ಜವಳಿ ಸಚಿವಾಲಯ

​​​​​​​ ನಮ್ಮ ಕುಶಲಕರ್ಮಿಗಳು ವಿಶ್ವಕ್ಕೆ ಭಾರತದ ಪರಂಪರೆಯ ರಾಯಭಾರಿ, ನಮ್ಮ ಸಂಸ್ಕೃತಿಯ ದಾರಿದೀಪ: ಗೌರವಾನ್ವಿತ ಉಪ ರಾಷ್ಟ್ರಪತಿ


ಹೂಡಿಕೆ ಮತ್ತು ಅವಕಾಶಕ್ಕಾಗಿ ಜಾಗತಿಕವಾಗಿ ನಾವು ಹೆಚ್ಚು ಮೆಚ್ಚಿನ ತಾಣವಾಗಿದ್ದೇವೆ: ಗೌರವಾನ್ವಿತ ಉಪರಾಷ್ಟ್ರಪತಿ

ಕರಕುಶಲ, ಕೈಮಗ್ಗವು ಸ್ವಾವಲಂಬಿ, ಆತ್ಮವಿಶ್ವಾಸದ ಭಾರತಕ್ಕೆ ಮೂಲಾಧಾರವಾಗಿದೆ ಮತ್ತು ಪ್ರಪಂಚದ ಇತರ ಭಾಗಗಳೊಂದಿಗೆ ತೊಡಗಿಸಿಕೊಂಡಿದೆ: ಶ್ರೀ ಗೋಯಲ್

ಹೂಡಿಕೆ ಮತ್ತು ಅವಕಾಶಕ್ಕಾಗಿ ಜಾಗತಿಕವಾಗಿ ನಾವು ಹೆಚ್ಚು ಮೆಚ್ಚಿನ ತಾಣವಾಗಿದ್ದೇವೆ: ಗೌರವಾನ್ವಿತ ಉಪರಾಷ್ಟ್ರಪತಿ

ಕರಕುಶಲ, ಕೈಮಗ್ಗವು ಸ್ವಾವಲಂಬಿ, ಆತ್ಮವಿಶ್ವಾಸದ ಭಾರತಕ್ಕೆ ಮೂಲಾಧಾರವಾಗಿದೆ ಮತ್ತು ಪ್ರಪಂಚದ ಇತರ ಭಾಗಗಳೊಂದಿಗೆ ತೊಡಗಿಸಿಕೊಂಡಿದೆ: ಶ್ರೀ ಗೋಯಲ್

Posted On: 28 NOV 2022 2:56PM by PIB Bengaluru

ನಮ್ಮ ಕುಶಲಕರ್ಮಿಗಳು ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಪ್ರಕ್ರಿಯೆಗಳನ್ನು ತಮ್ಮ ಕಾಲಕ್ಕಿಂತ ಬಹಳ ಹಿಂದೆಯೇ ಪರಿಪೂರ್ಣಗೊಳಿಸಿದ್ದಾರೆ: ಶ್ರೀ ಗೋಯಲ್

 ಶಿಲ್ಪ ಗುರು ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಮಾಸ್ಟರ್ ಕುಶಲಕರ್ಮಿಗಳಿಗೆ ನೀಡಲಾಗುತ್ತದೆ.

ನಮ್ಮ ಕುಶಲಕರ್ಮಿಗಳು ವಿಶ್ವಕ್ಕೆ ಭಾರತದ ಪರಂಪರೆಯ ರಾಯಭಾರಿಯಾಗಿದ್ದಾರೆ ಎಂದು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ  ಶ್ರೀ ಜಗದೀಪ್ ಧನಕರ್ ಅವರು ಹೇಳಿದರು.

ಅವರಿಂದು ದೆಹಲಿಯ ಜವಳಿ ಸಚಿವಾಲಯಲ್ಲಿ  ಆಯೋಜಿಸಿದ್ದ ಶಿಲ್ಪ ಗುರು ಮತ್ತು ರಾಷ್ಟ್ರೀಯ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

 ಭಾರತ ಹಿಂದೆಂದೂ ಕಾಣದಷ್ಟು ಏರುಗತಿಯಲ್ಲಿ ಸಾಗುತ್ತಿದೆ. ಬಂಡವಾಳ ಹೂಡಿಕೆಯಲ್ಲಿ   ಜಾಗತಿಕವಾಗಿ  ಹೆಚ್ಚು ಮೆಚ್ಚಿನ ತಾಣವಾಗಿದೆ. ಕರಕುಶಲ ಮತ್ತು ಕೈಮಗ್ಗ ಕ್ಷೇತ್ರಕ್ಕೆ ಸಂಬಂಧಿಸಿದ ಕುಶಲಕರ್ಮಿಗಳು ಈ ಬೆಳವಣಿಗೆಯಲ್ಲಿಯೂ ಕೂಡ  ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಎಂದು ಅವರು ಹೇಳಿದರು.  

ಕುಶಲಕರ್ಮಿಗಳ ಕರಕುಶಲತೆ ಮತ್ತು ಕೌಶಲ್ಯಗಳ ಕುರಿತು ಮಾತನಾಡಿದ ಸನ್ಮಾನ್ಯ ಉಪರಾಷ್ಟ್ರಪತಿಯವರು ಕುಶಲಕರ್ಮಿಗಳ ಕರಕುಶಲತೆ ಮತ್ತು ಕೌಶಲ್ಯದ ಬಗ್ಗೆ ಉಲ್ಲೇಖಿಸುತ್ತಸ ಇಂತಹ ಪರಿಷ್ಕೃತ ಕೌಶಲ್ಯಗಳು ಭಾರತಕ್ಕೆ ಹೆಮ್ಮೆ ತಂದಿದೆ ಎಂದು ಶ್ಲಾಘಿಸಿದರು.
“ಕುಶಲಕರ್ಮಿಗಳು ನಮ್ಮ ಸಂಸ್ಕೃತಿಯ ದಾರಿದೀಪವಾಗಿದ್ದಾರೆ.  ಕುಶಲಕರ್ಮಿಗಳು ನಮ್ಮ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ತೋರ್ಪಡಿಸುವ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಮಾಧ್ಯಮವಾಗಿದ್ದಾರೆ.  ಭಾರತ ಹೊಂದಿರುವ ಅಗಾಧ ಕೌಶಲಗಳನ್ನು ಇವರು ಜಗತ್ತಿಗೆ ಸೂಚಿಸುತ್ತಿದ್ದಾರೆ ಎಂದು ಅವರು ಹೇಳಿದರು.

 2017, 2018 ಮತ್ತು 2019 ನೇ ವರ್ಷಕ್ಕೆ ಮಾಸ್ಟರ್ ಕ್ರಾಫ್ಟ್‌ಪರ್ಸನ್‌ಗಳಿಗೆ - ನಿಪುಣ ಕರಕುಶಲಕರ್ಮಿಗಳಿಗೆ ಶಿಲ್ಪ ಗುರು ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಸಾಂಕ್ರಾಮಿಕ ಕೊರೋನಾ ರೋಗದಿಂದಾಗಿ ಈ ಕಾರ್ಯಕ್ರಮವನ್ನು ಭೌತಿಕವಾಗಿ ಆಯೋಜಿಸಲಾಗಿರಲಿಲ್ಲ ಎಂದರು.

ನಮ್ಮ ಜನರಿಗೆ 3 ಶತಕೋಟಿ ಲಸಿಕೆಗಳನ್ನು ನೀಡುವ ಮೂಲಕ ಭಾರತವು ಜಗತ್ತನ್ನು ಮೀರಿಸಿದ ಸಾಂಕ್ರಾಮಿಕ ಅವಧಿಯನ್ನು ಪ್ರಸ್ತಾಪಿಸಿದ ಅವರು ಲಸಿಕೆ ಕಾರ್ಯಕ್ರಮ ಡಿಜಿಟಲ್ ಮ್ಯಾಪಿಂಗ್‌ನಿಂದ ಬೆಂಬಲಿತವಾಗಿದೆ, ವಿಶ್ವದ ಯಾವುದೇ ದೇಶವು ಅಂತಹ ಉಪಕ್ರಮದ ಬಗ್ಗೆ ಯೋಚಿಸಲು ಸಹ ಸಾಧ್ಯವಿಲ್ಲ ಎಂದು ಹೇಳಿದರು.  ಮೊದಲ ಲಾಕ್‌ಡೌನ್‌ನಿಂದ 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಪಡಿತರವನ್ನು ಸಹ ನೀಡಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಗೌರವಾನ್ವಿತ ಪ್ರಧಾನ ಮಂತ್ರಿಗಳು ಮತ್ತು ಅವರ ದೂರದೃಷ್ಟಿಯನ್ನು ಜಗತ್ತು ಆಲಿಸುತ್ತಿದೆ ಎಂಬುದನ್ನು ಜಿ 20  ಸೂಚಿಸುತ್ತದೆ ಎಂದು ಶ್ರೀ ಧನ್‌ಕರ್  ಹೇಳಿದರು. ದಶಕದ ಅಂತ್ಯದ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ಕೇಂದ್ರ ಜವಳಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ತಮ್ಮ ಭಾಷಣದಲ್ಲಿ , ಕರಕುಶಲ ಕೈಮಗ್ಗವು ಸ್ವಾವಲಂಬಿ, ಆತ್ಮವಿಶ್ವಾಸದ ಭಾರತಕ್ಕೆ ಮೂಲಾಧಾರವಾಗಿದೆ ಎಂದು ಹೇಳಿದರು.

ನಮ್ಮ ಶಿಲ್ಪಕಾರರು ಶತಮಾನಗಳಿಂದಲೂ ಕಲ್ಲು, ಲೋಹ, ಶ್ರೀಗಂಧ ಮತ್ತು ಜೇಡಿಮಣ್ಣಿಗೆ ಜೀವ ತುಂಬಲು ತಮ್ಮದೇ ಆದ - ಸಾಮಾನ್ಯವಾಗಿ ವಿಶಿಷ್ಟವಾದ - ವಿಧಾನಗಳು ಮತ್ತು ತಂತ್ರಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಅವರು ಹೇಳಿದರು.  ಬಹಳ ಹಿಂದೆಯೇ ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಪ್ರಕ್ರಿಯೆಗಳನ್ನು ತಮ್ಮ ಕಾಲಕ್ಕಿಂತ ಬಹಳ ಹಿಂದೆಯೇ ಪರಿಪೂರ್ಣಗೊಳಿಸಿದ್ದರು.  ಅವರ ಸೃಷ್ಟಿಗಳು ಅವರ ಅತ್ಯಾಧುನಿಕ ಜ್ಞಾನ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ಸೌಂದರ್ಯದ ಅರ್ಥವನ್ನು ಬಹಿರಂಗಪಡಿಸುತ್ತವೆ. ಕರಕುಶಲ ವಸ್ತುಗಳ ಉತ್ಪಾದನೆಯು ಕಡಿಮೆ ಬಂಡವಾಳ ಹೂಡಿಕೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ಜೀವನೋಪಾಯದ ಅವಕಾಶಗಳನ್ನು ಸಹ ಒದಗಿಸುತ್ತವೆ. ಕರಕುಶಲತೆಯಲ್ಲಿ ಭಾರತವು  ಉತ್ತಮ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿದೆ, ಇದು ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯದ ಭಾಗವಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಕರಕುಶಲ ವಸ್ತುಗಳ ಉತ್ಪಾದನೆಯು ವಿಶೇಷ ಮಹತ್ವವನ್ನು ಹೊಂದಿದೆ. ಏಕೆಂದರೆ ಸ್ತ್ರೀಯರು ಮನೆಯ ಇತರ ಕೆಲಸಗಳೊಂದಿಗೆ ಮನೆಯೊಳಗೆಯೇ ತಮ್ಮ ಕರಕುಶಲತೆಯ ಮೂಲಕ ಉತ್ಪಾದನೆಯನ್ನು  ಸಹ  ಮಾಡಬಹುದು.   ಕುಶಲಕರ್ಮಿಗಳ ವಲಯದಲ್ಲಿ‌ ಮಹಿಳೆಯರೇ ಶೇ.50 ಕ್ಕಿಂತ ಹೆಚ್ಚು ಮಂದಿಯಿದ್ದಾರೆ ಎಂದರು.

ಗ್ರಾಮೀಣ ಜನಸಂಖ್ಯೆಯ ವಿಶಾಲ ವಿಭಾಗದ ಸಾಮಾಜಿಕ-ಆರ್ಥಿಕ ಜೀವನೋಪಾಯದಲ್ಲಿ ಕರಕುಶಲತೆಯ ಪ್ರಾಮುಖ್ಯದ ಬಗ್ಗೆ ಒತ್ತಿ ಹೇಳಿದ ಅವರು, ಅತ್ಯುತ್ತಮ ಕರಕುಶಲತೆ ಮತ್ತು ಸಾಂಪ್ರದಾಯಿಕ ಪರಂಪರೆಯ ಪ್ರಮುಖ ಭಾಗವಾಗಿ ಕರಕುಶಲತೆಯನ್ನು ಮುಂದುವರಿಸುವಲ್ಲಿ  ನಿರ್ವಹಿಸಿದ ಪ್ರಮುಖ ಪಾತ್ರವನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಆದರೂ ಜಾಗತಿಕ ಮಾರುಕಟ್ಟೆಯ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನದ ಶ್ರೇಷ್ಠತೆಯನ್ನು ಗುರುತಿಸುವುದು ಸಹ ಅಗತ್ಯವಾಗಿದೆ ಎಂದರು.

ಕರಕುಶಲ ವಸ್ತುಗಳ ಪ್ರಚಾರವು ರಾಷ್ಟ್ರದ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಸಮಕಾಲೀನ ದೃಷ್ಟಿಕೋನಗಳ ನಡುವೆ ಸಮತೋಲನವನ್ನು ಕಾಯ್ದುಕೊಂಡು ದೇಶದ ಕೌಶಲ್ಯಪೂರ್ಣ ಕೈಗಳಿಗೆ ಆಶ್ರಯವನ್ನು ನೀಡುತ್ತದೆ ಎಂದು ಶ್ರೀ ಗೋಯಲ್ ಹೇಳಿದರು.  "ಕೈಮಗ್ಗಗಳು ಮತ್ತು ಕರಕುಶಲಗಳು ಭಾರತದ ವೈವಿಧ್ಯ ಮತ್ತು ಅಸಂಖ್ಯಾತ ನೇಕಾರರು ಮತ್ತು ಕುಶಲಕರ್ಮಿಗಳ ಕೌಶಲ್ಯವನ್ನು ವ್ಯಕ್ತಪಡಿಸುತ್ತವೆ ಎಂದು  ಗೌರವಾನ್ವಿತ ಪ್ರಧಾನ ಮಂತ್ರಿಗಳು ಉಲ್ಲೇಖಿಸಿದಂತೆ ಭಾರತದ ಕರಕುಶಲ/ಕೈಮಗ್ಗದ ರಫ್ತು ಹೆಚ್ಚುತ್ತಿದೆ. ಅಲ್ಲದೆ, ನಮ್ಮ ಉತ್ಪನ್ನಗಳು ಇತರರಿಗಿಂತ ಹೆಚ್ಚು ಸಮರ್ಥನೀಯವಾಗಿವೆ ಎಂದು ಕೇಂದ್ರ ಸಚಿವರು ಹೇಳಿದರು. 

ಪ್ರಧಾನಿಯವರ ನೇತೃತ್ವದಲ್ಲಿ ಭಾರತವು 2047 ರಲ್ಲಿ ಸ್ವಾತಂತ್ರ್ಯದ 100 ವರ್ಷಗಳ ಅವಧಿಯಲ್ಲಿ ದೇಶವು ಅಭಿವೃದ್ಧಿ ಹೊಂದಿದ ದೇಶ ಮತ್ತು ಸಮೃದ್ಧ ದೇಶವಾಗಲು ಹೆಜ್ಜೆಯಿಟ್ಟಿರುವುದಾಗಿ ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.

ಜವಳಿ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ರಚನಾ ಶಾ, ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಶ್ರೀ ಶಾಂತಮನು, 
ಕರಕುಶಲ ಹೆಚ್ಚುವರಿ ಆಯುಕ್ತರಾದ ಶ್ರೀಮತಿ ಮುದಿತಾ ಮಿಶ್ರಾ ಇವರುಗಳ ಉಪಸ್ಥಿತಿಯಲ್ಲಿ  ಗೌರವಾನ್ವಿತ ಉಪರಾಷ್ಟ್ರಪತಿಯವರು ಶ್ರೀ ಗೋಯಲ್ ಅವರೊಂದಿಗೆ ಪ್ರಶಸ್ತಿ ಪುರಸ್ಕೃತರ ಕ್ಯಾಟಲಾಗ್ ಅನ್ನು ಲೋಕಾರ್ಪಣೆಗೊಳಿಸಿದರು.

2017, 2018 ಮತ್ತು 2019 ನೇ ಸಾಲಿನ 30 ಶಿಲ್ಪ ಗುರು ಪ್ರಶಸ್ತಿಗಳು ಮತ್ತು 78 ರಾಷ್ಟ್ರೀಯ ಪ್ರಶಸ್ತಿಗಳನ್ನು ನಿಪುಣ ಕುಶಲಕರ್ಮಿಗಳಿಗೆ ನೀಡಲಾಯಿತು, ಅವರಲ್ಲಿ 36 ಮಮದಿ ಮಹಿಳೆಯರಾಗಿರುವುದು ಹೆಮ್ಮೆಯ ವಿಚಾರವಾಗಿದೆ.  ಭಾರತೀಯ ಕರಕುಶಲ ಮತ್ತು ಜವಳಿ ಕ್ಷೇತ್ರಕ್ಕೆ ಮಹತ್ವ ಕುಶಲಕರ್ಮಿಗಳ ಶ್ರೇಷ್ಠತೆ ಮತ್ತು ಅಮೂಲ್ಯ ಕೊಡುಗೆಗಳನ್ನು ಗುರುತಿಸುವುದು ಪ್ರಶಸ್ತಿಗಳ ಮುಖ್ಯ ಉದ್ದೇಶವಾಗಿದೆ.

ಸಾಂಪ್ರದಾಯಿಕ ಪರಂಪರೆಯ ಪ್ರಮುಖ ಭಾಗವಾಗಿ ಇತರ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಕರಕುಶಲತೆಯ ಮುಂದುವರಿಕೆಗಾಗಿ ಗುರುಗಳಾಗಿ ಅವರು ನಿರ್ವಹಿಸಿದ ಅತ್ಯುತ್ತಮ ಕರಕುಶಲತೆ, ಉತ್ಪನ್ನ ಶ್ರೇಷ್ಠತೆ ಮತ್ತು ಗುರುಗಳಾಗಿ ನಿರ್ವಹಿಸಿದ ಪಾತ್ರವನ್ನು ಗುರುತಿಸಿ ಶಿಲ್ಪ ಗುರು ಪ್ರಶಸ್ತಿಗಳನ್ನು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ನೀಡಲಾಗುತ್ತದೆ.  ಭಾರತದಲ್ಲಿ ಕರಕುಶಲ ವಸ್ತುಗಳ ಪುನರುತ್ಥಾನದ ಸುವರ್ಣ ಮಹೋತ್ಸವವನ್ನು ಆಚರಿಸಲು 2002 ರಲ್ಲಿ ಈ  ಪ್ರಶಸ್ತಿಗಳನ್ನು ನೀಡುವುದನ್ನು ಪ್ರಾರಂಭಿಸಲಾಯಿತು. ಈ ಪ್ರಶಸ್ತಿಯು ಚಿನ್ನದ ನಾಣ್ಯ, ರೂ.2.00 ಲಕ್ಷ ಬಹುಮಾನ,  ತಾಮ್ರಪತ್ರ, ಶಾಲು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.  2017, 2018 ಮತ್ತು 2019 ನೇ ಸಾಲಿಗೆ 30 ಶಿಲ್ಪ ಗುರುಗಳನ್ನು ಆಯ್ಕೆ ಮಾಡಲಾಗಿದ್ದು,ಅವರಲ್ಲಿ 24 ಪುರುಷರು ಮತ್ತು 06 ಮಹಿಳೆಯರಾಗಿದ್ದಾರೆ.

ವಿವಿಧ ಕರಕುಶಲ ವಿಭಾಗಗಳಲ್ಲಿ ಅತ್ಯುತ್ತಮ ಕರಕುಶಲತೆಗಾಗಿ 1965 ರಿಂದ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಪ್ರಶಸ್ತಿಗಳನ್ನು ನೀಡಲಾಗುತ್ತಿರುವ ಮುಖ್ಯ ಕರಕುಶಲ ವಸ್ತುಗಳೆಂದರೆ - ಲೋಹದ ಕೆತ್ತನೆ, ಚಿಕನ್ ಹ್ಯಾಂಡ್ ಕಸೂತಿ, ಖುರ್ಜಾ ಬ್ಲೂ ಪಾಟರಿ, ಮಾತಾ ನಿ ಪಚೇಡಿ ಕಲಮಕಾರಿ, ಬಂಧನಿ, ಟೈ ಮತ್ತು ಡೈ, ಹ್ಯಾಂಡ್.  ಬ್ಲಾಕ್ ಬಾಗ್ ಪ್ರಿಂಟ್, ವಾರ್ಲಿ ಆರ್ಟ್, ಸ್ಟೋನ್ ಡಸ್ಟ್ ಪೇಂಟಿಂಗ್, ಸೋಜ್ನಿ ಹ್ಯಾಂಡ್ ಕಸೂತಿ, ಟೆರಾಕೋಟಾ, ತಂಜಾವೂರ್ ಪೇಂಟಿಂಗ್, ಶೋಲಾಪಿತ್, ಕಂಠ ಹ್ಯಾಂಡ್ ಕಸೂತಿ, ತಾಳೆ ಎಲೆ ಕೆತ್ತನೆ, ಮರದ ಮೇಲೆ ಹಿತ್ತಾಳೆ ತಂತಿಯ ಕೆತ್ತನೆ, ಮರದ ತರ್ಕಾಶಿ, ಮಧುಬನಿ ಪೇಂಟಿಂಗ್, ಗೋಲ್ಡ್ ಲೀಫ್ ಪೇಂಟಿಂಗ್ ಇತ್ಯಾದಿ.  ಈ‌‌ಪ್ರಶಸ್ತಿಯು ರೂ.1.00 ಲಕ್ಷ ಬಹುಮಾನದ ಮೊತ್ತ, ತಾಮ್ರಪತ್ರ, ಶಾಲು ಮತ್ತು ಪ್ರಮಾಣಪತ್ರವನ್ನು ಒಳಗೊಂಡಿದೆ.  78 ಕುಶಲಕರ್ಮಿಗಳನ್ನು 2017, 2018 ಮತ್ತು 2019 ರ ರಾಷ್ಟ್ರೀಯ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ, ಇದರಲ್ಲಿ 02 ವಿನ್ಯಾಸ ನಾವೀನ್ಯ ಪ್ರಶಸ್ತಿಗಳು ಸೇರಿವೆ, ಅಲ್ಲಿ ವಿನ್ಯಾಸಕ ಮತ್ತು ಕುಶಲಕರ್ಮಿಗಳು ಅನನ್ಯ ಉತ್ಪನ್ನವನ್ನು ರಚಿಸಲು ಸಹಕರಿಸುತ್ತಾರೆ.

ಶಿಲ್ಪ ಗುರುಗಳು ಮತ್ತು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರ ಸೊಗಸಾದ ಉತ್ಪನ್ನಗಳನ್ನು ರಾಷ್ಟ್ರೀಯ ಕರಕುಶಲ ವಸ್ತುಸಂಗ್ರಹಾಲಯ ಮತ್ತು ಹಸ್ತಕಲಾ ಅಕಾಡೆಮಿ, ಪ್ರಗತಿ ಮೈದಾನ, ಭೈರೋನ್ ಮಾರ್ಗದಲ್ಲಿ ಸಾರ್ವಜನಿಕರಿಗಾಗಿ_2022 ರ ಅಂದರೆ ಇದೇ  ನವೆಂಬರ್ 29 ರಿಂದ ಡಿಸೆಂಬರ್ 5, ರವರೆಗೆ ಪ್ರದರ್ಶಿಸಲಾಗುತ್ತಿದೆ.

 "ರಾಷ್ಟ್ರೀಯ ಕರಕುಶಲ ಅಭಿವೃದ್ಧಿ ಕಾರ್ಯಕ್ರಮ (NHDP)" ಮತ್ತು ಸಮಗ್ರ ಕರಕುಶಲ ಕ್ಲಸ್ಟರ್ ಅಭಿವೃದ್ಧಿ ಯೋಜನೆ (CHCDS) ಅಡಿಯಲ್ಲಿ ಕರಕುಶಲ ವಲಯದ ಪ್ರಚಾರ ಮತ್ತು ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಯೋಜನೆಗಳನ್ನು ಅಭಿವೃದ್ಧಿ ಆಯುಕ್ತರ (ಕರಕುಶಲ) ಕಚೇರಿಯ ಮೂಲಕ ಜಾರಿಗೊಳಿಸುತ್ತದೆ "

*****



(Release ID: 1879658) Visitor Counter : 112