ರಾಷ್ಟ್ರಪತಿಗಳ ಕಾರ್ಯಾಲಯ

ರಾಷ್ಟ್ರಪತಿಗಳನ್ನು ಭೇಟಿ ಮಾಡಿದ  ಭಾರತೀಯ ರೈಲ್ವೇಯ ಪ್ರೊಬೇಷನರ್ಸ್ 


ಅಂತರವನ್ನು ಕಡಿಮೆ ಮಾಡುವಲ್ಲಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಮತ್ತು ಆತ್ಮನಿರ್ಭರ ಭಾರತದ ಕನಸನ್ನು ನನಸಾಗಿಸುವಲ್ಲಿ ಭಾರತೀಯ ರೈಲ್ವೇ ಪ್ರಮುಖ ಪಾತ್ರ ವಹಿಸಬೇಕು: ರಾಷ್ಟ್ರಪತಿ ಮುರ್ಮು

Posted On: 16 DEC 2022 1:26PM by PIB Bengaluru

ಭಾರತೀಯ ರೈಲ್ವೆಯ ಪ್ರೊಬೇಷನರ್ಸ್ ಇಂದು (ಡಿಸೆಂಬರ್ 16, 2022) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

 ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ದಿನನಿತ್ಯದ ಆಧಾರದ ಮೇಲೆ ಕೆಲಸ ಅಥವಾ ವ್ಯಾಪಾರಕ್ಕಾಗಿ ತಮ್ಮ ಕೆಲಸದ ಸ್ಥಳಗಳಿಗೆ ಪ್ರಯಾಣಿಸುವ ಅನೇಕ ಜನರಿಗೆ ರೈಲ್ವೆ ನಿಜವಾದ ಜೀವನಾಡಿಯಾಗಿದೆ ಎಂದು ಹೇಳಿದರು.  ಭಾರತೀಯ ರೈಲ್ವೆಯ ಅಧಿಕಾರಿಗಳು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಏಕೆಂದರೆ ಅವರು ಪ್ರತಿದಿನ ತಮ್ಮ ಜೀವನೋಪಾಯವನ್ನು ಗಳಿಸಲು ಜನರೊಂದಿಗೆವ ಕೆಲಸ ಮಾಡುತ್ತಾರೆ. ಅನೇಕ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಸಹ ಪ್ರಯಾಣಿಸುತ್ತಾರೆ.  ಶ್ರೀಸಾಮಾನ್ಯನ ಜೀವನದಲ್ಲಿ ರೈಲ್ವೆಯ ಪಾತ್ರವು ಎಂದಿನಂತೆ ಮಹತ್ವದ್ದಾಗಿದೆ. ರೈಲ್ವೆಯು ದೇಶಾದ್ಯಂತ ಪ್ರಯಾಣ ಮತ್ತು ವಿಚಾರಗಳು ಮತ್ತು ಮಾಹಿತಿಯ ವಿನಿಮಯವನ್ನು ಉತ್ತೇಜಿಸಿದೆ ಎಂದರು.

ಇಂದು ಭಾರತವು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಮುನ್ನಡೆಯುತ್ತಿರುವಂತಹ ದಿನಗಳಲ್ಲಿ ಜನರು ಮತ್ತು ಸರಕುಗಳ ಹೆಚ್ಚಿನ ಚಲನೆ ಜನಸಂಚಾರವನ್ನು ನಾವು ನೋಡುತ್ತಿದ್ದೇವೆ ಎಂದು ರಾಷ್ಟ್ರಪತಿಗಳು ಹೇಳಿದರು.  ಭವಿಷ್ಯದಲ್ಲಿ ಇದು ಹೆಚ್ಚಾಗಲಿದೆ.  ಆದ್ದರಿಂದ, ಭಾರತೀಯ ರೈಲ್ವೇ ಇತ್ತೀಚಿನ ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಸುರಕ್ಷಿತ, ಸಮಯ ಉಳಿತಾಯ, ಹೆಚ್ಚು ಅನುಕೂಲಕರ ಮತ್ತು ಉತ್ತಮ ಗುಣಮಟ್ಟದ ಸಾರಿಗೆ ಸೇವೆಗಳಿಗಾಗಿ ಸುಧಾರಿತ ವೈಶಿಷ್ಟ್ಯಗಳನ್ನು ಸೇರಿಸಲು ಹೊಸ ಮಾರ್ಗಗಳನ್ನು ಅನ್ವೇಷಿಸಬೇಕು.

ರೈಲು ಪ್ರಯಾಣದ ಜೊತೆ ಅದರಲ್ಲಿನ  ಸಂಬಂಧಿಸಿದ ಅನುಭವಗಳ ನೆನಪುಗಳನ್ನು ನಾವೆಲ್ಲರೂ ನಮ್ಮೊಂದಿಗೆ ಹೊತ್ತೊಯ್ಯುತ್ತವೆ ಎಂದು ರಾಷ್ಟ್ರಪತಿಗಳು ಹೇಳಿದರು.  ಜನರು ಆರಾಮವಾಗಿ ಪ್ರಯಾಣಿಸುವುದನ್ನು ಖಚಿತಪಡಿಸಿಕೊಳ್ಳುವುದು ಭಾರತೀಯ ರೈಲ್ವೇಯ ಅಧಿಕಾರಿಗಳ ಕರ್ತವ್ಯವಾಗಿದೆ. ಆದ್ದರಿಂದ ಅವರು ಸಹ ತಮ್ಮ ಕರ್ತವ್ಯಗಳ ಜೊತೆ ಒಂದಿಷ್ಟು  ಅಚ್ಚುಮೆಚ್ಚಿನ ನೆನಪುಗಳನ್ನು ಸಹ  ಹೊತ್ತುಕೊಳ್ಳುತ್ತಾರೆ.  ವಿಕಲಚೇತನರು, ಮಹಿಳೆಯರು ಮತ್ತು ವೃದ್ಧರ ಅಗತ್ಯಗಳನ್ನು ಪೂರೈಸಲು ಮತ್ತು ಅವರಿಗೆ ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣದ ಅನುಭವವನ್ನು ಒದಗಿಸುವಂತೆ ಅವರು ಸಲಹೆ ನೀಡಿದರು. ಪ್ರಯಾಣಿಕರು ಮತ್ತು ಅಧಿಕಾರಿಗಳ ನಡುವಿನ  ಅಂತರವನ್ನು ತಗ್ಗಿಸುವಲ್ಲಿ  ಎಲ್ಲರನ್ನೂ ಒಳಗೊಳ್ಳುವ ಮತ್ತು ಆತ್ಮನಿರ್ಭರ್ ಭಾರತ್‌ನ ಕನಸನ್ನು ನನಸಾಗಿಸುವಲ್ಲಿ ಭಾರತೀಯ ರೈಲ್ವೇ ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಅವರು ಕರೆ ನೀಡಿದರು.

 ಹೊಸ ಮತ್ತು ಪುನರುತ್ಥಾನದ ಭಾರತದ ದೃಷ್ಟಿಗೆ ಅನುಗುಣವಾಗಿ ಭಾರತೀಯ ರೈಲ್ವೇ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ರಾಷ್ಟ್ರಪತಿಗಳು ಹೇಳಿದರು.  ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳ ಉದ್ದದ 56 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಈ ವೇಳೆ ಅವರು ಹರತಷ ವ್ಯಕ್ತಪಡಿಸಿದರು.  ಇವು ಉತ್ಪಾದನೆ ಮತ್ತು ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ  ಹೀಗಾಗಿ ಸರಕು ಸಾಗಣೆಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತವೆ ಮತ್ತು ರೈಲು ಜಾಲವನ್ನು ಪರಿವರ್ತಿಸುತ್ತವೆ ಎಂದು ಅವರು ಹೇಳಿದರು.  ಈ ಕಾರಿಡಾರ್‌ಗಳ ಮೂಲಕ ಸರಕು ಸಾಗಣೆ ವೆಚ್ಚ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು ಗಣನೀಯವಾಗಿ ಕಡಿಮೆಯಾಗುತ್ತವೆ.  ಬಹು-ಮಾದರಿ ಸಂಪರ್ಕಕ್ಕಾಗಿ ಪ್ರಧಾನ ಮಂತ್ರಿ ಗತಿ ಶಕ್ತಿ, ಹೈ ಸ್ಪೀಡ್ ರೈಲು ಯೋಜನೆಗಳು, ಹೈಪರ್‌ಲೂಪ್ ಆಧಾರಿತ ಸಾರಿಗೆ, ಚಾರ್ ಧಾಮ್ ರೈಲು ಯೋಜನೆ, ಸೇತು ಭಾರತಂ ಮುಂತಾದ ಕಾರ್ಯಕ್ರಮಗಳು ದೇಶದಲ್ಲಿ ಕೈಗಾರಿಕಾ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲಿವೆ.ಇದು ಸಂಪನ್ಮೂಲಗಳ ಸಮಾನ ವಿತರಣೆಗೆ  ಮಹತ್ವ  ನೀಡುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು.

 ರಾಷ್ಟ್ರಪತಿಗಳ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

*****



(Release ID: 1884145) Visitor Counter : 123