ಸಂಪುಟ
2019ರ ಜುಲೈ 01 ರಿಂದ ಅನ್ವಯವಾಗುವಂತೆ ಒಂದು ಶ್ರೇಣಿ ಒಂದು ಪಿಂಚಣಿಯಡಿ ಸಶಸ್ತ್ರ ಪಡೆಗಳ ಪಿಂಚಣಿದಾರರು/ ಕುಟುಂಬ ಪಿಂಚಣಿದಾರರ ಪಿಂಚಣಿಯನ್ನು ಪರಿಷ್ಕರಿಸಲು ಕೇಂದ್ರ ಸಚಿವ ಸಂಪುಟದ ಅನುಮೋದನೆ
2019ರ ಜೂನ್ 30ರವರೆಗೆ ನಿವೃತ್ತರಾದ ಸಶಸ್ತ್ರ ಪಡೆಗಳ ಯೋಧರು ಈ ವ್ಯಾಪ್ತಿಗೆ ಬರಲಿದ್ದಾರೆ; 25.13 ಲಕ್ಷಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆಯಲಿದ್ದಾರೆ 2019ರ ಜುಲೈನಿಂದ 2022 ಜೂನ್ ವರೆಗೆ 23,638 ಕೋಟಿ ರೂ. ಬಾಕಿ ಪಾವತಿ ಶೇ.31ರಷ್ಟು ತುಟ್ಟಿಭತ್ಯೆ ಪರಿಹಾರದೊಂದಿಗೆ ಪರಿಷ್ಕೃತ ಪಿಂಚಣಿ ಅನುಷ್ಠಾನಕ್ಕಾಗಿ ಹೆಚ್ಚುವರಿ ವಾರ್ಷಿಕ ವೆಚ್ಚ ಅಂದಾಜು 8,450 ಕೋಟಿ ರೂ. ಎಂದು ಲೆಕ್ಕಹಾಕಲಾಗಿದೆ
Posted On:
23 DEC 2022 8:39PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2019ರ ಜುಲೈ 01ರಿಂದ ಅನ್ವಯವಾಗುವಂತೆ ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ ಒಪಿ) ಅಡಿಯಲ್ಲಿ ಸಶಸ್ತ್ರ ಪಡೆಗಳ ಪಿಂಚಣಿದಾರರು/ ಕುಟುಂಬ ಪಿಂಚಣಿದಾರರ ಪಿಂಚಣಿಯನ್ನು ಪರಿಷ್ಕರಿಸಲು ತನ್ನ ಅನುಮೋದನೆ ನೀಡಿದೆ. ಹಿಂದಿನ ಪಿಂಚಣಿದಾರರ ಪಿಂಚಣಿಯನ್ನು 2018 ರ ಕ್ಯಾಲೆಂಡರ್ ವರ್ಷದಲ್ಲಿ ರಕ್ಷಣಾ ಪಡೆಗಳಿಂದ ಅದೇ ಸೇವಾ ಅವಧಿಯೊಂದಿಗೆ ಅದೇ ಶ್ರೇಣಿಯಲ್ಲಿ ನಿವೃತ್ತರಾದವರ ಕನಿಷ್ಠ ಮತ್ತು ಗರಿಷ್ಠ ಪಿಂಚಣಿಯ ಸರಾಸರಿ ಆಧಾರದ ಮೇಲೆ ಮರು ನಿಗದಿಪಡಿಸಲಾಗುತ್ತದೆ.
ಫಲಾನುಭವಿಗಳು
2019ರ ಜೂನ್ 30ರವರೆಗೆ ನಿವೃತ್ತರಾದ ಸಶಸ್ತ್ರ ಪಡೆಗಳ ಸಿಬ್ಬಂದಿ {2014ರ ಜುಲೈ 01 ರಿಂದ ಅನ್ವಯವಾಗುವಂತೆ ಅವಧಿಗೆ ಮೊದಲೇ (ಪಿಎಂಆರ್) ನಿವೃತ್ತರನ್ನು ಹೊರತುಪಡಿಸಿ} ಈ ಪರಿಷ್ಕರಣೆಗೆ ಒಳಪಡುತ್ತಾರೆ. 25.13 ಲಕ್ಷಕ್ಕೂ ಹೆಚ್ಚು (4.52 ಲಕ್ಷಕ್ಕೂ ಹೆಚ್ಚು ಹೊಸ ಫಲಾನುಭವಿಗಳು ಸೇರಿದಂತೆ) ಸಶಸ್ತ್ರ ಪಡೆಗಳ ಪಿಂಚಣಿದಾರರು / ಕುಟುಂಬ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಸರಾಸರಿಗಿಂತ ಹೆಚ್ಚು ಪಿಂಚಣಿಯನ್ನು ಪಡೆಯುತ್ತಿದ್ದಲ್ಲಿ ಅದನ್ನು ರಕ್ಷಿಸಲಾಗುವುದು. ಯುದ್ಧದಲ್ಲಿ ಮೃತಪಟ್ಟ ಯೋಧರ ವಿಧವಾ ಪತ್ನಿ ಮತ್ತು ವಿಕಲಾಂಗರಾದ ಪಿಂಚಣಿದಾರರು ಸೇರಿದಂತೆ ಕುಟುಂಬ ಪಿಂಚಣಿದಾರರಿಗೆ ಈ ಪ್ರಯೋಜನವನ್ನು ವಿಸ್ತರಿಸಲಾಗುವುದು.
ಬಾಕಿಯನ್ನು ನಾಲ್ಕು ಅರ್ಧವಾರ್ಷಿಕ ಕಂತುಗಳಲ್ಲಿ ಪಾವತಿಸಲಾಗುವುದು. ಆದಾಗ್ಯೂ, ವಿಶೇಷ / ಉದಾರೀಕೃತ ಕುಟುಂಬ ಪಿಂಚಣಿ ಮತ್ತು ಶೌರ್ಯ ಪ್ರಶಸ್ತಿ ವಿಜೇತರು ಸೇರಿದಂತೆ ಎಲ್ಲಾ ಕುಟುಂಬ ಪಿಂಚಣಿದಾರರಿಗೆ ಒಂದೇ ಕಂತಿನಲ್ಲಿ ಬಾಕಿ ಪಾವತಿಸಲಾಗುತ್ತದೆ.
ವೆಚ್ಚ
ಪರಿಷ್ಕೃತ ಪಿಂಚಣಿಯ ಅನುಷ್ಠಾನಕ್ಕಾಗಿ ಅಂದಾಜು ಮಾಡಿದ ವಾರ್ಷಿಕ ವೆಚ್ಚವನ್ನು @ 31% ತುಟ್ಟಿಭತ್ಯೆ ಪರಿಹಾರ (ಡಿಆರ್)ದಂತೆ 8,450 ಕೋಟಿ ರೂ.ಗಳು ಎಂದು ಲೆಕ್ಕಹಾಕಲಾಗಿದೆ. 2019ರ ಜುಲೈ 01ರಿಂದ 2021ರ ಜೂನ್ 30 ರವರೆಗೆ ಡಿಆರ್ @ ಶೇ.17 ಮತ್ತು 2021ರ ಜುಲೈ 01ರಿಂದ 2021 ಡಿಸೆಂಬರ್ 31 ರವರೆಗಿನ ಅವಧಿಗೆ ಶೇ.31 ರ ಡಿ.ಆರ್. ಆಧಾರದಂತೆ 2019ರ ಜುಲೈ 01 ರಿಂದ ಅನ್ವಯವಾಗುವಂತೆ 2021ರ ಡಿಸೆಂಬರ್ 31 ರವರೆಗೆ ಬಾಕಿಯನ್ನು 19,316 ಕೋಟಿ ರೂ.ಗಳಿಗೂ ಹೆಚ್ಚು ಎಂದು ಲೆಕ್ಕಹಾಕಲಾಗಿದೆ. 2019 ಜುಲೈ 01ರಿಂದ ಅನ್ವಯವಾಗುವಂತೆ 2022 ಜೂನ್ 30 ರವರೆಗಿನ ಬಾಕಿಯನ್ನು ಅನ್ವಯವಾಗುವ ತುಟ್ಟಿಭತ್ಯೆ ಪರಿಹಾರದ ಪ್ರಕಾರ ಅಂದಾಜು 23,638 ಕೋಟಿ ರೂ. ಎಂದು ಲೆಕ್ಕಹಾಕಲಾಗಿದೆ. ಈ ವೆಚ್ಚವು ಹಾಲಿ ಒಆರ್ ಒಪಿ ಖಾತೆಯ ವೆಚ್ಚಕ್ಕಿಂತ ಅಧಿಕವಾಗಿದೆ.
2019 ಜುಲೈ 01ರಿಂದ ಅನ್ವಯವಾಗುವಂತೆ ಒಆರ್.ಓಪಿ ಅಡಿಯಲ್ಲಿ ಸೇವಾ ಪಿಂಚಣಿಯಲ್ಲಿ ಶ್ರೇಣಿವಾರು ಅಂದಾಜು ಹೆಚ್ಚಳ (ರೂಪಾಯಿಗಳಲ್ಲಿ):
ಶ್ರೇಣಿ
|
01.01.2016ರಲ್ಲಿದ್ದ ಪಿಂಚಣಿ
|
01.07.2019 ರಿಂದ ಅನ್ವಯವಾಗುವಂತೆ ಪರಿಷ್ಕೃತ ಪಿಂಚಣಿ
|
1.07.2021 ರಿಂದ ಅನ್ವಯವಾಗುವಂತೆ ಪರಿಷ್ಕೃತ ಪಿಂಚಣಿ
|
01.07.2019 ರಿಂದ 30.06.2022ರವರೆಗೆ ನೀಡಬೇಕಾದ ಸಂಭಾವ್ಯ ಬಾಕಿ
|
ಸಿಪಾಯಿ
|
17,699
|
19,726
|
20,394
|
87,000
|
ನಾಯಿಕ್
|
18,427
|
21,101
|
21,930
|
1,14,000
|
ಹವಾಲ್ದಾರ್
|
20,066
|
21,782
|
22,294
|
70,000
|
ಎನ್.ಬಿ. ಸುಬೇದಾರ್
|
24,232
|
26,800
|
27,597
|
1,08,000
|
ಸಬ್ ಮೇಜರ್
|
33,526
|
37,600
|
38,863
|
1,75,000
|
ಮೇಜರ್
|
61,205
|
68,550
|
70,827
|
3,05,000
|
ಲೆ. ಕರ್ನಲ್
|
84,330
|
95,400
|
98,832
|
4,55,000
|
ಕರ್ನಲ್
|
92,855
|
1,03,700
|
1,07,062
|
4,42,000
|
ಬ್ರಿಗೇಡಿಯರ್
|
96,555
|
1,08,800
|
1,12,596
|
5,05,000
|
ಮೇ.ಜನರಲ್
|
99,621
|
1,09,100
|
1,12,039
|
3,90,000
|
ಲೆ. ಜನರಲ್
|
1,01,515
|
1,12,050
|
1,15,316
|
4,32,000
|
ಹಿನ್ನೆಲೆ
ರಕ್ಷಣಾ ಪಡೆಗಳ ಸಿಬ್ಬಂದಿ/ ಕುಟುಂಬ ಪಿಂಚಣಿದಾರರಿಗೆ ಒಆರ್ ಒಪಿಯನ್ನು ಜಾರಿಗೆ ತರಲು ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದು, 2014ರ ಜುಲೈ 01 ರಿಂದ ಅನ್ವಯವಾಗುವಂತೆ ಪಿಂಚಣಿ ಪರಿಷ್ಕರಣೆಗಾಗಿ 2015ರ ನವೆಂಬರ್ 07ರಂದು ನೀತಿ ಪತ್ರವನ್ನು ಬಿಡುಗಡೆ ಮಾಡಿತು. ಸದರಿ ನೀತಿ ಪತ್ರದಲ್ಲಿ, ಭವಿಷ್ಯದಲ್ಲಿ, ಪಿಂಚಣಿಯನ್ನು ಪ್ರತಿ 5 ವರ್ಷಗಳಿಗೊಮ್ಮೆ ಮರು ನಿಗದಿಪಡಿಸಲಾಗುವುದು ಎಂದು ಉಲ್ಲೇಖಿಸಲಾಗಿತ್ತು. ಒಆರ್ ಒಪಿ ಅನುಷ್ಠಾನಕ್ಕಾಗಿ ಎಂಟು ವರ್ಷಗಳಲ್ಲಿ ವರ್ಷಕ್ಕೆ 7,123 ಕೋಟಿ ರೂ.ನಂತೆ ಅಂದಾಜು 57,000 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
*****
(Release ID: 1886204)
|