ಸಂಪುಟ
azadi ka amrit mahotsav

ಮಾಜಿ ರಕ್ಷಣಾ ಸಚಿವ ಮತ್ತು ನಾಲ್ಕು ಬಾರಿ ಗೋವಾ ಮುಖ್ಯಮಂತ್ರಿಯಾಗಿದ್ದ ದಿವಂಗತ ಶ್ರೀ ಮನೋಹರ್ ಪಾರಿಕ್ಕರ್ ಅವರ ಗೌರವಾರ್ಥ ಗೋವಾದ ಹಸಿರು ವಲಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊಪಾಕ್ಕೆ 'ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ - ಮೋಪಾ, ಗೋವಾ' ಎಂದು ನಾಮಕರಣ ಮಾಡಲು ಸಂಪುಟದ ಪೂರ್ವಾನ್ವಯ ಸಮ್ಮತಿ 

ಪ್ರಕಟಣಾ ದಿನಾಂಕ: 04 JAN 2023 4:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಗೋವಾದ ಮೋಪಾ ಹಸಿರು ವಲಯ ವಿಮಾನ ನಿಲ್ದಾಣಕ್ಕೆ ಮಾಜಿ ರಕ್ಷಣಾ ಸಚಿವ ಮತ್ತು ನಾಲ್ಕು ಬಾರಿ ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪಾರಿಕ್ಕರ್ ಅವರ ಗೌರವಾರ್ಥ ‘ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ಮೋಪಾ ಗೋವಾ’ ಎಂದು ನಾಮಕರಣ ಮಾಡಲು ಪೂರ್ವಾನ್ವಯ ಅನುಮೋದನೆ ನೀಡಿದೆ.

ಗೋವಾ ರಾಜ್ಯದ ಜನತೆಯ ಆಕಾಂಕ್ಷೆ ಈಡೇರಿಸಲು, ಗೋವಾದ ಮಾನ್ಯ ಮುಖ್ಯಮಂತ್ರಿಗಳು ಗೋವಾದ ಹಸಿರು ವಲಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊಪಾಕ್ಕೆ 'ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ಮೋಪಾ, ಗೋವಾ' ಎಂದು ಹೆಸರಿಸಲು ಗೋವಾ ರಾಜ್ಯ ಸರ್ಕಾರದ ಸಚಿವ ಸಂಪುಟದ ಸರ್ವಾನುಮತದ ನಿರ್ಣಯವನ್ನು ಕೇಂದ್ರಕ್ಕೆ ತಿಳಿಸಿದ್ದರು.

ಮೋಪಾದಲ್ಲಿರುವ ಹಸಿರು ವಲಯ ವಿಮಾನ ನಿಲ್ದಾಣವನ್ನು ಮಾನ್ಯ ಪ್ರಧಾನಮಂತ್ರಿಯವರು 2022ರ ಡಿಸೆಂಬರ್‌ ನಲ್ಲಿ ಉದ್ಘಾಟಿಸಿದ್ದರು. ಆಧುನಿಕ ಗೋವಾ ನಿರ್ಮಾಣದಲ್ಲಿ ಮಾಜಿ ರಕ್ಷಣಾ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಡಾ. ಮನೋಹರ್ ಪಾರಿಕ್ಕರ್ ಅವರ ಕೊಡುಗೆಯನ್ನು ಗುರುತಿಸಿ ಈ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗಿದೆ. 

*****


(ಪ್ರಕಟಣೆ ಐ.ಡಿ.: 1888561) ವಿಸಿಟರ್ ಕೌಂಟರ್ : 211