ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಸ್ಕ್ಯಾನ್ ಮತ್ತು ಶೇರ್ ಸೇವೆಯ ಮೂಲಕ ಆಸ್ಪತ್ರೆಗಳಲ್ಲಿ ತ್ವರಿತ ಹೊರರೋಗಿ ವಿಭಾಗ ಸುಗಮ ನೋಂದಣಿ


ಈ ಸೇವೆ ಬಳಸಿಕೊಂಡು 1,00,000 ಕ್ಕೂ ಹೆಚ್ಚು ರೋಗಿಗಳು ವೇಗವಾಗಿ ಹೊರರೋಗಿ ವಿಭಾಗ ನೋಂದಣಿಯ ಪ್ರಯೋಜನವನ್ನು ಪಡೆದಿದ್ದಾರೆ 

Posted On: 21 DEC 2022 12:04PM by PIB Bengaluru

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ(NHA) ತನ್ನ ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ರೋಗಿಗಳಿಗೆ ಸ್ಕ್ಯಾನ್ ಮತ್ತು ಶೇರ್ ಕ್ರಿಯಾತ್ಮಕತೆಯ ಮೂಲಕ ವೇಗವಾಗಿ ಹೊರರೋಗಿ ವಿಭಾಗ(OPD) ನೋಂದಣಿ ಸೇವೆಯನ್ನು ನೀಡುತ್ತದೆ. ಕಳೆದ ಅಕ್ಟೋಬರ್ ನಲ್ಲಿ ದೆಹಲಿಯ ಒಂದು ಆಸ್ಪತ್ರೆಯಿಂದ ಪ್ರಾಯೋಗಿಕವಾಗಿ ಆರಂಭಿಸಲಾದ ಸೇವೆಯನ್ನು ಈಗ ಭಾರತದ 18 ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. 

ಆರಂಭವಾದ 75 ದಿನಗಳಲ್ಲಿ, ಸ್ಕ್ಯಾನ್ ಮತ್ತು ಶೇರ್ ಸೇವೆಯು ಈಗಾಗಲೇ 1 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ OPD ಸಮಾಲೋಚನೆಗೆ ತ್ವರಿತ ನೋಂದಣಿಯನ್ನು ಸಕ್ರಿಯಗೊಳಿಸುವ ಮೂಲಕ ಅವರ ಸಮಯ ಮತ್ತು ಪ್ರಯತ್ನಗಳನ್ನು ಉಳಿಸಲು ಸಹಾಯ ಮಾಡಿದೆ. ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸಲು ಈ ಸೌಲಭ್ಯವನ್ನು ಬಳಸುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ, ದೆಹಲಿ, ಉತ್ತರ ಪ್ರದೇಶ ರಾಜ್ಯಗಳು ಸೇರಿವೆ.

ಈ ಸೇವೆಯು ರೋಗಿಗಳು ತಮ್ಮ ಆಯ್ಕೆಯ ಯಾವುದೇ ಆರೋಗ್ಯ ಅಪ್ಲಿಕೇಶನ್ ನ್ನು ಬಳಸಿಕೊಂಡು (ABHA ಅಪ್ಲಿಕೇಶನ್, ಆರೋಗ್ಯ ಸೇತು ಅಪ್ಲಿಕೇಶನ್, ಎಕಾಕೇರ್, ಡಿರಿಫ್ ಕೇಸ್, ಬಜಾಜ್ ಹೆಲ್ತ್, ಪೇಟಿಎಂನಂತಹ) ಆಸ್ಪತ್ರೆ/ಆರೋಗ್ಯ ಸೌಲಭ್ಯದ ವಿಶಿಷ್ಠ QR ಕೋಡ್ ನ್ನು ಸರಳವಾಗಿ ಸ್ಕ್ಯಾನ್ ಮಾಡಲು ಮತ್ತು ಅವರ ABHA ಪ್ರೊಫೈಲ್ ನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ರೋಗಿಯ ಹೆಸರು, ಪೋಷಕರ ಹೆಸರು, ವಯಸ್ಸು, ಲಿಂಗ, ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಅವರ ABHA (ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ) ಯಿಂದ ನೇರವಾಗಿ ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆ (HMIS)ಯೊಂದಿಗೆ ಹಂಚಿಕೊಂಡು ಡಿಜಿಟಲ್ ನೋಂದಣಿ ಮಾಡಿಕೊಳ್ಳಬಹುದು. ರೋಗಿಯು ನಂತರ ತಮ್ಮ ಹೊರರೋಗಿಗಳ ಚೀಟಿಯನ್ನು ಸಂಗ್ರಹಿಸಿ ವೈದ್ಯರನ್ನು ಭೇಟಿ ಮಾಡಲು ಕೌಂಟರ್‌ಗೆ ಭೇಟಿ ನೀಡಬಹುದು.

ಈ ಸೇವೆಯ ಬಗ್ಗೆ ಮಾತನಾಡಿದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಡಾ. ಆರ್ ಎಸ್ ಶರ್ಮಾ, "ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಆರೋಗ್ಯ ವಿತರಣಾ ಪ್ರಕ್ರಿಯೆಗಳಲ್ಲಿ ಸುಲಭವಾಗಿ ಪ್ರಚಾರ ಮಾಡುತ್ತಿದ್ದೇವೆ. ಸ್ಕ್ಯಾನ್ ಮತ್ತು ಶೇರ್ ಕಾರ್ಯಚಟುವಟಿಕೆಯು ಅಂತಹ ಒಂದು ವೈಶಿಷ್ಟ್ಯವಾಗಿದ್ದು ಅದು ಪ್ರತಿದಿನ ಭಾರತದಲ್ಲಿ ಸಾವಿರಾರು ರೋಗಿಗಳಿಗೆ ಸಹಾಯ ಮಾಡುತ್ತಿದೆ. ಈ ತ್ವರಿತ ನೋಂದಣಿ ಸೇವೆಯನ್ನು ಕಾರ್ಯಗತಗೊಳಿಸಲು ನಮ್ಮ ತಂಡವು ದೇಶಾದ್ಯಂತ ವಿವಿಧ ಆಸ್ಪತ್ರೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಭಾಗವಹಿಸುವ ಆರೋಗ್ಯ ಸೌಲಭ್ಯಗಳಲ್ಲಿ ಬಳಕೆದಾರರ ಆಯ್ಕೆಮಾಡಿದ ಅಪ್ಲಿಕೇಶನ್ ಮತ್ತು ನೇರವಾಗಿ ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆ ನಡುವಿನ ಸರಳವಾದ ಅಂತರ್-ಕಾರ್ಯನಿರ್ವಹಣೆಯ ಮೂಲಕ, ಆಸ್ಪತ್ರೆಗಳು ಮತ್ತು ರೋಗಿಗಳು ಎರಡೂ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.

ಈ ಸ್ಕ್ಯಾನ್ ಮತ್ತು ಹಂಚಿಕೆ ಕಾರ್ಯಚಟುವಟಿಕೆಯಿಂದ OPD ನೋಂದಣಿಯನ್ನು ನಿರಾತಂಕವಾಗಿ, ತಡೆರಹಿತವಾಗಿ ಮತ್ತು ನಿಖರವಾಗಿ ಮಾಡಲಾಗಿದೆ. ಈ ಪ್ರಕ್ರಿಯೆಯು ರೋಗಿಯನ್ನು ತನ್ನನ್ನು ತಾನೇ ನೋಂದಾಯಿಸಿಕೊಳ್ಳಲು ಅಧಿಕಾರವನ್ನು ನೀಡಿದೆ, ವೈದ್ಯರ ಮರುಭೇಟಿಗಳ ಸಂದರ್ಭದಲ್ಲಿ ವಿಶೇಷವಾಗಿ ದೀರ್ಘ ಸರತಿಯಲ್ಲಿ ನಿಲ್ಲುವ ಪ್ರಮೇಯ ಬರುವುದಿಲ್ಲ. ಇದು ರೋಗಿಗಳಿಗೆ ತಕ್ಷಣದ ಮತ್ತು ನೈಜ ಪ್ರಯೋಜನವನ್ನು ಒದಗಿಸುವುದಲ್ಲದೆ ಅವರ ಆರೋಗ್ಯ ಅಗತ್ಯಗಳಿಗೆ ಡಿಜಿಟಲ್ ಪರಿಹಾರಗಳನ್ನು ಒದಗಿಸುತ್ತದೆ. 

OPD ಟೋಕನ್ ನವೀಕರಣ ಆಯುಷ್ಮಾನ್ ಭಾರತ್ ಮಿಷನ್ ಅಡಿಯಲ್ಲಿ ಸಾರ್ವಜನಿಕ ಡ್ಯಾಶ್‌ಬೋರ್ಡ್‌ನಲ್ಲಿನ ‘ಆರೋಗ್ಯ ಸೌಲಭ್ಯ ಟೋಕನ್’ ಟ್ಯಾಬ್ ಅಡಿಯಲ್ಲಿ ಲಭ್ಯವಿದೆ - ಅದು https://dashboard.abdm.gov.in/abdm/ ಆಗಿದೆ. 

*****



(Release ID: 1885389) Visitor Counter : 121