌ಫಾರ್ಮ್‌ನ ಚಾನಲ್‌ಗಳನ್ನು ವೀಕ್ಷಿಸಲು ಯಾವುದೇ ಮಾಸಿಕ ಅಥವಾ ವಾರ್ಷಿಕ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಈ ಪ್ಲಾಟ್‌ಫಾರ್ಮ್ 49 ದೂರದರ್ಶನ ಮತ್ತು ಸಂಸದ್ ಚಾನೆಲ್‌ಗಳನ್ನು ಒಳಗೊಂಡಿರುವ 167 ಟಿವಿ ಚಾನೆಲ್‌ಗಳ ಸಮೃದ್ಧ ಚಾನಲ್ಗಳನ್ನು ಹೊಂದಿದೆ, ಇವುಗಳಲ್ಲಿ ಪ್ರಮುಖ ಪ್ರಸಾರಕರ 77 ಖಾಸಗಿ ಟಿವಿ ಚಾನೆಲ್‌ಗಳು (11 ಜಿಇಸಿ, 14 ಚಲನಚಿತ್ರ, 21 ಸುದ್ದಿ, 7 ಸಂಗೀತ, 9 ಪ್ರಾದೇಶಿಕ, 7 ಭೋಜ್‌ಪುರಿ, 1 ಕ್ರೀಡೆ, 5 ಭಕ್ತಿ ಚಾನೆಲ್‌ಗಳು, 3 ವಿದೇಶಿ ಚಾನೆಲ್), 51 ಶೈಕ್ಷಣಿಕ ವಾಹಿನಿಗಳು ಮತ್ತು 48 ರೇಡಿಯೋ ಚಾನೆಲ್‌ಗಳು ಸೇರಿವೆ. 

4.      ವಿಪತ್ತು ಅಥವಾ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಅಡಚಣೆಯಿಲ್ಲದ ಡಿಟಿಎಚ್ ಸೇವೆಯನ್ನು ಖಚಿತಪಡಿಸಿಕೊಳ್ಳಲು ಡಿಡಿ ಉಚಿತ ಡಿಶ್ ವಿಪತ್ತು ವಿರೋಧಿ  ಸೌಲಭ್ಯವನ್ನು ಸ್ಥಾಪಿಸುವುದು. 

5.      ತಡೆರಹಿತ ಮತ್ತು ಪರಿಣಾಮಕಾರಿ ಉತ್ಪಾದನೆ ಮತ್ತು ಪ್ರಸರಣಕ್ಕಾಗಿ ಕ್ಷೇತ್ರ ಕೇಂದ್ರಗಳ ಪ್ರಸಾರ ಸೌಲಭ್ಯಗಳ ಆಟೊಮೇಷನ್ ಮತ್ತು ಆಧುನೀಕರಣಗೊಳಿಸುವುದು. ದೇಶಾದ್ಯಂತ ಇದು ಸ್ವಯಂಚಾಲಿತ ಪ್ಲೇಔಟ್ ಸೌಲಭ್ಯಗಳು, ನ್ಯೂಸ್ ರೂಮ್ ಆಧುನಿಕ ಕಂಪ್ಯೂಟರ್ ಸಿಸ್ಟಂಗಳು, ಸುದ್ದಿ ಉತ್ಪಾದನಾ ವ್ಯವಸ್ಥೆ, ನೈಜ-ಸಮಯದ ಪ್ರೊಡಕ್ಷನ್ ಎಡಿಟಿಂಗ್ ಮತ್ತು ಪ್ರಸರಣವನ್ನು ಪೂರೈಸಲು ಫೈಲ್ ಆಧಾರಿತ ಕೆಲಸದ ಹರಿವು, ಆಧುನಿಕ ಸ್ಟುಡಿಯೋ ಕ್ಯಾಮೆರಾಗಳು, ಲೆನ್ಸ್‌ಗಳು, ಸ್ವಿಚರ್‌ಗಳು, ರೂಟರ್‌ಗಳು ಇತ್ಯಾದಿಗಳನ್ನು ಮತ್ತು ದೂರದರ್ಶನದ ಕೇಂದ್ರಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸುತ್ತದೆ,. ಈ ಸಾಮರ್ಥ್ಯ ವರ್ಧನೆಯು ಆಧುನಿಕ ಟಿವಿ ಸ್ಟುಡಿಯೋ ಉತ್ಪಾದನೆಯ ಸಮಯ, ತಂತ್ರಜ್ಞಾನ ಮತ್ತು ತಂತ್ರದೊಂದಿಗೆ ಹೊಂದಾಣಿಕೆ ಮಾಡಲು ದೂರದರ್ಶನವನ್ನು ಸಕ್ರಿಯಗೊಳಿಸುತ್ತದೆ. 

6.      ಮನರಂಜನೆ, ಆರೋಗ್ಯ, ಶಿಕ್ಷಣ, ಯುವಜನತೆ, ಕ್ರೀಡೆ ಮತ್ತು ಇತರ ಸಾರ್ವಜನಿಕ ಸೇವಾ ವಿಷಯಗಳ ಮೇಲೆ ಕೇಂದ್ರೀಕರಿಸಿ ಪ್ರಾದೇಶಿಕ ಭಾಷೆಗಳನ್ನು ಒಳಗೊಂಡಂತೆ ಸಮೃದ್ಧ ವಿಷಯವನ್ನು ಒದಗಿಸುವುದು.

7.      ತ್ವರಿತ ಪ್ರತಿಕ್ರಿಯೆ ಸಾಮರ್ಥ್ಯಗಳೊಂದಿಗೆ ಸುದ್ದಿ ಸಂಗ್ರಹಣೆ ಸೌಲಭ್ಯಗಳನ್ನು ಬಲಪಡಿಸುವುದು ಹಾಗು ಸ್ಥಳೀಯ ಮತ್ತು ಹೈಪರ್ ಲೋಕಲ್ ಸುದ್ದಿ ಪ್ರಸಾರದ ಪಾಲನ್ನು ಹೆಚ್ಚಿಸಲು ಅರೆ-ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸುವುದು. 

8.      ವಿವಿದ  ವಿಷಯಗಳ ಕಾರ್ಯಕ್ರಮಗಳ ನಿರ್ಮಾಣಕ್ಕಾಗಿ ಆಗ್ಮೆಂಟಡ್‌ ರಿಯಾಲಿಟಿ ಮತ್ತು ವರ್ಚುವಲ್ ರಿಯಾಲಿಟಿಯಂತಹ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದು. 

9.      ಉಪಗ್ರಹ ಟ್ರಾನ್ಸ್‌ಪಾಂಡರ್‌ಗಳ ಸಮರ್ಥ ಬಳಕೆಗಾಗಿ ಸ್ಪೆಕ್ಟ್ರಮ್ ಸಮರ್ಥ ತಂತ್ರಜ್ಞಾನದೊಂದಿಗೆ ಅಸ್ತಿತ್ವದಲ್ಲಿರುವ ಅಪ್-ಲಿಂಕ್ ಸ್ಟೇಷನ್‌ಗಳನ್ನು ನವೀಕರಿಸುವುದು 

10.   ಎಐಆರ್‌ ಮತ್ತು ಡಿಡಿ ಜಾಲತಾಣದಲ್ಲಿ ದತ್ತಾಂಶದ ಹರಿವಿನ ಪರಿಣಾಮಕಾರಿ ನಿರ್ವಹಣೆಯೊಂದಿಗೆ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ. 

11.    ದೇಶೀಯ ಮತ್ತು ವಿದೇಶದ ಪ್ರೇಕ್ಷಕರಿಗೆ ಡಿಜಿಟಲ್ ಪ್ರಸಾರ ವ್ಯಾಪ್ತಿಯ ಗಮನಾರ್ಹ ಹೆಚ್ಚಳ.  

12.   ದೂರದ, ಬುಡಕಟ್ಟು, ಎಲ್‌ಡಬ್ಲ್ಯೂ ಇ ಪ್ರದೇಶ, ಮತ್ತು ಗಡಿ ಪ್ರದೇಶಗಳಿಗೆ ಈ ಪ್ರದೇಶಗಳಲ್ಲಿನ ಪ್ರೇಕ್ಷಕರಿಗೆ ದೂರದರ್ಶನ ಮತ್ತು ರೇಡಿಯೋ ಸೇವೆಗಳನ್ನು ಪ್ರವೇಶಿಸಲು 8 ಲಕ್ಷಕ್ಕೂ ಹೆಚ್ಚು ಡಿಡಿ ಡಿಟಿಎಚ್‌  ರಿಸೀವರ್ ಸೆಟ್‌ಗಳ ಉಚಿತ ವಿತರಣೆಯನ್ನು ಯೋಜಿಸಲಾಗಿದೆ.

ಈ ಯೋಜನೆಯು ಪ್ರಸಾರ ಉಪಕರಣಗಳ ಪೂರೈಕೆ ಮತ್ತು ಸ್ಥಾಪನೆಗೆ ಸಂಬಂಧಿಸಿದ ಉತ್ಪಾದನೆ ಮತ್ತು ಸೇವೆಗಳ ಮೂಲಕ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ. ಪ್ರಸಾರಕ್ಕೆ ಅಗತ್ಯವಾದ ವಿಷಯ ನಿರ್ಮಾಣವು ವಿಷಯ ಉತ್ಪಾದನಾ ವಲಯದಲ್ಲಿ ವಿವಿಧ ಮಾಧ್ಯಮ ಕ್ಷೇತ್ರಗಳಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ.

******


(Release ID: 1889292) Visitor Counter : 241