ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಬಹು-ಸಿಸ್ಟಮ್ ಆಪರೇಟರ್‌ಗಳು ಒದಗಿಸುವ  ಸೇವೆಗಳಿಗೆ ಮಾರ್ಗಸೂಚಿಗಳನ್ನು ನೀಡುತ್ತಿದೆ: ಸಚಿವಾಲಯ

Posted On: 30 NOV 2022 3:09PM by PIB Bengaluru

1. ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ ನಿಯಮಗಳು, 1994, ಮಲ್ಟಿ-ಸಿಸ್ಟಮ್ ಆಪರೇಟರ್‌ಗಳು (MSOs) ತಮ್ಮದೇ ಆದ ಪ್ರೋಗ್ರಾಮಿಂಗ್ ಸೇವೆಯನ್ನು ನೇರ  ಚಂದಾದಾರರು ಸೇರಿದಂತೆ ಒಂದು ಅಥವಾ ಹೆಚ್ಚಿನ ಸ್ಥಳೀಯ ಕೇಬಲ್ ಆಪರೇಟರ್‌ಗಳ ಮೂಲಕ ಪ್ರಸಾರ ಮಾಡಲು ಅವಕಾಶ ಮಾಡಿಕೊಡುತ್ತದೆ.  ಈ ಸ್ವಂತ ಪ್ರೋಗ್ರಾಮಿಂಗ್ ಸೇವೆಗಳು 'ಪ್ಲಾಟ್‌ಫಾರ್ಮ್ ಸೇವೆಗಳು (PS)',  ಹೆಚ್ಚಿನ 'ಸ್ಥಳೀಯ-ಚಾನೆಲ್‌ಗಳನ್ನು' ಒಳಗೊಂಡಿದ್ದು, ಈ MSO (ಎಂ‌ಎಸ್‌ಒ) ಗಳು ಒದಗಿಸುವ ಸೇವೆಗಳು ನಿರ್ದಿಷ್ಟವಾಗಿ ಸ್ಥಳೀಯ ಸೇವೆಗಳಿಗಾಗಿ ರಚಿಸಲಾದ ಪ್ರೋಗ್ರಾಮಿಂಗ್ ಆಗಿದೆ.

2. ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು 1994 ರ ನಿಯಮ 6(6) ರ ಪ್ರಕಾರ‌ ಈ ಸಚಿವಾಲಯವು‌ ನವೆಂಬರ್ 30, 2022 ರಂದು ಭಾರತದಲ್ಲಿ MSO ಗಳು ಒದಗಿಸಿದ 'ಪ್ಲಾಟ್‌ಫಾರ್ಮ್ ಸೇವೆಗಳ' ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.  ಈ ಮಾರ್ಗಸೂಚಿಗಳು 'ಪ್ಲಾಟ್‌ಫಾರ್ಮ್ ಸೇವೆಗಳ' ಕಾರ್ಯವೈಖರಿ ನಿಯಮವನ್ನು ಒದಗಿಸುತ್ತಿದ್ದು, ಪ್ಲಾಟ್‌ಫಾರ್ಮ್ ಸೇವೆಗಳನ್ನು ಚಾಲನೆ ಮಾಡುವಲ್ಲಿ MSO ಗಳಿಗೆ ಮಾನದಂಡಗಳನ್ನು ನಿಗದಿಪಡಿಸಿದೆ.

ಪ್ರತಿ PS (ಪ್ಲಾಟ್‌ಫಾರ್ಮ್ ಸೇವೆಗಳು) ಚಾನೆಲ್‌ಗೆ 1,000 ರೂಪಾಯಿಗಳ ಕಡಿಮೆ ಮೊತ್ತದ ಶುಲ್ಕದಲ್ಲಿ ಮಲ್ಟಿ-ಸಿಸ್ಟಮ್ ಆಪರೇಟರ್‌ಗಳು (MSO) ಗಳಿಂದ PS ಚಾನಲ್‌ಗಳಿಗೆ ಸರಳ ಆನ್‌ಲೈನ್ ನೋಂದಣಿ ಪ್ರಕ್ರಿಯೆ ನೀಡಲಿದೆ.  ಈ ಉದ್ದೇಶಕ್ಕಾಗಿ ಆನ್‌ಲೈನ್ ನೋಂದಣಿ ಪೋರ್ಟಲ್ ಅನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲಿ ಈ ಬಗ್ಗೆ ಮಾಹಿತಿ  ಒದಗಿಸಲಾಗುವುದು.

ಕಂಪನಿಗಳಾಗಿ ನೋಂದಾಯಿಸಲಾದ ಘಟಕಗಳಿಗೆ ಮಾತ್ರ ಸ್ಥಳೀಯ ಸುದ್ದಿ ಮತ್ತು ಪ್ರಸಕ್ತ ವ್ಯವಹಾರಗಳನ್ನು ಒದಗಿಸಲು ಅನುಮತಿಸಲಾಗಿದೆ.  "ಕಂಪನಿ" ಎಂದು ನೋಂದಾಯಿಸದೇ  ಸ್ಥಳೀಯ ಸುದ್ದಿ ಮತ್ತು ಪ್ರಸ್ತುತ ವ್ಯವಹಾರಗಳನ್ನು ಒದಗಿಸಲು ಸಿದ್ಧರಿರುವ MSOಗಳನ್ನು "ಕಂಪನಿ" ಆಗಿ ಪರಿವರ್ತಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ  3 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರತಿ ಆಪರೇಟರ್‌ಗೆ ಅನುಮತಿಸಲಾದ ಒಟ್ಟು PS ಚಾನೆಲ್‌ಗಳ ಸಂಖ್ಯೆಯನ್ನು  ಚಾನೆಲ್‌ನ ಒಟ್ಟು ಕ್ಯಾರೇಜ್ ಸಾಮರ್ಥ್ಯದ ಶೇ.5 ಕ್ಕೆ ಮಿತಿಗೊಳಿಸಬೇಕಿದೆ.

ಚಂದಾದಾರರ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಅಗತ್ಯಗಳನ್ನು ಪೂರೈಸಲು, PS ಚಾನಲ್‌ಗಳಲ್ಲಿನ ಈ ಮಿತಿಯನ್ನು ರಾಜ್ಯ ಮಟ್ಟದಲ್ಲಿ ಲೆಕ್ಕಹಾಕಲಾಗವುದು. ಇದಲ್ಲದೇ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ವಿಷಯದ ಅಗತ್ಯಗಳನ್ನು ಪೂರೈಸಲು, ಪ್ರತಿ ಜಿಲ್ಲೆಯ ಮಟ್ಟದಲ್ಲಿ 2 PS ಚಾನೆಲ್‌ಗಳಿಗೆ ಅನುಮತಿ ನೀಡಲಾಗುವುದು.

ಎಲ್ಲ PS ಚಾನೆಲ್‌ಗಳನ್ನು ನೋಂದಾಯಿತ ಟಿವಿ ಚಾನೆಲ್‌ಗಳಿಂದ ಪ್ರತ್ಯೇಕಿಸಲು 'ಪ್ಲಾಟ್‌ಫಾರ್ಮ್ ಸೇವೆಗಳು' ಎಂಬ ಶೀರ್ಷಿಕೆಯನ್ನು ನೀಡಲಾಗುವುದು.

PS ನ ವಿಷಯವು ಪ್ಲಾಟ್‌ಫಾರ್ಮ್‌ಗೆ ಪ್ರತ್ಯೇಕವಾಗಿರಬೇಕು ಮತ್ತು ಯಾವುದೇ ಇತರ ವಿತರಣಾ ವೇದಿಕೆ ಆಪರೇಟರ್‌ನೊಂದಿಗೆ ನೇರವಾಗಿಯೋ‌ ಅಥವಾ ಪರೋಕ್ಷವಾಗಿಯೋ ಹಂಚಿಕೊಳ್ಳುವಂತಿಲ್ಲ.  ಆದಾಗ್ಯೂ, ದೇವಾಲಯಗಳು, ಗುರುದ್ವಾರಗಳು ಮುಂತಾದ ಧಾರ್ಮಿಕ ಸ್ಥಳಗಳಿಂದ ನೇರ ಪ್ರಸಾರ(ಲೈವ್ ಫೀಡಿಂಗ್) ಹಂಚಿಕೊಳ್ಳಲು ಅನುಮತಿ ನೀಡಲಾಗುವುದು.

ಎಲೆಕ್ಟ್ರಾನಿಕ್ ಪ್ರೋಗ್ರಾಂ ಗೈಡ್ (EPG) ನಲ್ಲಿರುವ ಎಲ್ಲ PS ಚಾನೆಲ್‌ಗಳನ್ನು ಅವುಗಳ MRP ಯೊಂದಿಗೆ 'ಪ್ಲಾಟ್‌ಫಾರ್ಮ್ ಸೇವೆಗಳು' ವರ್ಗದ ಅಡಿಯಲ್ಲಿ ಒಟ್ಟಿಗೆ ಸೇರಿಸಲಾಗುತ್ತದೆ ಮತ್ತು ಅನ್ವಯವಾಗುವ ಆದೇಶಗಳು/ನಿರ್ದೇಶನಗಳು/ನಿಯಮಗಳ ಪ್ರಕಾರ PS ಅನ್ನು ಸಕ್ರಿಯಗೊಳಿಸುವ/ನಿಷ್ಕ್ರಿಯಗೊಳಿಸುವ ಆಯ್ಕೆ ನೀಡಲಾಗಿದೆ.

 PS ನೀಡುವ (MSO)ಮಲ್ಟಿ-ಸಿಸ್ಟಮ್ ಆಪರೇಟರ್‌ಗಳು

 90 ದಿನಗಳವರೆಗೆ ಎಲ್ಲಾ PS ಚಾನೆಲ್ ಕಾರ್ಯಕ್ರಮಗಳ ರೆಕಾರ್ಡಿಂಗ್ ಅನ್ನು ನಿರ್ವಹಿಸಬೇಕು.

ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ದೂರನ್ನು CTN ಕಾಯಿದೆ, 1995 ರ ಅಡಿಯಲ್ಲಿ ಸೂಚಿಸಿದಂತೆ ಅಧಿಕೃತ ಅಧಿಕಾರಿ ಮತ್ತು ರಾಜ್ಯ/ಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ತನಿಖೆ ಮಾಡಲಾಗುತ್ತದೆ.

ನವೆಂಬರ್ 30, 2022 ರೊಳಗೆ ನೀಡಲಾದ ಮಾರ್ಗಸೂಚಿಗಳನ್ನು ಅನುಸರಿಸಲು MSO ಗಳಿಗೆ 12 ತಿಂಗಳ ಕಾಲಾವಕಾಶ ನೀಡಲಾಗಿದೆ.

3. ನೋಂದಾಯಿತ ಟಿವಿ ಚಾನೆಲ್‌ಗಳ ಹಂಚಿಕೆಗಾಗಿ ಕೇಬಲ್ ಆಪರೇಟರ್‌ಗಳಿಗೆ ನೋಂದಣಿಯನ್ನು ನೀಡಲಾಗುತ್ತದೆ.  ಕೇಬಲ್ ಆಪರೇಟರ್‌ಗಳ ನೆಟ್‌ವರ್ಕ್ ಸಾಮರ್ಥ್ಯವನ್ನು ಪ್ರಾಥಮಿಕವಾಗಿ ಇದಕ್ಕಾಗಿ ಬಳಸಿಕೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೇಲಿನ ಮಾರ್ಗಸೂಚಿಗಳನ್ನು ನೀಡಲಾಗಿದೆ.  ಅಲ್ಲದೇ,  ತಮ್ಮ ಚಂದಾದಾರರಿಂದ ಸ್ಥಳೀಯ ವಿಷಯದ ಬೇಡಿಕೆಗಳನ್ನು ಪೂರೈಸಲು MSO ಗಳಿಗೆ ಮಾರ್ಗಸೂಚಿಗಳಲ್ಲಿ ಸಾಕಷ್ಟು ನಿಬಂಧನೆಗಳನ್ನು ನೀಡಲಾಗಿದೆ.  ಹೆಚ್ಚುವರಿಯಾಗಿ, ಈ ಮಾರ್ಗಸೂಚಿಗಳು PS ಚಾನೆಲ್‌ಗಳಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಪ್ರೋಗ್ರಾಂ ಕೋಡ್ ಮತ್ತು ಜಾಹೀರಾತು ಕೋಡ್‌ಗೆ ಬದ್ಧವಾಗಿರುವುದನ್ನು ಕಡ್ಡಾಯಗೊಳಿಸುತ್ತವೆ. 90 ದಿನಗಳವರೆಗೆ ರೆಕಾರ್ಡಿಂಗ್‌ಗಳನ್ನು ಇರಿಸಿಕೊಳ್ಳುವ ಜೊತೆಗೆ ಫೈರಸಿ ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ.

****


(Release ID: 1880102) Visitor Counter : 183