ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಡಿಸೆಂಬರ್ 19-25, 2022 ರ ಅವಧಿಯಲ್ಲಿ ಆಚರಿಸಲಾಗುವ ಎರಡನೇ “ಉತ್ತಮ ಆಡಳಿತ ವಾರ (ಸುಶಾಸನ್ ಸಪ್ತಾಹ )”ಯಶಸ್ಸಿಗೆ ಪ್ರಧಾನಮಂತ್ರಿಯವರು ಶುಭ ಹಾರೈಸಿದರು



"ಮುಂದಿನ 25 ವರ್ಷಗಳ ಅಮೃತ ಕಾಲದ ಸಮಯದಲ್ಲಿ ವೈಭವಯುತ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಜನರು ಸಂಕಲ್ಪ ಮಾಡಿದ್ದಾರೆ ಮತ್ತು ಅವರ ಈ ಪ್ರಯತ್ನಗಳಲ್ಲಿ ಶಕ್ತವಾಗುವ ಮೂಲಕ ಜನರ ಸಂಕಲ್ಪಕ್ಕೆ ಪೂರಕವಾಗಿರುವುದು ಸರ್ಕಾರದ ಪಾತ್ರವಾಗಿದೆ"

"ಆಡಳಿತದ ಪರಿಣಾಮವನ್ನು ಹೆಚ್ಚಿಸುವುದು ಯಾವಾಗಲೂ ನಮ್ಮ ಪ್ರಯತ್ನವಾಗಿದೆ, ಇದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡುತ್ತದೆ"

"ಸಾವಿರಾರು ಅನಾವಶ್ಯಕ ಅನುಸರಣೆಗಳನ್ನು ರದ್ದುಗೊಳಿಸುವುದು, ಹಳತಾದ ಸಾವಿರಾರು ಕಾನೂನುಗಳನ್ನು ರದ್ದುಗೊಳಿಸುವುದು ಮತ್ತು
ಅನೇಕ ರೀತಿಯ ಸಣ್ಣ ಅಪರಾಧಗಳನ್ನು ಅಪರಾಧೀಕರಣದಿಂದ ಹೊರಗಿಡುವುದು ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಗಳು"

"ಡಿಜಿಟಲ್ ಬಳಕೆಯಲ್ಲಿ ನಾಗರಿಕರನ್ನು ಸಶಕ್ತರನ್ನಾಗಿ ಮಾಡುವುದು ಮತ್ತು ಸಂಸ್ಥೆಗಳ ಡಿಜಿಟಲ್ ರೂಪಾಂತರದ ಕಡೆಗೆ ನಾವು ಮುನ್ನಡೆಯುತ್ತಿದ್ದೇವೆ"

“ಉತ್ತಮ ಆಡಳಿತ ವಾರ(ಸುಶಾಸನ್ ಸಪ್ತಾಹ)  'ಗ್ರಾಮೀಣಮಟ್ಟದಲ್ಲಿ ಉತ್ತಮ ಆಡಳಿತ (ಪ್ರಶಾಸನ್ ಗಾಂವ್ ಕಿ ಔರ್)' 2022" ಎಂಬ ಅಭಿಯಾನವನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಡಿಸೆಂಬರ್ 19, 2022 ರಂದು ಉದ್ಘಾಟಿಸಲಿದ್ದಾರೆ.

ಡಿಸೆಂಬರ್ 19 ರಿಂದ 25 , 2022 ರವರೆಗೆ ಜರುಗಲಿರುವ ಸುಶಾಸನ್ ಸಪ್ತಾಹದ ಸಮಯದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಮತ

Posted On: 17 DEC 2022 12:22PM by PIB Bengaluru

“ಮುಂದಿನ 25 ವರ್ಷಗಳ ಅಮೃತ ಕಾಲದ ಸಮಯದಲ್ಲಿ ಭವ್ಯ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಜನರು ಸಂಕಲ್ಪ ಮಾಡಿದ್ದಾರೆ. ಅವರ ಪ್ರಯತ್ನಗಳಲ್ಲಿ ಶಕ್ತರಾಗುವ ಮೂಲಕ ಜನರ ಸಂಕಲ್ಪಕ್ಕೆ ಪೂರಕವಾಗಿ ಸರ್ಕಾರದ ಪಾತ್ರವಿರುತ್ತದೆ. ಅವಕಾಶಗಳನ್ನು ಹೆಚ್ಚಿಸುವುದು ಮತ್ತು ಅವರ ಹಾದಿಯಿಂದ ಅಡೆತಡೆಗಳನ್ನು ತೆಗೆದುಹಾಕುವುದು ನಮ್ಮ ಪಾತ್ರವಾಗಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಡಿಸೆಂಬರ್ 19-25, 2022 ರ ಅವಧಿಯಲ್ಲಿ ಆಚರಿಸಲಾಗುತ್ತಿರುವ ಎರಡನೇ “ಸುಶಾಸನ್ ಸಪ್ತಾಹ” (ಉತ್ತಮ ಆಡಳಿತ ವಾರ) ಯಶಸ್ಸಿಗೆ ತಮ್ಮ ಶುಭ ಹಾರೈಕೆಗಳನ್ನು ವ್ಯಕ್ತಪಡಿಸುತ್ತಾ, ಕೇಂದ್ರ ಸರ್ಕಾರವು 'ನಾಗರಿಕ-ಮೊದಲು' ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿರುವ ಕುರಿತು ಪ್ರಧಾನಮಂತ್ರಿಯವರು ತಮ್ಮ ಸಂದೇಶದಲ್ಲಿ ಹೇಳಿದರು. “ಪ್ರತಿ ಹಂತದಲ್ಲೂ ಕಾರ್ಯವಿಧಾನಗಳು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸುವ ಮೂಲಕ ಪರಿಸರ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ವೇಗವಾಗಿ ಮಾಡಲು ದಣಿವಿಲ್ಲದೆ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

“ಸಾರ್ವಜನಿಕ ಕುಂದುಕೊರತೆಗಳ ಪರಿಹಾರ, ಆನ್‌ಲೈನ್ ಸೇವೆಗಳು, ಸೇವಾ ವಿತರಣಾ ಅರ್ಜಿಗಳ ವಿಲೇವಾರಿ ಮತ್ತು ಉತ್ತಮ ಆಡಳಿತ ಅಭ್ಯಾಸಗಳು ಸೇರಿದಂತೆ ವಿವಿಧ ನಾಗರಿಕ-ಕೇಂದ್ರಿತ ಉಪಕ್ರಮಗಳನ್ನು ನಾವು ಕೈಗೊಂಡಿದ್ದೇವೆ. ಸೇವಾ ವಿತರಣಾ ಕಾರ್ಯವಿಧಾನಗಳ ವ್ಯಾಪ್ತಿಯನ್ನು ವಿಸ್ತರಿಸುವುದು, ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ನಮ್ಮ ದೃಷ್ಟಿಕೋನವಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

“ಆಡಳಿತದ ಪ್ರಭಾವವನ್ನು ಹೆಚ್ಚಿಸಲು ಇದು ಯಾವಾಗಲೂ ನಮ್ಮ ಪ್ರಯತ್ನವಾಗಿರುತ್ತದೆ. ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಿ, ಸಾವಿರಾರು ಅನಗತ್ಯ ನಿಬಂಧನೆಗಳನ್ನು ರದ್ದುಗೊಳಿಸುವುದು, ಹಳತಾದ ಸಾವಿರಾರು ಕಾನೂನುಗಳನ್ನು ರದ್ದುಗೊಳಿಸುವುದು ಮತ್ತು ಅನೇಕ ರೀತಿಯ ಸಣ್ಣ ಅಪರಾಧಗಳ ಅಮಾನ್ಯೀಕರಣ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಗಳಾಗಿವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು,

“ಸರ್ಕಾರ ಮತ್ತು ನಾಗರಿಕರನ್ನು ಹತ್ತಿರಕ್ಕೆ ತರುವಲ್ಲಿ ತಂತ್ರಜ್ಞಾನವು ಅಪಾರ ಸಾಮರ್ಥ್ಯವನ್ನು ಹೊಂದಿದೆ. ಇಂದು, ತಂತ್ರಜ್ಞಾನವು ನಾಗರಿಕರನ್ನು ಸಬಲೀಕರಣಗೊಳಿಸುವ ಪ್ರಬಲ ಸಾಧನವಾಗಿ ಮಾರ್ಪಟ್ಟಿದೆ, ಜೊತೆಗೆ ದಿನನಿತ್ಯದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತಮಗೊಳಿಸುವ ಮಾಧ್ಯಮವಾಗಿದೆ. ವಿವಿಧ ನೀತಿ ನಿರೂಪಣೆಗಳ ಮೂಲಕ, ನಾವು ನಾಗರಿಕರನ್ನು ಡಿಜಿಟಲ್ ಬಳಕೆಯಲ್ಲಿ ಸಬಲರನ್ನಾಗಿಸುವುದು ಮತ್ತು ಸಂಸ್ಥೆಗಳ ಡಿಜಿಟಲ್ ರೂಪಾಂತರದ ಕಡೆಗೆ ಬಲವಾಗಿ ಮುನ್ನಡೆಯುತ್ತಿದ್ದೇವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು,

“ಈ ವರ್ಷವೂ “ಗ್ರಾಮೀಣಮಟ್ಟದಲ್ಲಿ ಉತ್ತಮ ಆಡಳಿತ ('ಪ್ರಶಾಸನ್ ಗಾಂವ್ ಕಿ ಓರ್') ಅಭಿಯಾನ”ವು ಉತ್ತಮ ಆಡಳಿತ ಸಪ್ತಾಹದ ಭಾಗವಾಗಿ ಮುಂದುವರಿಯುತ್ತಿದೆ “ಎಂದು ಪ್ರಧಾನಮಂತ್ರಿ ಅವರು ಹೇಳಿದರು ಮತ್ತು ಈ ಉಪಕ್ರಮದೊಂದಿಗೆ ಸಂಬಂಧಿಸಿದ ಎಲ್ಲರಿಗೂ ತಮ್ಮ ಶುಭ ಹಾರೈಕೆಗಳನ್ನು ಪ್ರಧಾನಮಂತ್ರಿ ಅವರು ವ್ಯಕ್ತಪಡಿಸಿದರು.

2022 ರ ಡಿಸೆಂಬರ್ 19 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ಉಸ್ತುವಾರಿ), ಭೂ ವಿಜ್ಞಾನ(ಸ್ವತಂತ್ರ ಉಸ್ತುವಾರಿ); ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ಪರಿಹಾರ, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆಗಳ ರಾಜ್ಯ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಮತ್ತು ಉತ್ತಮ ಆಡಳಿತ ಸಪ್ತಾಹದ ಭಾಗವಾಗಿ ದೇಶಾದ್ಯಂತ 'ಪ್ರಶಾಸನ್ ಗಾಂವ್ ಕಿ ಔರ್' 2022 ಅಭಿಯಾನವನ್ನು ಅವರು ಉದ್ಘಾಟಿಸಲಿದ್ದಾರೆ.

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ನಿವಾರಣೆ ಮತ್ತು ಪಿಂಚಣಿಗಳ ಸಚಿವಾಲಯದ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ಇಲಾಖೆ (ಡಿ.ಎ.ಆರ್.ಪಿ.ಜಿ.), ಡಿಸೆಂಬರ್ 19 ರಿಂದ 25, 2022ರ ಅವಧಿಯಲ್ಲಿ ಉತ್ತಮ ಆಡಳಿತ ಸಪ್ತಾಹವನ್ನು ಆಚರಿಸುತ್ತಿದೆ. ಈ ವಾರದಲ್ಲಿ, ಪ್ರಚಾರ. ನಿಟ್ಟಿನಲ್ಲಿ ಡಿ.ಎ.ಆರ್.ಪಿ.ಜಿ. ಇಲಾಖೆಯು “ಸುಶಾಸನ್ ಸಪ್ತಾಹ್ 'ಪ್ರಶಾಸನ್ ಗಾಂವ್ ಕಿ ಔರ್' 2022” ಅಭಿಯಾನವನ್ನು ರಾಷ್ಟ್ರವ್ಯಾಪಿಯಾಗಿ ಆಯೋಜಿಸುತ್ತಿದೆ. ಅಭಿಯಾನವು ಭಾರತದ ಎಲ್ಲ ತಾಲೂಕು(ತಹಸಿಲ್‌)ಗಳು/ ಜಿಲ್ಲೆಗಳಾದ್ಯಂತ ಸೇವಾ ವಿತರಣೆಯನ್ನು ಸುಧಾರಿಸಲು ಮತ್ತು ಸಾರ್ವಜನಿಕ ಕುಂದುಕೊರತೆಗಳ ಪರಿಹಾರವನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತದೆ ಮತ್ತು ಈ ಅಭಿಯಾನದ ಕಾರ್ಯಚಟುವಟಿಕೆಗಳ ಪ್ರಗತಿಯನ್ನು ಇದಕ್ಕಾಗಿ ಮೀಸಲಾದ ಪ್ರಚಾರ ಜಾಲತಾಣ www.pgportal.gov.in/GGW22  ರಲ್ಲಿ ಜಿಲ್ಲಾಧಿಕಾರಿಗಳು ವರದಿ ಮಾಡುತ್ತಾರೆ.

ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಗಳ ಪ್ರಗತಿಯ ಮಾಹಿತಿ ನೀಡುವ   'ಪ್ರಶಾಸನ್ ಗಾಂವ್ ಕಿ ಔರ್' 2022 (www.pgportal.gov.in/GGW22) ಗಾಗಿ ಮೀಸಲಾದ ಪ್ರಚಾರ ಜಾಲತಾಣವನ್ನು ಮತ್ತು ಉತ್ತಮ ಆಡಳಿತ ಪದ್ಧತಿಗಳ ಪ್ರದರ್ಶನವನ್ನು ಕೇಂದ್ರ ಸಚಿವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ “ಪ್ರಶಾಸನ್ ಗಾಂವ್ ಕಿ ಔರ್” ಕುರಿತ ಚಲನಚಿತ್ರವನ್ನು ಪ್ರದರ್ಶಿಸಲಾಗುವುದು. ಮುಖ್ಯ ಕಾರ್ಯದರ್ಶಿ, ಅರುಣಾಚಲ ಪ್ರದೇಶ; ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಉತ್ತರ ಪ್ರದೇಶ ಮತ್ತು ಪ್ರಧಾನ ಕಾರ್ಯದರ್ಶಿ, ಆಂಧ್ರಪ್ರದೇಶ ಮತ್ತು ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಇವರುಗಳು ತಮ್ಮ ರಾಜ್ಯಗಳಲ್ಲಿನ ಉತ್ತಮ ಆಡಳಿತ ಉಪಕ್ರಮಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸುತ್ತಾರೆ.  

 'ಪ್ರಶಾಸನ್ ಗಾಂವ್ ಕಿ ಔರ್' 2022 ಸಾರ್ವಜನಿಕ ಕುಂದುಕೊರತೆಗಳ ಪರಿಹಾರಕ್ಕೆ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವ ರಾಷ್ಟ್ರವ್ಯಾಪಿ ಅಭಿಯಾನವಾಗಿದ್ದು, ಇದು ಭಾರತದ ಎಲ್ಲ ತಾಲೂಕು(ತಹಸಿಲ್‌)ಗಳು, ಜಿಲ್ಲೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. 700ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳು 'ಪ್ರಶಾಸನ್ ಗಾಂವ್ ಕಿ ಔರ್' 2022 ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಸುಧಾರಿತ ಸೇವೆ ವಿತರಣೆಗಾಗಿ ಜಿಲ್ಲಾಧಿಕಾರಿಗಳು ತಹಸಿಲ್/ ಪಂಚಾಯತ್ ಸಮಿತಿಗಳ ಪ್ರಧಾನ ಕಚೇರಿ ಇತ್ಯಾದಿಗಳಲ್ಲಿ ವಿಶೇಷ ಶಿಬಿರಗಳು/ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ನಾಗರಿಕರ ಜೀವನವನ್ನು ನೇರವಾಗಿ ತಲುಪುವ ಕೆಳಗಿನ ವಿಷಯಗಳ ಮೇಲೆ ಕೇಂದ್ರೀಕರಿಸಿ ಅಭಿಯಾನವನ್ನು ನಡೆಸಲಾಗುವುದು:

ಸಿ.ಪಿ.ಜಿ.ಆರ್.ಎ.ಎಂ.ಎಸ್. ನಲ್ಲಿ ಬಾಕಿ ಉಳಿದಿರುವ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ

ರಾಜ್ಯ ಜಾಲತಾಣಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ

ಆನ್‌ಲೈನ್ ಸೇವಾ ವಿತರಣೆಗಾಗಿ ಸೇರಿಸಲಾದ ಸೇವೆಗಳ ಸಂಖ್ಯೆ

ಸೇವಾ ವಿತರಣಾ ಅರ್ಜಿಗಳ ವಿಲೇವಾರಿ

ಉತ್ತಮ ಆಡಳಿತ ಪದ್ಧತಿಗಳನ್ನು ಗುರುತಿಸಿ, ಸಂಗ್ರಹಿಸಿ ಮತ್ತು ಅವುಗಳ ಪ್ರಸಾರ

ಸಾರ್ವಜನಿಕ ಕುಂದುಕೊರತೆಗಳ ಪರಿಹಾರದ ಕುರಿತು ಪ್ರತಿ ಜಿಲ್ಲೆಯ ಒಂದು ಯಶೋಗಾಥೆಯನ್ನು ಪರಸ್ಪರ ಹಂಚಿಕೊಳ್ಳುವುದು

ಸುಶಾಸನ್ ಸಪ್ತಾಹದ ಸಮಯದಲ್ಲಿ, ಡಿಸೆಂಬರ್ 23, 2022 ರಂದು ಹೊಸ ದೆಹಲಿಯ ವಿಜ್ಞಾನ ಭವನದಲ್ಲಿ ಉತ್ತಮ ಆಡಳಿತದ ಅಭ್ಯಾಸಗಳ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗುವುದು, ಕ್ಯಾಬಿನೆಟ್ ಕಾರ್ಯದರ್ಶಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶೇಷ ಅಭಿಯಾನ 2.0 ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ದಕ್ಷತೆಯನ್ನು ಹೆಚ್ಚಿಸುವ ಕುರಿತು ವಿಶೇಷ ಕಾರ್ಯಗಾರಗಳು ನಡೆಯಲಿವೆ. ಕಾರ್ಯದರ್ಶಿ, ಅಂಚೆ ಇಲಾಖೆ; ಅಧ್ಯಕ್ಷರು, ರೈಲ್ವೆ ಮಂಡಳಿ; ಡೈರೆಕ್ಟರ್ ಜನರಲ್, ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ಅವರು ವಿಶೇಷ ಅಭಿಯಾನ 2.0 ಸಮಯದಲ್ಲಿ ತಮ್ಮ ಇಲಾಖೆಗಳಲ್ಲಿ ಅಳವಡಿಸಿಕೊಂಡ ಉತ್ತಮ ಅಭ್ಯಾಸಗಳ ಕುರಿತು ಪ್ರಸ್ತುತಿಗಳನ್ನು ಮಾಡಲಿದ್ದಾರೆ. ಮಹಾನಿರ್ದೇಶಕ, ಎನ್.ಐ.ಸಿ; ಕಾರ್ಯದರ್ಶಿ (ಪೂರ್ವ), ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕಾರ್ಯದರ್ಶಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಇವರುಗಳು 'ನಿರ್ಧಾರ ಮಾಡುವಿಕೆಯಲ್ಲಿ ದಕ್ಷತೆಯನ್ನು ಹೆಚ್ಚಿಸುವುದು' ಕುರಿತು ತಮ್ಮ ತಮ್ಮ ಪ್ರಸ್ತುತಿಗಳನ್ನು ಮಾಡಲಿದ್ದಾರೆ. ವಿಶೇಷ ಅಭಿಯಾನ 2.0 ಮೌಲ್ಯಮಾಪನ ವರದಿಯನ್ನು ಈ ಕಾರ್ಯಾಗಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸಲು, ಈ ವರ್ಷದ 'ಪ್ರಶಾಸನ್ ಗಾಂವ್ ಕಿ ಔರ್' 2022 ಅಭಿಯಾನದಲ್ಲಿ ನೂತನವಾದ ನವೀನ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ದೇಶದ ಎಲ್ಲಾ ಜಿಲ್ಲೆಗಳು ಡಿಸೆಂಬರ್ 23, 2022 ರಂದು “ಉತ್ತಮ ಆಡಳಿತದ ಅಭ್ಯಾಸಗಳು/ಉಪಕ್ರಮಗಳು” ಕುರಿತು ಕಾರ್ಯಾಗಾರವನ್ನು ಆಯೋಜಿಸುತ್ತವೆ, ಇದನ್ನು ಕಾರ್ಯಾಗಾರಗಳ ವಿಷಯಗಳೊಂದಿಗೆ ‘ಪ್ರಶಾಸನ್ ಗಾಂವ್ ಕಿ ಔರ್ ಪೋರ್ಟಲ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಹಂಚಿಕೊಳ್ಳಲಾಗುತ್ತದೆ. ಜಿಲ್ಲೆ@2047 ರ ದೃಷ್ಟಿಯೊಂದಿಗೆ ಜಿಲ್ಲೆಯಲ್ಲಿ ಪ್ರಯತ್ನಗಳನ್ನು ಕೈಗೊಳ್ಳಬೇಕಾದ ಪ್ರಮುಖ ಕ್ಷೇತ್ರಗಳು, ಅಂದರೆ ಜಿಲ್ಲೆ@100 ಅನ್ನು ಕಾರ್ಯಾಗಾರದಲ್ಲಿ ವಿವರಿಸಲಾಗುವುದು. ಜಿಲ್ಲೆಯ ನಿವೃತ್ತ ಡಿ.ಸಿ./ಡಿ.ಎಂ. ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗುವುದು ಮತ್ತು ಜಿಲ್ಲಾ ಮಟ್ಟದ ಕಾರ್ಯಾಗಾರಗಳಲ್ಲಿ ಭಾಗವಹಿಸಲು ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ಪ್ರಮುಖ ಶಿಕ್ಷಣ ಸಂಸ್ಥೆಗಳ ಚಿಂತಕರನ್ನು ಆಹ್ವಾನಿಸಲಾಗುತ್ತದೆ. ತಳಮಟ್ಟದಲ್ಲಿ ಉತ್ತಮ ಆಡಳಿತದ ಅಭ್ಯಾಸಗಳನ್ನು ಪ್ರೋತ್ಸಾಹಿಸಲು ಮತ್ತು ದಾಖಲಿಸಲು ಈ ಕಾರ್ಯಾಗಾರಗಳು ವೇದಿಕೆಯಾಗಿರುತ್ತವೆ ಮತ್ತು ಜಿಲ್ಲೆ@100 ಗಾಗಿ ವಿಷನ್ ಡಾಕ್ಯುಮೆಂಟ್ ಅನ್ನು ರೂಪಿಸುತ್ತವೆ.

2021 ರಲ್ಲಿ ಜರುಗಿದ 'ಪ್ರಶಾಸನ್ ಗಾಂವ್ ಕಿ ಓರ್' ಅಭಿಯಾನದ ಸಂದರ್ಭದಲ್ಲಿ, ಸೇವಾ ವಿತರಣೆಗಾಗಿ ಬಂದ 2.89 ಕೋಟಿಗೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ, 6.5 ಲಕ್ಷಕ್ಕೂ ಹೆಚ್ಚು ಕುಂದುಕೊರತೆಗಳನ್ನು ದಾಖಲೆಪಡಿಸಲಾಗಿದೆ, 621 ಸೇವೆಗಳನ್ನು ನಾಗರಿಕ ಸನ್ನದುಗಳಲ್ಲಿ ಸೇರಿಸಲಾಗಿದೆ, 380 ನಾಗರಿಕ ಸನ್ನದುಗಳನ್ನು ನವೀಕರಿಸಲಾಗಿದೆ, 265 ಉತ್ತಮ ಆಡಳಿತ ಪದ್ಧತಿಗಳನ್ನು ಮಾಡಲಾಗಿದೆ. ಮತ್ತು 236 ಯಶೋಗಾಥೆಗಳನ್ನು ಪೋರ್ಟಲ್‌ ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಗ್ರಾಮೀಣಮಟ್ಟದಲ್ಲಿ ಉತ್ತಮ ಆಡಳಿತ 2022 (‘ಪ್ರಶಾಸನ್ ಗಾಂವ್ ಕಿ ಓರ್’ 2022) ಅಭಿಯಾನವನ್ನು ಜಿಲ್ಲಾ ಮಟ್ಟದಲ್ಲಿ ಇನ್ನಷ್ಟು ಉತ್ಸಾಹದಿಂದ ಮುಂದುವರಿಸುವ ನಿರೀಕ್ಷೆಯಿದೆ. ಭಾರತದ ಎಲ್ಲಾ ಜಿಲ್ಲೆಗಳು ಮತ್ತು ತಾಲೂಕು(ತಹಸಿಲ್‌)ಗಳಾದ್ಯಂತ ನಾಗರಿಕರನ್ನು ಆಡಳಿತಕ್ಕೆ ಹತ್ತಿರ ತರಲು ಪ್ರಧಾನಮಂತ್ರಿಯವರರು ಹೊಂದಿರುವ ದೂರದೃಷ್ಟಿಯನ್ನು ಸಾಕಾರಗೊಳಿಸುವುದು ಇದರ ಉದ್ದೇಶವಾಗಿದೆ.

ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು/ ಇಲಾಖೆಗಳು, ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ದೇಶದಾದ್ಯಂತ ಎಲ್ಲಾ ಈ ಜಿಲ್ಲೆಗಳು  ವಾರಪೂರ್ತಿಯ ಈ ಕಾರ್ಯಕ್ರಮದ ಪ್ರಚಾರ, ಉದ್ಘಾಟನಾ ಕಾರ್ಯಕ್ರಮ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತವೆ.

*****



(Release ID: 1884495) Visitor Counter : 136