ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

2022ನೇ ಸಾಲಿನ ಸಿ.ಪಿ.ಜಿ.ಆರ್.ಎ.ಎಂ.ಎಸ್ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್


ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಂದ 18,19,104 ಕುಂದುಕೊರತೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 15,68,097 ಪಿಜಿ ಪ್ರಕರಣಗಳನ್ನು 2022 ರಲ್ಲಿ ಪರಿಹರಿಸಲಾಗಿದೆ

ಈ ಪೈಕಿ 11,29,642 ಪ್ರಕರಣಗಳನ್ನು ಕೇಂದ್ರ ಸಚಿವಾಲಯಗಳು ಮತ್ತು 4,38,455 ಪ್ರಕರಣಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇತ್ಯರ್ಥಪಡಿಸಿವೆ.

ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸರಾಸರಿ ವಿಲೇವಾರಿ ಸಮಯವು 2021 ರಲ್ಲಿದ್ದ 32 ದಿನಗಳಿಂದ 2022 ರಲ್ಲಿ 27 ದಿನಗಳಿಗೆ ಸುಧಾರಿಸಿದೆ.

Posted On: 20 DEC 2022 1:03PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ; ಭೂ ವಿಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ); ಪ್ರಧಾನಮಂತ್ರಿಗಳ ಕಾರ್ಯಾಲಯದ ರಾಜ್ಯ ಸಚಿವ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು 2022 ರ ಸಿ.ಪಿ.ಜಿ.ಆರ್.ಎ.ಎಂ.ಎಸ್.ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದರು.

ಈ ವರದಿಯ ಪ್ರಮುಖ ಮುಖ್ಯಾಂಶಗಳೆಂದರೆ:

2022 ರಲ್ಲಿ, ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಂದ 18,19,104 ಕುಂದುಕೊರತೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 15,68,097 ಪಿಜಿ ಪ್ರಕರಣಗಳನ್ನು ಪರಿಹರಿಸಲಾಗಿದೆ. ಈ ಪೈಕಿ 11,29,642 ಪ್ರಕರಣಗಳನ್ನು ಕೇಂದ್ರ ಸಚಿವಾಲಯಗಳು ಮತ್ತು 4,38,455 ಪ್ರಕರಣಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇತ್ಯರ್ಥಪಡಿಸಿವೆ.

ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸರಾಸರಿ ವಿಲೇವಾರಿ ಸಮಯವು 2021 ರಲ್ಲಿದ್ದ 32 ದಿನಗಳಿಂದ 2022ರಲ್ಲಿ 27 ದಿನಗಳಿಗೆ ಸುಧಾರಿಸಿದೆ. 1,71,509 ಮೇಲ್ಮನವಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ ಶೇ.80ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 2022 ರ ಜುಲೈ -ನವೆಂಬರ್ ಅವಧಿಯಲ್ಲಿ ಬಿಎಸ್ಎನ್ಎಲ್ ಕಾಲ್ ಸೆಂಟರ್ ನಡೆಸಿದ ಪ್ರತಿಕ್ರಿಯೆಯಲ್ಲಿ 57,000 ಕ್ಕೂ ಹೆಚ್ಚು ಕುಂದುಕೊರತೆಗಳು ನಾಗರಿಕರಿಂದ ಅತ್ಯುತ್ತಮ ಮತ್ತು ಉತ್ತಮ ಎಂಬ ಶ್ರೇಣಿಕರಣ ಪಡೆದಿವೆ.

ವಿಲೇವಾರಿಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಕಾಲಮಿತಿಯನ್ನು ಕಡಿಮೆ ಮಾಡಲು 10-ಹಂತದ ಸಿ.ಪಿ.ಜಿ.ಆರ್.ಎ.ಎಂ.ಎಸ್ ಸುಧಾರಣಾ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಯಿತು. 10-ಹಂತಗಳ ಸುಧಾರಣೆಗಳಲ್ಲಿ ಈ ಕೆಳಗಿನವು ಸೇರಿವೆ:

i.    ಸಿ.ಪಿ.ಜಿ.ಆರ್.ಎ.ಎಂ.ಎಸ್ 7.0 ರ ಸಾರ್ವತ್ರೀಕರಣ - ಕುಂದುಕೊರತೆಗಳನ್ನು ಕೊನೆಯ ಮೈಲಿಗೆ ಸ್ವಯಂ-ತಲುಪುವಂತೆ ಮಾಡುವುದು

 ii.    ತಾಂತ್ರಿಕ ವರ್ಧನೆಗಳು - ಎಐ/ಎಂ.ಎಲ್ ಅನ್ನು ಬಳಸಿಕೊಂಡು ತುರ್ತು ಕುಂದುಕೊರತೆಗಳ ಸ್ವಯಂಚಾಲಿತ ಆದ್ಯತೆಯನ್ನು ಮಾಡುವುದು

iii.    ಭಾಷಾ ಅನುವಾದ - ಇಂಗ್ಲಿಷ್ ಜೊತೆಗೆ 22 ಅಧಿಸೂಚಿತ ಭಾಷೆಗಳಲ್ಲಿ ಸಿ.ಪಿ.ಜಿ.ಆರ್.ಎ.ಎಂ.ಎಸ್ ಪೋರ್ಟಲ್

iv.    ಕುಂದುಕೊರತೆ ನಿವಾರಣಾ ಸೂಚ್ಯಂಕ - ಸಚಿವಾಲಯಗಳು / ಇಲಾಖೆಗಳ ಕಾರ್ಯಪ್ರದರ್ಶನದ ಆಧಾರದ ಮೇಲೆ ಅವುಗಳ ಶ್ರೇಯಾಂಕ

v.    ಫೀಡ್ ಬ್ಯಾಕ್ ಕಾಲ್ ಸೆಂಟರ್ - ಕುಂದುಕೊರತೆಗಳನ್ನು ಪರಿಹರಿಸಲಾದ, ಪ್ರತಿಯೊಬ್ಬ ನಾಗರಿಕನಿಂದ ನೇರವಾಗಿ ಪ್ರತಿಕ್ರಿಯೆಯನ್ನು ಸಂಗ್ರಹಿಸಲು 50 ಆಸನಗಳ ಕಾಲ್ ಸೆಂಟರ್.

vi.    ಒಂದು ರಾಷ್ಟ್ರ ಒಂದು ಪೋರ್ಟಲ್ - ಸಿ.ಪಿ.ಜಿ.ಆರ್.ಎ.ಎಂ.ಎಸ್ ನೊಂದಿಗೆ ರಾಜ್ಯ ಪೋರ್ಟಲ್ ಮತ್ತು ಇತರ ಭಾರತ ಸರ್ಕಾರದ ಪೋರ್ಟಲ್ ಗಳ ಏಕೀಕರಣ 

vii.    ಒಳಗೊಳ್ಳುವಿಕೆ ಮತ್ತು ಸಂಪರ್ಕ - ಸಿಎಸ್ಸಿಗಳ ಮೂಲಕ ಕುಂದುಕೊರತೆಗಳನ್ನು ಸಲ್ಲಿಸಲು ದೂರದ ನಾಗರಿಕರನ್ನು ಸಬಲೀಕರಣಗೊಳಿಸುವುದು

viii.    ತರಬೇತಿ ಮತ್ತು ಸಾಮರ್ಥ್ಯ ವರ್ಧನೆ - ಪರಿಣಾಮಕಾರಿ ಕುಂದುಕೊರತೆ ಪರಿಹಾರವನ್ನು ಸಕ್ರಿಯಗೊಳಿಸಲು ಎಸ್.ಇ.ವಿ.ಓ.ಟಿ.ಟಿ.ಎ.ಎಂ. ಯೋಜನೆಯಡಿ ಐಎಸ್.ಟಿಎಂ ಮತ್ತು ರಾಜ್ಯ ಎಟಿಐಗಳು ನಡೆಸುತ್ತವೆ

ix.    ಮೇಲ್ವಿಚಾರಣೆ ಪ್ರಕ್ರಿಯೆ - ಕೇಂದ್ರ ಸಚಿವಾಲಯಗಳು / ಇಲಾಖೆಗಳು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೆರಡಕ್ಕೂ ಮಾಸಿಕ ವರದಿಗಳು

x.    ಡೇಟಾ ಸ್ಟ್ರಾಟಜಿ ಯುನಿಟ್ - ಒಳನೋಟವುಳ್ಳ ಡೇಟಾ ಅನಾಲಿಟಿಕ್ಸ್ ಗಾಗಿ ಡಿ.ಎ.ಆರ್.ಪಿ.ಜಿ.ಯಲ್ಲಿ ಸ್ಥಾಪಿಸಲಾಗಿದೆ

2022ರಲ್ಲಿ, ಸಚಿವಾಲಯಗಳು/ಇಲಾಖೆಗಳು ಆಗಸ್ಟ್ ನಲ್ಲಿ 1.14 ಲಕ್ಷ ಪಿಜಿ ಪ್ರಕರಣಗಳು, ಸೆಪ್ಟೆಂಬರ್ ನಲ್ಲಿ 1.17 ಲಕ್ಷ ಪಿಜಿ ಪ್ರಕರಣಗಳು, ಅಕ್ಟೋಬರ್ ನಲ್ಲಿ 1.19 ಲಕ್ಷ ಪಿಜಿ ಪ್ರಕರಣಗಳು ಮತ್ತು ನವೆಂಬರ್ ನಲ್ಲಿ 1.08 ಲಕ್ಷ ಪಿಜಿ ಪ್ರಕರಣಗಳನ್ನು ವಿಲೇವಾರಿ ಮಾಡಿವೆ. ಸಿ.ಪಿ.ಜಿ.ಆರ್.ಎ.ಎಂ.ಎಸ್.ಗಳು ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಪಿಜಿ ಪ್ರಕರಣ ಪರಿಹಾರವು ತಿಂಗಳಿಗೆ 1 ಲಕ್ಷ ಪ್ರಕರಣಗಳನ್ನು ದಾಟಿದೆ. ಸಿ.ಪಿ.ಜಿ.ಆರ್.ಎ.ಎಂ.ಎಸ್. ಪೋರ್ಟಲ್ ನಲ್ಲಿ ರಾಜ್ಯ ಪಿಜಿ ಪ್ರಕರಣಗಳ ವಿಲೇವಾರಿಯು ಸೆಪ್ಟೆಂಬರ್ 2022 ರಿಂದ ತಿಂಗಳಿಗೆ 50,000 ಪ್ರಕರಣಗಳನ್ನು ದಾಟಿದೆ. ಕೇಂದ್ರ ಸಚಿವಾಲಯಗಳಲ್ಲಿ ಬಾಕಿ ಉಳಿದಿರುವ ಒಟ್ಟು ಪ್ರಕರಣಗಳು ಸಾರ್ವಕಾಲಿಕ ಕನಿಷ್ಠ 0.72 ಲಕ್ಷಕ್ಕೆ ಮತ್ತು ರಾಜ್ಯಗಳಲ್ಲಿ 1.75 ಲಕ್ಷ ಪ್ರಕರಣಗಳಿಗೆ ಇಳಿದಿದೆ.

ಸಿಬ್ಬಂದಿ, ಪಿಜಿ ಮತ್ತು ಪಿಂಚಣಿ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿಯು ಡಿಸೆಂಬರ್ 2022 ರಲ್ಲಿ ಸಂಸತ್ತಿಗೆ ಸಲ್ಲಿಸಿದ ತನ್ನ 121 ನೇ ವರದಿಯಲ್ಲಿ, ಸಾರ್ವಜನಿಕ ಕುಂದುಕೊರತೆಗಳ ವಿಲೇವಾರಿ, ಮೇಲ್ಮನವಿ ಸೌಲಭ್ಯ, ಕಡ್ಡಾಯ ಕ್ರಮ ಕೈಗೊಂಡ ವರದಿ, ಪ್ರತಿಕ್ರಿಯೆ ಕಾಲ್ ಸೆಂಟರ್ ನಲ್ಲಿ ಉತ್ತರದಾಯಿತ್ವವನ್ನು ತರಲು ಇಲಾಖೆ ತೆಗೆದುಕೊಂಡ 10 ಹಂತಗಳ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದೆ. ಇದಲ್ಲದೆ, ಎಲ್ಲಾ ಅಧಿಸೂಚಿತ ಭಾಷೆಗಳಲ್ಲಿ ಸಿ.ಪಿ.ಜಿ.ಆರ್.ಎ.ಎಂ.ಎಸ್. ಪೋರ್ಟಲ್ ನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಡಿಎಆರ್.ಪಿಜಿಯ ಪ್ರಯತ್ನಗಳನ್ನು ಸಂಸದೀಯ ಸ್ಥಾಯಿ ಸಮಿತಿಯು  ಶ್ಲಾಘಿಸಿದೆ.

*****



(Release ID: 1885056) Visitor Counter : 116